Connect with us

DAKSHINA KANNADA

Puttur: ‘ಗೃಹಜ್ಯೋತಿ’ ಯೋಜನೆಗೆ ಸಚಿವ ದಿನೇಶ್‌ ಗುಂಡೂರಾವ್‌ ಚಾಲನೆ

Published

on

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್  ಪುತ್ತೂರಿನ ಪುರಭವನದಲ್ಲಿ ಆ.11ರಂದು’ಗೃಹಜ್ಯೋತಿ’ ಚ ಚಾಲನೆ ನೀಡಿ ಉದ್ಘಾಟಿಸಿದರು.

ಪುತ್ತೂರು: ರಾಜ್ಯದ ಕಾಂಗ್ರೆಸ್‌ ಸರಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲೊಂದಾದ ‘ಗೃಹಜ್ಯೋತಿ’ ಯೋಜನೆಗೆ ರಾಜ್ಯ ಮಟ್ಟದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, ಈ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ.11ರಂದು ಪುತ್ತೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ಕಾಂಗ್ರೆಸ್‌ ಸರಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದೆ.

ಜನರ ಹಣವನ್ನು ಜನರಿಗೆ ನೀಡುವ ಮೂಲಕ ಜನರಿಗೆ ಶಕ್ತಿಯನ್ನು ನೀಡುವ ಕೆಲಸವನ್ನು ಸರಕಾರ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 79 ಕುಟುಂಬಗಳು ಈ ಯೋಜನೆಗೆ ನೊಂದಾಯಿಸಿದ್ದು, ಬಾಕಿ ಇರುವ ಶೇ‌. 21 ಕುಟುಂಬಗಳು ಶೀಘ್ರದಲ್ಲಿ ನೊಂದಾಯಿಸುವ ನಿರೀಕ್ಷೆ ಇದೆ.

ಉಡುಪಿ ಜಿಲ್ಲೆಯಲ್ಲಿ ಶೇ. 84, ಚಿಕ್ಕಮಗಳೂರಿನಲ್ಲಿ ಶೇ. 92 ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 99 ಮಂದಿ ನೊಂದಾಯಿಸಿದ್ದಾರೆ.

ನೋಂದಣಿ ಮಾಡಿದ ಎಲ್ಲಾ ಅರ್ಹರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದರು.

ಗೃಹಲಕ್ಷ್ಮೀ ಯೋಜನೆಯು ರಾಜೀವ್ ಗಾಂಧಿ ಅವರ ಹುಟ್ಟುಹಬ್ಬದ ದಿನದಂದು ಜಾರಿಗೆ ಬರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್‌ ಸಿಇಒ ಡಾ. ಆನಂದ್ ಕೆ. ಮತ್ತು ಮೆಸ್ಕಾಂ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ!

Published

on

ಪುತ್ತೂರು : ಪುತ್ತೂರಿನ ಬೆಟ್ಟಂಪ್ಪಾಡಿಯಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾ*ವನ್ನಪ್ಪಿದ್ದು, ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಮೃ*ತ ಯುವಕನ ತಾಯಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 ಪಕ್ಕದ ಮನೆ ಕದ ತಟ್ಟಿದ ಮಗ; ಸಂಕೋಲೆ ಹಾಕಿ ಎಳೆತಂದ ತಾಯಿ :  

ಬೆಟ್ಟಂಪ್ಪಾಡಿಯ ನಿವಾಸಿ ಚೇತನ್ (33) ಮೃ*ತ ಪಟ್ಟಿರುವ ಯುವಕ. ನಿನ್ನೆ ರಾತ್ರಿ ಕುಡಿದು ಮನೆಗೆ ಬಂದಿದ್ದ ಚೇತನ್ ತಾಯಿ ಜತೆ ಜಗಳವಾಡಿದ್ದ.  ಬಳಿಕ ಪಕ್ಕದ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದ. ಈ ಬಗ್ಗೆ ಯೂಸುಫ್ ಅವರು ಚೇತನ್ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಕೂಡಲೇ ಯೂಸುಫ್ ಮನೆಗೆ ಬಂದ ಚೇತನ್ ತಾಯಿ ನಾಯಿಯನ್ನು ಕಟ್ಟುವ ಸಂಕೊಲೆಯನ್ನು ಚೇತನ್ ಸೊಂಟಕ್ಕೆ ಕಟ್ಟಿ ಮನೆಗೆ ಎಳೆದೊಯ್ದಿದ್ದರು. ಇದಕ್ಕೆ ಯೂಸುಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಸಾಥ್‌ ನೀಡಿದ್ದರು. ಎಳೆದೊಯ್ಯುವ ಸಂದರ್ಭದಲ್ಲಿ ಚೇತನ್‌ನ ಕುತ್ತಿಗೆಗೆ ಸಂಕೋಲೆ ಸುತ್ತಿಕೊಂಡಿದೆ ಎನ್ನಲಾಗಿದೆ.  ಇದರಿಂದಾಗಿ ಚೇತನ್‌ ಸಾ*ವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ಚೇತನ್ ನೇಣು ಬಿಗಿದು ಸಾ*ವನ್ನಪ್ಪಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ; ವೀಡಿಯೋ, ಫೋಟೋ ಅಪ್ಲೋಡ್ ಮಾಡಿದ್ದಾತ ಅರೆಸ್ಟ್

ಮೃ*ತ ದೇಹ ನೋಡಿ ಅನುಮಾನಗೊಂಡ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕೊಂಡಿದ್ದರು. ಘಟನೆಗೆ ಸಂಬಂಧಿಸಿ ತಾಯಿ ಉಮಾವತಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಪೋಲೀಸರು ಮೃ*ತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ರವಾನಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.

Continue Reading

DAKSHINA KANNADA

ಹೊಸ ಮನೆಗೆ ಸ್ಥಳಾಂತರಿಸುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ

Published

on

ಮಂಗಳೂರು: ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿರಬೇಕು ಎನ್ನುವ ಕನಸು, ಆಸೆ ಇದ್ದೇ ಇರುತ್ತದೆ. ಮನೆ ಕಟ್ಟುವುದು ಆಗಲಿ ಅಥವಾ ಕೊಂಡುಕೊಳ್ಳುವುದಾಗಲಿ ಅದೇನು ಸುಲಭದ ಮಾತಲ್ಲ. ಬ್ಯಾಂಕ್‌ನಲ್ಲಿ, ಸ್ನೇಹಿತರಲ್ಲಿ, ಕುಟುಂಬದವರಲ್ಲಿ ಸಾಲ ಮಾಡಿ ಹೇಗೊ ಮನೆ ಖರೀದಿಸುತ್ತೇವೆ. ಆದರೆ ಕನಸಿನ ಮನೆ ವಾಸ್ತವಕ್ಕೆ ಬಂದಾಗ ಅದರಲ್ಲಿ ಆಗುವ ಖುಷಿಯೇ ಬೇರೆ.

ಮನೆ ಬದಲು ಮಾಡುವಾಗ ಈ ವಿಷಯ ನೆನಪಿಡಿ

ತಮ್ಮ ಹೊಸ ಮನೆಗೆ ಹೋಗುವ ಖುಷಿಯಲ್ಲಿ ಜನರು ಸಾಮಾನ್ಯವಾಗಿ ಕೆಲವು ವಿಷಯಗಳನ್ನು ಮರೆತು ಬಿಡುತ್ತಾರೆ. ಇದರಿಂದಾಗಿ ಅವರಿಗೆ ನಂತರದ ದಿನಗಳಲ್ಲಿ ಸಮಸ್ಯೆ ಆಗಬಹುದು. ನೀವು ಮನೆ ಬದಲು ಮಾಡುವಾಗ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ.

ಮನೆಯ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಿ

ನೀವು ಹೊಸ ಮನೆಗೆ ಸ್ಥಳಾಂತರಗೊಳ್ಳುತ್ತಿದ್ದರೆ ಮೊದಲು ನೀವು ದಿನ ಬಳಕೆಯ ವಿಷಯಗಳತ್ತ ಗಮನ ಕೊಡಬೇಕು. ಆದುದರಿಂದ ನಿಮ್ಮ ಮನೆಯ ಪ್ರತಿಯೊಂದು ನಳ್ಳಿಯಲ್ಲಿ ನೀರು ಬರುತ್ತಿದ್ದೇಯೋ, ವಾಶ್ ರೂಂ ಅನ್ನು ಚೆನ್ನಾಗಿ ಪರಿಶೀಲಿಸಿ, ಮನೆಯ ಫ್ಯಾನ್, ಲೈಟ್ ಸರಿಯಾಗಿ ಇದೆಯೋ ಎಂದು ಗಮನಿಸಿ. ಇದರಿಂದ ಹೊಸ ಮನೆಗೆ ಬಂದ ತಕ್ಷಣ ಯಾವೂದೇ ಸಮಸ್ಯೆ ಎದುರಾಗುವುದಿಲ್ಲ.

ಶುಚಿಗೊಳಿಸುವಿಕೆಯನ್ನು ಮುಂಚಿತವಾಗಿ ಮಾಡಿ

ಹೊಸ ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಒಮ್ಮೆ ಸ್ವಚ್ಛಗೊಳಿಸಬೇಕು. ಏಕೆಂದರೆ ವಸ್ತುಗಳನ್ನು ಸ್ಥಳಾಂತರಿಸಿದ ನಂತರ ನಿಮಗೆ ಸ್ವಚ್ಛಗೊಳಿಸಲು ಕಷ್ಟವಾಗಬಹುದು. ಮನೆಯನ್ನು ಬದಲಾಯಿಸಿದ ನಂತರವೂ ಕೊಳಕು ಕಾಣುತ್ತದೆ. ಹೀಗಾಗಿ ಹೊಸ ಮನೆಗೆ ಬಂದ ನಂತರ ಮೊದಲ ದಿನದಿಂದಲೇ ಮನೆಯನ್ನು ಶುಚಿಯಾಗಿಡಿ.

ಪ್ಯಾಕಿಂಗ್ ವಿಧಾನ

ಹೊಸ ಮನೆಗೆ ಬದಲಾಯಿಸುವ ಮೊದಲು ಹಳೆಯ ವಸ್ತುಗಳನ್ನು ಪ್ಯಾಕಿಂಗ್ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಆದ್ಧರಿಂದ ಸರಕುಗಳನ್ನು ಪ್ಯಾಕ್ ಮಾಡುವಾಗ ಪೆಟ್ಟಿಗೆಯಲ್ಲಿ ಹೆಸರನ್ನು ಬರೆಯಿರಿ. ಇದರಿಂದಾಗಿ ಬಾಕ್ಸ್ ತೆರೆಯುವಾಗ ಯಾವೂದೇ ಗೊಂದಲ ಉಂಟಾಗುವುದಿಲ್ಲ.

ಪೀಠೋಪಕರಣಗಳ ಬಗ್ಗೆಯೂ ಕಾಳಜಿ ವಹಿಸಿ​

ಸ್ಥಳಾಂತರಗೊಳ್ಳುವ ಮೊದಲು, ಮನೆಯ ಪೀಠೋಪಕರಣಗಳು ನಿಮ್ಮ ಅಗತ್ಯಗಳಿಗೆ ಸರಿಹೊಂದುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ಪರಿಶೀಲಿಸಬೇಕು. ನಿಮಗೆ ಸರಿಹೊಂದುವ ಸ್ಥಳದಲ್ಲಿ ಹಾಗೂ ಕೆಲವೊಂದು ವಸ್ತುಗಳನ್ನು ವಾಸ್ತು ಪ್ರಕಾರವೇ ಇಡಬೇಕಾಗುತ್ತದೆ. ಆದ್ದರಿಂದ ಅದರ ಬಗ್ಗೆ ಕಾಳಜಿ ವಹಿಸಿ.

Continue Reading

DAKSHINA KANNADA

ಪ್ರತಿ ಮಹಿಳೆಗೆ ಸಿಗುತ್ತೆ 3 ಲಕ್ಷ ರೂಪಾಯಿ..! ಈ ಹಣ ಸಿಗಲು ಹೀಗೆ ಮಾಡಿ ಸಾಕು!

Published

on

ಮಂಗಳೂರು: ಕೇಂದ್ರ ಸರ್ಕಾರ ಕೆಲವು ರೀತಿಯ ವ್ಯಾಪಾರ ಮಾಡುವವರಿಗೆ ರೂ.3 ಲಕ್ಷ ದರದಲ್ಲಿ ಹಣ ನೀಡುತ್ತಿದೆ. ಆ ಯೋಜನೆಯ ಹೆಸರು ಎಂಪ್ಲಾಯಿ ಸ್ಕೀಮ್. ಈ ಬ್ಯುಸಿನೆಸ್‌‌ ಮಾಡುವವರು ಮಹಿಳೆಯರೇ ಆಗಿರಬೇಕು ಎಂಬುದು ಷರತ್ತು. ಇದು ಕೇವಲ ಮಹಿಳೆಯರಿಗಾಗಿ ಮಾತ್ರ ಇರುವ ಸ್ಕೀಂ ಆಗಿದ್ದು ಪುರುಷರು ಇದರ ಲಾಭ ಪಡೆಯಲಾರರು.

 

ಟೀ ಸ್ಟಾಲ್ ಹಾಕಿಕೊಂಡು ಕೇಂದ್ರ ಸರ್ಕಾರದಿಂದ ರೂ.1 ಲಕ್ಷದಿಂದ ರೂ.3 ಲಕ್ಷ ಸಾಲ ಪಡೆಯಬಹುದು. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮಹಿಳೆಯರಿಗೆ ಸಾಲದ ಮೇಲೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅಂದರೆ ರೂ.3 ಲಕ್ಷ ಸಾಲ ತೆಗೆದುಕೊಂಡರೆ ರೂ.1.5 ಲಕ್ಷ ಮಾತ್ರ ಬ್ಯಾಂಕಿಗೆ ಹಿಂತಿರುಗಿಸಬೇಕಾಗುತ್ತದೆ . ಸಾಲ ಪಡೆಯುವ ಮಹಿಳೆ ವಿಶೇಷ ವರ್ಗ ಅಥವಾ ಸಾಮಾನ್ಯ ವರ್ಗದವರಾಗಿದ್ದರೆ, ಸಾಲದ ಮೇಲಿನ ಸಬ್ಸಿಡಿ 305 ಇರಲಿದೆ. ಹೀಗಾಗಿ ಸಾಮಾನ್ಯ ವರ್ಗದ ಮಹಿಳೆಯರು ರೂ.2.1 ಲಕ್ಷವನ್ನು ಹಿಂದಿರುಗಿಸಬೇಕು.

ಈ ಯೋಜನೆಯಡಿ ಸಾಲ ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ.2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಒಂಟಿ ಮಹಿಳೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯ ಮಿತಿ ಇಲ್ಲ. ಈ ಸಾಲ ನೀಡುವಾಗ SC/ST ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಹಿಳೆಯ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬಹುದು. ಸಾಲ ಪಡೆಯಬಯಸುವ ಮಹಿಳೆಯರು ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಸಕಾಲದಲ್ಲಿ ಪಾವತಿಸಬೇಕು.

ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು:

ಯೋಜನೆಯಡಿಯಲ್ಲಿ ಸಾಲ ಪಡೆಯಲು ಉದ್ಯೋಗಿಗೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜನನ ಪ್ರಮಾಣಪತ್ರ, ವಿಳಾಸ ಪುರಾವೆ, ಆದಾಯ ಪ್ರಮಾಣಪತ್ರ, ಪಡಿತರ ಚೀಟಿ, ಬಿಪಿಎಲ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಮತ್ತು ಇತರೆ ಬ್ಯಾಂಕ್‌ಗೆ ಅಗತ್ಯವಿರುವ ದಾಖಲೆಗಳು ಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಉದ್ಯೋಗಿ ಯೋಜನೆಯನ್ನು ಪಡೆಯಲು ಬಯಸುವ ಮಹಿಳೆಯರು ತಮ್ಮ ಹತ್ತಿರದ ಬ್ಯಾಂಕ್‌ನ್ನು ಸಂಪರ್ಕಿಸಬೇಕಾಗುತ್ತದೆ. ಬಳಿಕ ಬ್ಯಾಂಕ್‌ನವರು ಹೇಳುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಬ್ಯಾಂಕ್‌ನವರು ನೀಡುವ ಅರ್ಜಿ ನಮೂನೆಯನ್ನೂ  ಪೂರ್ಣಗೊಳಿಸಬೇಕು. ಬಳಿಕ ಎಲ್ಲವನ್ನೂ ಪರಿಶೀಲಿಸಿ ಅರ್ಹತೆ ಇದ್ದಲ್ಲಿ ಈ ಸಾಲ ನೀಡಲಾಗುತ್ತದೆ. ಇಲ್ಲವೇ.. ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲೂ ಅರ್ಜಿ ಸಲ್ಲಿಸಬಹುದು. ಹಾಗಾಗಿ ಆನ್‌ಲೈನ್‌ಗಿಂತ ನೇರವಾಗಿ ಹೋಗಿ ಕೇಳುವ ಮೂಲಕ ಕೆಲಸವನ್ನು ವೇಗವಾಗಿ ಮುಗಿಸಬಹುದು.

Continue Reading

LATEST NEWS

Trending