Monday, August 15, 2022

ಕ್ರೈಸ್ತರ ಮೇಲೆ ದಬ್ಬಾಳಿಕೆ ದೌರ್ಜನ್ಯ: ಬಂಟ್ವಾಳದಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಸಮುದಾಯ

ಮಂಗಳೂರು: ಮತಾಂತರ ತಡೆ ಕಾಯಿದೆ ವಿರೋಧಿಸಿ ಹಾಗೂ ಕ್ರೈಸ್ತ ಸಮುದಾಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್‌ಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಾಗೂ ಮಾನವ ಸರಪಳಿ ನಡೆಯಿತು.


ಬಂಟ್ವಾಳ ಹಾಗೂ ಮೊಗರ್ನಾಡ್‌ ವಲಯದ ವತಿಯಿಂದ ಬಂಟ್ವಾಳದ ಬಿ.ಸಿರೋಡ್‌ನ ಬೈಪಾಸ್‌ ಸರ್ಕಲ್‌ ಬಳಿ ನಡೆದ ಪ್ರತಿಭಟನೆಯಲ್ಲಿ ಮಂಗಳೂರು ಕಥೋಲಿಕ್‌ ಸಭಾದ ಕೇಂದ್ರೀಯ ಸಮಿತಿ ಅಧ್ಯಕ್ಷ ಸ್ಟ್ಯಾನ್ಲಿ ಲೋಬೋ ಮಾತನಾಡಿ, ಪಂಜಿಮೊಗರು ಪ್ರಾರ್ಥನಾ ಮಂದಿರಕ್ಕೆ ಡಿಸಿ ಹಾಗೂ ಕೋರ್ಟ್‌ನಿಂದ ಸ್ಟೇ ಆರ್ಡರ್‌ ಇದ್ದರೂ ಹಗಲಿನಲ್ಲೇ ಕೆಡವಿದ್ದಾರೆ. ಈ ಬಗ್ಗೆ ದೂರು ನೀಡಿದಾಗ ಪೊಲೀಸರು ದೂರು ಸ್ವೀಕರಿಸಿಲ್ಲ.

ನಂತರ ಪೊಲೀಸ್‌ ಕಮೀಷನರ್‌ಗೆ ಪೋನ್‌ ಮುಖಾಂತರ ಹೇಳಿದಾಗ ಪೊಲೀಸರು ಸ್ಥಳಕ್ಕೆ ಬಂದರು.

ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾದರರೂ ಬೇರೆಯದ್ದೇ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದರು. ಅದನ್ನು ಅಂಗನವಾಡಿ ಕಟ್ಟಡ ಎಂದು ಹೇಳುತ್ತಿದ್ದಾರೆ.

ಅಲ್ಲಿ 42 ವರ್ಷದಿಂದ ಅಲ್ಲಿ ಪ್ರಾರ್ಥನಾ ಮಂದಿರದ ಕಟ್ಟಡ ಇದೆ. ಅಲ್ಲಿ ಬೆರಳು ಕೊಟ್ಟಿದ್ದಕ್ಕೆ ಕೈಯನ್ನೇ ನುಂಗಿದ್ದಾರೆ ಎಂದ ಅವರು 2021ರ ಸರ್ಕಾರದ ಕಾನೂನಿನಲ್ಲಿ ಪ್ರಾರ್ಥನಾ ಮಂದಿರದಲ್ಲಿ ಕೆಡವಲು ಅವಕಾಶವಿಲ್ಲ.

ಹಾಗಾದರೆ ಅದನ್ನು ಕೆಡವಿದರೆ ಯಾರು? ನಾವು ಈ ಬಗ್ಗೆ ಪ್ರತಿಭಟನೆ ನಡೆಸಿದೆವು. ಪ್ರತಿಭಟನೆಯ ನಂತರ ಇಬ್ಬರನ್ನು ಬಂಧಿಸಿದರು.

ಅವರು ಮಾವನ ಮನೆಗೆ ಬಂದು ಹೋದ ಹಾಗೆ ಎರಡೇ ದಿನದಲ್ಲಿ ಬಂದು ಹೋಗಿದ್ದಾರೆ. ನಾವು ಕೊಟ್ಟ ದೂರಿಗೆ ಎಫ್‌ಐಆರ್‌ ದಾಖಲಿಸಿಲ್ಲ.

ತದನಂತರ ಎಫ್‌ಐಆರ್‌ ಮಾಡಿದ್ದಾರೆ. ಮುಂದಿನ ದಿವಸಗಳಲ್ಲಿ ಈ ಬಗ್ಗೆ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಪ್ರತಿಭಟನೆಯಲ್ಲಿ ರಾಯ್‌ ಕ್ಯಾಸ್ತಲಿನೋ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತಿಭಟನೆಯ ನಂತರ ಕ್ರೈಸ್ತ ಮುಖಂಡರು ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಅವರ ಕಚೇರಿಗೆ ಭೇಟಿ ನೀಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅದೇ ರೀತಿ ಮಂಗಳೂರು ಧರ್ಮಪ್ರಾಂತ್ಯದ ದಕ್ಷಿಣ ವಲಯದ ವತಿಯಿಂದ ಮಾನವ ಸರಪಳಿ ಹಾಗೂ ಕ್ಯಾಂಡಲ್‌ ಪ್ರತಿಭಟನೆ ನಡೆಯಿತು.

LEAVE A REPLY

Please enter your comment!
Please enter your name here

Hot Topics

ಮೂಡುಬಿದಿರೆ: ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟುವಿನಲ್ಲಿ ಫ್ರೀಡಂ ಸಂಗಮ, ಸನ್ಮಾನ

ಮೂಡುಬಿದಿರೆ: ಇಲ್ಲಿನ ವೇಣೂರಿನ ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟು ಹಾಗೂ ಎಸ್.ಬಿ.ಎಸ್ ದಾರುಸ್ಸಲಾಂ ಮದ್ರಸ ಕುಂಡದಬೆಟ್ಟು ಇದರ ವತಿಯಿಂದ ಫ್ರೀಡಂ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕುಂಡದಬೆಟ್ಟುವಿನಲ್ಲಿ ನಡೆಯಿತು.ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡಬಿದಿರೆಯ...

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ ಸಾಬೀತು- ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಮಂಗಳೂರಿನ ಸುಧಾಕರ ಪೂಜಾರಿ ಎಂಬಾತನಿಗೆ 7 ವರ್ಷ ಕಠಿಣ...

“ಇಂದು ಸೂರ್ಯಾಸ್ತದೊಳಗೆ ನಿಯಮಬದ್ಧವಾಗಿ ಧ್ವಜವನ್ನು ಸುರಕ್ಷಿತವಾಗಿ ಮಡಚಿಡಿ”

ಮಂಗಳೂರು: ಸ್ವಾತಂತ್ರ್ಯದ ಆಚರಣೆಯು ಈಗಾಗಲೇ ಮುಗಿದಿದ್ದು, ಇಂದು ಸಂಜೆ ಸೂರ್ಯಾಸ್ತಮಾನದೊಳಗೆ ನಿಯಮಬದ್ಧವಾಗಿ ತ್ರಿವರ್ಣ ಧ್ವಜವನ್ನು ಸುರಕ್ಷಿತವಾಗಿ ಮಡಚಿಡುವಂತೆ ಎಲ್ಲಾ ಸಾರ್ವಜನಿಕರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.ಈ ಬಗ್ಗೆ...