ಉಡುಪಿ: ನಗರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ಹಕ್ಕಿಗಾಗಿ 8 ವಿದ್ಯಾರ್ಥಿನಿಯರು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಕಾಲೇಜಿಗೆ ಹಿಂದು ಜಾಗರಣಾ ವೇದಿಕೆ ಸಂಘಟನೆ ಸದಸ್ಯರು ಭೇಟಿ ನೀಡಿದರು.
ಈ ಬಗ್ಗೆ ಮಾಧ್ಯಮಗಾರರೊಂದಿಗೆ ಮಾತನಾಡಿದ ಹಿಂದು ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ “ಶಾಲೆ ಕಾಲೇಜಲ್ಲಿ ಸಮವಸ್ತ್ರ, ಸಮಾನತೆ ಇರಬೇಕು.
ಬುರ್ಖಾ, ಟೋಪಿ ಕೇಳಿ ಮುಂದೆ ಶರಿಯತ್ ಕಾನೂನು ಕೇಳುತ್ತಾರೆ. ಮತೀಯ ಸಂಘಟನೆಯೊಂದು ವಿದ್ಯಾರ್ಥಿಗಳಿಗೆ ವಿಷಬೀಜ ಬಿತ್ತಿದೆ.
ದೇಶದ ಮಾನ ಹರಣಕ್ಕೆ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ. ಉಡುಪಿಯ ಶೈಕ್ಷಣಿಕ ಖ್ಯಾತಿ ಕುಗ್ಗಿಸಲು ಷಡ್ಯಂತ್ರ ನಡೆಯುತ್ತಿದೆ.
ಆದರೆ ಯಾವುದೇ ಕಾರಣಕ್ಕೂ ಶೈಕ್ಷಣಿಕ ವಾತಾವರಣ ಕೆಡಿಸಲು ಹಿಂದು ಜಾಗರಣಾ ವೇದಿಕೆ ಬಿಡುವುದಿಲ್ಲ ಹಾಗೆಯೇ, ಕಾಲೇಜಲ್ಲಿ ಇಸ್ಲಾಂ ಕಾನೂನು ಜಾರಿಗೆ ತರುವ ಅವಕಾಶ ಕೊಡಬಾರದು.
ಈ ವಿಷಯದಲ್ಲಿ ಪ್ರಾಂಶುಪಾಲರಿಗೆ ಒತ್ತಡ ಹಾಕುವುದನ್ನು ಸಹಿಸಲ್ಲ. ಇವರಿಗೆ ಸರಕಾರಿ ಶಿಕ್ಷಣ ಬೇಡದಿದ್ದರೆ ಮದರಾಸು ಶಿಕ್ಷಣ ಪಡೆಯಲಿ ಎಂದು ಹೇಳಿದರು.