ಬಾಗಲಕೋಟೆಯಲ್ಲಿ ಕಾಣೆಯಾಗಿದ್ದ ನರ್ಸಿಂಗ್ ವಿದ್ಯಾರ್ಥಿನಿ ಶವವಾಗಿ ಪತ್ತೆ : ಲವ್ ಜಿಹಾದ್ ಶಂಕೆ..!
ಬಾಗಲಕೋಟೆ : ಬಾಗಲಕೋಟೆಯಲ್ಲಿ ನಾಪತ್ತೆಯಾಗಿದ್ದ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕಾಣೆಯಾಗಿದ್ದ ವಿದ್ಯಾರ್ಥಿನಿ ಜ್ಯೋತಿ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಸಂಬಂಧ ಆರೋಪಿ 23 ವರ್ಷದ ಹನೀಫ್ ಬೀಳಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಧೋಳ ತಾಲ್ಲೂಕಿನ ವಜ್ರಮಟ್ಟಿ ಗ್ರಾಮದ ನಿವಾಸಿ ಜ್ಯೋತಿ ಬಾಗವ್ವಗೋಳ ಮತ್ತು ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ ನಿವಾಸಿ ಹನೀಫ್ ಬೀಳಗಿ ಇಬ್ಬರೂ ಬಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಜ್ಯೋತಿ ವಿದ್ಯಾಭ್ಯಾಸದ ಜೊತೆಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಳು. ಅದೇ ಆಸ್ಪತ್ರೆಯಲ್ಲಿ ಹನೀಫ್ ರಿಸೆಪ್ಷನಿಸ್ಟ್ ಆಗಿದ್ದ. ಇದೆ ವೇಳೆ ಇಬ್ಬರಿಗೂ ಪ್ರೀತಿ ಶುರುವಾಗಿತ್ತು. ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು.
ಆದರೆ ಪ್ರಿಯಕರ ಹನೀಫ್ಗೆ ಜ್ಯೋತಿ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿತ್ತು. ಹೀಗಾಗಿ ಆತ ಜ್ಯೋತಿಯನ್ನು ನಂಬಿಸಿ ಘಟಪ್ರಭಾ ನದಿ ಬಳಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ನದಿ ಪಕ್ಕ ಎಸೆದಿದ್ದಾನೆ ಎಂದು ಹೇಳಲಾಗುತ್ತಿದೆ.
ಇನ್ನು ಫೆಬ್ರವರಿ 13 ರಿಂದ ಜ್ಯೋತಿ ನಾಪತ್ತೆಯಾಗಿದ್ದ ಕಾರಣ ಫೆಬ್ರವರಿ 15 ರಂದು ಬಾಗಲಕೋಟೆ ನಗರ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.
ಜ್ಯೋತಿ ಮೊಬೈಲ್ ಕೊನೆ ಕರೆ ಜಾಡು ಹಿಡಿದು ತನಿಖೆ ಶುರು ಮಾಡಿದ್ದ ಪೊಲೀಸರು ಕರೆಯಾಧಾರದ ಮೇಲೆ ಹನೀಫ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಕೊಲೆ ಮಾಡಿರೋದಾಗಿ ಹನೀಫ್ ತಪ್ಪೊಪ್ಪಿಕೊಂಡಿದ್ದಾನೆ.
ಸದ್ಯ ಈ ಸಂಬಂಧ ಹನೀಫ್ನನ್ನು ಪೊಲೀಸರು ಬಂಧಿಸಿದ್ದಾರೆ.. ಇನ್ನು ಇದು ಲವ್ ಜಿಹಾದ್ ಎಂದು ಜ್ಯೋತಿ ಕೆಲ ಸಂಬಂಧಿಕರು ಆರೋಪಿಸಿದ್ದಾರೆ.