Connect with us

    LATEST NEWS

    ಪುತ್ತೂರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ- ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರ್

    Published

    on

    ಪುತ್ತೂರು: ಕೆಎಸ್‌ಆರ್‌ಟಿಸಿ ನೌಕರರ ಮಾಸಿಕ ವೇತನ ಮತ್ತು ನಿವೃತ್ತ ನೌಕರರ ನಿವೃತ್ತಿ ಸೌಲಭ್ಯವನ್ನು ಪಾವತಿಸುಲ್ಲಿ ಸಂಸ್ಥೆಯ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಪುತ್ತೂರು ವಿಭಾಗ ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರ ಮೂರನೇ ದಿನಕ್ಕೆ ತಲುಪಿದ್ದು, ಇಂದು ಮುಷ್ಕರ ನಿರತರನ್ನು ಭೇಟಿ ಮಾಡಿದ ಶಾಸಕ ಸಂಜೀವ ಮಠಂದೂರು ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

    ಇಂದು ದ.ಕ.ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯು ಜಿಲ್ಲೆಯ 7 ಮಂದಿ ಶಾಸಕರ ಉಪಸ್ಥಿತಿಯಲ್ಲಿ ನಡೆಯಲಿದ್ದು ಕೆಸ್ಸಾರ್ಟಿಸಿ ನೌಕರರ ಸಮಸ್ಯೆಯ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆ ವಿಷಯ ತರುವುದಾಗಿ ಶಾಸಕ ಮಠಂದೂರು ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಪುತ್ತೂರು ವಿಭಾಗ ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಪ್ರಧಾನ ವಕ್ತಾರ ಶಾಂತರಾಮ ವಿಟ್ಲ, ಶುಕ್ರವಾರ ಕೇಂದ್ರ ಕಚೇರಿ ಹಾಗೂ ವಿಭಾಗದ ಮಟ್ಟದಲ್ಲಿ ಮೂರನೇ ಹಂತದ ಚರ್ಚೆ ನಡೆದಿದೆ. ನಮ್ಮಲ್ಲಿ ಸಾಕಷ್ಟು ಹಣ ಇಲ್ಲದ ಹಿನ್ನಲೆಯಲ್ಲಿ ವೇತನ ನೀಡಲು ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಾವು ಯಾವುದೇ ಬೇಡಿಕೆಯನ್ನು ಇಟ್ಟದ್ದಲ್ಲ. ನಾವು ಕೆಲಸ ಮಾಡಿದಕ್ಕೆ ನಮ್ಮ ಕೂಲಿ ನೀಡಿ ಎಂದು ನಾವು ಒತ್ತಾಯಿಸುತ್ತಿರುವುದು. ಸಂಸ್ಥೆಯ ವತಿಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ.

    ಈ ಹಿನ್ನಲೆಯಲ್ಲಿ ಸೋಮವಾರದಿಂದ ಅಮರಣಾಂತ ಉಪವಾಸ ಕೈಗೊಳ್ಳಲಿದ್ದೇವೆ. ಧರಣಿ ಸತ್ಯಾಗ್ರಹ ಶನಿವಾರ ಸಂಜೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

    DAKSHINA KANNADA

    ಕಪ್ಪೆಗಳ ಅಕ್ರಮ ಸಾಗಾಟ..! ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ..!

    Published

    on

    ಮಂಗಳೂರು (ಕಾರವಾರ): ಬಸ್‌ನಲ್ಲಿ ಗೋವಾಕ್ಕೆ ಸಾಗಾಟ ಮಾಡುತ್ತಿದ್ದ 41 ಬುಲ್‌ ಫ್ರಾಗ್‌ಗಳನ್ನು ಕಾರವಾರದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಬುಲ್ ಫ್ರಾಗ್ ಸಾಗಾಟ ಮಾಡುತ್ತಿದ್ದ ಇಬ್ಬರು ಗೋವಾ ಮೂಲದ ವ್ಯಕ್ತಿಗಳನ್ನು ಬಂಧಿಸಿ ಬಸ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಕಾಳಿ ಬ್ರಿಡ್ಜ್‌ ಬಳಿ ಕಪ್ಪೆಗಳ ರಕ್ಷಣೆ ಮಾಡಲಾಗಿದೆ. ಗೋವಾ ಮೂಲದ ಕಾಣಕೋಣ ನಿವಾಸಿ ಸಿದ್ದೇಶ್ ದೇಸಾಯಿ ಬಸ್ ಚಾಲಕನಾಗಿದ್ದು, ನಿರ್ವಾಹಕ ಜಾನ್‌ ಲೂಲಿಮ್‌ ಬಂಧಿತರು.

    ಕಪ್ಪೆ ಅಕ್ರಮ ಸಾಗಾಣಿಕೆ ಹಿಂದಿರುವ ರಹಸ್ಯ..!

    ಬುಲ್‌ ಫ್ರಾಗ್‌ಗಳು ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಇದರಿಂದ ತಯಾರಾಗುವ ಖಾದ್ಯಕ್ಕೆ ಗೋವಾದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಪ್ಪೆಗಳ ಕಾಲುಗಳನ್ನು ಕಡಿದು ಮಾಡುವ ಫ್ರೈ ಹಾಗೂ ಕಪ್ಪೆಗಳ ಚರ್ಮ ತೆಗೆದು ಮಾಡುವ ಫ್ರೈಗೆ ಇಲ್ಲಿ ಜಂಪಿಂಗ್ ಚಿಕನ್ ಎಂದು ಹೆಸರಿದೆ. ಗೋವಾದ ಜನರು ಹಾಗೂ ವಿದೇಶಿಗರು ಈ ಜಂಪಿಂಗ್ ಚಿಕನ್ ಗಿರಾಕಿಗಳಾಗಿದ್ದು, ಒಂದು ಪ್ಲೇಟ್‌ಗೆ 1500 ರೂಪಾಯಿಗೆ ಮಾರಾಟವಾಗುತ್ತದೆ. ಗೋವಾದಲ್ಲಿ ಈ ಕಪ್ಪೆಗಳು ಸಿಗದ ಕಾರಣ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಿಂದ ಅಕ್ರಮ ರವಾನೆಯಾಗುತ್ತಿದೆ. ಕಾರಾವಾರ, ಅಂಕೋಲ ಸೇರಿದಂತೆ ಹಲವು ಜಾಗದಿಂದ ಈ ಕಪ್ಪೆಗಳ ಕಳ್ಳಸಾಗಾಣಿಕೆ ನಡೆಯುತ್ತಿದೆ. ಒಂದು ಕಪ್ಪೆಗೆ 500 ರೂಪಾಯಿಗಳ ಬೆಲೆ ಇದ್ದು, ಜೀವಂತವಾಗಿ ಈ ಕಪ್ಪೆಗಳ ಸಾಗಾಟ ಮಾಡಲಾಗುತ್ತದೆ.

    Continue Reading

    LATEST NEWS

    ಕೊತ ಕೊತ ಅಂತ ಕುದಿಯುತ್ತೆ ಈ ನದಿ! ಇದರ ಹಿಂದಿನ ರಹಸ್ಯ ಇಲ್ಲಿದೆ

    Published

    on

    ಶನಾಯ್-ಟಿಂಪಿಷ್ಕಾ ನದಿ ಇನ್ನಿತರ ನದಿಗಳಿಗಿಂತ ಭಿನ್ನವಾಗಿದ್ದು ಈ ನದಿಯ ನೀರು ಕುದಿಯುತ್ತಿರುತ್ತದೆ. ಏಕೈಕ ಕುದಿಯುವ ನದಿಯಾಗಿರುವ ಶನಾಯ್-ಟಿಂಪಿಷ್ಕಾ ಪೆರುವಿನ ಅಮೆಜಾನ್‌ನಲ್ಲಿದೆ. ಪೆರುವಿನಲ್ಲಿರುವ ಅಮೆಜಾನ್ ಮಳೆಕಾಡಿನ ಮಧ್ಯಭಾಗದಲ್ಲಿ ಹರಿಯುವ ಶನಾಯ್ ನದಿ, ನೈಸರ್ಗಿಕ ವಿಸ್ಮಯ ಎಂದೆನಿಸಿದ್ದು, ವಿಜ್ಞಾನಿಗಳನ್ನು, ಪರಿಶೋಧಕರನ್ನು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

    ವಿಶ್ವದ ಏಕೈಕ ಕುದಿಯುವ ನದಿ

    ಅಮೆಜಾನ್ ನದಿಯ ಈ ಗಮನಾರ್ಹ ಉಪನದಿಯು 6.4 ಕಿಲೋಮೀಟರ್ (4.0 ಮೈಲುಗಳು) ಉದ್ದವನ್ನು ವ್ಯಾಪಿಸಿದೆ. ಇದು ವಿಶ್ವದ ಏಕೈಕ ಕುದಿಯುವ ನದಿ ಎಂದು ಹೆಸರುವಾಸಿಯಾಗಿದೆ. ನದಿಯ ನೀರು 45 ಡಿಗ್ರಿ ಸೆಲ್ಸಿಯಸ್‌ನಿಂದ 100 ಡಿಗ್ರಿ ಸೆಲ್ಸಿಯಸ್‌ವರೆಗೆ ಸುಡುವ ತಾಪಮಾನವನ್ನು ಹೊಂದಿದೆ. ಸೂರ್ಯನ ಶಾಖದಿಂದ ಕುದಿಯುವ ನೀರು ಎಂಬ ಅರ್ಥವನ್ನು ಶನಯ್-ಟಿಂಪಿಷ್ಕಾ ಹೆಸರು ಒಳಗೊಂಡಿದೆ.

    ಕೆಲವು ಭಾಗ ಬಿಸಿಯಾಗಿದೆ

    ಇನ್ನು ಈ ನೀರಿನಲ್ಲಿ ಇಳಿದು ಸ್ನಾನ ಮಾಡುವುದೇ ಅಸಂಭವ ಎಂಬುದು ನಿಮ್ಮ ಮನಸ್ಸಿನಲ್ಲಿದ್ದರೆ ನಿಮ್ಮ ಅನಿಸಿಕೆ ತಪ್ಪು ಏಕೆಂದರೆ ಸಂಪೂರ್ಣ ನದಿಯ ನೀರು ಕುದಿಯುತ್ತಿಲ್ಲ ಕೆಲವು ಭಾಗ ಮಾತ್ರವೇ ಬಿಸಿ ನೀರನ್ನೊಳಗೊಂಡಿದೆ ಆದರೆ ಮುಳುಗು ಹಾಕಲು ಈ ನದಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ನದಿಯ ಬಿಸಿಯಿಂದ ಬೆಚ್ಚಗಿನ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ಅನುಭವ ನಿಮಗುಂಟಾಗುತ್ತದೆ. ನೀರು ಕುದಿಯುತ್ತಿರುವ ಅನಿಸಿಕೆ ನಿಮಗುಂಟಾಗುತ್ತದೆ. ಇನ್ನು ಇಲ್ಲಿ ಯಾವುದೇ ಜಲಚರಗಳು ವಾಸಿಸುತ್ತಿಲ್ಲ ಏಕೆಂದರೆ ನದಿಯ ನೀರು ಕುದಿಯುತ್ತಿರುವ ಕಾರಣ ಯಾವುದೇ ಜೀವಿಗಳು ನೀರನಲ್ಲಿ ವಾಸಿಸುತ್ತಿಲ್ಲ.

    ವೈಜ್ಞಾನಿಕ ಸತ್ಯವೇನು?

    ವೈಜ್ಞಾನಿಕವಾಗಿ, ಮಳೆನೀರು ಅಮೆಜಾನ್ ಮಳೆಕಾಡಿನ ಮೇಲ್ಮೈಗೆ ನುಸುಳಿದಂತೆ, ಅದು ಭೂಮಿಯ ಹೊರಪದರದಲ್ಲಿ ಆಳದಲ್ಲಿ ಅನುಸರಿಸುತ್ತದೆ ಭೂಶಾಖದ ಗ್ರೇಡಿಯಂಟ್ ಕಾರಣದಿಂದಾಗಿ ನೀರನ್ನು ಗಮನಾರ್ಹವಾಗಿ ಬಿಸಿಮಾಡಲಾಗುತ್ತದೆ.

    Continue Reading

    FILM

    ದರ್ಶನ್ ಸರ್ ನನಗೆ ಗುರು ಸಮಾನರು…ಧರ್ಮೋ ರಕ್ಷತಿ ರಕ್ಷಿತಃ… ಎಂದ ನಟಿ ರಚಿತಾ ರಾಮ್; ಹೇಳಿದ್ದೇನು?

    Published

    on

    ಬೆಂಗಳೂರು : ರೇಣುಕಾಸ್ವಾಮಿ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಬಂಧನವಾಗಿದೆ. ಇತ್ತ ನಟ, ನಟಿಯರು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ಇದೀಗ ರಚಿತಾ ರಾಮ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


    “ಧರ್ಮೋ ರಕ್ಷತಿ ರಕ್ಷಿತಃ” ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ನಮಸ್ಕಾರ..ಈ ನೋಟ್‌ನ ನಾನು ನಟಿಯಾಗಿ ಅಲ್ಲ ಸಾಮನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು..! ಎಂದಿದ್ದಾರೆ.

    ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು.

    ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆ.

    ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್‌ ಸರ್‌ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

    ದರ್ಶನ್ ಹಾಗೂ ರಚಿತಾ ರಾಮ್ ಜೊತೆಯಾಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಿಂಪಲ್ ಕ್ವೀನ್ ತನ್ನ ಸಿನಿ ಜರ್ನಿ ಆರಂಭಿಸಿದ್ದೇ ದರ್ಶನ್ ಜೊತೆಗೆ, ಅದೂ ‘ಬುಲ್ ಬುಲ್’ ಚಿತ್ರದ ಮೂಲಕ. ಅಂಬರೀಶ, ಜಗ್ಗುದಾದಾ, ಕ್ರಾಂತಿ ಚಿತ್ರಗಳಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು.

    Continue Reading

    LATEST NEWS

    Trending