Monday, January 24, 2022

ಇಪ್ಪತ್ನಾಲ್ಕು ಕರುಗಳಿಗೆ ಜನ್ಮ ನೀಡಿದ ಕಾಮಧೇನು: ಮಲೆನಾಡು ಗಿಡ್ಡ ತಳಿಯ ‘ನಾಗಿ’ ಇನ್ನಿಲ್ಲ

ಶಿವಮೊಗ್ಗ: ಹಸುಗಳಲ್ಲಿ ಗರಿಷ್ಠ ಭಾರತೀಯ ತಳಿಗಳು 22 ವರ್ಷಗಳ ಕಾಲ ಬದುಕುತ್ತವೆ. ಆದರೆ, ಸುಬ್ರಾವ್ ಅವರ ‘ನಾಗಿ’ ಎಂಬ ಹಸು 32 ವರ್ಷ ಬದುಕಿದ್ದು ಭಾನುವಾರ ಸಾವನ್ನಪ್ಪಿದೆ. ತನ್ನ ಜೀವಿತಾವಧಿಯಲ್ಲಿ 24 ಕರುಗಳಿಗೆ ಜನ್ಮ ನೀಡಿದೆ.

ಮಲೆನಾಡು ಗಿಡ್ಡ ತಳಿಯ ಹಳ್ಳಿಕಾರು ಹಸು ಹೆಚ್ಚು ಅಂದರೆ 22 ವರ್ಷಗಳ ಕಾಲ ಬದುಕಬಹುದು.

ಆದರೆ, ಸಾಗರ ತಾಲೂಕು ಎಡಜಿಗಳೆಮನೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ಆನೆಗೊಳಿ ಗ್ರಾಮದ ಗಿಡ್ಡ ತಳಿಯ ನಾಗಿ ಎಂಬ ಹೆಸರಿನ ಹಸುವೊಂದು ಪಶು ವೈದ್ಯಕೀಯ ಲೋಕಕ್ಕೆ ಅಚ್ಚರಿ ಎಂಬಂತೆ 32 ವರ್ಷದ ಸುದೀರ್ಘ ಜೀವನ ಮುಗಿಸಿ ಕೊನೆಯುಸಿರೆಳೆದಿದೆ.

ಮಲೆನಾಡು ಗಿಡ್ಡ ಅಂದರೆ, ಅವು ಮನೆಯಲ್ಲಿ ಮೇಯುವುದೇ ಇಲ್ಲ. ಇವು ಹೆಚ್ಚಾಗಿ ಗುಡ್ಡ ಏರಿ, ಹಳ್ಳದಾಟಿ ಮೇಯುವಂತಹ ನಾಟಿ ಹಸುಗಳು.

ಈ ಗೋವು ಎಲ್ಲೂ ಬೇಲಿ ಹಾರದೆ, ಅತ್ಯಂತ ಸೌಮ್ಯ ಸ್ವಭಾವದಿಂದ ಜೀವಿಸಿದೆ. ಅಲ್ಲದೆ, ಒಂದು ದಿನಕ್ಕೆ ಮೂರುವರೆ ಲೀಟರ್ ಹಾಲು ನೀಡುತ್ತಿತ್ತು.

ನಾಗಿ ಕಳೆದ ತಿಂಗಳು ಕೊಟ್ಟಿಗೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿತ್ತು. ಈ ವೇಳೆ ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು.

ಅದರೂ ಕೂಡ ಕಳೆದ ಕೆಲ ದಿನಗಳ ಕಾಲ ಮೇಯುವುದನ್ನು ಬಿಟ್ಟಿತ್ತು. ಭಾನುವಾರ ನಾಗಿ ತನ್ನ ಬದುಕಿನ ಪಯಣ ಮುಗಿಸಿದ್ದಾಳೆ.

ಅಂದಹಾಗೆ ನಾಗಿ ಸೇರಿದಂತೆ ತಮ್ಮ ಮನೆಯ ಎಲ್ಲಾ ಹಸುಗಳ ಬಗ್ಗೆ ಸುಬ್ರಾವ್ ಅವರು ದಾಖಲಾತಿಯನ್ನಿಟ್ಟು‌ಕೊಂಡಿದ್ದಾರೆ.

ಇಂತಹ ಅಪರೂಪದ ತಳಿಗಳ ನ್ಯಾಷನಲ್ ಡೈರಿ ಆಫ್ ಇಂಡಿಯಾದ ಡಾ. ರಮೇಶ್ ಅವರು ನಾಗಿ ತಳಿಯ ಬಗ್ಗೆ ಹಾಗೂ ನಾಗಿಯ ಜೀನ್ಸ್ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

Hot Topics

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು

ಬಂಟ್ವಾಳ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಬಂಟ್ವಾಳದ ನಿವಾಸಕ್ಕೆ ಭೇಟಿ ಮಾಡಿ ಅವರ ಆರ್ಶೀವಾದ ಪಡೆದರು.ಈ ವೇಳೆ ರಾಜ್ಯ...

ಯಕ್ಷಗಾನ ಕಲಾವಿದ ಗೋವಿಂದ ಶೇರಿಗಾರ್ ನಿಧನ: ಯಕ್ಷಗಾನ ಕಲಾರಂಗ ಸಂತಾಪ

ಕುಂದಾಪುರ: ಗಂಡುಕಲೆಯಲ್ಲಿ ಸ್ತ್ರೀ ವೇಷಧಾರಿ ಪಾತ್ರ ಮಾಡುತ್ತಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್ (96) ನಿಧನರಾಗಿದ್ದು ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.ಬಡಗುತಿಟ್ಟು ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಮೊದಲು...

ಕೋಟ ಲಾಠಿ ಚಾರ್ಜ್ ಪ್ರಕರಣ: ಹುಸಿಯಾದ ಗೃಹಸಚಿವರ ಭರವಸೆ- ಮತ್ತೆ ಪ್ರತಿಭಟನೆಗೆ ನಿರ್ಧಾರ

ಕೋಟ: ಇಲ್ಲಿನ ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್‌ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ಕೆಲವರ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಕಾಲೊನಿಗೆ ಭೇಟಿ ನೀಡಿದ್ದ ಗೃಹ ಸಚಿವರ ಭರವಸೆ ಅವರ ಹಿಂದೆಯೇ...