ಹಿಂದೂ ಕಾರ್ಯಕರ್ತರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿಂದು ಕಾರ್ಯಕರ್ತರ ಆರೋಗ್ಯವನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಸ್ಪತ್ರೆಗೆ ಭೇಟಿ ನೀಡಿದ ವಿಚಾರಿಸಿದರು.
ಪುತ್ತೂರು: ನಳಿನ್ ಕುಮಾರ್ ಕಟೀಲು ಮತ್ತು ಡಿ ವಿ ಸದಾನಂದ ಗೌಡ ಅವರ ಅವಹೇಳನಾಕಾರಿ ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿದ ಘಟನೆ ಪುತ್ತೂರಿನಲ್ಲಿ ನಡೆದಿರುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿಂದು ಕಾರ್ಯಕರ್ತರ ಆರೋಗ್ಯವನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಸ್ಪತ್ರೆಗೆ ಭೇಟಿ ನೀಡಿದ ವಿಚಾರಿಸಿದರು.
ಪೊಲೀಸರ ಥರ್ಡ್ ಡಿಗ್ರಿ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಹಿಂದೂ ಕಾರ್ಯಕರ್ತರ ಜೊತೆ ಅವರು ಮಾತನಾಡಿದರು ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವರಿಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಲು ಇವರೇನು ಭಯೋತ್ಪಾದಕರಾ..? ರೇಪಿಸ್ಟ್ಗಳಾ..? ಕೊಲೆಗಡುಕರಾ..? ದರೋಡೆಕೋರರಾ..? ಒಂದು ಬ್ಯಾನರ್ ಹಚ್ಚಿದ್ದಕ್ಕೆ ಹೀಗೆ ಹೊಡೆಯುವುದು, ಲಕ್ಷಾಂತರ ಮಂದಿ ಹಿಂದುಗಳ ಶಾಪ ನಿಮಗೆ ತಟ್ಟುತ್ತದೆ.
ನೀವು ತಪ್ಪು ಮಾಡಿದಿರಿ. ಈ ಬಗ್ಗೆ ಕಾಂಗ್ರೆಸ್ ಸರಕಾರಕ್ಕೆ ಶ್ರೀರಾಮ ಸೇನೆ ಸಂಘಟನೆಯಿಂದ ಮನವಿ ನೀಡಿ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ ಎಂದರು.