Connect with us

    STATE

    ಇಪ್ಪತ್ನಾಲ್ಕು ಕರುಗಳಿಗೆ ಜನ್ಮ ನೀಡಿದ ಕಾಮಧೇನು: ಮಲೆನಾಡು ಗಿಡ್ಡ ತಳಿಯ ‘ನಾಗಿ’ ಇನ್ನಿಲ್ಲ

    Published

    on

    ಶಿವಮೊಗ್ಗ: ಹಸುಗಳಲ್ಲಿ ಗರಿಷ್ಠ ಭಾರತೀಯ ತಳಿಗಳು 22 ವರ್ಷಗಳ ಕಾಲ ಬದುಕುತ್ತವೆ. ಆದರೆ, ಸುಬ್ರಾವ್ ಅವರ ‘ನಾಗಿ’ ಎಂಬ ಹಸು 32 ವರ್ಷ ಬದುಕಿದ್ದು ಭಾನುವಾರ ಸಾವನ್ನಪ್ಪಿದೆ. ತನ್ನ ಜೀವಿತಾವಧಿಯಲ್ಲಿ 24 ಕರುಗಳಿಗೆ ಜನ್ಮ ನೀಡಿದೆ.

    ಮಲೆನಾಡು ಗಿಡ್ಡ ತಳಿಯ ಹಳ್ಳಿಕಾರು ಹಸು ಹೆಚ್ಚು ಅಂದರೆ 22 ವರ್ಷಗಳ ಕಾಲ ಬದುಕಬಹುದು.

    ಆದರೆ, ಸಾಗರ ತಾಲೂಕು ಎಡಜಿಗಳೆಮನೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ಆನೆಗೊಳಿ ಗ್ರಾಮದ ಗಿಡ್ಡ ತಳಿಯ ನಾಗಿ ಎಂಬ ಹೆಸರಿನ ಹಸುವೊಂದು ಪಶು ವೈದ್ಯಕೀಯ ಲೋಕಕ್ಕೆ ಅಚ್ಚರಿ ಎಂಬಂತೆ 32 ವರ್ಷದ ಸುದೀರ್ಘ ಜೀವನ ಮುಗಿಸಿ ಕೊನೆಯುಸಿರೆಳೆದಿದೆ.

    ಮಲೆನಾಡು ಗಿಡ್ಡ ಅಂದರೆ, ಅವು ಮನೆಯಲ್ಲಿ ಮೇಯುವುದೇ ಇಲ್ಲ. ಇವು ಹೆಚ್ಚಾಗಿ ಗುಡ್ಡ ಏರಿ, ಹಳ್ಳದಾಟಿ ಮೇಯುವಂತಹ ನಾಟಿ ಹಸುಗಳು.

    ಈ ಗೋವು ಎಲ್ಲೂ ಬೇಲಿ ಹಾರದೆ, ಅತ್ಯಂತ ಸೌಮ್ಯ ಸ್ವಭಾವದಿಂದ ಜೀವಿಸಿದೆ. ಅಲ್ಲದೆ, ಒಂದು ದಿನಕ್ಕೆ ಮೂರುವರೆ ಲೀಟರ್ ಹಾಲು ನೀಡುತ್ತಿತ್ತು.

    ನಾಗಿ ಕಳೆದ ತಿಂಗಳು ಕೊಟ್ಟಿಗೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿತ್ತು. ಈ ವೇಳೆ ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು.

    ಅದರೂ ಕೂಡ ಕಳೆದ ಕೆಲ ದಿನಗಳ ಕಾಲ ಮೇಯುವುದನ್ನು ಬಿಟ್ಟಿತ್ತು. ಭಾನುವಾರ ನಾಗಿ ತನ್ನ ಬದುಕಿನ ಪಯಣ ಮುಗಿಸಿದ್ದಾಳೆ.

    ಅಂದಹಾಗೆ ನಾಗಿ ಸೇರಿದಂತೆ ತಮ್ಮ ಮನೆಯ ಎಲ್ಲಾ ಹಸುಗಳ ಬಗ್ಗೆ ಸುಬ್ರಾವ್ ಅವರು ದಾಖಲಾತಿಯನ್ನಿಟ್ಟು‌ಕೊಂಡಿದ್ದಾರೆ.

    ಇಂತಹ ಅಪರೂಪದ ತಳಿಗಳ ನ್ಯಾಷನಲ್ ಡೈರಿ ಆಫ್ ಇಂಡಿಯಾದ ಡಾ. ರಮೇಶ್ ಅವರು ನಾಗಿ ತಳಿಯ ಬಗ್ಗೆ ಹಾಗೂ ನಾಗಿಯ ಜೀನ್ಸ್ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

    LATEST NEWS

    ಭಾವಿ ಪತ್ನಿಗೆ ಪರ ಪುರುಷನೊಂದಿಗೆ ಅಕ್ರಮ ಸಂಬಂಧ; ವಿಷಯ ತಿಳಿದ ಯುವಕ ಏನ್ಮಾಡಿದ ಗೊತ್ತಾ!?

    Published

    on

    ಮಂಗಳೂರು/ ವಿರಾಜಪೇಟೆ: ಆತ ಮದುವೆಯ ಕನಸು ಕಂಡಿದ್ದ. ವೈವಾಹಿಕ ಜೀವನದ, ಸುಖಮಯ ಬದುಕಿನ ಆಸೆ ಹೊತ್ತಿದ್ದ. ಆದರೆ, ಕನಸು ನನಸಾಗಿ ಅರಳಿ ನಲಿವ ಮುನ್ನವೇ ಬಾಡಿದೆ. ಕಾರಣ ಅವನು ವಿವಾಹವಾಗಲು ಹೊರಟಿದ್ದ ಯುವತಿಯ ಬಗ್ಗೆ ಆತನಿಗೆ ಸಿಕ್ಕ ಮಾಹಿತಿ.

    ದಾಂಪತ್ಯದ ಕನಸು ಮುರಿದದ್ದು ಯಾಕೆ?

    ಮೂಲತಃ ಅಸ್ಸಾಂ ರಾಜ್ಯದ ದಗಲ್ ಪುರಿಯ ಮಡ್ ಗಾಂ ನಿವಾಸಿಯಾಗಿದ್ದ ಕೂಲಿ ಕಾರ್ಮಿಕ ಅಜರುಲ್ ಇಸ್ಲಾಂ ಕೊಡಗಿನ ವಿರಾಜಪೇಟೆ ನಗರದ ಮೊಗರಗಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ.
    ಅಜರುಲ್ ವಿವಿಧ ಸ್ಥಳಗಳಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಕಳೆದ ಮೂರು ತಿಂಗಳುಗಳಿಂದ ನಗರದ ಕೋಳಿ ಮಾಂಸ ಅಂಗಡಿಯೊಂದರಲ್ಲಿ ಕೋಳಿ ಶುಚಿಗೊಳಿಸುವ ಕೆಲಸ ಮಾಡುತ್ತಿದ್ದ.

    ಆತನಿಗೆ ಅಸ್ಸಾಂನ ತನ್ನದೇ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಎರಡೂ ಮನೆಯವರ ಒಪ್ಪಿಗೆಯೂ ಇತ್ತು. ದಿನ ಬಿಟ್ಟು ದಿನ ಯುವತಿಯೊಂದಿಗೆ ಮೃತ ಯುವಕ ದೂರವಾಣಿ ಮೂಲಕ ಮಾತನಾಡುತ್ತಿದ್ದ. ಅದರೊಂದಿಗೆ ಗ್ರಾಮದ ಸ್ನೇಹಿತರೊಂದಿಗೂ ಮಾತನಾಡುತಿದ್ದ. ಅದೇನಾಯ್ತೋ ಗೊತ್ತಿಲ್ಲ,
    ಕೆಲವು ದಿನಗಳ ಹಿಂದೆ ಯುವತಿಯ ನಡವಳಿಕೆಯ ಬಗ್ಗೆ ಯುವಕನಿಗೆ ಸಂಶಯ ಮೂಡಿದೆ. ಸ್ನೇಹಿತರ ಬಳಿ ಯುವತಿಯ ಚಾರಿತ್ರ್ಯದ ಬಗ್ಗೆ ವಿಚಾರಿಸಿದ್ದಾನೆ. ತಾನು ಮದುವೆಯಾಗುತ್ತಿರುವ ಹುಡುಗಿ ಪರ ಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬುದು ತಿಳಿದರೆ ಹೇಗಾಗ ಬೇಡ ಹೇಳಿ? ಇಲ್ಲಾಗಿದ್ದೂ ಅದೇ.

    ದುಡುಕು ನಿರ್ಧಾರ ತಗೊಂಡನೇ ಯುವಕ?

    ಆಕೆಯ ಬಗ್ಗೆ ತಿಳಿದ ಯುವಕ ಚಿಂತೆಗೀಡಾಗಿದ್ದ. ಸೆ. 27ರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದಾನೆ. ಇಲಿ ಪಾಷಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಳಿಗೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಸ್ನೇಹಿತರು ಹಣದ ಬಗ್ಗೆ ಮಾತನಾಡಲು ದೂರವಾಣಿ ಕರೆ ಮಾಡಿದ್ದಾರೆ. ಹಲವು ಬಾರಿ ಕರೆ ಮಾಡಿದರು ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಸಂಶಯಗೊಂಡು ಮನೆಗೆ ಬಂದ ಸ್ನೇಹಿತರಿಗೆ ತಮ್ಮ ಗೆಳೆಯ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ. ಹಸೆಮಣೆ ಏರಬೇಕಿದ್ದ ಮಗ ಮಸಣದ ಹಾದಿ ಹಿಡಿದಿದ್ದು, ಪೋಷಕರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

    Continue Reading

    bangalore

    ಅಬ್ಬಬ್ಬಾ! ಖತರ್ನಾಕ್ ಗರ್ಲ್ ಫ್ರೆಂಡ್; ಪ್ರಿಯಕರನನ್ನೇ ರಾಬರಿ ಮಾಡಿಸಿದ ಯುವತಿ, ಯಾಕೆ ಗೊತ್ತಾ!?

    Published

    on

    ಮಂಗಳೂರು/ ಬೆಂಗಳೂರು: ಇತ್ತೀಚೆಗೆ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕೆಲವೊಂದು ಪ್ರಕರಣಗಳು ವಿಚಿತ್ರವಾಗಿರುತ್ತವೆ. ಇಲ್ಲೊಬ್ಬಾಕೆ ಪ್ರಿಯತಮನ ಮೊಬೈಲ್‌ನಲ್ಲಿದ್ದ ತನ್ನ ಫೋಟೋ ಹಾಗೂ ವೀಡಿಯೊಗಳನ್ನು ಡಿಲೀಟ್ ಮಾಡಿಸಲೆಂದು ರಾಬರಿ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸಿನಿಮೀಯ ರೀತಿ ಪ್ರಿಯತಮೆಯೇ ಪ್ರಿಯಕರನ ಮೇಲೆ ರಾಬರಿ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ.

    ಬೆಳ್ಳಂದೂರು ಪೊಲೀಸರು ಟೆಕ್ಕಿ ಶ್ರುತಿ ಸೇರಿ ಮೂವರನ್ನು ಬಂಧಿಸಿದ್ದಾರೆ.

    ಆ್ಯಕ್ಸಿಡೆಂಟ್ – ಡ್ರಾಮಾ :
    ಕಳೆದ ಸೆಪ್ಟೆಂಬರ್ 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶ್ರುತಿ ಭೇಟಿಗೆ ತೆರಳಿದ್ದ. ಭೇಟಿಯಾಗಿ ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದ ಅಪರಿಚಿತರು ವಂಶಿಕೃಷ್ಣರೆಡ್ಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಜಗಳ ತೆಗೆದ ಅಪರಿಚಿತರು ಆತನ ಬಳಿಯಿದ್ದ ಮೊಬೈಲ್ ಕಸಿದಿದ್ದರು. ಅಲ್ಲದೇ, ವಂಶಿ ಜತೆಯಲ್ಲಿಯೇ ಇದ್ದ ಶ್ರುತಿಯ ಮೊಬೈಲ್‌ ಅನ್ನು ಕಸಿದುಕೊಂಡಿದ್ದರು. ಬಳಿಕ ದೂರು ಕೊಡುವುದು ಬೇಡ ಮೊಬೈಲ್ ಹೋದರೆ ಹೋಯಿತು ಎಂದು ಬಾಯ್‌ಫ್ರೆಂಡ್‌ ವಂಶಿ ಮುಂದೆ ಶ್ರುತಿ ನಾಟಕವಾಡಿದ್ದಾಳೆ.
    ಆದರೆ, ಇಷ್ಟಕ್ಕೆ ಸುಮ್ಮನಾಗದ ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ತೆರಳಿ ಕಾರಿನ ನಂಬರ್ ಸಮೇತ ದೂರು ನೀಡಿದ್ದರು.
    ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

    ಇದನ್ನು ಓದಿ:ಪುತ್ತೂರು ಕಾಂಗ್ರೆಸ್‌ ಮುಖಂಡನ ಅಶ್ಲೀ*ಲ ವೀಡಿಯೋ ವೈರಲ್‌..!

    ಬೇಡವಾಗಿದ್ದ ಬಾಯ್ ಫ್ರೆಂಡ್ :

    ಇತ್ತೀಚೆಗೆ ಪ್ರಿಯತಮ ವಂಶಿಕೃಷ್ಣನಿಂದ ದೂರವಾಗಲು ಶ್ರುತಿ ಯತ್ನಿಸಿದ್ದಳು. ಆದರೆ, ವಂಶಿಕೃಷ್ಣನ ಮೊಬೈಲ್‌ನಲ್ಲಿ ಶ್ರುತಿಯ ಫೋಟೋಗಳಿದ್ದವು. ನೇರವಾಗಿ ಹೇಳಿದರೆ ಎಲ್ಲಿ ವಂಶಿಕೃಷ್ಣ ವಿರೋಧ ವ್ಯಕ್ತಪಡಿಸುತ್ತಾನೋ ಎಂಬ ಭಯದಿಂದ ಶ್ರುತಿ ಮೊಬೈಲ್ ರಾಬರಿ ಮಾಡುವ ಯೋಜನೆ ರೂಪಿಸಿದ್ದಾರೆ. ಸದ್ಯ ಆರೋಪಿ ಟೆಕ್ಕಿ ಶ್ರುತಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದು, ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    Continue Reading

    LATEST NEWS

    ಫಾರ್ಚೂನರ್ ಕಾರಿನಲ್ಲಿ ಬಂದು ಹಸು ಕಳ್ಳತನ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Published

    on

    ಮಂಗಳೂರು/ಶಿವಮೊಗ್ಗ : ಫಾರ್ಚೂನರ್ ಕಾರಿನಲ್ಲಿ ಬಂದ ಖದೀಮರು ಹಸುವನ್ನು ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ. ಹಸು ಕಳವು ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    KA 01 MZ 5843 ನಂಬರಿನ ಬೂದು ಬಣ್ಣದ ಟೊಯೀಟಾ ಫಾರ್ಚೂನರ್ ಕಾರಿನಲ್ಲಿ ಬಂದಿದ್ದ ಕಳ್ಳರು ಮಂಕಿ ಕ್ಯಾಪ್ ಹಾಕಿಕೊಂಡು, ಹಸುವೊಂದನ್ನು ಕಳವುಗೈದಿದ್ದಾರೆ. ಹಸು ಕದ್ದ ವಿಷಯ ತಿಳಿದ ಕೂಡಲೇ ಸ್ಥಳೀಯರು ಕಾರನ್ನು ಅಡ್ಡ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕಳ್ಳರು ಸ್ಥಳೀಯರ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾರೆ.

    ಇದನ್ನೂ ಓದಿ : WATCH : ಅಪಘಾತ ತಪ್ಪಿಸಲು ಹೋಗಿ ಎಡವಟ್ಟು ಮಾಡಿಕೊಂಡ ಕಾರು ಚಾಲಕ; ವೀಡಿಯೋ ವೈರಲ್

    ಘಟನೆ ಕುರಿತು ಸ್ಥಳೀಯರು ಸೊರಬ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಗೋಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ವಿಡಿಯೋ ನೋಡಿ:

     

    Continue Reading

    LATEST NEWS

    Trending