ಹೊಸ ಚರಿತ್ರೆ ಬರೆಯಲು ಸಿದ್ದವಾಗಿದೆ ಭಾರತ : ಇದೇ ಮೊದಲ ಬಾರಿ ಮಹಿಳೆಗೆ ಗಲ್ಲು ಶಿಕ್ಷೆ ಖಾಯಂ..!
ಹೊಸದಿಲ್ಲಿ : ಭಾರತ ಸ್ವಾತಂತ್ರಗೊಂಡ ಮೇಲೆ ಇದೇ ಮೊದಲ ಬಾರಿ ಮಹಿಳೆಗೆ ಗಲ್ಲು ಶಿಕ್ಷೆ ನೀಡಲಾಗ್ತಿದೆ.
ಭಾರತ ಸ್ವತಂತ್ರ ಕಂಡ ದಿನದಿಂದ ಇದುವರೆಗೂ ಕೆಲವೇ ಕೆಲವು ಮಂದಿಯನ್ನು ಗಲ್ಲಿಗೇರಿಸಿದ್ದು, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಗಲ್ಲು ಶಿಕ್ಷೆ ವಿಧಿಸಿ ಹೊಸ ಚರಿತ್ರೆಯನ್ನು ಬರೆಯಲು ಸಿದ್ದವಾಗಿದೆ.
ಏಪ್ರಿಲ್ 2008ರಲ್ಲಿ ಮಹಿಳೆ ಶಬ್ನಮ್ ತನ್ನ ಪ್ರೇಮಿ ಜೊತೆ ಸೇರಿ ಕುಟುಂಬಸ್ಥರ ಹತ್ಯೆ ಮಾಡಿದ್ದಳು. ಕುಟುಂಬಸ್ಥರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು. ಶಬ್ನಮ್ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ರಾಷ್ಟ್ರಪತಿ ಕೂಡ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ. 150 ವರ್ಷಗಳ ಹಿಂದೆ ಮಥುರಾ ಜೈಲಿನಲ್ಲಿ ಮಹಿಳೆಯರ ನೇಣು ಮನೆ ನಿರ್ಮಾಣ ಮಾಡಲಾಗಿತ್ತು.ಗಲ್ಲಿಗೇರಿಸುವ ತಯಾರಿ ಶುರುವಾಗಿದೆ.
ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ್ದ ಪವನ್ ಜಲ್ಲಾಡ್, ಈಗಾಗಲೇ ಎರಡು ಬಾರಿ ನೇಣು ಬಿಗಿಯುವ ಸ್ಥಳದ ಪರಿಶೀಲನೆ ನಡೆಸಿದ್ದಾರೆ.
ಆದರೆ ಇನ್ನು ಗಲ್ಲಿಗೇರಿಸುವ ದಿನಾಂಕ ನಿಗದಿಯಾಗಿಲ್ಲ. ಡೆತ್ ವಾರೆಂಟ್ ಬರ್ತಿದ್ದಂತೆ ಶಬ್ನಮ್ ಳನ್ನು ಗಲ್ಲಿಗೇರಿಸುವುದಾಗಿ ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಬಿಹಾರದ ಬಕ್ಸಾರ್ ನಿಂದ ನೇಣು ಹಗ್ಗವನ್ನು ತರಿಸಲಾಗ್ತಿದೆ ಎಂದು ಹೇಳಲಾಗಿದೆ.