Wednesday, October 5, 2022

ಬಡವರ ಬಿಸ್ಕೆಟ್‌ Parle-G ಬಿಸ್ಕೆಟ್‌ನ ಬೆಲೆ ಶೇಕಡಾ 10ರಷ್ಟು ಏರಿಕೆ

ನವದೆಹಲಿ: ಭಾರತದ ಜನಪ್ರಿಯ ಬಿಸ್ಕೆಟ್ ‘ಪಾರ್ಲೆ ಜಿ’ ಬೆಲೆಯೂ ಏರಿಕೆಯಾಗಿದೆ. ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ‘ಆಮ್ ಆದ್ಮಿಯ ಬಿಸ್ಕೆಟ್‌ಗಳು’ ಎಂದು ಕರೆಯಲ್ಪಡುವ ‘ಪಾರ್ಲೆ-ಜಿ’ ಬೆಲೆಯನ್ನು ಶೇಕಡಾ 10 ರಷ್ಟು ಹೆಚ್ಚಿಸಿದೆ.

ಕಂಪನಿಯ ಅಧಿಕಾರಿಯೊಬ್ಬರು ಬಿಸ್ಕತ್ ತಯಾರಿಕೆಗೆ ಅಗತ್ಯವಿರುವ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ‘ಪಾರ್ಲೆ-ಜಿ’ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಪಾರ್ಲೆ ಉತ್ಪನ್ನಗಳ ಉನ್ನತ ವಿಭಾಗದ ಮುಖ್ಯಸ್ಥ ಮಯಾಂಕ್ ಶಾ ಅವರ ಪ್ರಕಾರ, ಪ್ಯಾಕೆಟ್‌ನ ‘ಗ್ರಾಂ’ ನಲ್ಲಿ ಸ್ವಲ್ಪ ಇಳಿಕೆಯಾಗಿದ್ದರೂ, ಬೆಲೆಯನ್ನು ಆಕರ್ಷಕ ಮಟ್ಟದಲ್ಲಿ ಇರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಸಕ್ಕರೆ, ಗೋಧಿ ಮತ್ತು ಖಾದ್ಯ ತೈಲದಂತಹ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ

ಕಂಪನಿಯು ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದರು. ಹೀಗಾಗಿ ಜನಪ್ರಿಯ ಪಾರ್ಲೆ ಜಿ ಗ್ಲೂಕೋಸ್ ಬಿಸ್ಕೆಟ್‌ಗಳ ಬೆಲೆಯನ್ನು ಶೇ 6-7ರಷ್ಟು ಹೆಚ್ಚಿಸಲಾಗಿದೆ ಎಂದಿದ್ದಾರೆ.
ಇದೇ ಸಮಯದಲ್ಲಿ, ಕಂಪನಿಯು ರಸ್ಕ್‌ ಮತ್ತು ಕೇಕ್ ಮೇಲಿನ ಬೆಲೆಯನ್ನು ಶೇಕಡಾ 5 ರಿಂದ 10 ರಷ್ಟು ಹೆಚ್ಚಿಸಿದೆ. ಹೈಡ್ ಅಂಡ್ ಸೀಕ್ ಮತ್ತು ಕ್ರ್ಯಾಕ್‌ಜಾಕ್ ಕೂಡ ಪಾರ್ಲೆಯ ಜನಪ್ರಿಯ ಬ್ರಾಂಡ್‌ಗಳಾಗಿವೆ.

ಅವುಗಳ ಉತ್ಪನ್ನಗಳ ಬೆಲೆಗಳನ್ನು ಸಹ ಹೆಚ್ಚಿಸಲಾಗಿದೆ. ಕಂಪನಿಯು 20 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಬಿಸ್ಕೆಟ್ ಮತ್ತು ಇತರ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದೆ ಎಂದು ಮಯಾಂಕ್ ಶಾ ಹೇಳಿದರು.

ಉತ್ಪಾದನಾ ವೆಚ್ಚದ ಮೇಲೆ ಹೆಚ್ಚುತ್ತಿರುವ ಹಣದುಬ್ಬರದ ಒತ್ತಡವನ್ನು ಪರಿಗಣಿಸಿ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here

Hot Topics

ದೇವಳದ ಅಂಗಳದಲ್ಲಿ ಐಟಂ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR

ಭೋಪಾಲ್: ಯುವತಿಯೊಬ್ಬಳು ದೇವಸ್ಥಾನವೊಂದರ ಆವರದಲ್ಲಿ ಐಟಂ ಸಾಂಗ್‍ವೊಂದಕ್ಕೆ ಡ್ಯಾನ್ಸ್ ಮಾಡಿ ಕೆಂಗಣ್ದಣಿಗೆ ಗುರಿಯಾದ ಘಟನೆ  ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.ಇನ್‍ಸ್ಟಾಗ್ರಾಮ್‍ನಲ್ಲಿ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೋಮದಿರುವ ನೇಹಾ ಎಂಬಾಕೆ ದೇವಸ್ಥಾನದಲ್ಲಿ ಮುನ್ನಿ...

ಮಹಾನವಮಿ ಸಂಭ್ರಮ: ಕಟೀಲು ಕ್ಷೇತ್ರದಲ್ಲಿ ಮಹಾ ರಂಗ ಪೂಜೆ

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಮಹಾ ರಂಗ ಪೂಜೆ ನಡೆಯಿತು. ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು...

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ವಿಜಯದಶಮಿ ಪ್ರಯುಕ್ತ ಮಕ್ಕಳಿಗೆ ಅಕ್ಷರಾಭ್ಯಾಸ..!

ವರದಿ : ನಿಶಾಂತ್ ಕಿಲೆಂಜೂರುಕಿನ್ನಿಗೋಳಿ : ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಮಕ್ಕಳಿಗೆ ಅಕ್ಷರಾಬ್ಯಾಸ ನಡೆಯಿತು.ದುರ್ಗೆಯ ನನ್ನಿಧಿಯಲ್ಲಿ ಅಕ್ಷಾರಭ್ಯಾಸ ಪ್ರಾಂಭಿಸಿದರೆ ಒಳ್ಳೆಯದು ಎನ್ನುವ ನಂಬಿಗೆ ಇದೆ, ಆ...