ದುಬೈ: ನಾಳೆ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಟಿಟ್ವೆಂಟಿ ಕ್ರಿಕೆಟ್ ಪಂದ್ಯಾಟ ನಾಳೆ ದುಬೈನಲ್ಲಿ ನಡೆಯಲಿದೆ.
ಈ ಮಧ್ಯೆ ಪಂದ್ಯಕ್ಕೆ ಒಂದು ದಿನ ಬಾಕಿ ಇರುವಾಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರು ಆಟಗಾರರೊಂದಿಗೆ ಮಾತನಾಡಿದ್ದಾರೆ.
ಈ ವೇಳೆ ರಮೀಜ್ ರಾಜಾ ಮತ್ತು ಪಾಕ್ ಕೋಚ್ ಮ್ಯಾಥ್ಯೂ ಹೇಡನ್ ತಮ್ಮ ಆಟಗಾರರಿಗೆ ‘ಆಕ್ರಮಣಕಾರಿ’ ಆಟವಾಡಲು ಸಲಹೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ ಭಾರತವನ್ನು ಸೋಲಿಸಿದರೆ ಬೋನಸ್ ನೀಡುವುದಾಗಿ ಬಹುಮಾನವನ್ನು ಘೋಷಿಸಿದ್ದಾರೆ.
ಏಕೆಂದರೆ ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಎಂದಿಗೂ ಗೆದ್ದಿಲ್ಲ.
ಇಮ್ರಾನ್ ಖಾನ್, ವಾಸಿಂ ಅಕ್ರಮ್, ವಕಾರ್ ಯೂನಿಸ್ ಮತ್ತು ಇಂಜಮಾಮ್-ಉಲ್-ಹಕ್ ನಂತಹ ಅನುಭವಿ ಆಟಗಾರರ ನೇತೃತ್ವದಲ್ಲಿ ಮಾಡಲಾಗದ ಕಾರ್ಯ ಹೇಗೆ ಆಗಲಿದೆ ಎಂಬ ಪ್ರಶ್ನೆ ಇದೀಗ ಪಾಕ್ ಆಟಗಾರರಲ್ಲಿ ಇದೆ.
ಇದೀಗ ಪಾಕ್ ಟೀಂ ಸದಸ್ಯರ ತಂಡವನ್ನು ಘೋಷಿಸಿದೆ. ಬಾಬರ್ ಆಝಂ(ನಾಯಕ), ಆಸಿಫ್ ಅಲಿ, ಫಖರ್ ಝಮಾನ್, ಹೈದರ್ ಅಲಿ, ಮುಹಮ್ಮದ್ ರಿಝ್ವಾನ್, ಇಮಾದ್ ವಸೀಂ, ಮುಹಮ್ಮದ್ ಹಫೀಝ್, ಶಾದಾಬ್ ಖಾನ್, ಶುಐಬ್ ಮಲಿಕ್, ಹಾರಿಸ್ ರವೂಫ್, ಹಸನ್ ಅಲಿ ಹಾಗೂ ಶಾಹೀನ್ ಷಾ ಅಫ್ರಿದಿ ಕ್ರಿಕೆಟ್ ಅಂಗಳಕ್ಕೆ ಇಳಿಯಲಿದ್ದಾರೆ.