Connect with us

LATEST NEWS

ಉಳ್ಳಾಲದಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ …!

Published

on

ಉಳ್ಳಾಲದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿ ಕೊಂಡಿದ್ದು, ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ಆತ್ಮಹತ್ಯೆ ತಾಣವೆಂಬ ಕಳಂಕದಿಂದ ಮುಕ್ತಿ ಪಡೆಯುವ ಹಂತದಲ್ಲಿದ್ದ ಉಳ್ಳಾಲದ ನೇತ್ರಾವತಿ ಸೇತುವೆ ಮತ್ತೆ ಸುದ್ದಿಯಲ್ಲಿದೆ.

2019 ರಲ್ಲಿ ಕೆಫೆ ಕಾಫಿ ಡೇ ಮಾಲೀಕ ಸಿದ್ದಾಥ್೯ ಚಿಕ್ಕಮಗಳೂರಿನಿಂದ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆ ಬಳಿಗೆ ಬಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸರಣಿ ಆತ್ಮಹತ್ಯೆಗಳೇ ಇಲ್ಲಿ ನಡೆದಿದ್ದವು. ಇದನ್ನು ಮನಗಂಡು ನದಿಗೆ ಹಾರಿ ಆತ್ಮಹತ್ಯೆ ಮಾಡುವುದನ್ನು ತಡೆಯಲು ಜಿಲ್ಲಾಡಳಿತವು ಮೂಡಾ ಅಭಿವೃದ್ಧಿ ಅನುದಾನದ ಮೂಲಕ 2020 ರಲ್ಲಿ ಸೇತುವೆಯ ಎರಡೂ ಬದಿ ತಡೆಬೇಲಿ ನಿರ್ಮಿಸಿತ್ತು. ಆ ಬಳಿಕ ಈ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಬಹುತೇಕ ನಿಂತು ಹೋಗಿದ್ದವು. ಇದೀಗ ಇಂದು ಕೆಫೆ ಕಾಫಿ ಡೇ ಮಾಲೀಕ ಸಿದ್ದಾಥ್೯ ತವರೂರು ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲ್ ಫಾಮ್೯ ನಿವಾಸಿ ಬಿ.ಎಸ್ ಶಂಕರ ಗೌಡ ಎಂಬವರ ಪುತ್ರ 37 ವರ್ಷ ಪ್ರಾಯದ ಪ್ರಸನ್ನ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಮಧ್ಯಾಹ್ನ ವೇಳೆ ತೊಕ್ಕೊಟ್ಟು ಕಡೆಯಿಂದ ಬಂದು ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿದ್ದಾರೆ. ಕೆಲವು ಮಂದಿ ಪ್ರತ್ಯಕ್ಷ ದರ್ಶಿಗಳು ತತ್‌ಕ್ಷಣ ರಕ್ಷಣೆಗೆ ಓಡಿ ಬಂದಿದ್ದರೂ ಅದಾಗಲೇ ನೀರು ಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲ ಕಾಲ ಅಡಚಣೆ ಉಂಟಾಗಿತ್ತು.

FILM

ಮಲತಂದೆಯಿಂದ ಹತ್ಯೆಯಾದ ಜಗ್ಗೇಶ್ ಸಿನೆಮಾ ನಟಿ..! 13 ವರ್ಷದ ಬಳಿಕ ಮಹತ್ವದ ತೀರ್ಪು

Published

on

ಮಂಗಳೂರು: ಜಗ್ಗೇಶ್ ಸಿನೆಮಾದ ನಾಯಕಿ ಲೈಲಾ ಖಾನ್ ಹತ್ಯೆ ಪ್ರಕರಣ್ಕಕೆ 13 ವರ್ಷಗಳ ಬಳಿಕ ಮಹತ್ವದ ತೀರ್ಪು ಹೊರಬಂದಿದೆ.  ಲೈಲಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಸೆಷನ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೈಲಾ ಮಲತಂದೆ ಪರ್ವೀನ್ ಪ್ರಕರಣದ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ.

laila khan

2011ರ ಫೆಬ್ರವರಿಯಲ್ಲಿ ಮುಂಬೈಯ ಇಗ್ತಪುರಿಯಲ್ಲಿರುವ ಬಂಗಲೆಯಲ್ಲಿ ನಟಿ ಲೈಲಾ ಖಾನ್ ಹಾಗೂ ಆಕೆಯ ತಾಯಿ ಸೆಲೀನಾ ಹಾಗೂ ನಾಲ್ವರು ಒಡಹುಟ್ಟಿದವರು ಸೇರಿ ಒಟ್ಟು 6 ಮಂದಿಯನ್ನು ಪರ್ವೀನ್ ತಾಕ್ ಬರ್ಬರವಾಗಿ ಹತ್ಯೆ ಮಾಡಿದ್ದ. ಅಚ್ಚರಿ ಎಂದರೆ ಪರ್ವೀನ್ ತಾಕ್ ಲೈಲಾ ಖಾನ್‌ ತಾಯಿ ಸೆಲೀನಾ ಅವರ ಮೂರನೇ ಪತಿ. ಲೈಲಾ ತಾಯಿ ಸೆಲೀನಾರವರ ಜಮೀನಿಗೆ ಸಂಬಂಧಪಟ್ಟು ಈ ಕೃತ್ಯ ನಡೆದಿದೆ. ತಾಯಿ, ಲೈಲಾ ಸೇರಿದಂತೆ ನಾಲ್ವರು ಒಡಹುಟ್ಟಿದವರನ್ನು ಪೆರವಿನ್ ಬರ್ಬರ ಹತ್ಯೆಗೈದು ಪರಾರಿಯಾಗಿದ್ದ. 20212ರಲ್ಲಿ ಈತನನ್ನು ಬಂಧಿಸಲಾಗಿತ್ತು. ಇದೀಗ ಕೋರ್ಟ್ ಪೆರ್ವಿನನ್ನು ದೋಷಿ ಎಂದು ತೀರ್ಮಾನಿಸಿದ್ದು, ಮೇ.14ರಂದು ಶಿಕ್ಷೆ ಪ್ರಕಟವಾಗಲಿದೆ.

ಮುಂದೆ ಓದಿ..;  ಇಂಡೊನೇಷಿಯಾದಲ್ಲಿ ತುಳು ಮಾತನಾಡಿದ ಡಾ ಬ್ರೋ..! ಸಖತ್ ವೈರಲ್ ಆಯ್ತು ವೀಡಿಯೋ

ಘಟನೆ ವಿವರ:

ಲೈಲಾ ಖಾನ್, ಆಕೆಯ ತಾಯಿ ಸೆಲೀನಾ ಮತ್ತು ಒಡಹುಟ್ಟಿದವರಾದ ಆಮಿನಾ ಅವಳಿಗಳಾದ ಝಾರ, ಇಮ್ರಾನ್, ಕಸಿನ್ ರೇಷ್ಮಾ ನಾಪತ್ತೆಯಾಗಿದ್ದರೆಂದು 2011ರಲ್ಲಿ ಲೈಲಾ ಖಾನ್ ತಂದೆ ನಾದಿರ್ ಪಟೇಲ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು ತನಿಖೆ ಆರಂಭ ಮಾಡ್ತಾರೆ. ನಾಸಿಕ್ ಬಳಿಯ ಇಗ್ತಪುರಿಯಲ್ಲಿರುವ ಕುಟುಂಬದ ತೋಟದ ಮನೆಯನ್ನು ಅಧಿಕಾರಿಗಳು ಪರಿಶೀಲಿಸಿದಾಗ ಆ ಬಂಗಲೆ ಬೆಂಕಿಯಲ್ಲಿ ಭಾಗಶಃ ಆಹುತಿಯಾಗಿತ್ತು. ಅಲ್ಲದೆ ಲೈಲಾ ಖಾನ್‌ ಅವರ ಮೊಬೈಲ್‌ ನಾಪತ್ತೆಯಾಗುವ ವೇಳೆ ನಾಸಿಕ್‌ನಲ್ಲೇ ಇತ್ತು ಎನ್ನುವುದು ಕಂಡು ಬಂದಿತ್ತು. ಇದೇ ವೇಳೆ ಲೈಲಾ ಖಾನ್‌ಗೆ ಸೇರಿದ ವಾಹನ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿತ್ತು. ಇನ್ನು ಲೈಲಾ ಖಾನ್ ಮಲತಂದೆ ಪರ್ವೀನ್ ತಾಕ್ ಮೂಲತಃ ಕಾಶ್ಮೀರದವನು. ಹೀಗಾಗಿ ಪೊಲೀಸರಿಗೆ ಆತನ ಮೇಲೆ ಸಂಶಯ ಇನ್ನೂ ಬಲವಾಗಿತ್ತು. ಬಳಿಕ ಆತನನ್ನು ಬಂಧಿಸಲಾಯಿತು. ಈ ವೇಳೆ ಆತ ಆಸ್ತಿ ವಿಚಾರದಲ್ಲಿ ಕೊಲೆ ಮಾಡಿರುವ ಸಂಗತಿ ಹೊರ ಬಿದ್ದಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಸೆಲೀನಾ ಅವರ ಇಬ್ಬರು ಮಾಜಿ ಪತಿಯರು ಸೇರಿದಂತೆ ಸುಮಾರು 40 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.

ಜಗ್ಗೇಶ್ ನಟನೆಯ ಕನ್ನಡ ಸಿನೆಮಾ 2002ರಲ್ಲಿ ಬಿಡುಗಡೆಯಾದ ‘ಮೇಕಪ್’ ಚಿತ್ರದಲ್ಲಿ ಲೈಲಾ ಖಾನ್ ನಾಯಕಿಯಾಗಿ ನಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಇದು ಅವರ ಮೊದಲ ಹಾಗೂ ಕೊನೆಯ ಚಿತ್ರವಾಗಿದೆ. ಲೈಲಾ 2008ರಲ್ಲಿ ರಾಜೇಶ್‌ ಖನ್ನಾ ನಟನೆಯ ʼವಫಾ: ಎ ಡೆಡ್ಲಿ ಲವ್‌ ಸ್ಟೋರಿʼ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಲೈಲಾ ಬಾಂಗ್ಲಾ ದೇಶ ಮೂಲದ ಮುನೀರ್‌ ಖಾನ್‌ ಎನ್ನುವವರನ್ನು ಮದುವೆಯಾಗಿದ್ದರು ಎನ್ನಲಾಗಿದೆ.

Continue Reading

FILM

ಬದುಕುಳಿವ ಛಾನ್ಸ್ ಇದ್ದಿದ್ದು ಕೇವಲ ಶೇ. 30 ರಷ್ಟು…ನಿತ್ಯ ಜಗಳ…ಗಾಬರಿ; ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ಗೆದ್ದ ಕಥೆ ಇಲ್ಲಿದೆ

Published

on

ಮುಂಬೈ : ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಅನೇಕ ಮಂದಿ ಬಳಲುತ್ತಿದ್ದಾರೆ. ಕೆಲವರು ಇಹಲೋಕ ತ್ಯಜಿಸಿದ್ದಾರೆ. ಇನ್ನು ಕೆಲವರು ಕ್ಯಾನ್ಸರ್ ಗೆ ಸೆಡ್ಡು ಹೊಡೆದು ಜಯಿಸಿದವರಿದ್ದಾರೆ. ಕ್ಯಾನ್ಸರ್ ಗೆ ಸಾಮಾನ್ಯ ವ್ಯಕ್ತಿ ಮಾತ್ರವಲ್ಲ ಸೆಲೆಬ್ರಿಟಿಗಳೂ ತುತ್ತಾಗಿದ್ದಾರೆ. ಅವರಲ್ಲಿ ಸೋನಾಲಿ ಬೇಂದ್ರೆಯೂ ಒಬ್ಬರು. ಸೋನಾಲಿ ಬೇಂದ್ರೆ ಕ್ಯಾನ್ಸರ್ ನ್ನು ಜಯಿಸಿದ್ದಾರೆ.

ಧೈರ್ಯ ತುಂಬಿದ ನಟಿ :

ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ನ್ನು ಯಶಸ್ವಿಯಾಗಿ ಜಯಿಸಿದ್ದಾರೆ. ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಆರು ವರ್ಷಗಳ ಹಿಂದೆ ಸೋನಾಲಿ ಬೇಂದ್ರೆ ಅವರನ್ನು ಕ್ಯಾನ್ಸರ್ ಖಾಯಿಲೆ ಅಪ್ಪಿಕೊಂಡಿತ್ತು. ಆಗ ಆಕೆಗೆ 49 ವರ್ಷ ವಯಸ್ಸು.

ಸಾಮಾನ್ಯವಾಗಿ ಕ್ಯಾನ್ಸರ್ ಎಂದಾಕ್ಷಣ ಭಯ ಆವರಿಸಿಕೊಳ್ಳುತ್ತೆ. ಆದರೆ, ಸೋನಾಲಿ ಧೃತಿಗೆಡಲಿಲ್ಲ. ಯಾವಾಗ ತನಗೆ ಕ್ಯಾನ್ಸರ್ ಇದೆ ಅಂತ ಗೊತ್ತಾಗಿತ್ತೋ ಅಂದೇ ಆಕೆ ತನ್ನ ಪರಿಸ್ಥಿತಿ ಮತ್ತು ಗುಣಮುಖವಾಗುವ ವಿಚಾರವಾಗಿ ಬಹಿರಂಗವಾಗಿ ಚರ್ಚೆ ಮಾಡಿದ್ದರು. ಆ ಮೂಲಕ ಕ್ಯಾನ್ಸರ್ ಪೀಡಿತರಿಗೂ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದರು.

ಇದೀಗ ಸೊನಾಲಿ ಬೇಂದ್ರೆ ಮೇ 3 ರಂದು ಆರಂಭವಾಗಿರುವ ಝೀ ಟಿವಿಯ ದಿ ಬ್ರೋಕನ್ ನ್ಯೂಸ್ 2 ನೊಂದಿಗೆ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿದ್ದಾರೆತಾನು ಕ್ಯಾನ್ಸರ್ ಜೊತೆ ಹೇಗೆ ಹೋರಾಡಿದೆ ಎಂಬುದರ ಕುರಿತು ಆಕೆ ಬಹಿರಂಗವಾಗಿ ಮಾತನಾಡಿದ್ದಾರೆ.

ನಿತ್ಯ ಜಗಳ…ಗಾಬರಿ…ಕ್ಯಾನ್ಸರ್ ಜಯಿಸಿದ್ದು ಹೇಗೆ?

ಕ್ಯಾನ್ಸರ್ ನಿಂದ ಬಳಲಿದ ನಟಿ ಗುಣಮುಖರಾಗಿದ್ದು ಹೇಗೆ ಅನ್ನೋದನ್ನು ಸಂದರ್ಶನವೊಂದರಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ. ರಿಯಾಲಿಟಿ ಶೋ ಚಿತ್ರೀಕರಣದ ಸಮಯದಲ್ಲಿ ನನಗೆ ಕ್ಯಾನ್ಸರ್ ಇದೆ ಅನ್ನೋದು ಗೊತ್ತಾಗಿತ್ತು. ನನಗೆ ಇದು ಆಶ್ಚರ್ಯದ ವಿಚಾರವಾಗಿದ್ದು, ನನಗೆ ಕ್ಯಾನ್ಸರ್ ಹೇಗೆ ಬಂತು ಅನ್ನೋ ಗೊಂದಲಕ್ಕೆ ಬಿದ್ದಿದ್ದೆ. ಆರಂಭದಲ್ಲಿ ಇದೊಂದು ಆರಂಭ ಅಂತ ಗಾಬರಿಯಾಗಿಲ್ಲವಾದ್ರೂ ಪರೀಕ್ಷೆಗಳು ಮುಂದುವರೆದಾಗ ಇದು ಗಂಭೀರ ಅನ್ನೋದು ಗೊತ್ತಾಗಿತ್ತು. ನನ್ನ ಪತಿ ಮತ್ತು ವೈದ್ಯರ ಮುಖದಲ್ಲೂ ಆ ಗಾಬರಿಯನ್ನು ನಾನು ಗುರುತಿಸಿದ್ದೆ. ಕ್ಯಾನ್ಸರ್ ನನ್ನ ದೇಹವನ್ನು ವ್ಯಾಪಿಸಿಕೊಂಡಿದೆ ಅನ್ನೋದು ನನಗೆ ಆಗ ಸ್ಪಷ್ಟವಾಗಿ ಅರ್ಥವಾಗಿತ್ತು.

ಕ್ಯಾನ್ಸರ್ ಇದೆ ಅಂತ ಗೊತ್ತಾದಾಗಿನಿಂದ ಸೊನಾಲಿ ಬೇಂದ್ರೆ ಭಯವನ್ನು ದೂರಮಾಡಲು ಉಪಾಯ ಹೂಡಿದ್ದರು. ಅದೇ ನಿದ್ದೆ ಮಾಡುವುದು. ನಿದ್ರೆ ಮಾಡುವ ಮೂಲಕ ಅವರು ಕ್ಯಾನ್ಸರ್ ಭಯವನ್ನು ಮನಸ್ಸಿನಿಂದ ಕಿತ್ತು ಹಾಕಲು ಪ್ರಯತ್ನಪಟ್ಟಿದ್ದರಂತೆ. ಇನ್ನು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಕಾರಣ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು.

ಇದನ್ನೂ ಓದಿ : “ನಿವೇದಿತಾಜೈನ್”ಗೆ ಸಾ*ವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?

ಮಗುವನ್ನು ಬಿಟ್ಟು ವಿದೇಶಕ್ಕೆ ಚಿಕಿತ್ಸೆಗೆ ಹೋಗಬೇಕಾಗಿ ಬಂದ ದಿನ ಬಹಳ ದುಃಖಕರವಾಗಿತ್ತು ಎಂದಿದ್ದಾರೆ. ನಾನು ಬದುಕುವುದು ಕೇವಲ 30 ಶೇಕಡಾ ಮಾತ್ರ ಇದೆ ಅಂತ ಗೊತ್ತಾದಾಗ ವೈದ್ಯರ ಜೊತೆ ತಾಳ್ಮೆ ಕಳೆದುಕೊಂಡಿದ್ದೆ ಎಂದು ಹೇಳಿದ್ದಾರೆ.
ನಾನು ವೈದ್ಯರಲ್ಲಿ ಪದೇ ಪದೇ ನನಗೆ ಕ್ಯಾನ್ಸರ್ ಬರಲು ಹೇಗೆ ಸಾಧ್ಯ ಎಂದು ಕೇಳುತ್ತಿದ್ದೆ. ಆದ್ರೆ ಅವರು ನನಗೆ ನಿಧಾನವಾಗಿ ಎಲ್ಲಾ ಸತ್ಯಗಳನ್ನು ಹೇಳುತ್ತಿದ್ದರು. ಆ ಕಾರಣದಿಂದ ನನ್ನನ್ನು ನಾನು ಬದಲಾಯಿಸಿಕೊಂಡೆ ಎಂದು ಹೇಳಿದ್ದಾರೆ.

ಬಳಿಕ ಚಿಕಿತ್ಸೆಯನ್ನು ಮುಂದುವರೆಸಿದ್ದ ಸೊನಾಲಿ ಬೇಂದ್ರೆ ದೇಹ ಸಾಕಷ್ಟು ಜರ್ಜರಿತವಾಗಿತ್ತು ಎಂದು ತಿಳಿಸಿದ್ದಾರೆ. ಇದೀಗ ಕ್ಯಾನ್ಸರ್ ನ್ನು ಗೆದ್ದು ಬಂದಿದ್ದಾರೆ. ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ತಮ್ಮ ಕ್ಯಾನ್ಸರ್ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Continue Reading

FILM

ಇಂಡೊನೇಷಿಯಾದಲ್ಲಿ ತುಳು ಮಾತನಾಡಿದ ಡಾ ಬ್ರೋ..! ಸಖತ್ ವೈರಲ್ ಆಯ್ತು ವೀಡಿಯೋ

Published

on

ಮಂಗಳೂರು: ಡಾ ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಯಾರಿಗೆ ಗೊತ್ತಿಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಡಾ ಬ್ರೋ ಅಂದ್ರೆ ಎಲ್ಲರಿಗೂ ಚಿರಪರಿಚಿತ. ಹೌದು, ಪ್ರಪಂಚದ ನಾನಾ ದೇಶಗಳಿಗೆ ಪ್ರವಾಸವನ್ನು ಕೈಗೊಂಡು ಅಲ್ಲಿನ ಆಚಾರ ವಿಚಾರ ಹಾಗೂ ಸ್ಥಳಗಳನ್ನು ಎಲ್ಲರಿಗೂ ಪರಿಚಯ ಮಾಡಿಸ್ತಾರೆ. ಇನ್ನು ಕನ್ನಡದಲ್ಲಿ ಅವರ ಭಾಷಾ ಹಿಡಿತ ಎಲ್ಲರಿಗೂ ಅಚ್ಚುಮೆಚ್ಚು. ಅವರದ್ದೇ ಆದ ಶೈಲಿಯಲ್ಲಿ ಮನಮುಟ್ಟುವಂತೆ ಸ್ಪಷ್ಟ ವಿವರಣೆ ನೀಡ್ತಾರೆ.

ಇಂಡೋನೇಷ್ಯಾದಲ್ಲಿ ತುಳು ಮಾತಾನಾಡಿದ ಡಾ.ಬ್ರೋ:

ಡಾ ಬ್ರೋ ಇಂಡೋನೇಷಿಯಾ ಪ್ರವಾಸ ಕೈಗೊಂಡಿರುವ ಸಮಯದಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ್ದಾರೆ. ಅಲ್ಲಿನ ಜನರಲ್ಲಿ ತುಳು ಭಾಷೆಯಲ್ಲಿ ‘ಹಾಯ್ ಎಂಚ ಉಲ್ಲರ್’ ಎಂದು ಕೇಳಿದ್ದು ಇದೀಗ  ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.   ಈ ಹಿಂದೆ ಡಾ. ಬ್ರೋ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ‘ಎಂಚ ಉಲ್ಲರ್’ ಎಂಬ ಪದವನ್ನು ತುಳು ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ಕಲಿಸಿಕೊಟ್ಟಿದ್ದರು.

gagan

ಇದೀಗ ಗಗನ್ ಶ್ರೀನಿವಾಸ್‌ರವರು ಇಂಡೋನಿಷಿಯಾದ ಜನರಿಗೆ ತುಳುವಿನಲ್ಲಿ ‘ಎಂಚ ಉಲ್ಲರ್’ ಎಂದು ಕೇಳಿದ್ದು ಇವರ ತುಳು ಭಾಷಾ ಪ್ರೇಮಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಯ್ ಹೆಲೋ..ಎಂದು ಹೇಳದೆ ತುಳುವಿನಲ್ಲಿ ಎಂಚ ಉಲ್ಲರ್ ಎಂದು ಕೇಳಿದ್ದು ಜನರಲ್ಲಿ ಸಂತಸ ವ್ಯಕ್ತವಾಗಿದೆ. ಇದೀಗ ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವರ್ತೂರು ಸಂತೋಷ್​​ ತೋಟದಲ್ಲಿ ಮತ್ತೆ ಸೇರಿದ ಬಿಗ್​​ಬಾಸ್​ ಸ್ಪರ್ಧಿಗಳು

ಗಗನ್ ಶ್ರೀನಿವಾಸ್ 2018 ರಲ್ಲಿ ಡಾ. ಬ್ರೋ ಎಂಬ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ಅನ್ನು
ಪ್ರಾರಂಭ ಮಾಡ್ತಾರೆ. ಆರಂಭದ ದಿನಗಳಲ್ಲಿ ಹಾಸ್ಯ ವೀಡಿಯೊಗಳು ಮತ್ತು ಸಂದರ್ಶನ ವೀಡಿಯೊಗಳನ್ನು ಮಾಡುತ್ತಿದ್ದರು, ನಂತರ ಅವರು ಕರ್ನಾಟಕದಲ್ಲಿ ಮಾತ್ರ ವ್ಲಾಗ್ ಮಾಡಲು ಪ್ರಾರಂಭಿಸಿದರು. ನಿಧಾನವಾಗಿ ಭಾರತದೆಲ್ಲೆಡೆ ವ್ಲಾಗ್ ಮಾಡಲು ಪ್ರಾರಂಭಿಸಿದರು. ಇದೀಗ ಭಾರತವೂ ಸೇರಿ ಪ್ರಪಂಚದ ಮೂಲೆ ಮೂಲೆಗಳಿಗೆ ಸಂಚರಿಸಿ ವ್ಲಾಗ್ ಮಾಡುತ್ತಿದ್ದಾರೆ.

Continue Reading

LATEST NEWS

Trending