Sunday, May 22, 2022

ಗುಂಡಿನ ದಾಳಿಗೆ ಭಾರತೀಯ ಮೂಲದ ಬ್ಲಾಗರ್ ಅಂಜಲಿ ರಯೋಟ್ ಮೃತ್ಯು

ಮೆಕ್ಸಿಕೋ: ಕೆರಿಬಿಯನ್ ಕರಾವಳಿ ಪ್ರದೇಶದ ತುಳುಂ ರೆಸಾರ್ಟ್‌ನಲ್ಲಿ ಡ್ರಗ್ ಗ್ಯಾಂಗ್ ನಡೆಸಿದ್ದ ಗುಂಡಿನ ದಾಳಿಯಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ಭಾರತೀಯ ಮೂಲದ ಟ್ರಾವೆಲ್ ಬ್ಲಾಗರ್ ಅಂಜಲಿ ರಯೋಟ್ ಕೂಡ ಮೃತಪಟ್ಟಿದ್ದಾರೆ.


ಈ ಅಂಜಲಿ ಸೇರಿ ದಾಳಿಯಲ್ಲಿ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕ್ವಿಂಟಾನಾ ರೂ ಅಧಿಕಾರಿಗಳು, ಮೃತಪಟ್ಟ ಇಬ್ಬರು ಮಹಿಳೆಯರಲ್ಲಿ ಒಬ್ಬರು ಅಂಜಲಿ ರಯೋಟ್‌ ಎಂದು ಸ್ಪಷ್ಟಪಡಿಸಿದ್ದಾರೆ.

ಅಂಜಲಿ ರಯೋಟ್‌ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎರಡು ದಿನಗಳ ಹಿಂದೆ ತುಳುಂನಲ್ಲಿರುವ ಕಡಲತೀರದಲ್ಲಿ ನಗುತ್ತಾ ಓಡಾಡುತ್ತಿದ್ದ ಪೋಸ್ಟ್ ಹಾಕಲಾಗಿತ್ತು.

ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಇವರು ಹಿಮಾಚಲ ಪ್ರದೇಶದ ಟ್ರಾವೆಲ್ ಬ್ಲಾಗರ್ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕೊಲೆಯಾದ ಮತ್ತೊಬ್ಬ ಮಹಿಳೆಯನ್ನು ಜರ್ಮನ್‌ನ ಜೆನ್ನಿಫರ್ ಹೆನ್ಜೋಲ್ಡ್ ಎಂದು ಗುರುತಿಸಲಾಗಿದೆ.

ಆದರೆ ಈಕೆಯ ಊರಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ತುಳುಂನ ಬೀದಿ ಬದಿಯ ಹೋಟೆಲ್‌ನ ಹೊರಗಡೆ ಬುಧವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಇತರ ಮೂವರು ವಿದೇಶಿ ಪ್ರವಾಸಿಗರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಜರ್ಮನ್ ವ್ಯಕ್ತಿಗಳು ಹಾಗೂ ಓರ್ವ ಡಚ್ ಮಹಿಳೆ ಸೇರಿದ್ದಾರೆ.

LEAVE A REPLY

Please enter your comment!
Please enter your name here

Hot Topics

ವಿಟ್ಲ: ಮನೆಯ ಹೆಂಚು ತೆಗೆದು ಒಳನುಗ್ಗಿ ಲಕ್ಷಾಂತರ ಸೊತ್ತು ಕಳವು

ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೆಂಚು ತೆಗೆದು ಮನೆಯೊಳಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟೆ ಮನೆಯ...

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿ

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿಯಾಗಿ ಕಾರು ಹಾಗೂ ಬಸ್ಸು ಜಖಂಗೊಂಡ ಘಟನೆ ಪುತ್ತೂರು–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಇಂದು ಬೆಳಿಗ್ಗೆ 7.30ರ ಸುಮಾರಿಗೆ ಕೋಡಿಂಬಾಡಿಯ ವಿನಾಯಕ ನಗರದ...

ಕಾಂಗ್ರೆಸ್‌ನಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ: ಬಿಜೆಪಿ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ? ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು? ಎಂದು ಕಾಂಗ್ರೆಸ್‌ ಅನ್ನು ಬಿಜೆಪಿ ಟ್ವೀಟ್‌ನಲ್ಲಿ ಕುಟುಕಿದೆ.ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ...