Connect with us

LATEST NEWS

ಮಂಗಳೂರು ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಗೆ ಅರ್ಜಿ ಆಹ್ವಾನ

Published

on

ಮೈಸೂರು: ಮೈಸೂರು ನಿಲ್ದಾಣದಲ್ಲಿ ಪ್ರಾರಂಭಿಸಿದ್ದ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಗೆ ಪ್ರಯಾಣಿಸುವ ಯಾತ್ರಿಕರಿಂದ ದೊರಕಿದ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ,

ಪ್ರಯಾಣಿಕರಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಸಲುವಾಗಿ ಮತ್ತು ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸಿ ಸಮಾಜದ ಕೆಳಸ್ತರದಲ್ಲಿರುವ ವರ್ಗಕ್ಕೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ

‘ವೋಕಲ್ ಫಾರ್ ಲೋಕಲ್’ ಕಾರ್ಯಕ್ರಮದಡಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು, ಚಾಮರಾಜನಗರ, ಹಾಸನ, ಮಂಗಳೂರು, ಮಡಿಕೇರಿ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 67 ರೈಲು ನಿಲ್ದಾಣಗಳಿಗೆ ಈ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಿದೆ.


2022-23ರ ಕೇಂದ್ರೀಯ ವಿತ್ತಪತ್ರದಲ್ಲಿ ಘೋಷಿಸಲಾದ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯು ವಿಭಾಗಾದ್ಯಂತ ರೈಲು ನಿಲ್ದಾಣಗಳಲ್ಲಿ,

ಸ್ಥಳೀಯ ಪ್ರದೇಶದ ಸುತ್ತಮುತ್ತಲಿನ ವಿಶೇಷ ಉತ್ಪನ್ನಗಳು ಹಾಗು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಒದಗಿಸುವ ಮೂಲಕ ಅವುಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಕರಕುಶಲ ವಸ್ತುಗಳು, ಕಲಾಕೃತಿಗಳು, ಜವಳಿ ಮತ್ತು ಕೈಮಗ್ಗಗಳ ನೇಯ್ದ ಬಟ್ಟೆ, ಸಾಂಪ್ರದಾಯಿಕ ಉಡುಪುಗಳು, ಸ್ಥಳೀಯ ಕೃಷಿ ಉತ್ಪನ್ನಗಳು, ಸಂಸ್ಕರಿಸಿದ/ಅರೆ-ಸಂಸ್ಕರಿಸಿದ ಆಹಾರಗಳು, ಮಸಾಲೆಗಳು ಮತ್ತು ಅರಣ್ಯ ಉತ್ಪನ್ನಗಳು,

ಶ್ರೀಗಂಧದ ಆಧಾರಿತ ಉತ್ಪನ್ನಗಳು, ಕಾಫಿ ಮತ್ತು ಏಲಕ್ಕಿಯನ್ನು ಒಳಗೊಂಡಿರುವ ಉತ್ಪನ್ನಗಳ ಶ್ರೇಣಿಯನ್ನು ನಿರ್ದಿಷ್ಟ ನಿಲ್ದಾಣಕ್ಕೆ ಸ್ಥಳೀಯ ವಿಶೇಷದ ಅನುಗುಣವಾಗಿ ಗುರುತಿಸಲಾಗಿದೆ.
ಮೈಸೂರು ವಿಭಾಗವು ಈ ಮೇಲಿನ ಉತ್ಪನ್ನಗಳೊಂದಿಗೆ ವ್ಯವಹರಿಸುವ ಏಜೆನ್ಸಿಗಳು, ಕುಶಲಕರ್ಮಿಗಳು, ನೇಕಾರರು, ಕರಕುಶಲಿಗಳು, ಸ್ವ-ಸಹಾಯ ಗುಂಪುಗಳು, ಬುಡಕಟ್ಟು ಸಹಕಾರ ಸಂಘಗಳು ಮತ್ತು ಸಮಾಜದ ಕಟ್ಟಕಡೆಯ ಹಾಗು ದುರ್ಬಲ ವರ್ಗಗಳಿಂದ ತಮ್ಮ ಉತ್ಪನ್ನಗಳನ್ನು ವಿಭಾಗದಾದ್ಯಂತದ ರೈಲ್ವೆ ನಿಲ್ದಾಣಗಳಲ್ಲಿ ಮಾರಾಟ ಮಾಡಲು ಅರ್ಜಿಗಳನ್ನು ಆಹ್ವಾನಿಸಲು ಉದ್ದೇಶಿಸಿದೆ.
ಮಾರಾಟದ ಅವಧಿಯು 15 ದಿನಗಳಾಗಿದ್ದೂ, ಪೂರ ಅವಧಿಗೆ ನಾಮಮಾತ್ರ ಶುಲ್ಕ ರೂ 1000/- (ಒಂದು ಸಾವಿರ ಮಾತ್ರ) ಆಗಿರುತ್ತದೆ.

ಒಂದು ನಿರ್ದಿಷ್ಟ ನಿಲ್ದಾಣಕ್ಕೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ, ಆದ್ಯತಾ ಪಟ್ಟಿಯ ಪ್ರಕಾರವಾಗಿ, ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು ಮತ್ತು ಆದ್ಯತೆಯ ಪಟ್ಟಿಯಲ್ಲಿರುವ ಎಲ್ಲಾ ಅರ್ಜಿದಾರರು ಮುಗಿಯುವವರೆಗೆ ಇದನ್ನು ಮುಂದುವರೆಸಲಾಗುವುದು.

ಪ್ರಯಾಣಿಕರಿಗೆ ಸುಲಭವಾಗಿ ಪ್ರವೇಶ ಸಾದ್ಯವಾಗುವ ಸ್ಥಳದಲ್ಲಿ ತಾತ್ಕಾಲಿಕ ಕ್ರಿಯಾತ್ಮಕ ಅಂಗಡಿಯನ್ನು ಭಾಗವಹಿಸುವವರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಭಾಗವಹಿಸುವವರು ಉತ್ಪನ್ನಗಳನ್ನು ನಿಲ್ದಾಣದಲ್ಲಿ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಬಹುದು.
ಕುಶಲಕರ್ಮಿಗಳು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರು ಕೋರಿದ್ದಾರೆ.
ಪ್ರತಿಯೊಂದು ನಿಲ್ದಾಣಕ್ಕೆ ಗುರುತಿಸಲಾದ ಉತ್ಪನ್ನಗಳ ಪಟ್ಟಿಯು http://www.swr.indianrailways.gov.in/ ನಲ್ಲಿ ಲಭ್ಯವಿದೆ.

ಅರ್ಜಿಗಳನ್ನು ಶೀಘ್ರದಲ್ಲೇ ಆಹ್ವಾನಿಸಲಾಗುವುದು ಮತ್ತು ದಿನಾಂಕವನ್ನು ಸೂಚಿಸಲಾಗುವುದು. ಆಸಕ್ತರು ಮೈಸೂರಿನಲ್ಲಿ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರನ್ನು ಭೇಟಿ ಮಾಡಬಹುದು ಅಥವಾ 8884303801, 7977509065 ಮತ್ತು 9731159568 ಸಂಪರ್ಕಿಸಬಹುದು.

DAKSHINA KANNADA

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಹೆಸರು ಉಲ್ಲೇಖಿಸಿದ್ದ ವರ..! ವರನ ಮೇಲೆ ದೂರು ದಾಖಲು..!

Published

on

ಕಡಬ: ವ್ಯಕ್ತಿಯೊಬ್ಬರು  ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿಯ ಕುರಿತಾಗಿ ಉಲ್ಲೇಖಿಸಿದ್ದು ಇದೀಗ ಇಕ್ಕಟ್ಟಿಗೆ ಸಿಲುಕಿರುವ ಘಟನೆ ನಡೆದಿದೆ.  ಕಡಬ ತಾಲೂಕಿನ ಆಲಂತಾಯ ನಿವಾಸಿ ಶಿವಪ್ರಸಾದ್ ಎಂಬವರು ತಮ್ಮ ಮದುವೆಯ ಆಮಂತ್ರನ ಪತ್ರಿಕೆಯಲ್ಲಿ ಪ್ರಧಾನಿ ಮೋದಿಯನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವುದು ನಮಗೆ ನೀವು ನೀಡುವ ಉಡುಗೊರೆ ಎಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದರು.

ಮುಂದೆ ಓದಿ..; ಮಕ್ಕಳ ಮುಂದೆಯೇ ದಾಂಪತ್ಯಕ್ಕೆ ಕಾಲಿಟ್ಟ ವೃದ್ದರು..!! ಅಚ್ಚರಿಯಾದ್ರು ಇದು ಸತ್ಯ..!!

marriage

ಮದುವೆ ನಡೆದ ಬಳಿಕ ವರನ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.  ಮಾರ್ಚ್‌1 ರಂದು ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿ ಶಿವಪ್ರಸಾದ್‌ರವರು ಹಂಚಿದ್ದರು. ನೀತಿ ಸಂಹಿತಿ ಘೋಷಣೆಗೆ ಮೊದಲೇ ಈ ಆಮಂತ್ರಣ ಪತ್ರಿಕೆ ಮುದ್ರಣಗೊಂಡಿತ್ತಾದರೂ ಇದೀಗ ಚುನಾವಣಾ ಅಧಿಕಾರಿಗಳಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Continue Reading

FILM

ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಅಬ್ಬರಿಸಲಿದೆ ‘ಪುನೀತ್’ ಸಿನೆಮಾ..! ಯಾವ ಸಿನೆಮಾ?

Published

on

ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಫ್ಯಾಮಿಲಿ ಪ್ಯಾಕೇಜ್, ಹಿಟ್ ಮೂವಿಯೊಂದು ರಿ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್‌ ನಲ್ಲಿ ಅಪ್ಪು ಅಭಿನಯದ ಜಾಕಿ ಚಿತ್ರ ರಿ ರಲೀಸ್‌ ಆಗಿದ್ದು ಹಿಟ್‌ ಲಿಸ್ಟ್‌ಅಲ್ಲಿ ಸೇರಿಕೊಂಡಿದೆ. ಇದೀಗ ಅವರ ಅಭಿನಯದ ಮತ್ತೊಂದು ಸಿನೆಮಾ ‘ಅಂಜನಿಪುತ್ರ’ ರಿ ರಲೀಸ್‌ಗೆ ತಯಾರಾಗಿದೆ.

anjani

ರಿ ರಿಲೀಸ್ ಯಾವಾಗ?

ಪುನೀತ್‌ ರಾಜ್‌ಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಅಂಜನಿ ಪುತ್ರ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. ಹರ್ಷ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ, ಎನ್‌ಎಮ್‌ಕೆ ಮೂವೀಸ್ ಲಾಂಛನದಲ್ಲಿ ಬಿಡುಗಡೆಗೊಂಡಿತ್ತು.  2017ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಆರು ವರ್ಷಗಳ ಬಳಿಕ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದೆ.  ರಾಜ್ಯದ  ಹಲವು ಚಿತ್ರಮಂದಿರಗಳಲ್ಲಿ ಮೇ.10ರಂದು ಸಿನೆಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಎಮ್‌ಎನ್ ಕುಮಾರ್ ತಿಳಿಸಿದ್ದಾರೆ.

 

ಮುಂದೆ ಓದಿ..; ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!

ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಹಿಟ್‌ ಸಾಂಗ್‌ಗಳನ್ನು ಒಳಗೊಂಡಿದೆ. ಅದರಲ್ಲೂ’ಭಾರಿ ಖುಷಿ ಮರ್ರೆ ನನ್ನ ಹೆಂಡ್ತಿ ಕಂಡ್ರೆ’ ಸಾಂಗ್ ಎಲ್ಲರ ತುಟಿಯಂಚಿನಲ್ಲಿ ಈಗಲೂ ಗುಣುಗುಟ್ಟುವಂತಿದೆ. ಮುಂದಿನ ದಿನಗಳಲ್ಲಿ ಪುನೀತ್ ಹಲವು ಸಿನೆಮಾಗಳು ರಿ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

Continue Reading

DAKSHINA KANNADA

ಮೇ 3 ರಂದು ಗಬ್ಬರ್ ಸಿಂಗ್ ತುಳು ಸಿನಿಮಾ ತೆರೆಗೆ

Published

on

ಮಂಗಳೂರು: ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಸತೀಶ್ ಬಾರ್ಕೂರು ನಿರ್ಮಾಣದ ಗಬ್ಬರ್ ಸಿಂಗ್ ತುಳು ಚಲನ ಚಿತ್ರ ಮೇ 3 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಗಬ್ಬರ್ ಸಿಂಗ್ ತುಳು ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಈ ಚಿತ್ರವನ್ನುಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಗಬ್ಬರ್ ಸಿಂಗ್ ಸಿನಿಮಾ ಈಗಾಗಲೇ ಮಸ್ಕತ್ ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ.

“ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಈ ಸಿನಿಮಾದ ಕಥೆ, ಚಿತ್ರಕಥೆ, ನಿರ್ಮಾಪಕರು ಸತೀಶ್ ಪೂಜಾರಿ ಬಾರ್ಕೂರ್ , ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ.

ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರಿದ್ದಾರೆ.

ಛಾಯಾಗ್ರಹಣ: ರವಿ ಸುವರ್ಣ, ಸಂಕಲನ: ಪ್ರಜ್ವಲ್ ಸುವರ್ಣ, ಕಲೆ: ವೆಂಕಟೇಶ್ ಬೆಂಗಳೂರು, ಸಂಗೀತ: ಡೊಲ್ಪಿನ್ ಕೊಳಲಗಿರಿ. ಹಿನ್ನಲೆ ಸಂಗೀತ: ಕಾರ್ತಿಕ್ ಮುಲ್ಕಿ, ಸಾಹಸ: ಅಲ್ಟಿಮೆಟ್ ಶಿವ್ ನೃತ್ಯ: ಅವಿನಾಶ್ ಬಂಗೇರ, ಶುಭಕಿರಣ್, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ : ಶರತ್ ಬರ್ಕೆ, ಸಹ ನಿರ್ದೇಶನ: ಪುಷ್ಪರಾಜ ರೈ, ಜಯರಾಜ್, ಸಹಾಯ: ಭಾಗ್ಯರಾಜ್ ಮಾಡಿದ್ದಾರೆ.

ಪ್ರೀಮಿಯರ್ ಶೋ

ಈಗಾಗಲೇ ಮಸ್ಕತ್, ಕತಾರ್ ಉಡುಪಿ, ಸುರತ್ಕಲ್ ನಲ್ಲಿ ಗಬ್ನರ್ ಸಿಂಗ್ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಸಾಂಸಾರಿಕ ಕತೆಯ ಜೊತೆ ಇಲ್ಲಿ ಹಾಸ್ಯವೂ ಚೆನ್ನಾಗಿ ವಕ್೯ಹೌಟ್ ಆಗಿದೆ. ನವೀನ್ ಪಡೀಲ್, ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ರವಿರಾಮ ಕುಂಜ ಇವರ ಹಾಸ್ಯ ಸಕ್ಕತ್ತಾಗಿದೆ. ಜೊತೆಗೆ ಗಿರೀಶ್ ಶೆಟ್ಟಿ ಕಟೀಲು, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್ ಮೊದಲಾದವರ ಪಾತ್ರಗಳೂ ಕೂಡಾ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು, ನಟ ಭೋಜರಾಜ ವಾಮಂಜೂರು, ಮಧು ಸುರತ್ಕಲ್, ಚಂದ್ರ ಶೇಖರ ನಾನಿಲ್ ಹಳೆಯಂಗಡಿ, ನಟ ಶರಣ್ ಶೆಟ್ಟಿ
ನಟಿ ವೆನ್ಸಿಟಾ ಇದ್ದರು.

Continue Reading

LATEST NEWS

Trending