Connect with us

  LATEST NEWS

  ಪರಾರಿ ಬಾಲಕಿ ಮೇಲಿನ ಪೈಶಾಚಿಕ ಕೃತ್ಯದ ಪಿನ್‌ ಟು ಪಿನ್‌ ಡಿಟೇಲ್ಸ್….!

  Published

  on

  ಮಂಗಳೂರು: ನಗರ ಹೊರವಲಯದ ತಿರುವೈಲ್‌ ಗ್ರಾಮದ ರಾಜ್‌ ಟೈಲ್ಸ್‌ ಕಾರ್ಖಾನೆಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಗ್ಯಾಂಗ್‌ರೇಪ್‌-ಕೊಲೆ ಪ್ರಕರಣದ 4 ಆರೋಪಿಗಳನ್ನು ಮಂಗಳೂರು ನಗರದ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

  ಜಯಬಾನ್‌ ಯಾನೆ ಜೈ ಸಿಂಗ್‌(21), ಮುಖೇಶ್‌ ಸಿಂಗ್‌(20), ಮನೀಶ್‌ ಟಿರ್ಕಿ(33), ಮುನೀಮ್‌ ಸಿಂಗ್‌ (20) ಬಂಧಿತ ಆರೋಪಿಗಳು.
  ಘಟನೆ ಹಿನ್ನೆಲೆ
  4 ಮಕ್ಕಳಿರುವ ಜಾರ್ಖಾಂಡ್‌ ಮೂಲದ ಸಿಂಡೆಗಾ ಜಿಲ್ಲೆಯ ದಂಪತಿ ಮಂಗಳೂರು ನಗರದ ವಾಮಂಜೂರಿನ ತಿರುವೈಲ್‌ ಗ್ರಾಮದಲ್ಲಿರುವ ರಾಜ್‌ ಟೈಲ್ಸ್‌ ಫ್ಯಾಕ್ಟರಿಯಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

  ಈ ಪ್ರಕರಣ ಒಟ್ಟಾರೆಯಾಗಿ ಗಮನಿಸಿದರೆ ಆರೋಪಿಗಳ ಪೂರ್ವಯೋಜಿತ ಕೃತ್ಯ ಎಂಬುದು ಕಂಡುಬಂದಿದೆ.
  ನ.21ರಂದು ಸಹೋದರ ಸಹೋದರಿಯರೊಂದಿಗೆ ಆಟವಾಡಲು ಹೋದ 8 ವರ್ಷದ ಬಾಲಕಿಯನ್ನು ಜಯಬಾನ್‌ ಯಾನೆ ಜೇ ಸಿಂಗ್‌ ಏಕಾಏಕಿ ತನ್ನ ರೂಮಿನೊಳಗೆ ಎತ್ತಿಕೊಂಡು ಹೋಗಿದ್ದಾನೆ. ಈ ವೇಳೆ ಉಳಿದ ಆರೋಪಿಗಳು ರೂಮಿನೊಳಗೆ ಇದ್ದರು.

  ಬಾಲಕಿಯನ್ನು ರೂಮಿಗೆ ತಂದ ಕೂಡಲೇ ಮುಖೇಶ್‌ ಸಿಂಗ್‌ ಹಾಗೂ ಇತರ ಮೂವರು ಸಹ ಕಾರ್ಮಿಕರು ಬಾಲಕಿ ಮೇಲರಗಿ ಪೈಶಾಚಿಕ ಕೃತ್ಯ ನಡೆಸಿದ್ದಾರೆ.

  ಓರ್ವ ಕಾರ್ಮಿಕ ಕೃತ್ಯದಲ್ಲಿ ತೊಡಗಿದ್ದ ವೇಳೆ ಹೊರಗಡೆಯಿಂದ ಯಾರಾದರೂ ಬರುತ್ತಾರೆಯೇ ಎಂದು ರೂಮಿನ ಬಾಗಿಲ ಬಳಿ ಉಳಿದವರು ಕಾವಲು ಕಾಯುತ್ತಿದ್ದರು.

  ಒಬ್ಬರ ಮೇಲೊಬ್ಬರು ನಿರಂತರ ನಡೆಸಿದ ಪೈಶಾಚಿಕ ಕೃತ್ಯದಿಂದ ಬಾಲಕಿ ರಕ್ತಸ್ರಾವ ಮತ್ತು ನೋವಿನಿಂದ ಚೀರಾಡುತ್ತಿದ್ದಳು. ಇದರಿಂದ ಹೆದರಿದ ಜಯಬಾನ್‌ ಯಾನೆ ಜೇ ಸಿಂಗ್‌ ಆಕೆಯ ಕತ್ತು ಹಿಸುಕಿ ಸಾಯಿಸುತ್ತಾನೆ.

  ಕೃತ್ಯ ಎಷ್ಟು ಘೋರ ಮತ್ತು ಭೀಕರವಾಗಿತ್ತೆಂದರೆ
  ನಾಲ್ಕನೇಯ ಆರೋಪಿ ಮುನೀಮ್‌ ಸಿಂಗ್‌ ಬಾಲಕಿ ಮೇಲೆರಗಲು ಮುಂದಾದಾಗ ಅದಾಗಲೇ ಪ್ರಾಣ ಬಿಟ್ಟಿದ್ದಳು.

  ನಂತರ ಈ ಕಿರಾತಕರು ಸಾವನ್ನಪ್ಪಿದ ಬಾಲಕಿಯ ಹೆಣವನ್ನು ಹತ್ತಿರದಲ್ಲಿಯೇ ಇರುವ ತೋಡಿನೊಳಗೆ (ಡ್ರೈನೇಜ್‌) ಬಿಸಾಡುತ್ತಾರೆ.

  ಇದಾದ ನಂತರ ಜಯಬಾನ್‌ ಯಾನೆ ಜೇ ಸಿಂಗ್‌ ಹಾಗೂ ಮನೀಶ್‌ ಟಿರ್ಕಿ ಯಾರಿಗೂ ಸಂಶಯ ಬಾರದಂತೆ ಫ್ಯಾಕ್ಟರಿಯಲ್ಲೇ ಉಳಿದಿರುತ್ತಾರೆ.

  ಉಳಿದ ಇಬ್ಬರು ಆರೋಪಿಗಳು ಪುತ್ತೂರಿಗೆ ಪಲಾಯನ ಮಾಡುತ್ತಾರೆ. ಘಟನೆ ಬಳಿಕ ಬಾಲಕಿ ನಾಪತ್ತೆ ಪ್ರಕರಣ ಬೆಳಕಿಗೆ ಬಂದು ಬಾಲಕಿಯ ಹೆತ್ತವರು ಸೇರಿ ಇತರ ಕಾರ್ಮಿಕರು ಶೋಧ ಕಾರ್ಯದಲ್ಲಿ ತೊಡಗಿದಾಗ ಈ ಇಬ್ಬರು ದುರುಳರು ಆಕೆಯನ್ನು ಹುಡುಕುವ ನಾಟಕವಾಡಿದ್ದರು.

  ಈ ಹಿಂದೆ ಬಾಲಕಿಯ ಮೇಲೆ ನಡೆದಿತ್ತು ದೌರ್ಜನ್ಯ..!
  ಜಯಬಾನ್‌ ಯಾನೆ ಜೇ ಸಿಂಗ್‌ ಹಾಗೂ ಮನೀಶ್‌ ಟಿರ್ಕಿ ಫ್ಯಾಕ್ಟರಿಯ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದರು.

  ಈ ವೇಳೆ ಬಾಲಕಿಯನ್ನು ಆಗಾಗ ರೂಮಿಗೆ ಕರೆದೊಯ್ದು ಆಕೆಗೆ ಚಾಕಲೇಟ್‌, ಚಿಕ್ಕಿ ಮುಂತಾದ ಸಿಹಿ ತಿನಿಸು ನೀಡುತ್ತಿದ್ದರು.

  ಜೊತೆಗೆ ಬಾಲಕಿಯ ಮೈಕೈ ಮುಟ್ಟುವ ಮೂಲಕ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಆದರೆ ಆಕೆ ಪುಟ್ಟ ಬಾಲಕಿಯಾದುದರಿಂದ ಆಕೆಗೆ ಈ ಪರಿವೆ ಇರಲಿಲ್ಲ ಎಂಬುವುದು ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
  ನಾಲ್ಕೈದು ದಿನದ ಹಿಂದೆ ನಡೆದಿತ್ತು ಪ್ರೀ ಪ್ಲ್ಯಾನ್‌…..!
  ಘಟನೆ ನಡೆಯುವ ನಾಲ್ಕೈದು ದಿನದ ಹಿಂದೆ ಫ್ಯಾಕ್ಟರಿಯ ರೂಮಿನಲ್ಲಿ ಮದ್ಯಪಾನ ಮಾಡುತ್ತಿದ್ದರು ಈ ಆರೋಪಿಗಳು.

  ಈ ಸಂದರ್ಭ ಭಯಾನಕ ಪೈಶಾಚಿಕ ಕೃತ್ಯದ ಬಗ್ಗೆ ಮಾಸ್ಟರ್‌ ಪ್ಲ್ಯಾನ್‌ ತಯಾರಿಸಿದ್ದರು. ಈ ದುರುಳರು.

  ‘ರವಿವಾರ ಫ್ಯಾಕ್ಟರಿಯಲ್ಲಿ ಯಾರೂ ಸಿಬ್ಬಂದಿ ಇರುವುದಿಲ್ಲ. ಜೊತೆಗೆ ಬಾಲಕಿಯ ತಂದೆ-ತಾಯಿ ಮದ್ಯಪಾನದ ನಶೆಯಲ್ಲಿರುವುದರಿಂದ ಈ ಕೃತ್ಯ ನಡೆಸಲು ಸರಿಯಾ ಸಮಯ ಎಂದು ನಿರ್ಧರಿಸಲಾಗಿತ್ತು.

  ಕೃತ್ಯ ನಡೆಸಲೆಂದೇ ಪುತ್ತೂರಿನಿಂದ ಬಂದಿದ್ದ ದುರುಳ..
  ಪ್ರಕರಣದ ನಾಲ್ಕನೇ ಆರೋಪಿ ಮುನೀಮ್‌ ಸಿಂಗ್‌ ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದನು. ಕೃತ್ಯ ನಡೆಯುವ 3-4 ದಿನದ ಮುಂಚೆ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಟೈಲ್‌ ಫ್ಯಾಕ್ಟರಿಗೆ ಬಂದಿದ್ದ.

  ಉಳಿದಂತೆ ಮೂವರು ಆರೋಪಿಗಳು ರಾಜ್‌ ಟೈಲ್ಸ್‌ನಲ್ಲಿ ಕಾರ್ಮಿಕರಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
  ಸದ್ಯ ಆರೋಪಿಗಳು ಪೊಲೀಸ್‌ ಬಂಧನಕ್ಕೊಳಗಾಗಿದ್ದಾರೆ. ಇವರ ಮೇಲೆ ಕೊಲೆ ಮತ್ತು ಪೋಕ್ಸೋ ಪ್ರಕರಣ ದಾಖಲಾಗಿದೆ. ತಿಂಗಳೊಳಗೆ ಮಂಗಳೂರು ನಗರದಲ್ಲಿ ಬಾಲಕಿ ಮೇಲಿನ ಪೈಶಾಚಿಕ ಕೃತ್ಯದ ಎರಡನೇ ಪ್ರಕರಣ.

  ಪೊಲೀಸರಿಗೆ ನಗದು ಬಹುಮಾನ

  ಪೊಲೀಸರು ಅಲ್ಲಿನ ಎಲ್ಲಾ ಕಾರ್ಮಿಕರನ್ನು ಬಂಧಿಸಿ ತನಿಖೆ ನಡೆಸಿದ್ದರು. ತನಿಖೆಯ ವೇಳೆ ಈ ನಾಲ್ವರ ಮೇಲೆ ಅನುಮಾನ ಬಲವಾಗಿ ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿಗಳು ಕೃತ್ಯ ಎಸಗಿರುವುದನ್ನು ಬಾಯಿ ಬಿಟ್ಟಿದ್ದಾರೆ.

  ಈ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಸಿಬ್ಬಂದಿಗೆ ನಗದು ಬಹುಮಾನ ನೀಡಿದ್ದಾರೆ.

  ನಾಲ್ವರು ಆರೋಪಿಗಳ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ.

  ಪೊಲೀಸ್‌-ಕಾರ್ಮಿಕ ಇಲಾಖೆ ಮೇಲಿದೆ ಹೆಚ್ಚಿನ ಜವಾಬ್ದಾರಿ
  ಮಂಗಳೂರು ನಗರದಲ್ಲಿ ಹೊರ ಜಿಲ್ಲೆ ಸೇರಿ ಹೊರ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

  ಇಂತಹ ಪ್ರಕರಣ ಅಥವಾ ಯಾವುದೇ ಪ್ರಕರಣ ನಡೆದಾಗ ಅವರನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯದ ಕೆಲಸ.

  ಆದ್ದರಿಂದ ಪೊಲೀಸ್‌ ಮತ್ತು ಕಾರ್ಮಿಕ ಇಲಾಖೆ ಇಂತಹ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಜೊತೆಗೆ ಇವರನ್ನು ಕರೆತರುವ ಮುಖಂಡನ ಮೇಲೆ ನಿಗಾ ವಹಿಸಬೇಕು.

  ಕೆಲವರು ಹಣದ ಆಸೆಗೆ ಇಲ್ಲಿ ಕೆಲಸಕ್ಕೆ ಬಂದು ಕಳವು, ಅತ್ಯಾಚಾರ, ಕೊಲೆ ಕೃತ್ಯದಲ್ಲಿ ಭಾಗವಹಿಸಿದರೆ ಅವರನ್ನು ಟ್ರೇಸ್‌ ಮಾಡುವುದು ಕಷ್ಟದ ಕೆಲಸ.

  DAKSHINA KANNADA

  ಕಪ್ಪೆಗಳ ಅಕ್ರಮ ಸಾಗಾಟ..! ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ..!

  Published

  on

  ಮಂಗಳೂರು (ಕಾರವಾರ): ಬಸ್‌ನಲ್ಲಿ ಗೋವಾಕ್ಕೆ ಸಾಗಾಟ ಮಾಡುತ್ತಿದ್ದ 41 ಬುಲ್‌ ಫ್ರಾಗ್‌ಗಳನ್ನು ಕಾರವಾರದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಬುಲ್ ಫ್ರಾಗ್ ಸಾಗಾಟ ಮಾಡುತ್ತಿದ್ದ ಇಬ್ಬರು ಗೋವಾ ಮೂಲದ ವ್ಯಕ್ತಿಗಳನ್ನು ಬಂಧಿಸಿ ಬಸ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಕಾಳಿ ಬ್ರಿಡ್ಜ್‌ ಬಳಿ ಕಪ್ಪೆಗಳ ರಕ್ಷಣೆ ಮಾಡಲಾಗಿದೆ. ಗೋವಾ ಮೂಲದ ಕಾಣಕೋಣ ನಿವಾಸಿ ಸಿದ್ದೇಶ್ ದೇಸಾಯಿ ಬಸ್ ಚಾಲಕನಾಗಿದ್ದು, ನಿರ್ವಾಹಕ ಜಾನ್‌ ಲೂಲಿಮ್‌ ಬಂಧಿತರು.

  ಕಪ್ಪೆ ಅಕ್ರಮ ಸಾಗಾಣಿಕೆ ಹಿಂದಿರುವ ರಹಸ್ಯ..!

  ಬುಲ್‌ ಫ್ರಾಗ್‌ಗಳು ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಇದರಿಂದ ತಯಾರಾಗುವ ಖಾದ್ಯಕ್ಕೆ ಗೋವಾದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಪ್ಪೆಗಳ ಕಾಲುಗಳನ್ನು ಕಡಿದು ಮಾಡುವ ಫ್ರೈ ಹಾಗೂ ಕಪ್ಪೆಗಳ ಚರ್ಮ ತೆಗೆದು ಮಾಡುವ ಫ್ರೈಗೆ ಇಲ್ಲಿ ಜಂಪಿಂಗ್ ಚಿಕನ್ ಎಂದು ಹೆಸರಿದೆ. ಗೋವಾದ ಜನರು ಹಾಗೂ ವಿದೇಶಿಗರು ಈ ಜಂಪಿಂಗ್ ಚಿಕನ್ ಗಿರಾಕಿಗಳಾಗಿದ್ದು, ಒಂದು ಪ್ಲೇಟ್‌ಗೆ 1500 ರೂಪಾಯಿಗೆ ಮಾರಾಟವಾಗುತ್ತದೆ. ಗೋವಾದಲ್ಲಿ ಈ ಕಪ್ಪೆಗಳು ಸಿಗದ ಕಾರಣ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಿಂದ ಅಕ್ರಮ ರವಾನೆಯಾಗುತ್ತಿದೆ. ಕಾರಾವಾರ, ಅಂಕೋಲ ಸೇರಿದಂತೆ ಹಲವು ಜಾಗದಿಂದ ಈ ಕಪ್ಪೆಗಳ ಕಳ್ಳಸಾಗಾಣಿಕೆ ನಡೆಯುತ್ತಿದೆ. ಒಂದು ಕಪ್ಪೆಗೆ 500 ರೂಪಾಯಿಗಳ ಬೆಲೆ ಇದ್ದು, ಜೀವಂತವಾಗಿ ಈ ಕಪ್ಪೆಗಳ ಸಾಗಾಟ ಮಾಡಲಾಗುತ್ತದೆ.

  Continue Reading

  LATEST NEWS

  ಕೊತ ಕೊತ ಅಂತ ಕುದಿಯುತ್ತೆ ಈ ನದಿ! ಇದರ ಹಿಂದಿನ ರಹಸ್ಯ ಇಲ್ಲಿದೆ

  Published

  on

  ಶನಾಯ್-ಟಿಂಪಿಷ್ಕಾ ನದಿ ಇನ್ನಿತರ ನದಿಗಳಿಗಿಂತ ಭಿನ್ನವಾಗಿದ್ದು ಈ ನದಿಯ ನೀರು ಕುದಿಯುತ್ತಿರುತ್ತದೆ. ಏಕೈಕ ಕುದಿಯುವ ನದಿಯಾಗಿರುವ ಶನಾಯ್-ಟಿಂಪಿಷ್ಕಾ ಪೆರುವಿನ ಅಮೆಜಾನ್‌ನಲ್ಲಿದೆ. ಪೆರುವಿನಲ್ಲಿರುವ ಅಮೆಜಾನ್ ಮಳೆಕಾಡಿನ ಮಧ್ಯಭಾಗದಲ್ಲಿ ಹರಿಯುವ ಶನಾಯ್ ನದಿ, ನೈಸರ್ಗಿಕ ವಿಸ್ಮಯ ಎಂದೆನಿಸಿದ್ದು, ವಿಜ್ಞಾನಿಗಳನ್ನು, ಪರಿಶೋಧಕರನ್ನು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

  ವಿಶ್ವದ ಏಕೈಕ ಕುದಿಯುವ ನದಿ

  ಅಮೆಜಾನ್ ನದಿಯ ಈ ಗಮನಾರ್ಹ ಉಪನದಿಯು 6.4 ಕಿಲೋಮೀಟರ್ (4.0 ಮೈಲುಗಳು) ಉದ್ದವನ್ನು ವ್ಯಾಪಿಸಿದೆ. ಇದು ವಿಶ್ವದ ಏಕೈಕ ಕುದಿಯುವ ನದಿ ಎಂದು ಹೆಸರುವಾಸಿಯಾಗಿದೆ. ನದಿಯ ನೀರು 45 ಡಿಗ್ರಿ ಸೆಲ್ಸಿಯಸ್‌ನಿಂದ 100 ಡಿಗ್ರಿ ಸೆಲ್ಸಿಯಸ್‌ವರೆಗೆ ಸುಡುವ ತಾಪಮಾನವನ್ನು ಹೊಂದಿದೆ. ಸೂರ್ಯನ ಶಾಖದಿಂದ ಕುದಿಯುವ ನೀರು ಎಂಬ ಅರ್ಥವನ್ನು ಶನಯ್-ಟಿಂಪಿಷ್ಕಾ ಹೆಸರು ಒಳಗೊಂಡಿದೆ.

  ಕೆಲವು ಭಾಗ ಬಿಸಿಯಾಗಿದೆ

  ಇನ್ನು ಈ ನೀರಿನಲ್ಲಿ ಇಳಿದು ಸ್ನಾನ ಮಾಡುವುದೇ ಅಸಂಭವ ಎಂಬುದು ನಿಮ್ಮ ಮನಸ್ಸಿನಲ್ಲಿದ್ದರೆ ನಿಮ್ಮ ಅನಿಸಿಕೆ ತಪ್ಪು ಏಕೆಂದರೆ ಸಂಪೂರ್ಣ ನದಿಯ ನೀರು ಕುದಿಯುತ್ತಿಲ್ಲ ಕೆಲವು ಭಾಗ ಮಾತ್ರವೇ ಬಿಸಿ ನೀರನ್ನೊಳಗೊಂಡಿದೆ ಆದರೆ ಮುಳುಗು ಹಾಕಲು ಈ ನದಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ನದಿಯ ಬಿಸಿಯಿಂದ ಬೆಚ್ಚಗಿನ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ಅನುಭವ ನಿಮಗುಂಟಾಗುತ್ತದೆ. ನೀರು ಕುದಿಯುತ್ತಿರುವ ಅನಿಸಿಕೆ ನಿಮಗುಂಟಾಗುತ್ತದೆ. ಇನ್ನು ಇಲ್ಲಿ ಯಾವುದೇ ಜಲಚರಗಳು ವಾಸಿಸುತ್ತಿಲ್ಲ ಏಕೆಂದರೆ ನದಿಯ ನೀರು ಕುದಿಯುತ್ತಿರುವ ಕಾರಣ ಯಾವುದೇ ಜೀವಿಗಳು ನೀರನಲ್ಲಿ ವಾಸಿಸುತ್ತಿಲ್ಲ.

  ವೈಜ್ಞಾನಿಕ ಸತ್ಯವೇನು?

  ವೈಜ್ಞಾನಿಕವಾಗಿ, ಮಳೆನೀರು ಅಮೆಜಾನ್ ಮಳೆಕಾಡಿನ ಮೇಲ್ಮೈಗೆ ನುಸುಳಿದಂತೆ, ಅದು ಭೂಮಿಯ ಹೊರಪದರದಲ್ಲಿ ಆಳದಲ್ಲಿ ಅನುಸರಿಸುತ್ತದೆ ಭೂಶಾಖದ ಗ್ರೇಡಿಯಂಟ್ ಕಾರಣದಿಂದಾಗಿ ನೀರನ್ನು ಗಮನಾರ್ಹವಾಗಿ ಬಿಸಿಮಾಡಲಾಗುತ್ತದೆ.

  Continue Reading

  FILM

  ದರ್ಶನ್ ಸರ್ ನನಗೆ ಗುರು ಸಮಾನರು…ಧರ್ಮೋ ರಕ್ಷತಿ ರಕ್ಷಿತಃ… ಎಂದ ನಟಿ ರಚಿತಾ ರಾಮ್; ಹೇಳಿದ್ದೇನು?

  Published

  on

  ಬೆಂಗಳೂರು : ರೇಣುಕಾಸ್ವಾಮಿ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಬಂಧನವಾಗಿದೆ. ಇತ್ತ ನಟ, ನಟಿಯರು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ಇದೀಗ ರಚಿತಾ ರಾಮ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  “ಧರ್ಮೋ ರಕ್ಷತಿ ರಕ್ಷಿತಃ” ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ನಮಸ್ಕಾರ..ಈ ನೋಟ್‌ನ ನಾನು ನಟಿಯಾಗಿ ಅಲ್ಲ ಸಾಮನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು..! ಎಂದಿದ್ದಾರೆ.

  ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು.

  ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆ.

  ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್‌ ಸರ್‌ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

  ಇದನ್ನೂ ಓದಿ : ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

  ದರ್ಶನ್ ಹಾಗೂ ರಚಿತಾ ರಾಮ್ ಜೊತೆಯಾಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಿಂಪಲ್ ಕ್ವೀನ್ ತನ್ನ ಸಿನಿ ಜರ್ನಿ ಆರಂಭಿಸಿದ್ದೇ ದರ್ಶನ್ ಜೊತೆಗೆ, ಅದೂ ‘ಬುಲ್ ಬುಲ್’ ಚಿತ್ರದ ಮೂಲಕ. ಅಂಬರೀಶ, ಜಗ್ಗುದಾದಾ, ಕ್ರಾಂತಿ ಚಿತ್ರಗಳಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು.

  Continue Reading

  LATEST NEWS

  Trending