LATEST NEWS
Mangaluru: ಡಿಸಿ ಕಚೇರಿಯ ತಂಡ ವಾರದಲ್ಲೊಂದು ದಿನ ತಾಲೂಕು ಭೇಟಿ- ಮುಲ್ಲೈ ಮುಹಿಲನ್
ಜಿಲ್ಲಾಧಿಕಾರಿ ಕಚೇರಿಯ ತಂಡ ವಾರದಲ್ಲಿ ಒಂದು ದಿನ ತಾಲೂಕು ಮಟ್ಟದಲ್ಲಿ ಮೊಕ್ಕಾಂ ಮಾಡಿ ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಕ್ರಮ ರೂಪಿಸಲಾಗಿದ್ದು, ಇದೇ ತಿಂಗಳಲ್ಲಿ ಈ ನೂತನ ಉಪಕ್ರಮ ಕಾರ್ಯರೂಪಕ್ಕೆ ಬರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ.
ಮಂಗಳೂರು: ಜಿಲ್ಲಾಧಿಕಾರಿ ಕಚೇರಿಯ ತಂಡ ವಾರದಲ್ಲಿ ಒಂದು ದಿನ ತಾಲೂಕು ಮಟ್ಟದಲ್ಲಿ ಮೊಕ್ಕಾಂ ಮಾಡಿ ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಕ್ರಮ ರೂಪಿಸಲಾಗಿದ್ದು, ಇದೇ ತಿಂಗಳಲ್ಲಿ ಈ ನೂತನ ಉಪಕ್ರಮ ಕಾರ್ಯರೂಪಕ್ಕೆ ಬರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇಂದು ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ‘ಪತ್ರಕರ್ತರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.
ತಾಲೂಕು ಮಟ್ಟದ ಜನರು ದೂರದ ಮಂಗಳೂರಿನಲ್ಲಿರುವ ಜಿಲ್ಲಾ ಕೇಂದ್ರಕ್ಕೆ ತೆರಳಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಬಹಳಷ್ಟು ಸಮಯ ಮತ್ತು ಶ್ರಮ ವ್ಯಯಿಸ ಬೇಕಾಗಿದೆ.
ಈ ದಿಶೆಯಲ್ಲಿ ಗ್ರಾಮಾಂತರ ಭಾಗದ ಜನರಿಗೆ ನೆರವಾಗಲು ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೊದಲು ತಾಲೂಕು ಕೇಂದ್ರದಲ್ಲಿ ಹಾಗೂ ಬಳಿಕ ಹೋಬಳಿ ಮಟ್ಟಕ್ಕೆ ಜಿಲ್ಲಾಧಿಕಾರಿ ಕಚೇರಿಯ ತಂಡ ತೆರಳಲಿದೆ.
ಪ್ರತಿ ಬುಧವಾರ ಅಥವಾ ಗುರುವಾರ ಈ ಕಾರ್ಯಕ್ರಮ ನಡೆಸುವ ಉದ್ದೇಶವಿದೆ.
ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಮತ್ತು ತಾಲೂಕು ಕಚೇರಿ ಮಟ್ಟದಲ್ಲಿ ಬಾಕಿ ಉಳಿದಿರುವ ಅರ್ಜಿಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡು ಚರ್ಚಿಸಿ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಸ್ತೆಯ ಹೊಂಡಗಳ ಸಮಸ್ಯೆ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಜತೆ ಸಭೆ ನಡೆಸಿದ್ದು, ರಸ್ತೆ ಹೊಂಡಗಳು ಮತ್ತು ಸಮಸ್ಯೆ ಬಗ್ಗೆ ಪಟ್ಟಿ ಮಾಡುವಂತೆ ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರು ಮತ್ತು ಪೊಲೀಸ್ ಕಮಿಷನರ್ ಅವರು ಈಗಾಗಲೇ ಪಟ್ಟಿ ಕೊಟ್ಟಿದ್ದಾರೆ.
ಅದನ್ನು ಪರಿಶೀಲಿಸಿ ನಾನೇ ಸ್ವತ: ಸ್ಥಳ ತನಿಖೆ ನಡೆಸಿ ಬಳಿಕ ದುರಸ್ತಿ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊಸ ತಾಲೂಕು ಕಚೇರಿಗಳ ಸಿಬಂದಿ ಕೊರತೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಕಂದಾಯ ಇಲಾಖೆ ಮೂಲಕ ಸರಕಾರದ ಗಮನಕ್ಕೆ ತರಲಾಗಿದೆ.
ಸಾರಿಗೆ ಸಂಚಾರ ಸಂಬಂಧಿತ ಸಮಸ್ಯೆಗಳ ಬಗ್ಗೆ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಿ ಚರ್ಚಿಸಲಾಗುವುದು.
ಪ್ರವಾಸೋದ್ಯಮ ಅಭಿವೃದ್ಧಿಗೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಯೋಜನೆ ರೂಪಿಸಲಾಗುವುದು.
ಸಂಡೇ ಬಜಾರ್ ಆರಂಭಿಸುವ ಪ್ರಸ್ತಾವವಿದೆ. ಪ್ರಕೃತಿ ವಿಕೋಪ ನಿರ್ವಹಣಾ ಯೋಜನೆಯನ್ನು ವಿಕೇಂದ್ರೀಕರಿಸಿ ಗ್ರಾಮ ಪಂಚಾಯತ್, ನಗರ ಸ್ಥಳೀಯ ಆಡಳಿತ ಸಂಸ್ಥೆ ಮತ್ತು ಮಹಾನಗರ ಪಾಲಿಕೆ ಮಟ್ಟದಲ್ಲಿ ಯೋಜನಾ ಘಟಕ ರೂಪಿಸಲಾಗಿದ್ದು, ಇದು ಶಾಶ್ವತವಾಗಿ ಇರುತ್ತದೆ.
ಯಾವತ್ತೂ ಇದು ಪ್ರಯೋಜನಕ್ಕೆ ಬರಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಮತ್ತು ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
DAKSHINA KANNADA
ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ!
ಪುತ್ತೂರು : ಪುತ್ತೂರಿನ ಬೆಟ್ಟಂಪ್ಪಾಡಿಯಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾ*ವನ್ನಪ್ಪಿದ್ದು, ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಮೃ*ತ ಯುವಕನ ತಾಯಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪಕ್ಕದ ಮನೆ ಕದ ತಟ್ಟಿದ ಮಗ; ಸಂಕೋಲೆ ಹಾಕಿ ಎಳೆತಂದ ತಾಯಿ :
ಬೆಟ್ಟಂಪ್ಪಾಡಿಯ ನಿವಾಸಿ ಚೇತನ್ (33) ಮೃ*ತ ಪಟ್ಟಿರುವ ಯುವಕ. ನಿನ್ನೆ ರಾತ್ರಿ ಕುಡಿದು ಮನೆಗೆ ಬಂದಿದ್ದ ಚೇತನ್ ತಾಯಿ ಜತೆ ಜಗಳವಾಡಿದ್ದ. ಬಳಿಕ ಪಕ್ಕದ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದ. ಈ ಬಗ್ಗೆ ಯೂಸುಫ್ ಅವರು ಚೇತನ್ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಕೂಡಲೇ ಯೂಸುಫ್ ಮನೆಗೆ ಬಂದ ಚೇತನ್ ತಾಯಿ ನಾಯಿಯನ್ನು ಕಟ್ಟುವ ಸಂಕೊಲೆಯನ್ನು ಚೇತನ್ ಸೊಂಟಕ್ಕೆ ಕಟ್ಟಿ ಮನೆಗೆ ಎಳೆದೊಯ್ದಿದ್ದರು. ಇದಕ್ಕೆ ಯೂಸುಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಸಾಥ್ ನೀಡಿದ್ದರು. ಎಳೆದೊಯ್ಯುವ ಸಂದರ್ಭದಲ್ಲಿ ಚೇತನ್ನ ಕುತ್ತಿಗೆಗೆ ಸಂಕೋಲೆ ಸುತ್ತಿಕೊಂಡಿದೆ ಎನ್ನಲಾಗಿದೆ. ಇದರಿಂದಾಗಿ ಚೇತನ್ ಸಾ*ವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ಚೇತನ್ ನೇಣು ಬಿಗಿದು ಸಾ*ವನ್ನಪ್ಪಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ; ವೀಡಿಯೋ, ಫೋಟೋ ಅಪ್ಲೋಡ್ ಮಾಡಿದ್ದಾತ ಅರೆಸ್ಟ್
ಮೃ*ತ ದೇಹ ನೋಡಿ ಅನುಮಾನಗೊಂಡ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕೊಂಡಿದ್ದರು. ಘಟನೆಗೆ ಸಂಬಂಧಿಸಿ ತಾಯಿ ಉಮಾವತಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಪೋಲೀಸರು ಮೃ*ತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ರವಾನಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.
DAKSHINA KANNADA
ಹೊಸ ಮನೆಗೆ ಸ್ಥಳಾಂತರಿಸುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ
ಮಂಗಳೂರು: ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿರಬೇಕು ಎನ್ನುವ ಕನಸು, ಆಸೆ ಇದ್ದೇ ಇರುತ್ತದೆ. ಮನೆ ಕಟ್ಟುವುದು ಆಗಲಿ ಅಥವಾ ಕೊಂಡುಕೊಳ್ಳುವುದಾಗಲಿ ಅದೇನು ಸುಲಭದ ಮಾತಲ್ಲ. ಬ್ಯಾಂಕ್ನಲ್ಲಿ, ಸ್ನೇಹಿತರಲ್ಲಿ, ಕುಟುಂಬದವರಲ್ಲಿ ಸಾಲ ಮಾಡಿ ಹೇಗೊ ಮನೆ ಖರೀದಿಸುತ್ತೇವೆ. ಆದರೆ ಕನಸಿನ ಮನೆ ವಾಸ್ತವಕ್ಕೆ ಬಂದಾಗ ಅದರಲ್ಲಿ ಆಗುವ ಖುಷಿಯೇ ಬೇರೆ.
ಮನೆ ಬದಲು ಮಾಡುವಾಗ ಈ ವಿಷಯ ನೆನಪಿಡಿ
ತಮ್ಮ ಹೊಸ ಮನೆಗೆ ಹೋಗುವ ಖುಷಿಯಲ್ಲಿ ಜನರು ಸಾಮಾನ್ಯವಾಗಿ ಕೆಲವು ವಿಷಯಗಳನ್ನು ಮರೆತು ಬಿಡುತ್ತಾರೆ. ಇದರಿಂದಾಗಿ ಅವರಿಗೆ ನಂತರದ ದಿನಗಳಲ್ಲಿ ಸಮಸ್ಯೆ ಆಗಬಹುದು. ನೀವು ಮನೆ ಬದಲು ಮಾಡುವಾಗ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ.
ಮನೆಯ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಿ
ನೀವು ಹೊಸ ಮನೆಗೆ ಸ್ಥಳಾಂತರಗೊಳ್ಳುತ್ತಿದ್ದರೆ ಮೊದಲು ನೀವು ದಿನ ಬಳಕೆಯ ವಿಷಯಗಳತ್ತ ಗಮನ ಕೊಡಬೇಕು. ಆದುದರಿಂದ ನಿಮ್ಮ ಮನೆಯ ಪ್ರತಿಯೊಂದು ನಳ್ಳಿಯಲ್ಲಿ ನೀರು ಬರುತ್ತಿದ್ದೇಯೋ, ವಾಶ್ ರೂಂ ಅನ್ನು ಚೆನ್ನಾಗಿ ಪರಿಶೀಲಿಸಿ, ಮನೆಯ ಫ್ಯಾನ್, ಲೈಟ್ ಸರಿಯಾಗಿ ಇದೆಯೋ ಎಂದು ಗಮನಿಸಿ. ಇದರಿಂದ ಹೊಸ ಮನೆಗೆ ಬಂದ ತಕ್ಷಣ ಯಾವೂದೇ ಸಮಸ್ಯೆ ಎದುರಾಗುವುದಿಲ್ಲ.
ಶುಚಿಗೊಳಿಸುವಿಕೆಯನ್ನು ಮುಂಚಿತವಾಗಿ ಮಾಡಿ
ಹೊಸ ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಒಮ್ಮೆ ಸ್ವಚ್ಛಗೊಳಿಸಬೇಕು. ಏಕೆಂದರೆ ವಸ್ತುಗಳನ್ನು ಸ್ಥಳಾಂತರಿಸಿದ ನಂತರ ನಿಮಗೆ ಸ್ವಚ್ಛಗೊಳಿಸಲು ಕಷ್ಟವಾಗಬಹುದು. ಮನೆಯನ್ನು ಬದಲಾಯಿಸಿದ ನಂತರವೂ ಕೊಳಕು ಕಾಣುತ್ತದೆ. ಹೀಗಾಗಿ ಹೊಸ ಮನೆಗೆ ಬಂದ ನಂತರ ಮೊದಲ ದಿನದಿಂದಲೇ ಮನೆಯನ್ನು ಶುಚಿಯಾಗಿಡಿ.
ಪ್ಯಾಕಿಂಗ್ ವಿಧಾನ
ಹೊಸ ಮನೆಗೆ ಬದಲಾಯಿಸುವ ಮೊದಲು ಹಳೆಯ ವಸ್ತುಗಳನ್ನು ಪ್ಯಾಕಿಂಗ್ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಆದ್ಧರಿಂದ ಸರಕುಗಳನ್ನು ಪ್ಯಾಕ್ ಮಾಡುವಾಗ ಪೆಟ್ಟಿಗೆಯಲ್ಲಿ ಹೆಸರನ್ನು ಬರೆಯಿರಿ. ಇದರಿಂದಾಗಿ ಬಾಕ್ಸ್ ತೆರೆಯುವಾಗ ಯಾವೂದೇ ಗೊಂದಲ ಉಂಟಾಗುವುದಿಲ್ಲ.
ಪೀಠೋಪಕರಣಗಳ ಬಗ್ಗೆಯೂ ಕಾಳಜಿ ವಹಿಸಿ
ಸ್ಥಳಾಂತರಗೊಳ್ಳುವ ಮೊದಲು, ಮನೆಯ ಪೀಠೋಪಕರಣಗಳು ನಿಮ್ಮ ಅಗತ್ಯಗಳಿಗೆ ಸರಿಹೊಂದುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ಪರಿಶೀಲಿಸಬೇಕು. ನಿಮಗೆ ಸರಿಹೊಂದುವ ಸ್ಥಳದಲ್ಲಿ ಹಾಗೂ ಕೆಲವೊಂದು ವಸ್ತುಗಳನ್ನು ವಾಸ್ತು ಪ್ರಕಾರವೇ ಇಡಬೇಕಾಗುತ್ತದೆ. ಆದ್ದರಿಂದ ಅದರ ಬಗ್ಗೆ ಕಾಳಜಿ ವಹಿಸಿ.
LATEST NEWS
ಪ್ರಜ್ವಲ್ ರೇವಣ್ಣ ಪ್ರಕರಣ; ವೀಡಿಯೋ, ಫೋಟೋ ಅಪ್ಲೋಡ್ ಮಾಡಿದ್ದಾತ ಅರೆಸ್ಟ್
ಚಿಕ್ಕಮಗಳೂರು : ಸದ್ಯ ಪ್ರಜ್ವಲ್ ಹೆಸರು ದೇಶದಾದ್ಯಂತ ಚಾಲ್ತಿಯಂತಿದೆ. ಆತ ಮಾಡಿರುವ ಕುಕೃತ್ಯಕ್ಕೆ ಆಕ್ರೋಶ ಕೇಳಿ ಬರುತ್ತಿದೆ. ಇದೀಗ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಬಂಧಿಸಲಾಗಿದೆ.
ಮೂಡುಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಬಂಧಿತ. ಆರೋಪಿ ಪ್ರಜ್ವಲ್, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದನು. ಪ್ರಜ್ವಲ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪ್ರಜ್ವಲ್ ಟ್ರೋಲ್ ಪೇಜ್ ಅಡ್ಮಿನ್ ಆಗಿದ್ದ. ಸದ್ಯ ಪ್ರಜ್ವಲ್ ರೇವಣ್ಣ ಲೈಂ*ಗಿಕ ದೌರ್ಜ*ನ್ಯ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಜರ್ಮನಿಗೆ ಎಸ್ಕೇಪ್ ಆಗಿದ್ದಾರೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ.
ಎಚ್ಚರಿಕೆ ನೀಡಿದ್ದ ಬಿ.ಕೆ.ಸಿಂಗ್ :
ಈ ಬಗ್ಗೆ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದರು. ಅಶ್ಲೀಲ ವಿಡಿಯೋಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೇ, ಅಂಥ ವ್ಯಕ್ತಿಗಳನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ : ಶಾಲಾ ಬಾಲಕಿಗೆ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ.! ಹೇಯ ಕೃತ್ಯ ಮೊಬೈಲ್ ನಲ್ಲಿ ಸೆರೆ
ಅಶ್ಲೀಲ ವಿಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದರು.
- LATEST NEWS4 days ago
ಐವರು ಮೆಡಿಕಲ್ ವಿದ್ಯಾರ್ಥಿಗಳು ನೀರುಪಾಲು…!
- DAKSHINA KANNADA6 days ago
ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಟ್ಟರೆ ಏನಾಗುತ್ತದೆ ನೋಡಿ..!
- DAKSHINA KANNADA6 days ago
ಮಂಗಳೂರು : ನಾಳೆಯಿಂದ ರೇಶನಿಂಗ್ ಆರಂಭ; ಎಲ್ಲೆಲ್ಲಿ ನೀರಿಲ್ಲ?
- FILM5 days ago
ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್ಗೆ ಏನಾಗಿದೆ? ಎಂದು ಹೇಳಿದ್ಯಾಕೆ?