Connect with us

BELTHANGADY

ಬೆಳ್ತಂಗಡಿ: ಬಾವಿಗೆ ಬಿದ್ದ ಚಿರತೆ

Published

on

ಬೆಳ್ತಂಗಡಿ: ಮಧ್ಯರಾತ್ರಿ ಚಿರತೆಯೊಂದು ಬಾವಿಗೆ ಬಿದ್ದಿದ್ದು ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ ಘಟನೆ ಬೆಳ್ತಂಗಡಿಯ ನಾವರದಲ್ಲಿ ಇಂದು ನಡೆದಿದೆ.


ನಾವರ ಗ್ರಾಮದ ವಸಂತ ಕೋಟ್ಯಾನ್ ಎದಂಬವರ ಮನೆಯ ಬಾವಿಗೆ ತಡರಾತ್ರಿ ಚಿರತೆಯೊಂದು ಬಿದ್ದಿದ್ದು ಅದನ್ನು ಮೇಲಕ್ಕೆತ್ತಲು ಸ್ಥಳೀಯರು ಪ್ರಯತ್ನ ಮಾಡಿದ್ದರು.

ಆದರೆ ಅದೆಷ್ಟೇ ಪ್ರಯತ್ನಿಸಿದರೂ, ಚಿರತೆ ಕೂಡಾ ಎಷ್ಟೇ ಪ್ರಯತ್ನಿಸಿದರೂ ಮೇಲಕ್ಕೆತ್ತಲು ಸಾಧ್ಯವಾಗಲಿಲ್ಲ.

ಚಿರತೆಯ ಸುರಕ್ಷತೆಯ ದೃಷ್ಟಿಯಿಂದ ನಂತರ ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿದಾಗ ಕಾರ್ಕಳದಿಂದ 15 ಮಂದಿಯ ತಂಡವೊಂದು ಆಗಮಿಸಿ ಬಲೆಯ ಮೂಲಕ ಹಿಡಿದು ಚಿರತೆಯನ್ನು ಬೋನಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಇಲಾಖಾ ಸಿಬ್ಬಂದಿಗಳು, ವೇಣೂರು ಠಾಣಾ ಸಿಬ್ಬಂದಿಗಳು, ಸ್ಥಳೀಯರು ಸಹಕರಿಸಿದರು.

Click to comment

Leave a Reply

Your email address will not be published. Required fields are marked *

BELTHANGADY

ಚಾರ್ಮಾಡಿ ಘಾಟ್‌ನಲ್ಲಿ ಪ್ರಪಾತಕ್ಕೆ ಉರುಳಿದ ಪ್ರವಾಸಿಗರ ಕಾರು..!

Published

on

ಬೆಳ್ತಂಗಡಿ: ಚಾರ್ಮಾಡಿ ಘಾಟ್‌ನ ಮಲಯಮಾರತು ಬಳಿ ಕಾರು ಅಪಘಾತವಾಗಿದ್ದು, ಕಾರು 20 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಘಾಟ್‌ ರಸ್ತೆಯಲ್ಲಿ ರಸ್ತೆಯ ತಡೆಗೋಡೆ ಇಲ್ಲದ ತಿರುವು ಬಳಿ ಈ ಅಪಘಾತ ಸಂಭವಿಸಿದ್ದು, ಆರು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಇದ್ದ ಪ್ರಯಾಣಿಕರು ಚಿತ್ರದುರ್ಗ ಮೂಲದವರಾಗಿದ್ದು, ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಲಯ ಮಾರುತ ಬಳಿ ಮಂಜು ತುಂಬಿದ್ದ ಕಾರಣ ರಸ್ತೆ ಸರಿಯಾಗಿ ಕಾಣಿಸಿರಲಿಲ್ಲ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿದ್ದು, ತಡೆಗೋಡೆ ಇಲ್ಲದ ಕಾರಣ ಕಾರು ಪ್ರಪಾತಕ್ಕೆ ಉರುಳಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಪ್ರಪಾತದಲ್ಲಿ ಬಿದ್ದಿದ್ದು, ತಕ್ಷಣ ಸ್ಥಳಿಯರು ಹಾಗೂ ಬೇರೆ ವಾಹನಗಳ ಪ್ರಯಾಣಿಕರು ರಕ್ಷಣೆಗೆ ದಾವಿಸಿದ್ದಾರೆ. ಕಾರಿನಿಂದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ.

Continue Reading

BELTHANGADY

ಪಟಾಕಿ ತಯಾರಿಕಾ ಘಟಕ ಸ್ಪೋಟ ಪ್ರಕರಣ- ಮತ್ತೆ ಐವರ ಬಂಧನ..!

Published

on

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಸಾಲಿಡ್‌ ಫೈರ್‌ ವರ್ಕ್ಸ್‌ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಮೂವರ ಸಾವಿಗೆ ಕಾರಣವಾದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಿರಣ್, ಶಿವಕುಮಾರ್, ಡೇವಿಡ್, ಜಹಾಂಗೀರ್ ಮತ್ತು ಶಬೀರ್ ಬಂಧಿತರು. ಕುಕ್ಕೇಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಡ್ತ್ಯಾರುವಿನ ಪಟಾಕಿ ತಯಾರಿಕಾ ಘಟಕದಲ್ಲಿ ಜ. 28 ರಂದು ಸಂಭವಿಸಿದ್ದ ಈ ಸ್ಫೋಟದಲ್ಲಿ ಕೇರಳದ ಸ್ವಾಮಿ (55) ಮತ್ತು ವರ್ಗಿಸ್ (68) ಹಾಗೂ ಹಾಸನದ ಅರಸೀಕೆರೆ ನಿವಾಸಿ ಚೇತನ್ (25) ಮೃತಪಟ್ಟಿದ್ದರು. ದುಘರ್ಟನೆ ನಡೆದ ಮರುದಿನವೇ ಪಟಾಕಿ ತಯಾರಿಕಾ ಘಟಕದ ಮಾಲಕ ಸಯ್ಯದ್ ಬಶೀರ್‌ನನ್ನು ಪೊಲೀಸರು ಬಂಧಿಸಿದ್ದರು.ಇದೀಗ ಮತ್ತೆ ಐವರನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್‌ ಸಿ.ಬಿ. ತಿಳಿಸಿದ್ದಾರೆ. ಆರೋಪಿ ಕಿರಣ್‌ ಶಿವರಾತ್ರಿ ಪ್ರಯುಕ್ತ ಮೈಸೂರಿಗೆ ಪಟಾಕಿ ಪೂರೈಕೆ ಮಾಡಲು ಬಶೀರನಿಗಾಗಿ ಗುತ್ತಿಗೆ ಪಡೆದಿದ್ದನು. ಆರೋಪಿ ಶಿವಕುಮಾರ್‌ ಶಿವಕಾಶಿಯಿಂದ ಕಚ್ಛಾ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದ್ದನು. ಬೆಂಗಳೂರಿನ ದಿವಾನರಪಾಳ್ಯ ಗೋಕುಲ ನಿವಾಸಿ ಅನಿಲ್ ಎಂ. ಡೇವಿಡ್ ಕಚ್ಛಾ ಸಾಮಗ್ರಿಗಳ ಪೂರೈಕೆಗೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದನು. ಬಜಪೆಯ ಜಹಾಂಗೀರ್‌ ಮತ್ತು ಅಜೆಕಾರಿನ ಶಬೀರ್‌ ಅವರು ಬಶೀರನಿಂದ ಅನಧಿಕೃತವಾಗಿ ಕಚ್ಛಾ ಸಾಮಗ್ರಿ ಖರೀಸಿದ ಆರೋಪ ಎದುರಿಸುತ್ತಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟ ವರ್ಗೀಸ್ ಎಂಬಾತನನ್ನೂ ಪೊಲೀಸರು ಆರೋಪಿ ಎಂದು ಪರಿಗಣಿಸಿದ್ದಾರೆ

 

 

Continue Reading

BELTHANGADY

Belthangady: ಶಿಕ್ಷಕನಿಂದ ಮಾನಸಿಕ ಕಿರುಕುಳ- ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ..!

Published

on

ಬೆಳ್ತಂಗಡಿ: ಶಾಲೆಯ ಡ್ರಾಯಿಂಗ್ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ  ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಶಾಲೆಯ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

16 ವರ್ಷ ಪ್ರಾಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡವರು. ಧರ್ಮಸ್ಥಳ ಗ್ರಾಮದ ನಿವಾಸಿಯಾಗಿದ್ದ ವಿದ್ಯಾರ್ಥಿನಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ರೂಪೇಶ್ ಎಂಬ ಡ್ರಾಯಿಂಗ್ ಶಿಕ್ಷಕ ಮೃತ ವಿದ್ಯಾರ್ಥಿನಿಯ ಬಗ್ಗೆ ಇಲ್ಲ ಸಲ್ಲದ ಅವಮಾನಕಾರಿ ವಿಚಾರಗಳನ್ನು ಆಕೆಯ ಸ್ನೇಹಿತೆಗೆ ವ್ಯಾಟ್ಸಾಪ್‌ ಮಾಡಿದ್ದರು. ಈ ಬಗ್ಗೆ ವಿದ್ಯಾರ್ಥಿನಿಯ ತಾಯಿ ಜೊತೆ ಹೋಗಿ ಶಿಕ್ಷಕನನ್ನು ಪ್ರಶ್ನೆ ಕೂಡಾ ಮಾಡಲಾಗಿತ್ತು. ಇದಾದ ಬಳಿಕ ಫೆ.7 ರಂದು ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಶಾಲೆಯಲ್ಲೇ ಬಿಸ್ಕೆಟ್ ಜೊತೆಗೆ ಇಲಿ ಪಾಷಾಣ ಸೇವಿಸಿದ್ದಳು. ತಕ್ಷಣ ಶಾಲೆಯ ಶಿಕ್ಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮಂಗಳೂರು ಆಸ್ಪತ್ರೆಯಲ್ಲೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿದ್ಯಾರ್ಥಿನಿಯ ಲಿವರ್ ಕಿಡ್ನಿ ಸಂಪೂರ್ಣ ನಿಶ್ಕ್ರೀಯವಾದ ಕಾರಣ ಇಂದು ಮುಂಜಾನೆ 5.30 ರ ಸುಮಾರಿಗೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಡ್ರಾಯಿಂಗ್ ಶಿಕ್ಷಕ ಆರೋಪಿ ರೂಪೇಶ್ ಪೂಜಾರಿಯನ್ನು ಬಂಧಿಸಿ ಮಂಗಳೂರು ಸೆಷನ್ಸ್‌ ಕೋರ್ಟ್ ಗೆ ಧರ್ಮಸ್ಥಳ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಆರೋಪಿ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ಶಾಲೆಯ. ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆ.

Continue Reading

LATEST NEWS

Trending