ಪುತ್ತೂರು: ಹೃದಯಾಘಾತಕ್ಕೆ ಬಲಿಯಾದಳಾ 16ರ ಯುವತಿ..!
ಪುತ್ತೂರು: ಇತ್ತೀಚೆಗೆ ಯುವ ಪೀಳಿಗೆ ಹೃದಯಾಘಾತಕ್ಕೆ ಬಲಿಯಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ.16ರ ಹರೆಯದ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಶ್ರೇಯಾ ಪಕ್ಕಳ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಲವಲವಿಕೆಯಿಂದಿದ್ದ ಶ್ರೇಯಾಳಿಗೆ ಬೆಳ್ಳಂಬೆಳಗ್ಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಶೀಘ್ರ ಪುತ್ತೂರಿನ ಆಸ್ಪತ್ರೆಗೆ ಕರೆತರಲಾಯಿತು. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ನಿಧನರಾಗಿರುವ ಕುರಿತು ವರದಿಯಾಗಿದೆ.
ಈಕೆ ಬೆಳ್ಳಿಪ್ಪಾಡಿ ಕುಂಡಾಪು ಪದ್ಮ ಪಕ್ಕಳ ಮತ್ತು ಉಮಾವತಿ ದಂಪತಿಯ ಎರಡನೇ ಪುತ್ರಿಯಾಗಿದ್ದು, ದಿಢೀರ್ ಅನಾರೋಗ್ಯದಿಂದ ಪ್ರತಿಭಾನ್ವಿತ ಬಾಲೆ ಶ್ರೇಯಾ ಪಕ್ಕಳ ಅಕಾಲಿಕ ಸಾವನ್ನಪ್ಪಿದ್ದಾಳೆ.
ಶ್ರೇಯಾ ನಿಧನಕ್ಕೆ ಊರೇ ಬೆಚ್ಚಿ ಬಿದ್ದಿದೆ.