Friday, July 1, 2022

ಸೌದಿ ಅರೇಬಿಯಾದಲ್ಲಿ  ತೊಕ್ಕೊಟ್ಟು ಮೂಲದ ರೊನಾಲ್ಡ್ ಡಿಸೋಜಾ ನಿಗೂಡ ಸಾವು..!

ಸೌದಿ ಅರೇಬಿಯಾದಲ್ಲಿ  ತೊಕ್ಕೊಟ್ಟು ಮೂಲದ ರೊನಾಲ್ಡ್ ಡಿಸೋಜಾ ನಿಗೂಡ ಸಾವು..!

ಮಂಗಳೂರು: ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಜಿಝಾನ್​ನಲ್ಲಿರುವ ಓಸೋಲ್ ಅಲ್ ಬನ್ನಾ ಎಂಬ ಕಂಪನಿಯಲ್ಲಿ ಎಲೆಕ್ಟ್ರಿಶಿಯನ್ ಆಗಿ ದುಡಿಯುತ್ತಿದ್ದ ತೊಕ್ಕೊಟ್ಟು ಸಮೀಪದ ರೊನಾಲ್ಡ್ ಡಿಸೋಜಾ ಅವರು ಮಾ.19 ರಂದು ನಿಧನರಾಗಿದ್ದಾರೆ.ಇದೀಗ ಅವರ ಮೃತದೇಹವನ್ನು ತಾಯ್ನಾಡಿಗೆ ರವಾನೆ ಮಾಡಲು ಇಂಡಿಯನ್ ಸೋಷಿಯಲ್ ಫೋರಂ ಸಿದ್ಧತೆ ನಡೆಸುತ್ತಿದೆ.ಓಸೋಲ್ ಅಲ್ ಬನ್ನಾ ಕಂಪನಿಯವರು ಮೃತರ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡುವ ಬಗ್ಗೆ ಪ್ರಯತ್ನಿಸಿದ್ದರೂ ಯಾವುದೇ ಮಾಹಿತಿ ದೊರಕಿಲ್ಲ.

ಆದ್ದರಿಂದ ಕೊನೆಯ ಪ್ರಯತ್ನವಾಗಿ ಮೃತ ರೊನಾಲ್ಡ್ ಡಿಸೋಜಾ ಅವರನ್ನು ಸೌದಿ ಅರೇಬಿಯಾಗೆ ಕಳುಹಿಸಿರುವ ಮುಂಬಯಿಯ ಏಜೆಂಟರಿಗೆ ವಿಷಯ ತಿಳಿಸಿದ್ದಾರೆ.

ಅವರು ತಮ್ಮ ಬಳಿ ಲಭ್ಯವಿರುವ ಮಂಗಳೂರಿನ ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಮೃತರ ಬಗ್ಗೆ ಮಾಹಿತಿ ಹರಿ ಬಿಟ್ಟಿದ್ದರು.  ಇದರ ಮಧ್ಯೆ ಜಿಝಾನ್​ನ ದರ್ಬ್​ನಲ್ಲಿರುವ ಸಿದ್ದೀಕ್ ಉಳ್ಳಾಲರವರ ಮೂಲಕ ಇಂಡಿಯನ್ ಸೋಶಿಯಲ್ ಫೋರಂನ ಅಸೀರ್ ವಲಯ ಸಂಚಾಲಕ ಜಿ.ಕೆ.ಸಲೀಂ ಗುರುವಾಯನಕೆರೆಯವರನ್ನು ಮೃತರ ಮನೆಯವರು ಸಂಪರ್ಕಿಸಿ ಮೃತರ ಮಾಹಿತಿ ನೀಡಿದ್ದರು.

ಮೃತರ ಪಾಸ್ ಪೋರ್ಟ್ ಹಾಗೂ ಇನ್ನಿತರ ದಾಖಲೆಗಳ ಮೂಲಕ ಹೊರಟ ಐ.ಎಸ್.ಎಫ್ ಜಿಝಾನ್ ಹಾಗೂ ಅಬೂ ಅರೀಸ್ ತಂಡವು ಜಿಝಾನ್ ಪ್ರಾಂತ್ಯದ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿ ಕೊನೆಯದಾಗಿ ಅಬೂ ಅರೀಸ್​ನ ಕಿಂಗ್ ಫಹಾದ್ ಅಸ್ಪತ್ರೆಯಲ್ಲಿ ಮೃತದೇಹ ಇರುವುದು ದೃಢಪಡಿಸಿದ್ದಾರೆ.

ಮೃತದೇಹವಿರುವ ಅಬೂಅರೀಸ್​ನ ಕಿಂಗ್ ಫಹಾದ್ ಆಸ್ಪತ್ರೆಗೆ ಹಾಗೂ ಅಲ್ ಬನ್ನಾನ್ ಕಂಪನಿಯ ಮುಖ್ಯಸ್ಥರನ್ನು ಭೇಟಿ ಮಾಡಿದ ಜಿ.ಕೆ.ಸಲೀಂ ಗುರುವಾಯನಕೆರೆ ಹಾಗೂ ಸಿದ್ದೀಕ್ ಉಳ್ಳಾಲರವರು ಮೃತದೇಹವನ್ನು ತಾಯ್ನಾಡಿಗೆ ಶೀಘ್ರವಾಗಿ ಕಳುಹಿಸಲು ಬೇಕಾದ ಎಲ್ಲ ಪೂರಕ ದಾಖಲೆಗಳನ್ನು ಅಲ್ ಬನ್ನಾ ಕಂಪನಿಗೆ ಒದಗಿಸಲು ಹಾಗೂ ಸೌದಿ ಅರೇಬಿಯಾದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಲು ಇಂಡಿಯನ್ ಸೋಷಿಯಲ್ ಫಾರಂನ ಅಸೀರ್ ಕೇಂದ್ರೀಯ ಸಮಿತಿ ಉಪಾಧ್ಯಕ್ಷ ಹನೀಫ್ ಮಂಜೇಶ್ವರ ಅವರೊಂದಿಗೆ ಸಹಕರಿಸಿದ್ದಾರೆ‌‌.

LEAVE A REPLY

Please enter your comment!
Please enter your name here

Hot Topics

ಸುರತ್ಕಲ್ ಮದರಸಾದಿಂದ ವಾಪಸ್​ ಆಗುತ್ತಿದ್ದವನ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಸ್ಟ್- ಇದು ಬಾಲಕ ಕಟ್ಟಿದ ಕಟ್ಟುಕಥೆ..!

ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್ ಕಾಟಿಪಳ್ಳದ ಮದರಸಾದಿಂದ ಮನೆಗೆ ತೆರಳುತ್ತಿದ್ದ ಬಾಲಕನಿಗೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣ ತಿರುವು ಪಡೆದಿದ್ದು ಇದು ಬಾಲಕ ಕಟ್ಟಿದ್ದ ಕಟ್ಟುಕಥೆ ಎಂದು ಇದೀಗ ಪೊಲೀಸ್ ಇಲಾಖೆ...

ಆಂಧ್ರದಲ್ಲಿ ಘೋರ ದುರಂತ: ಕೆಲಸಕ್ಕೆ ಹೋಗುತ್ತಿದ್ದ ಐವರು ಕಾರ್ಮಿಕರ ಸಜೀವ ದಹನ

ಆಂಧ್ರಪ್ರದೇಶ: ಚಲಿಸುತ್ತಿದ್ದ ಆಟೋ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಐದು ಮಂದಿ ಸಜೀವ ದಹನವಾಗಿರುವ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ತಾಡಿಮರ್ರಿ ವಲಯದಲ್ಲಿ ನಡೆದಿದೆ.ಗುಡಂಪಲ್ಲಿಯಿಂದ ಚಿಲ್ಲಕೊಂಡಯ್ಯಪಲ್ಲಿಗೆ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನಲೆ : ನಾಳೆ (ಜುಲೈ1) ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆy ಹಿನ್ನಲೆಯಲ್ಲಿ ನಾಳೆ (ಜುಲೈ1) ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.