Homebengaluruರಾಜಕೀಯ ಚರ್ಚೆಗೆ ಗ್ರಾಸವಾದ ರಿಷಬ್ ಶೆಟ್ಟಿ ಹೇಳಿಕೆ-ಪ್ರಧಾನಿಯನ್ನು ಹೊಗಳಿ ರಾಹುಲ್‌ಗೆ 'ನೋ ಕಾಮೆಂಟ್ಸ್' ಹೇಳಿದ ಕಾಂತಾರ...

ರಾಜಕೀಯ ಚರ್ಚೆಗೆ ಗ್ರಾಸವಾದ ರಿಷಬ್ ಶೆಟ್ಟಿ ಹೇಳಿಕೆ-ಪ್ರಧಾನಿಯನ್ನು ಹೊಗಳಿ ರಾಹುಲ್‌ಗೆ ‘ನೋ ಕಾಮೆಂಟ್ಸ್’ ಹೇಳಿದ ಕಾಂತಾರ ಹೀರೋ..!

ಬೆಂಗಳೂರು: ಕಾಂತಾರ ಚಿತ್ರದ ರಿಷಬ್‌ ಶೆಟ್ಟಿ ನೀಡಿದ ಸಂದರ್ಶನವೊಂದರಲ್ಲಿ ಸಂದರ್ಶಕಿ ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸುತ್ತ ನರೇಂದ್ರ ಮೋದಿ? ಎಂದು ಸಂದರ್ಶಕಿ ಕೇಳಿದಾಗ ‘ಅದ್ಭುತ ನಾಯಕ’ ಎಂದು ಪ್ರತಿಕ್ರಿಯಿಸಿ ರಾಹುಲ್ ಗಾಂಧಿ? ಎಂದು ಪ್ರಶ್ನೆ ಎಸೆದಾಗ ಅದೇ ನಗುಮುಖದಲ್ಲಿ ‘ನೋ ಕಮೆಂಟ್ಸ್’ ಎಂದಿರುವುದು ಇದೀಗ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿರುವಂತಹ ‘ಕಾಂತಾರಾ’ ಸಿನಿಮಾದ ಹವಾ ಇನ್ನೂ ಇಳಿದಿಲ್ಲ. ಚಿತ್ರದ ಯಶಸ್ಸಿನ ನಡುವೆ ಕಾಂತಾರ ಚಿತ್ರದ ಸಾರಥಿ ನಟ ರಿಷಬ್ ಶೆಟ್ಟಿ ಅವರನ್ನು ಕನ್ನಡದ ಖಾಸಗಿ ಚಾನೆಲ್‌ಗಳು ಸಂದರ್ಶನ ಮಾಡುತ್ತಿದೆ. ಇದೀಗ ಇಂಟರ್‌ವ್ಯೂನಲ್ಲಿ ಪ್ರತಿಕ್ರಿಯಿಸಿದ ಒಂದು ಉತ್ತರದ ಬಗ್ಗೆ ಚರ್ಚೆಗಳು, ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದೆ.


ರಿಷಬ್‌ ಶೆಟ್ಟಿ ಅವರು ಸಂದರ್ಶಕಿಯೊಂದಿಗೆ ಮಾತನಾಡುತ್ತಾ ಅವರು ಕೇಳಿದ ಪ್ರಶ್ನೆಗಳಿಗೆ ಚುಟುಕು ಉತ್ತರ ನೀಡಿದ್ದಾರೆ. ‘ರಕ್ಷಿತ್ ಶೆಟ್ಟಿ?’ ಎಂದು ಸಂದರ್ಶಕಿ ಕೇಳಿದರೆ ‘ಗೆಳೆಯ’ ಎಂದು ಚುಟುಕಾಗಿ ರಿಷಬ್ ಶೆಟ್ಟಿ ಉತ್ತರಿಸುತ್ತಿದ್ದರು. ಹೀಗೆ ಹಲವು ಸಿನಿಮಾ ಸಂಬಂಧಿ ವ್ಯಕ್ತಿಗಳ ಬಗ್ಗೆ ಸಂದರ್ಶಕಿ ಕೇಳಿದ ಪ್ರಶ್ನೆಗಳಿಗೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ.

ಆ ಬಳಿಕ ಸಂದರ್ಶಕಿ, ‘ನಿಮ್ಮ ಪ್ರಕಾರ ಬೆಸ್ಟ್ ಸಿಎಂ ಯಾರು? ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ?’ ಎಂದು ಪ್ರಶ್ನೆ ಕೇಳುತ್ತಾರೆ, ಮತ್ತೆ ಅದಕ್ಕೆ ಕೂಡಾ ‘ನೋ ಕಮೆಂಟ್ಸ್’ ಎನ್ನುತ್ತಾರೆ ರಿಷಬ್ ಶೆಟ್ಟಿ.

ಬಿಜೆಪಿ ಪರ ಕಾರ್ಯಕರ್ತರು ರಿಷಬ್ ಅವರನ್ನು ತಮ್ಮ ‘ಪಕ್ಷದ ನಾಯಕ’ ಎಂಬಂತೆ ಹೊಗಳಿ ಸಂಭ್ರಮಿಸುತ್ತಿದ್ದಾರೆ. ಆದರೆ ಬಿಜೆಪಿಯನ್ನು ವಿರೋಧಿಸುತ್ತಿರುವವರು ರಿಷಬ್ ಶೆಟ್ಟಿಯರ ಏಕ ವ್ಯಕ್ತಿ ಪ್ರೀತಿ ಬಗ್ಗೆ ತಕರಾರು ಎತ್ತಿದ್ದಾರೆ.

ಒಂದು ವೇಳೆ ‘ನರೇಂದ್ರ ಮೋದಿ?’ ಎಂದು ಸಂದರ್ಶಕಿ ಕೇಳಿದ್ದಾಗ ‘ನೋ ಕಮೆಂಟ್ಸ್’ ಎಂದು ರಿಷಬ್ ಹೇಳಿದ್ದರೆ ಏನಾಗಿರುತ್ತಿತ್ತು ಎಂದು ಸಹ ಕೆಲವರು ಪ್ರಶ್ನಿಸಿದ್ದಾರೆ.

Latest articles

ಕೆಲಸ ಇಲ್ಲದವನು ಎಂದು ಬೈಯುತ್ತಿದ್ದ ಅಜ್ಜಿಯನ್ನು ಕೊಂದು ಸುಟ್ಟು ಹಾಕಿದ ಕಿರಾತಕ ಮೊಮ್ಮಗ

ಮೈಸೂರು: ದುಡಿಯುವ ವಯಸ್ಸಿನಲ್ಲಿ ಪುಂಡ ಪೋಕರಿಯಂತೆ ಅಲೆಯುತ್ತಿದ್ದುದಕ್ಕೆ ಬೈಯುತ್ತಿದ್ದ ಅಜ್ಜಿಯನ್ನು ಸ್ವಂತ ಮೊಮ್ಮಗನೇ ಕೊಂದು ಸುಟ್ಟು ಹಾಕಿ ಶವವನ್ನು...

ಚಿತ್ರದುರ್ಗ : ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಅಕ್ರಮ ಗೋಸಾಗಾಟ- ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ..!

ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಕಳ್ಳರು ಬೀದಿ ಬದಿಯ ಗೋವುಗಳನ್ನು ಕಳ್ಳತನ ಮಾಡಿ ಟೆಂಪೋದಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ...

ಕೇರಳಕ್ಕೆಮುಂಗಾರು ಪ್ರವೇಶ- ಮಂಗಳೂರಿನಲ್ಲಿ ಸಂಜೆ ಬಿರುಸಿನ ಮಳೆ..!

ಕೇರಳದಲ್ಲಿ ಇಂದು ಮುಂಗಾರು ಪ್ರವೇಶಿಸಿದ್ದು ಈ ಹಿನ್ನೆಲೆಯಲ್ಲಿ ಕರಾವಳಿಯ ಬಂದರು ನಗರ ಮಂಗಳೂರಿನಲ್ಲಿ ಇಂದು ಸಂಜೆ ಬಿರುಸಿನ ಮಳೆಯಾಗಿದೆ.ಮಂಗಳೂರು...

ಬೆಂಗಳೂರು: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರನ್ನು ಭೇಟಿಯಾದ ಸ್ಪೀಕರ್ ಯು.ಟಿ.ಖಾದರ್

ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರು ಮೊದಲ ಬಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು...