Friday, August 12, 2022

ಮೇ 9ರಂದು ದೇವಸ್ಥಾನಗಳಲ್ಲಿ ಬೆಳಗ್ಗೆ 5 ಗಂಟೆಗೆ ಓಂಕಾರ: ತಡೆದರೆ ಸಂಘರ್ಷ ಖಂಡಿತ ಎಂದ ಮುತಾಲಿಕ್‌

ಮಂಗಳೂರು: ಮೇ 9ರಂದು 1ಸಾವಿರ ದೇವಸ್ಥಾನ, ಮಠಗಳಲ್ಲಿ ಬೆಳಗ್ಗಿನ ಜಾವ 5 ಗಂಟೆಗೆ ಓಂಕಾರ, ಸುಪ್ರಭಾತ ಹಾಕುವ ನಿರ್ಣಯ ಮಾಡಿದ್ದೇವೆ. ಸರಕಾರಕ್ಕೆ ಮತ್ತು ಮುಸ್ಲಿಂ ಸಮಾಜಕ್ಕೆ ಚಾಲೆಂಜ್ ಆಗಿ ಇದನ್ನು ಮಾಡುತ್ತಿದ್ದೇವೆ‌. ಸರಕಾರವೇನಾದರೂ ಇದನ್ನು ತಡೆಯಲು ಬಂದರೆ ಸಂಘರ್ಷ ಖಂಡಿತ,” ಎಂದು ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿಗೆ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲೂ ಮಸೀದಿ ಮೈಕ್ ಇಳಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿ ಗಡುವು ನೀಡಿದ್ದೆವು. ಸರಕಾರ ನೋಟೀಸ್‌ ಕೊಟ್ಟಿದೆ ಎಂದು ಕೈತೊಳೆದುಕೊಳ್ಳುವುದು ಬೇಡ. “ಹಿಂದೂ ಸಮಾಜ ಖಂಡಿತಾ ಕೆರಳುತ್ತದೆ. ಕೆರಳಿಸುವ ಹಾಗೆ ನೀವು ಮಾಡದಿರಿ. ಮುಸ್ಲಿಂ ಸಮಾಜವೂ ಇದು ತಾಲಿಬಾನ್, ಅಫ್ಘಾನಿಸ್ತಾನ ಅಲ್ಲ ಇದು ಭಾರತದ ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ ಎಂದು ನೆನಪಿನಲ್ಲಿಡಲಿ.

ಆದ್ದರಿಂದ ಮೇ 9ರಂದು ಮಸೀದಿಯ ಅಜಾನ್ ಕೇಳದಷ್ಟು ಜೋರಾಗಿ ದೇವಸ್ಥಾನದಲ್ಲಿ ಓಂಕಾರ, ಸುಪ್ರಭಾತ ಹಾಕೋದು ಖಂಡಿತಾ,” ಎಂದು ಸವಾಲೆಸೆದರು. ಅಜಾನ್ ಮೈಕ್ ಅನ್ನು ಸ್ಥಗಿತಗೊಳಿಸಲು ಕಳೆದ 15 ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಆದರೆ ಇದು ನಿಂತಿಲ್ಲ. ನಾನು ಅಜಾನ್ ವಿರುದ್ಧ ಸಮರ ಸಾರುತ್ತಿಲ್ಲ,

ಮೈಕ್ ನ ಶಬ್ದ ಹಾಗೂ ಸುಪ್ರೀಂ ಕೋರ್ಟ್ ಆಜ್ಞೆಯ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇಂದಿನವರೆಗೂ ಸುಪ್ರೀಂ ಕೋರ್ಟ್ ಆಜ್ಞೆಯನ್ನು ಮಸೀದಿಯ ಮೇಲಿನ ಮೈಕ್ ವಿಚಾರದಲ್ಲಿ ಪಾಲನೆ ಆಗುತ್ತಿಲ್ಲ. ಇಲ್ಲಿ ಸುಪ್ರೀಂ ಕೋರ್ಟ್ ಆಜ್ಞೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ,” ಎಂದು ಹೇಳಿದರು.

LEAVE A REPLY

Please enter your comment!
Please enter your name here

Hot Topics

ಉಡುಪಿ: ಮನೆಯ ಹಿಂಬಾಗಿಲು ಒಡೆದು ಚಿನ್ನಾಭರಣ ಕಳವು-ಆರೋಪಿ ಅಂದರ್

ಉಡುಪಿ: ಮನೆಯ ಹಿಂಬಾಗಿಲು ಒಡೆದು ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.ಕುಂಬಾಸಿ ವಿನಾಯಕ ನಗರ ನಿವಾಸಿ ಸುಭಾಷ್ ಚಂದ್ರ ಆಚಾರ್ಯ (40) ಬಂಧಿತ ಆರೋಪಿ. ಇವರು ಮೂಲತಃ ಮರವಂತೆಯ...

ಕಟೀಲು ಕಾಲೇಜಿನ ವಿದ್ಯಾರ್ಥಿಗಳೇ ತಯಾರಿಸಿದ ರಾಷ್ಟ್ರಧ್ವಜ: ಮನೆಮನೆಗೆ ವಿತರಣೆ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ತಯಾರಿಸಿ ಸಿದ್ಧಪಡಿಸಿದ ರಾಷ್ಟ್ರಧ್ವಜವನ್ನು ಸರಕಾರದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮನೆಗಳಿಗೆ ವಿತರಿಸಲು ವಿದ್ಯಾರ್ಥಿಗಳಿಗೆ ನೀಡಲಾಯಿತು.ಈ ಸಂದರ್ಭ ಕಟೀಲು ದೇಗುಲದ...

ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಯಕ್ಷಗುರು ರಾಮಚಂದ್ರ ಭಟ್‌ ಎಲ್ಲೂರು ಆಯ್ಕೆ

ಮಂಗಳೂರು: ಕದ್ರಿ ವಲಯ ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಯಕ್ಷಗುರು ರಾಮಚಂದ್ರ ಭಟ್‌ ಎಲ್ಲೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಕದ್ರಿ ಮಲ್ಲಿಕಟ್ಟೆ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಘೋಷಿಸಲಾಯಿತು.ಅದರಲ್ಲಿ ಶಿವಳ್ಳಿ ಸ್ಪಂದನ ಉಪಾಧ್ಯಕ್ಷರು- ಸದಾನಂದ...