BANTWAL
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಕ್ರೈಸ್ತರಿಂದ ‘ಪಾಮ್ ಸಂಡೇ’ ಆಚರಣೆ
ಮಂಗಳೂರು: ಕ್ಯಾಥೋಲಿಕ ಕ್ರೈಸ್ತರ ಪವಿತ್ರ ವಾರ ಎಂದು ಕರೆಯುವ ಪವಿತ್ರ ಸಪ್ತಾಹಕ್ಕೆ ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲನೆ ದೊರೆಯಿತು. ಜಿಲ್ಲೆಯಾದ್ಯಂತ ಇಂದು ಎಲ್ಲಾ ಕ್ರೈಸ್ತ ದೇವಾಲಯಗಳಲ್ಲಿ ಪಾಮ್ ಸಂಡೇ (ಗರಿಗಳ ಹಬ್ಬ) ಆಚರಿಸಲಾಯಿತು. ಇದು ವಿಶ್ವಾದ್ಯಂತ ಆಚರಿಸುವ ಹಬ್ಬವಾಗಿದೆ.
ಯೇಸು ಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದೇ ಹೇಳಲಾದ ಜೆರುಸಲೇಮ್ ಪ್ರವೇಶ ಮಾಡುವಾಗ ಒಲಿವ್ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ ಬರ ಮಾಡಿಕೊಂಡಿದ್ದರೆಂದು ಬೈಬಲ್ ಉಲ್ಲೇಖ. ಇದರ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ರವಿವಾರದ ಬಲಿ ಪೂಜೆಯಲ್ಲಿ ಪಾಲ್ಗೊಂಡರು.
ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಗುರುವಾರ ಏಸು ಕ್ರಿಸ್ತರ ಕೊನೆಯ ಭೋಜನದ ದಿನ, ಶುಭ ಶುಕ್ರವಾರ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಈಸ್ಟರ್ ಹಬ್ಬದ ಜಾಗರಣೆ ಹಾಗೂ ರವಿವಾರ ಏಸು ಕ್ರಿಸ್ತರ ಪುನರುತ್ಥಾನದ ದಿನದ ಹಬ್ಬವನ್ನು ಆಚರಿಸಲಾಗುತ್ತಿದೆ.
BANTWAL
ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!
ಪುತ್ತೂರು : ವ್ಯಕ್ತಿಗಳು ಸಾಲಬಾಧೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿಯೋ ಜೀವಾಂತ್ಯಗೊಳಿಸುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬ,
ಅಕ್ರಮ ಪ್ರೇಮ ಸಂಬಂಧದ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ಘಟನೆ ಸಂಭವಿಸಿದೆ.
ಈಶ್ವರಮಂಗಲ ಸಮೀಪದ ಕತ್ರಿಬೈಲುವಿನ ಪ್ರಶಾಂತ್ ಮುಖಾರಿ (೩೮) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿರುವ ಚಿಮುಣಿಗುಡ್ಡೆ ಎಂಬಲ್ಲಿನ ಗುಡ್ಡದ ರಸ್ತೆ ಬದಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಇದನ್ನು ಓದಿ: ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ
ಅಕ್ರಮ ಸಂಬಂಧ ಬಯಲು – ನೇಣಿಗೆ ಶರಣು :
ಪ್ರಶಾoತ್ ಮುಖಾರಿ ಅವರಿಗೆ ಪತ್ನಿ ಮತ್ತು ಎಳೆಯ ವಯಸ್ಸಿನ ಪುತ್ರನಿದ್ದಾನೆ. ಈ ನಡುವೆ ಇನ್ನೊಬ್ಬಳು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಅಪಮಾನಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BANTWAL
ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ
ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ ಸಿಡಿಲಾರ್ಭಟಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ.. ಕಡಬ ತಾಲೂಕಿನಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶ,ಚೈನ್ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿ.
ಇದನ್ನು ಓದಿ:ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ!
ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್ ಗೇ ಸಿಡಿಲು ಬಡಿದಿದೆ. ಪರಿಣಾಮ ಮರಳು ತೆಗೆಯುವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
BANTWAL
ಸಾಲದ ಶೂಲಕ್ಕೆ ಜೀವಾಂತ್ಯಗೊಳಿಸಿದ ಯುವಕ…!
ಮಂಗಳೂರು : ತಾನು ತಂಗಿದ್ದ ಲಾಡ್ಜ್ ನಲ್ಲಿಯೇ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ ( 30) ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಮೇ. 5 ರಂದು ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲೊಂದರಲ್ಲಿ ರೂಂ ಮಾಡಿದ್ದ. ಈತ ಮೇ.6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದ. ಮಂಗಖವಾರ ಬೆಳಿಗ್ಗೆ ರೂಂನ ಬಾಗಿಲು ತೆರೆಯದ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃ*ತದೇಹದ ಪತ್ತೆಯಾಗಿದೆ.
ಓನ್ ಲೈನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ತಾನು ಕೆಲಸ ಮಾಡಿಕೊಂಡಿದ್ದ ಕಂಪೆನಿಯ ಮಾಲಕರಿಂದ 60 ಸಾವಿರ ಸಾಲ ಪಡೆದು ಬಳಿಕ ಹಣ ಹೊಂದಿಸಲಾಗದೆ, ಸರಿಯಾದ ಸಮಯಕ್ಕೆ ಹಿಂದುರುಗಿಸಲಾಗಿಲ್ಲ ಎಂಬ ಕಾರಣಕ್ಕೆ ಕೊರುಗುತ್ತಿದ್ದ ಎಂದು ಹೇಳಲಾಗಿದೆ. ಸಾಲದ ವಿಚಾರವಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಪ್ರೇಮ ವೈಫಲ್ಯದ ನೋವಿನಲ್ಲೂ ಇದ್ದ ಎಂದು ವರದಿಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.