Connect with us

LATEST NEWS

ಸಂಘಟನೆಗೆ ದುಡಿದವರಿಗೆ ಸರಕಾರದಲ್ಲಿ ಹೆಚ್ಚು ಅವಕಾಶ ಎಂದ ಬಿ.ಎಲ್‌ ಸಂತೋಷ್‌: ಕಮಲಪಾಳಯದಲ್ಲಿ ಗರಿಗೆದರಿದ ಚಟುವಟಿಕೆ

Published

on

ಬೆಂಗಳೂರು: ಚುನಾವಣೆಗೆ ಒಂದು ವರ್ಷ ಬಾಕಿ ಮಧ್ಯೆ ರಾಜ್ಯದಲ್ಲಿ ಸಂಪುಟ ಪುನರ್‌ರಚನೆ ಸರ್ಕಸ್‌ ನಡೆಯುತ್ತಿದೆ. ಈ ಮಧ್ಯೆ ಸಂಘಟನೆಗಾಗಿ ದುಡಿದ ಹೊಸ ಮುಖಗಳಿಗೆ

ಹೆಚ್ಚು ಅವಕಾಶ ನೀಡುವುದಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ನೀಡಿರುವ ಹೇಳಿಕೆ ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿದೆ.


ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಹೊತ್ತಿನಲ್ಲೇ ಬಿ.ಎಲ್‌ ಸಂತೋಷ್‌ ಹೇಳಿಕೆ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗೆ ನಾಂದಿ ಹಾಡಿದೆ.

ಮೈಸೂರಿನಲ್ಲಿ ಶನಿವಾರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಬಿಎಲ್‌ ಸಂತೋಷ್‌ ”ಅಧಿಕಾರ ರಾಜಕಾರಣದಲ್ಲಿ ಪಕ್ಷದ ಕಾರ್ಯಕರ್ತರಿಗೆ, ಹೊಸ ಮುಖಗಳಿಗೆ ಅವಕಾಶ ನೀಡುವ ಪ್ರಯೋಗ ನಡೆಸುವ ಧೈರ್ಯವನ್ನು ಬಿಜೆಪಿ ತೋರುತ್ತಿದೆ. ಹೊಸ ವ್ಯವಸ್ಥೆ ತರುವ ಪ್ರಯತ್ನ ಪಕ್ಷದ ನೆಲೆಯಲ್ಲೂಆಗುತ್ತಿದೆ,” ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು.

ಸಂತೋಷ್‌ ಹೇಳಿಕೆ ಕುರಿತ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ ”ಬಿಎಲ್‌ ಸಂತೋಷ್‌ ಅವರು ರಾಷ್ಟ್ರವನ್ನು ಗಮನದಲ್ಲಿಟ್ಟುಕೊಂಡು ಪ್ರಯೋಗಶೀಲತೆಯ ಹೇಳಿಕೆ ನೀಡಿದ್ದಾರೆ. ಪಕ್ಷ ಕಾಲಕ್ಕೆ ಅನುಗುಣವಾಗಿ ಏನು ಮಾಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಅವರು ಮಾತನಾಡಿದ್ದಾರೆ.

ಅವರ ಹೇಳಿಕೆ ಕ್ಷೇತ್ರ, ರಾಜ್ಯಕ್ಕೆ ಸೀಮಿತವಾಗದೆ ಇಡೀ ರಾಷ್ಟ್ರಕ್ಕೆ ಅನ್ವಯವಾಗುತ್ತದೆ. ಪಕ್ಷ ಪ್ರಯೋಗಶೀಲತೆಗೆ ಹೇಗೆ ಹೆಸರಾಗಿದೆ ಎಂಬುದನ್ನು ದೃಷ್ಟಿಯಲ್ಲಿಟ್ಟು ಅವರು ಮಾತನಾಡಿದ್ದಾರೆ,” ಎಂಬ ವಿವರಣೆ ನೀಡಿದರು.

ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರ ಬಾಕಿ ಉಳಿದಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳು, ಹಗರಣ, ಬಿಟ್‌ ಕಾಯಿನ್‌,

40 ಶೇ ಕಮಿಷನ್ ಆರೋಪ, ಪಿಎಸ್‌ಐ ಹಗರಣ, ಸಂತೋಷ್ ಪಾಟೀಲ್ ಆತ್ಮಹತ್ಯೆ ಸೇರಿದಂತೆ ಸರಣಿ ಆರೋಪಗಳು ಸರ್ಕಾರದ ಬಗ್ಗೆ ಜನರ ಭಾವನೆ ಬದಲಾಯಿಸಿದೆ.

ಈ ಕಾರಣಕ್ಕಾಗಿ ಪಕ್ಷ ಹಾಗೂ ಸರ್ಕಾರದ ಬಗ್ಗೆ ಸದ್ಯ ತಲೆದೋರಿರುವ ಆರೋಪವನ್ನು ಮುಕ್ತಗೊಳಿಸಲು ಸಂಪುಟದಲ್ಲಿ ಬದಲಾವಣೆ ತರಲು ಯೋಚನೆ ನಡೆಸಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನೂತನ ಧ್ವಜ ಮರ ಸ್ಥಾಪನೆ

Published

on

ಸುರತ್ಕಲ್‍: ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ನೂತನ ಧ್ವಜಮರ ಸ್ಥಾಪನೆ ಫೆ. 21ರಂದು  ಜರಗಿತು.


ಶಿಬರೂರು ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು,ಪೂಜೆ ನೆರವೇರಿದ ಬಳಿಕ ಧ್ವಜಮರವನ್ನು ಪುನರ್ ಸ್ಥಾಪಿಸಲಾಯಿತು.

ಇದೇ ಸಂದರ್ಭ ಎ.22ರಿಂದ 30ರವರೆಗೆ ನಡೆಯುವ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.


ಉಮೇಶ್ ಗುತ್ತಿನಾರ್ ಶಿಬರೂರುಗುತ್ತು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಜಾಲಗುತ್ತು, ಪ್ರಮುಖರಾದ ಐಕಳ ಹರೀಶ್ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಶೆಟ್ಟಿ, ಸಿ.ಎ ಉದಯಕುಮಾರ್ ಶೆಟ್ಟಿ, ಉದಯ ಸುಂದರ್ ಶೆಟ್ಟಿ, ಯದುನಾರಾಯಣ ಶೆಟ್ಟಿ , ಸುಧಾಕರ ಪೂಂಜ ಸುರತ್ಕಲ್, ಸಿ.ಎ ಸುದೇಶ್ ಕುಮಾರ್ ರೈ, ಬಾಲಕೃಷ್ಣ ಕೊಠಾರಿ,ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ಕ್ಷೇತ್ರದ ಸಮಿತಿ ಪ್ರಮುಖರು, ಸಂಬಂಧಪಟ್ಟ ಗುತ್ತು ಮನೆತನದವರು , ಗ್ರಾಮಸ್ಥರು ಭಾಗವಹಿಸಿದ್ದರು

Continue Reading

FILM

ನಟ ದರ್ಶನ್ “ತಗಡು” ಪದ ಪ್ರಯೋಗಕ್ಕೆ ರಾಜ್ಯ ಒಕ್ಕಲಿಗರ ಸಂಘ ಕೆಂಡಾಮಂಡಲ

Published

on

ಬೆಂಗಳೂರು : ನಟ ದರ್ಶನ್ ಸದಾ ಸುದ್ದಿಯಲ್ಲಿರೋದಂತು ಸತ್ಯ. ಒಂದಾ ಸಿನೆಮಾದ ವಿಚಾರಕ್ಕೆ ಸುದ್ದಿಯಾದ್ರೆ , ಇನ್ನೊಂದು ಅವರ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿರ್ತಾರೆ. ಇರಲಾರ್ದೆ ಇರುವೆ ಬಿಟ್ಟುಕೊಂಡ್ರು ಅನ್ನೋ ಹಾಗೆ ಈಗ ಮತ್ತೆ ದರ್ಶನ್ ವಿವಾದವೊಂದನ್ನು ಮೈಗೆ ಎಳೆದುಕೊಂಡಿದ್ದಾರೆ. ನಟ ದರ್ಶನ್​ ಅವರು ‘ಕಾಟೇರ’ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ವೇಳೆ ‘ರಾಬರ್ಟ್​’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರ ಬಗ್ಗೆ ಆಡಿದ ಮಾತುಗಳಿಗೆ ಕೆಲವರಿಂದ ಖಂಡನೆ ವ್ಯಕ್ತವಾಗಿದೆ.

ದರ್ಶನ್​ ಅವರು ‘ತಗಡು’ ಎಂಬ ಪದ ಬಳಕೆ ಮಾಡಿದ್ದಕ್ಕೆ ಆಕ್ಷೇಪ ಎದುರಾಗಿದೆ. ತಗಡು ಎಂಬ ಪದವನ್ನು ದರ್ಶನ್​ ಅವರು ಬಳಕೆ ಮಾಡಿದ್ದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘ ಕೂಡ ಕೆಂಡಾಮಂಡಲರಾಗಿದ್ದಾರೆ.


ದರ್ಶನ್​ ಮತ್ತು ಉಮಾಪತಿ ಶ್ರೀನಿವಾಸ್​ ಗೌಡ ಅವರು ಜೊತೆಯಾಗಿ ‘ರಾಬರ್ಟ್​’ ಸಿನಿಮಾ ಮಾಡಿದ್ದರು.ಉತ್ತಮ ಸ್ನೇಹ ಸಂಬಂಧವೂ ಇವರಿಬ್ಬರ ನಡುವೆ ಇತ್ತು. ಜೊತೆಗೆ ಆ ಸಿನಿಮಾವೂ ಉತ್ತಮವಾಗಿ ಪ್ರದರ್ಶನ ಕಂಡಿತು. ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಅವರಿಬ್ಬರ ನಡುವೆ ವೈಮನಸ್ಸು ಮೂಡಿತು.


ಇದೀಗ ಬೆಂಕಿ ಮುಚ್ಚಿದ ಕೆಂಡದಂತಿದ್ದ ಇವರಿಬ್ಬರ ಕೋಲ್ಡ್ ವಾರ್ ಮತ್ತೆ ಮುನ್ನಲೆಗೆ ಬಂದಿದೆ. ಕಾಟೇರ’ ಸಿನಿಮಾದ ಟೈಟಲ್​ ನೀಡಿದ್ದು ಮತ್ತು ಕಥೆ ಸಿದ್ಧ ಮಾಡಿಸಿದ್ದು ತಾವೇ ಎಂದು ಉಮಾಪತಿ ಹೇಳಿದ್ದನ್ನು ದರ್ಶನ್ ತಿರಸ್ಕರಿಸಿದ್ದು, ವೇದಿಕೆಯಲ್ಲಿ ಉಮಾಪತಿಯವರಿಗೆ “ತಗಡು” ಎಂಬ ಶಬ್ಧ ಪ್ರಯೋಗ ಮಾಡಿದ್ದರು. ಈಗಾಗಲೇ ದರ್ಶನ್ ವಿರುದ್ಧ ಕೇಸ್ ಫೈಲ್ ಆಗಿದ್ದು, ಇದೀಗ ಈ ವಿಚಾರ ಎಲ್ಲಿ ಹೋಗಿ ನಿಲ್ಲುತ್ತೋ ಎಂಬುವುದನ್ನು ಕಾದು ನೋಡ್ಬೇಕಾಗಿದೆ.

Continue Reading

DAKSHINA KANNADA

ಮಂಗಳೂರು : ಹಲವು ಕ್ರಿಮಿನಲ್ ಕೃತ್ಯದಲ್ಲಿ ಶಾಮೀಲಾಗಿದ್ದ ಕುಖ್ಯಾತ ಕಳ್ಳರಿಬ್ಬರ ಬಂಧನ

Published

on

ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ನಾಟೆಕಲ್ ಸಮೀಪದ ಕಲ್ಕಟ್ಟ ಎಂಬಲ್ಲಿನ  ಅಬ್ದುಲ್ ಫಯಾನ್ (26) ಮತ್ತು ನರಿಂಗಾನ ಸಮೀಪದ ತೌಡುಗೋಳಿ ಕ್ರಾಸ್ ನಿವಾಸಿ ಮೊಯಿದ್ದೀನ್ ಹಫೀಸ್ ಯಾನೆ ಆಬಿ (47) ಬಂಧಿತ ಆರೋಪಿಗಳು.  ಅಬ್ದುಲ್ ಫಯಾನ್ ಎಂಬಾತನು ಕೊಣಾಜೆ, ಉಳ್ಳಾಲ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಉಪ್ಪಿನಂಗಡಿ, ಕಡಬ ಪೊಲೀಸ್ ಠಾಣೆಗಳಲ್ಲಿನ ವಿವಿಧ ಕಡೆಗಳಲ್ಲಿ ಸರಕಾರಿ ಕಚೇರಿ, ಶಾಲೆ ಹಾಗೂ ಅಂಗಡಿಗಳಲ್ಲಿ ಕಳ್ಳತನ ಸಹಿತ 23 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಂಗ ಬಂಧನದಲ್ಲಿದ್ದ ಈತನ ವಿರುದ್ಧ ಕಾರಾಗೃಹದೊಳಗೆ ಇತರ ಕೈದಿಗಳಿಗೆ ಹಲ್ಲೆ ನಡೆಸಿದ ಮತ್ತು ಜೈಲು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಆರೋಪವೂ ಇದೆ. ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಈತ ಕಳೆದ 2 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಈತನನ್ನು ಬಂಧಿಸಿದ್ದಾರೆ.

ಮೊಯಿದ್ದೀನ್ ಹಫೀಸ್ ಯಾನೆ ಆಬಿ ಕೊಣಾಜೆ, ಉಳ್ಳಾಲ, ಬಂದರ್, ಸುರತ್ಕಲ್, ಕಂಕನಾಡಿ ನಗರ ಹಾಗೂ ಸೆನ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ/ಸಾಗಾಟ ಸಹಿತ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಈತ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಈತನನ್ನು ಮಂಜೇಶ್ವರ ಸಮೀಪದ ಮೀಂಜದಿಂದ ಬಂಧಿಸಲಾಗಿದೆ.

 

Continue Reading

LATEST NEWS

Trending