Saturday, March 6, 2021

ನಟಿ ನಿಧಿ ಅಗ್ರವಾಲ್‌ ಗೆ ದೇವಾಲಯ ಕಟ್ಟಿ ಅಭಿಷೇಕ ಮಾಡಿದ ಅಭಿಮಾನಿದೇವರುಗಳು..!

ನಟಿ ನಿಧಿ ಅಗ್ರವಾಲ್‌ ಗೆ ದೇವಾಲಯ ಕಟ್ಟಿ ಅಭಿಷೇಕ ಮಾಡಿದ ಅಭಿಮಾನಿ ದೇವರುಗಳು..!

ಚೆನೈ : ನಟಿ ನಿಧಿ ಅಗ್ರವಾಲ್‌ ಗೆ ದೇವಾಲಯ ಕಟ್ಟಿ ಅಭಿಮಾನಿಗಳು ಅಭಿಷೇಕ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಸಿನಿಮಾ ಇಂಡಸ್ಟ್ರಿಗೂ- ಜನ ಸಾಮಾನ್ಯರಿಗೂ ಅನ್ಯೋನ್ಯಭಾವ. ನಟ-ನಟಿಯರನ್ನು ತೆರೆಮೇಲೆ ನೋಡಿ ಅನೇಕರು ಸ್ಫೂರ್ತಿ ಪಡೆಯುತ್ತಾರೆ. ಅಷ್ಟೇ ಅಲ್ಲ, ಅವರನ್ನು ಆರಾಧಿಸುತ್ತಾರೆ.

ದಕ್ಷಿಣ ಭಾರತದಲ್ಲಿ ಸಿನಿಮಾ ಇಂಡಸ್ಟ್ರಿಗೂ- ಜನ ಸಾಮಾನ್ಯರಿಗೂ ಅನ್ಯೋನ್ಯಭಾವ. ನಟ-ನಟಿಯರನ್ನು ತೆರೆಮೇಲೆ ನೋಡಿ ಅನೇಕರು ಸ್ಫೂರ್ತಿ ಪಡೆಯುತ್ತಾರೆ. ಅಷ್ಟೇ ಅಲ್ಲ, ಅವರನ್ನು ಆರಾಧಿಸುತ್ತಾರೆ.

ಖುಶ್ಬೂ, ನಮಿತಾ ಮತ್ತು ಹನ್ಸಿಕಾಗೆ ಈಗಾಗಲೇ ಅಭಿಮಾನಿಗಳು ದೇವಾಲಯ ಕಟ್ಟಿ ಪೂಜೆ ಮಾಡಿದ್ದಾರೆ. ಈ ಸಾಲಿಗೆ ಈಗ ಹೊಸ ನಟಿ ಸೇರ್ಪಡೆ ಆಗಿದ್ದಾರೆ.

ಅವರೇ ತೆಲುಗು-ತಮಿಳು ನಟಿ ನಿಧಿ ಅಗರ್​​ವಾಲ್  ಈ ನಟಿಗೆ ಚೆನ್ನೈನಲ್ಲಿ ಅಭಿಮಾನಿಗಳು ದೇವಾಲಯ ಕಟ್ಟಿದ್ದಾರೆ.  ಚೆನ್ನೈನ ಒಂದು ಕೊಠಡಿಯಲ್ಲಿ ನಿಧಿ ಅವರ ಮೂರ್ತಿಯನ್ನು ಅಭಿಮಾನಿಗಳು ಉದ್ಘಾಟನೆ ಮಾಡಿದ್ದಾರೆ.

ಈ ಕೊಠಡಿಯನ್ನು ಮಂದಿರದಂತೆ ಕಟ್ಟಿರುವ ಅವರು, ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಈ ವಿಚಾರ ನಿಧಿ ಅಗರ್​ವಾಲ್​ಗೆ ಶಾಕ್​, ಅಚ್ಚರಿ  ಜೊತೆಗೆ ಖುಷಿಯನ್ನು ಒಟ್ಟೊಟ್ಟಿಗೆ ತಂದಿದೆಯಂತೆ.

ಈ ಬಗ್ಗೆ ಮಾತನಾಡಿರುವ ಅವರು, ನಾನು ಈ ವಿಚಾರ ಕೇಳಿ ಒಮ್ಮೆ ಶಾಕ್​ ಆದೆ. ಇದೇ ವೇಳೆ ನನಗೆ ಖುಷಿ ಕೂಡ ಆಗಿದೆ. ನನಗೆ ಒಂದು ದೇವಾಲಯ ನಿರ್ಮಾಣವಾಗುತ್ತದ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.

ಹೈದರಾಬಾದ್​ನಲ್ಲಿ ಹುಟ್ಟಿ, ಬೆಂಗಳೂರಲ್ಲಿ ಬೆಳೆದನಟಿ ನಿಧಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...