Sunday, May 22, 2022

ಉಡುಪಿ: ಮುಗಿಯದ ಸ್ಕಾರ್ಫ್ ವಿವಾದ NSUI ಭೇಟಿ ಸಂದರ್ಭ ಕಾಲೇಜಿಗೆ ಬೀಗ..!

ಉಡುಪಿ: ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹಿಜಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಎನ್ಎಸ್ ಯುಐ ಸಂಘಟನೆಯ ರಾಜ್ಯ ಸದಸ್ಯರು ಕಾಲೇಜಿಗೆ ಭೇಟಿ ನೀಡಿದ್ದರು. ಆದರೆ ಕಾಲೇಜನ್ನು ಆಗ ಬಂದ್ ಮಾಡಲಾಗಿತ್ತು.

ಹಿಜಾಬ್ ಧರಿಸಲು ನಿರಾಕರಿಸಿದ ಕಾಲೇಜಿನ ಬಗ್ಗೆ ಮಾತನಾಡಿದ ಹೈಕೋರ್ಟ್ ನ್ಯಾಯವಾದಿ ಶತಭಿ ಶಿವಣ್ಣ “ಕಾಲೇಜು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಕಾನೂನಿನ ಪ್ರಕಾರ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸುವುದು ಅವರ ಮೂಲಭೂತವಾದ ಹಕ್ಕಾಗಿದೆ.

ಆ ನಿಟ್ಟಿನಲ್ಲಿ ಈ ಕಾಲೇಜು ಆಡಳಿತ ವಿದ್ಯಾರ್ಥಿನಿಯರನ್ನು ಹೊರಗೆ ನಿಲ್ಲಿಸಿದ್ದು ತಪ್ಪು. ಅದು ಅವರ ಧಾರ್ಮಿಕ ಹಕ್ಕು ಮಾತ್ರವಲ್ಲದೆ ಅವರ ಶೈಕ್ಷಣಿಕ ಹಕ್ಕಿಗೆ ಕೂಡ ಧಕ್ಕೆ ತರುವ ವಿಚಾರ.

ಇದರ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ. ಕಾನೂನಾತ್ಮಕವಾಗಿ ಹೋರಾಟ ಕೂಡ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕಾಲೇಜಿಗೆ ಬಾಗಿಲು ಹಾಕಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಎನ್ಎಸ್ ಯುಐ ಸಂಘಟನೆ ರಾಜ್ಯ ಸದಸ್ಯರು ಪ್ರಾಂಶುಪಾಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಹಾಗೂ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಗೆ ಮನವಿ ನೀಡಿದರು.

LEAVE A REPLY

Please enter your comment!
Please enter your name here

Hot Topics

ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಕುಸಿತ: ಸಂಕಷ್ಟದಲ್ಲಿ 10 ಸಾವಿರ ಯಾತ್ರಿಕರು

ಬಂದಾರ್: ಹಿಂದೂಗಳ ನಾಲ್ಕು ಪ್ರಮುಖ ಯಾತ್ರಾಸ್ಥಳಗಳಲ್ಲೊಂದಾದ ಉತ್ತರಾಖಂಡ್‌ನ ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿದಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 10,000 ಜನರು ಹೆದ್ದಾರಿಯ ವಿವಿಧೆಡೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.ಮೂಲಗಳ...

ಏಕಲವ್ಯ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ ಉದಯ್ ಚೌಟ ಇನ್ನಿಲ್ಲ

ಬಂಟ್ವಾಳ: ಏಕಲವ್ಯ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ, ಉದಯ್ ಚೌಟ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.ಬಂಟ್ವಾಳ ತಾಲೂಕು ಮಾಣಿಯ ಬದಿಗುಡ್ಡೆ ನಿವಾಸಿಯಾಗಿರುವ ಉದಯ್ ಚೌಟ ಕಬಡ್ಡಿ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು.ಅಲ್ಲದೇ ದ.ಕ...

‘ಶಿವಲಿಂಗ’ ಪತ್ತೆ ಕುರಿತಂತೆ ಆಕ್ಷೇಪಾರ್ಹ ಪೋಸ್ಟ್: ದೆಹಲಿ ವಿವಿ ಪ್ರಾಧ್ಯಾಪಕನ ಬಂಧನ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ 'ಶಿವಲಿಂಗ' ಪತ್ತೆ ಕುರಿತಂತೆ ಹೇಳಿಕೆಗಳನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ನಿನ್ನೆ ರಾತ್ರಿ ದೆಹಲಿಯ ಉತ್ತರ...