Connect with us

  LATEST NEWS

  ನಾವು ಬಳಸುವ ಮಸಾಲೆ ಪದಾರ್ಥಗಳು ಅಸಲಿಯೋ..ನಕಲಿಯೋ..ತಿಳಿಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

  Published

  on

  ಮಂಗಳೂರು : ನಾವು ಅಡುಗೆಮನೆಯಲ್ಲಿ ಹಲವಾರು ರೀತಿಯ ಮಸಾಲೆಗಳನ್ನು ಬಳಸುತ್ತೇವೆ. ಆದರೆ ಅವುಗಳನ್ನು ಮಾರುಕಟ್ಟೆಯಿಂದ ತರುವಾಗ, ನಿಜವಾದ ಮತ್ತು ನಕಲಿ ಮಸಾಲೆಗಳನ್ನು ಗುರುತಿಸುವಲ್ಲಿ ನಾವು ಗೊಂದಲಕ್ಕೊಳಗಾಗುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬಹುದು ಅನ್ನೋ ಸಣ್ಣ ಟಿಪ್ಸ್ ಇಲ್ಲಿದೆ.


  ಇತ್ತೀಚೆಗೆ ದೆಹಲಿಯಲ್ಲಿ ನಕಲಿ ಸಾಂಬಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ಕೆಲವರನ್ನು ಬಂಧಿಸಲಾಗಿದೆ. ಈ ಜನರು ಕೊಳೆತ ಅಕ್ಕಿ, ತೆಂಗಿನಕಾಯಿ ಮತ್ತು ಆ್ಯಸಿಡ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಮಸಾಲೆ ತಯಾರಿಸುತ್ತಿದ್ದರು. ಇವರಿಂದ ಸುಮಾರು 15 ಟನ್ ನಕಲಿ ಸಾಂಬಾರ ಪದಾರ್ಥಗಳು ಮತ್ತು ತಯಾರಿಕಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಪ್ರತಿಷ್ಠಿತ ಕಂಪೆನಿಗಳು ಕೂಡಾ ಈ ರೀತಿಯಾದ ನಕಲಿ ಸಾಂಬಾರು ಪುಡಿ ಮಾರಾಟ ಮಾಡುತ್ತಿದ್ದ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ.

  ನೋಡಲು ಹಾಗೂ ಪರಿಮಳದಲ್ಲಿ ಅಸಲಿಯಂತೆ ಕಾಣುವ ಈ ನಕಲಿ ಮಸಾಲೆ ಪುಡಿಗಳನ್ನು ಗುರುತಿಸುವುದೇ ಕಷ್ಟ. ಆದ್ರೆ, ಕೆಲವೊಂದು ನಿತ್ಯ ಬಳಸುವ ಪದಾರ್ಥಗಳನ್ನು ಈ ರೀತಿಯಾಗಿ ಗುರುತಿಸಬಹುದಾಗಿದೆ.

  ನಿಜವಾದ ಮತ್ತು ನಕಲಿ ಮಸಾಲೆಗಳನ್ನು ಗುರುತಿಸುವುದು ಹೇಗೆ?

  ಕೆಂಪು ಮೆಣಸಿನಕಾಯಿ

  ಅಡುಗೆಯಲ್ಲಿ ಕೆಂಪು ಮೆಣಸಿನಕಾಯಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಣಸಿನಪುಡಿ ಚೆನ್ನಾಗಿಲ್ಲಾ ಅಂದ್ರೆ ಅದು ಪದಾರ್ಥದ ರುಚಿಯನ್ನೇ ಕೆಡಿಸಿ ಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಯಾಕೇಟ್‌ಗಳಲ್ಲಿ ಬರೋ ಮೆಣಸಿನ ಪುಡಿ ಕೂಡಾ ನಕಲಿಯಾಗಿದೆ. ಕೆಂಪು ಇಟ್ಟಿಗೆಯ ಪುಡಿಗೆ ಬಟ್ಟೆಗೆ ಬಳಸುವ ಕೆಂಪು ಬಣ್ಣದ ಮಿಶ್ರಣ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮೆಣಸಿನ ಪುಡಿಯನ್ನು ಪರೀಕ್ಷೆ ಮಾಡಲು ಸ್ವಲ್ಪ ನೀರಿನಲ್ಲಿ ಹಾಕಿ ನೋಡಬೇಕು. ಪುಡಿ ತೇಲುತ್ತಿದ್ದರೆ ಅದು ಅಸಲಿಯಾಗಿದ್ದು, ಪುಡಿ ನೀರಿನಲ್ಲಿ ಮುಳುಗಿದ್ರೆ ಅದು ನಕಲಿ ಅಥವಾ ಕಲಬೆರಕೆಯಾಗಿದೆ ಎಂದು ತಿಳಿಯಬಹುದು.

  ಕೊತ್ತಂಬರಿ ಪುಡಿ

  ಯಾವುದೇ ಅಡುಗೆಯಲ್ಲಿ ಖಾದ್ಯದ ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಬೇಕೇಬೇಕು. ಆದ್ರೆ, ಈ ಕೊತ್ತಂಬರಿ ಪುಡಿಯನ್ನು ಕೂಡಾ ನಕಲಿ ಮಾಡಲಾಗುತ್ತಿದೆ. ಪ್ರಾಣಿಗಳ ಮಲ, ಹುಳು ಮತ್ತು ಕಳೆಗಳನ್ನು ನುಣ್ಣಗೆ ರುಬ್ಬಿ ಅದಕ್ಕೆ ಕೊತ್ತಂಬರಿ ಪ್ಲೇವರ್ ಹಾಕುವ ಮೂಲಕ ಕೊತ್ತಂಬರಿ ಪುಡಿ ತಯಾರಿಸಲಾಗುತ್ತಿದೆ. ಇನ್ನು ಹಿಟ್ಟಿನ ಹುಡಿಗೆ ಹಸಿರು ಬಣ್ಣ ಸೇರಿಸಿ ಕೊತ್ತಂಬರಿ ಪುಡಿ ಎಂದು ಮಾರಾಟ ಮಾಡಲಾಗುತ್ತಿದೆ. ಇಡಿ ಕೊತ್ತಂಬರಿಯನ್ನು ಕೈಲಿಟ್ಟು ಸ್ವಲ್ಪ ಜೋರಾಗಿ ತಿಕ್ಕಿದಾಗ ಅದರಿಂದ ಸುವಾಸನೆ ಹೊರಡುತ್ತದೆ. ಮಾರುಕಟ್ಟೆಯಿಂದ ತಂದಿರೋ ಪುಡಿಯನ್ನು ಈ ಸುವಾಸನೆ ಜೊತೆ ಹೋಲಿಸಿ ನೋಡಿ. ಆ ಸುವಾಸನೆ ಬಾರದೆ ಯಾವುದೋ ಸಸ್ಯಗಳ ಪರಿಮಳ ಬಂದ್ರೆ ಅದು ಕಲಬೆರಕೆಯಾಗಿದೆ ಎಂದು ಅಂದಾಜಿಸಬಹುದಾಗಿದೆ.

  ದಾಲ್ಜಿನಿ

  ತೊಗಟೆಯಾಗಿ ಮಾರುಕಟ್ಟೆಯಲ್ಲಿ ಸಿಗುವ ದಾಲ್ಚಿನಿ ಬಹುತೇಕ ನಕಲಿಯಾಗಿರುತ್ತದೆ. ಅಮರಕ ಎಂಬ ಮರದ ತೊಗಟೆಯನ್ನು ಕತ್ತರಿಸಿ ದಾಲ್ಚಿನಿ ಎಂದು ಮಾರಾಟ ಮಾಡಲಾಗುತ್ತಿದೆ. ಇದರ ಅಸಲಿಯತ್ತು ಗುರುತಿಸುವುದು ಬಹಳ ಸುಲಭವಾಗಿದೆ. ದಾಲ್ಚಿನಿಯ ತೊಗಟೆಯನ್ನು ಕೈಲಿ ತೆಗೆದುಕೊಂಡು ನಿಮ್ಮ ಕೈಗಳಿಗೆ ಜೋರಾಗಿ ಉಜ್ಜಿಕೊಳ್ಳಿ. ಕೈನಲ್ಲಿ ಕೆಂಪು ಅಥವಾ ಕಂದು ಬಣ್ಣ ಮೂಡಿದ್ರೆ ಅದು ಅಸಲಿಯಾಗಿದ್ದು, ಬಣ್ಣ ಬಾರದೇ ಇದ್ರೆ ಅದು ನಕಲಿ ಎಂದು ಅರ್ಥ.

  ಕರಿ ಮೆಣಸು

  ಕರಿಮೆಣಸು ಇಲ್ಲದೆ ಮಾಂಸಾಹಾರಿ ಪದಾರ್ಥವೇ ಇಲ್ಲ ಅನ್ನಬಹುದು. ಇನ್ನು ತರಕಾರಿ ಅಡುಗೆಯಲ್ಲೂ ಇದನ್ನು ಯಥೇಚ್ಛವಾಗಿ ಬಳಕೆ ಮಾಡಲಾಗುತ್ತದೆ. ಆದ್ರೆ, ಪಪ್ಪಾಯಿ ಕಾಳುಗಳನ್ನು ಕರಿಮೆಣಸಿನ ಜೊತೆ ಸೇರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಅಸಲಿಯತ್ತು ಪರೀಕ್ಷೆ ಮಾಡಲು ನೀರಿನಲ್ಲಿ ಹಾಕಬೇಕು. ಅಸಲಿ ಕರಿಮೆಣಸುಗಳು ನೀರಿನಲ್ಲಿ ಮುಳುಗಿದರೆ ಪಪ್ಪಾಯಿ ಬೀಜಗಳು ನೀರಿನಲ್ಲಿ ತೇಲುತ್ತದೆ.

  ಇದನ್ನೂ ಓದಿ : KARKALA : ಸಿಡಿದ ಸುಡುಮದ್ದು ತಯಾರಿಕಾ ಘಟಕ; ಮಹಿಳೆಯರಿಗೆ ಗಂಭೀರ ಗಾಯ

  ಜೀರಿಗೆ

  ಜೀರಿಗೆ ಯಾವುದೇ ಭಕ್ಷ್ಯಕ್ಕೆ ಪರಿಮಳವನ್ನು ಸೇರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇದು ನಿಜವೋ ಅಲ್ಲವೋ ಎಂದು ಗುರುತಿಸುವುದು ತುಂಬಾ ಸುಲಭ. ಇದಕ್ಕಾಗಿ ನೀವು ಎರಡು ಬೆರಳುಗಳ ನಡುವೆ ಜೀರಿಗೆಯನ್ನು ಉಜ್ಜಬೇಕು. ಜೀರಿಗೆಯಲ್ಲಿ ಕಲಬೆರಕೆ ಇದ್ದರೆ ನಿಮ್ಮ ಬೆರಳುಗಳು ಕಪ್ಪಾಗುತ್ತವೆ. ಅದು ನಿಜವಾಗಿದ್ದರೆ, ಅದು ನಿಮ್ಮ ಬೆರಳುಗಳನ್ನು ಕಪ್ಪಾಗಿಸುವುದಿಲ್ಲ.

  ಕಲಬೆರಕೆ ಆಹಾರ ಸೇವನೆಯಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆದಷ್ಟು ಕಲಬೆರೆಕೆ ವಸ್ತುಗಳ ಬಗ್ಗೆ ಜನರು ಜಾಗೃತರಾಗಬೇಕಾಗಿದೆ. ಪ್ರತಿಯೊಂದು ವಸ್ತುವನ್ನು ಪರೀಕ್ಷೆ ಮಾಡಿ ತೆಗೆದುಕೊಳ್ಳುವುದು ಕಷ್ಟ. ಆದ್ರೆ, ಅದನ್ನು ಬಳಸುವ ಮೊದಲು ಈ ಸಿಂಪಲ್ ಟೆಸ್ಟ್‌ ಮಾಡಿದ್ರೆ ಆರೋಗ್ಯ ಕಾಪಾಡಿಕೊಳ್ಳಬಹುದು.

  LATEST NEWS

  ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್‌ ಉಚ್ಚಾಟನೆ..!

  Published

  on

  ಉಡುಪಿ: ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಪಾಟೀಲ್‌ ಆದೇಶಿಸಿದ್ದಾರೆ.


  ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು (6) ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

  ಇದನ್ನು ಓದಿ: ಹರೀಶ್ ಪೂಂಜಾ ಪ್ರಕರಣ : ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? : ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

  Continue Reading

  LATEST NEWS

  ಗೂಗಲ್ ಮ್ಯಾಪ್ ನಂಬಿ ಸಂಕಷ್ಟ; ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿದ ಕಾರು!

  Published

  on

  ಮಂಗಳೂರು/ ಕೊಟ್ಟಾಯಂ : ಗೂಗಲ್ ಮ್ಯಾಪ್ ನಿಂದ ಜನರಿಗೆ ಬಹಳಷ್ಟು ಉಪಯೋಗ ಆಗುತ್ತದೆ. ಜನರು ಗೂಗಲ್ ಆ್ಯಪ್ ನಂಬಿ ಪ್ರಯಾಣ ಬೆಳೆಸುವುದಿದೆ. ಆದರೆ, ಇದರಿಂದ ಎಡವಟ್ಟು ಕೂಡಾ ಆಗಿದ್ದಿದೆ. ಗೂಗಲ್ ಮ್ಯಾಪ್ ನಂಬಿ ಪ್ರಾ*ಣಕ್ಕೆ ಕು*ತ್ತು ಬಂದ ಘಟನೆ ಕೇರಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.


  ಹೈದರಾಬಾದ್‌ನ ಪ್ರವಾಸಿಗರ ತಂಡವೊಂದು ಕೇರಳಕ್ಕೆ ಪ್ರವಾಸಕ್ಕೆಂದು ಕಾರಿನಲ್ಲಿ ಹೊರಟಿತ್ತು. ಶುಕ್ರವಾರ ತಡರಾತ್ರಿ ಮಹಿಳೆ ಸೇರಿದಂತೆ ನಾಲ್ವರ ಗುಂಪು ಅಲಪ್ಪುಳ ಕಡೆಗೆ ಹೋಗುತ್ತಿದ್ದರು. ಇವರು ಗೂಗಲ್ ಮ್ಯಾಪ್ ನಂಬಿದ್ದರು. ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗಿ ಸೀದಾ ಕಾರನ್ನು ಹಳ್ಳದೊಳಗೆ ಇಳಿಸಿದ್ದಾರೆ. ಪರಿಣಾಮ ಕಾರು ಸಂಪೂರ್ಣವಾಗಿ ಮುಳುಗಿ ಹೋಗಿದೆ. ಅದೃಷ್ಟವಶಾತ್ ಸ್ಥಳೀಯ ನಿವಾಸಿಗಳು ಕಾರಿನಲ್ಲಿದ್ದ ನೆರವಿಗೆ ಧಾವಿಸಿದ್ದು, ನಾಲ್ವರು ಪ್ರಾಣಾ*ಪಾಯದಿಂದ ಪಾರಾಗಿದ್ದಾರೆ.

  ಇದನ್ನೂ ಓದಿ : ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಡೆ*ತ್ ನೋಟ್ ನಲ್ಲಿತ್ತು ಸ್ಫೋಟಕ ಮಾಹಿತಿ

  ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯು ಭಾರಿ ಮಳೆಯಿಂದಾಗಿ ಹೊಳೆಯಿಂದ ತುಂಬಿ ಹರಿದು ನೀರಿನಿಂದ ಆವೃತವಾಗಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿಲ್ಲದ ಕಾರಣ, ಅವರು ಗೂಗಲ್ ಮ್ಯಾಪ್ ನಂಬಿ ಡ್ರೈವಿಂಗ್ ಮಾಡಿದ್ದಾರೆ. ಪರಿಣಾಮ ಕಾರು ನೇರವಾಗಿ ತುಂಬಿ ಹರಿಯುತ್ತಿದ್ದ ಹಳ್ಳದೊಳಗೆ ಮುಳುಗಿದೆ.

  ಮುಳುಗುತ್ತಿದ್ದ ಪ್ರವಾಸಿಗರ ಕೂಗು ಕೇಳುತ್ತಿದ್ದಂತೆ ಸ್ಥಳೀಯರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಕೇರಳದಲ್ಲಿ ಇಂತಹ ಘಟನೆ ಈ ಹಿಂದೆಯೂ ನಡೆದಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಇಬ್ಬರು ವೈದ್ಯರು ಗೂಗಲ್ ಮ್ಯಾಪ್ ನಂಬಿ ಪ್ರಯಾಣ ಮಾಡಿದ ಪರಿಣಾಮ ಕಾರು ಸಮೇತ ನದಿಗೆ ಬಿದ್ದು ಪ್ರಾ*ಣ ಕಳೆದುಕೊಂಡಿದ್ದರು.

   

  ವಿಡಿಯೋ ನೋಡಿ:

  Continue Reading

  FILM

  ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಡೆ*ತ್ ನೋಟ್ ನಲ್ಲಿತ್ತು ಸ್ಫೋಟಕ ಮಾಹಿತಿ

  Published

  on

  ಬೆಂಗಳೂರು : ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣ ಇಡೀ ಸಿನಿಮಾರಂಗವನ್ನೇ ಬೆಚ್ಚಿ ಬೀಳಿಸಿತ್ತು. ನಿರ್ಮಾಪಕನಾಗಿ ಭಾರಿ ಯಶಸ್ಸನ್ನು ಬಾಚಿಕೊಂಡಿದ್ದ ಸೌಂದರ್ಯ ಜಗದೀಶ್ ಸಾವು ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ. ಯಾಕೆ ಸೌಂದರ್ಯ ಜಗದೀಶ್ ಇಂತಹ ನಿರ್ಧಾರ ಕೈಗೊಂಡ್ರು ಅನ್ನೋ ಪ್ರಶ್ನೆಯೊಂದು ಹುಟ್ಟುಕೊಂಡಿತ್ತು. ಇದೀಗ ಡೆ*ತ್ ನೋಟ್ ಸಿಕ್ಕಿರುವ ಬಗ್ಗೆ ಸೌಂದರ್ಯ ಜಗದೀಶ್ ಪತ್ನಿ ರೇಖಾ ತಿಳಿಸಿದ್ದಾರೆ. ಈ ಡೆ*ತ್ ನೋಟ್ ಮೂಲಕ ಕೆಲವೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ.


  ತಮ್ಮ ಪತಿಯ ನಿಧ*ನಕ್ಕೆ ಅವರ ಬಿಸ್ ನೆಸ್ ಪಾರ್ಟ್ನರ್ ಗಳಾಗಿದ್ದ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಅವರೇ ಕಾರಣ ಎಂದು ರೇಖಾ ಆರೋಪಿಸಿದ್ದಾರೆ.
  ಸೌಂದರ್ಯ ಜಗದೀಶ್ ಇಹಲೋಕ ತ್ಯಜಿಸಿದ ಕಾರಣ ಸೌಂದರ್ಯ ಜಗದೀಶ್ ಅವರಿಗೆ ಆದ ನಷ್ಟ ಹಾಗೂ ಮೋಸ ಎಂಬುದಾಗಿ ರೇಖಾ ಹೇಳಿದ್ದಾರೆ.

  ಡೆ*ತ್ ನೋಟ್ ನಲ್ಲಿ ಏನಿತ್ತು? ರೇಖಾ ಆಪಾದನೆ ಏನು?

  ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯಲು ವಾರ್ಡ್ ರೋಬ್ ತೆಗೆದಾಗ ಡೆ*ತ್ ನೋಟ್ ಸಿಕ್ಕಿದೆ ಎಂದಿದ್ದಾರೆ.

  ಸುರೇಶ್‌ ಹಾಗೂ ಹೊಂಬಣ್ಣ ಮತ್ತು ಸೌಂದರ್ಯ ಜಗದೀಶ್ ಸೇರಿಕೊಂಡು ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಈ ವೇಳೆ ಕಂಪನಿಯು ಲಾಭದಲ್ಲಿದ್ದರೂ ನಷ್ಟದಲ್ಲಿದೆ ಎಂದು ಸುಳ್ಳು ಹೇಳಿ ತಮ್ಮ ಪತಿ ಜಗದೀಶ್‌ ಅವರಿಂದ ಹಣವನ್ನು ಹೂಡಿಕೆ ಮಾಡಿಸಿದ್ದರು. ಇಷ್ಟೇ ಅಲ್ಲದೇ, ಸುಳ್ಳು ಹೇಳಿ ಕುಟುಂಬದ ಆಸ್ತಿಗಳನ್ನು ಬ್ಯಾಂಕ್‌ ನಲ್ಲಿ ಅಡಮಾನ ಇರಿಸಿದ್ದಾರೆ. ಅದರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
  ತಮಗೆ ತುಂಬ ಕಾಟ, ಕಿರುಕುಳ ಕೊಡುತ್ತಾರೆ ಅಂತ ಈ ಮೊದಲು ಒಮ್ಮೆ ನನ್ನ ಬಳಿ ಹೇಳಿದ್ದರು. ಆದರೆ ಈ ಮಟ್ಟಕ್ಕೆ ಆಗುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಏನೇ ಇದ್ದರೂ ನಮ್ಮ ಜೊತೆ ಹಂಚಿಕೊಳ್ಳಿ ಅಂತ ಧೈರ್ಯ ತುಂಬಿದ್ದೆವು ಎಂದಿದ್ದಾರೆ.

  ನಮಗೂ ಬೆದರಿಕೆ ಇದೆ ಎಂದ ರೇಖಾ

  ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ ಎಂದಿರುವ ಅವರು, ಹುಲಿ ರೀತಿ ಇದ್ದ ಅವರನ್ನೇ ಕೊನೆ ಕೊನೆಗೆ ಇಷ್ಟು ಸೈಲೆಂಟ್​ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವರು. ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾರೋ ಗೊತ್ತಿಲ್ಲ. ನನಗೆ ಆ ಭಯ ಇದೆ.
  ಪತಿ ಸೌಂದರ್ಯ ಜಗದೀಶ್‌ ಆತ್ಮಹ*ತ್ಯೆ ಮಾಡಿಕೊಳ್ಳುವ ಮುಂಚೆ ಒಂದು ವಾರದ ಹಿಂದೆ ಸುರೇಶ್‌ ಹಾಗೂ ಹೊಂಬಣ್ಣ ನಿರಂತರವಾಗಿ ಫೋನ್‌ ಮಾಡಿದ್ದರು. ಅವರ ಕರೆ ಬಂದಾಗ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಇದರಿಂದ ಮನನೊಂದು ಡೆ*ತ್‌ನೋಟ್‌ ಬರೆದಿಟ್ಟು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಜಗದೀಶ್‌ ಪತ್ನಿ ರೇಖಾ ಆರೋಪಿಸಿದ್ದಾರೆ.

  ಇದನ್ನೂ ಓದಿ : ತುಳುನಾಡನ್ನು ಹಾಡಿ ಹೊಗಳಿದ ಸುನಿಲ್ ಶೆಟ್ಟಿ.. ಮಾವನ ಪೋಸ್ಟನ್ನು ರಿ ಪೋಸ್ಟ್‌ ಮಾಡಿ ಗಮನ ಸೆಳೆದ ಕೆ.ಎಲ್ ರಾಹುಲ್

  ಸದ್ಯಕ್ಕೆ ರೇಖಾ ಜಗದೀಶ್ ಅವರು ನೀಡಿದ ಡೆ*ತ್ ನೋಟ್ ಆಧರಿಸಿ ಸೌಂದರ್ಯ ಜಗದೀಶ್ ಅವರ ಪಾರ್ಟ್ನರ್ಸ್ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಮೇಲೆ ಎಫ್ ಐ ಆರ್ ದಾಖಲಾಗಿದೆ.

  ಏ.14ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನಲ್ಲಿರುವ ನಿವಾಸದಲ್ಲಿ ಸೌಂದರ್ಯ ಜಗದೀಶ್ ಜೀವಾಂತ್ಯಗೊಳಿಸಿದ್ದರು. ಇದರಿಂದ ಇಡೀ ಚಿತ್ರರಂಗ ಶಾಕ್ ಗೆ ಒಳಗಾಗಿತ್ತು. ಇದಾದ ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ಅವರ ಇಚ್ಛೆಯಂತೆ ಚನ್ನರಾಯಪಟ್ಟಣದ ಹಿರಿಸಾವೆ ಗ್ರಾಮದಲ್ಲಿ ಅಂತ್ಯಕ್ರಿ*ಯೆ ನೆರವೇರಿಸಲಾಗಿತ್ತು.

  Continue Reading

  LATEST NEWS

  Trending