Connect with us

    LATEST NEWS

    ಸೆಪ್ಟಂಬರ್ 29 ರಿಂದ ಆಕಾಶದಲ್ಲಿ ಎರಡು ಚಂದ್ರ ಗೋಚರ..! ಏನಿದು ವಿಸ್ಮಯ..?

    Published

    on

    ಮಂಗಳೂರು : ಮುಂದಿನ ಎರಡು ತಿಂಗಳು ಆಕಾಶದಲ್ಲಿ ಎರಡು ಚಂದ್ರ ಗೋಚರಿಸಲಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.  ಕ್ಷುದ್ರಗ್ರಹ ಟೆರೆಸ್ಟ್ರಿಯಲ್ ಇಂಪ್ಯಾಕ್ಟ್‌ ಲಾಸ್ಟ್‌ ಅಲರ್ಟ್‌ (ASTLAS) ಭೂಮಿಯ ಸಮೀಪದಲ್ಲಿ ಹಾದು ಹೋಗಲಿದೆ. ಇದು ಬರಿ ಕಣ್ಣಿಗೆ ಗೋಚರಿಸಲಿದ್ದು,  ಆಕಾಶದಲ್ಲಿ ಚಂದ್ರನಂತೆ ಕಾಣಲಿದೆ.

    NASA ಖಗೋಳ ಶಾಸ್ತ್ರಜ್ಞರು ಈ ಕ್ಷುದ್ರಗ್ರಹದ ಹೆಸರನ್ನು 2024 PT 5 ಎಂದು ಕರೆದಿದ್ದಾರೆ. ಇದು ಸೆಪ್ಟಂಬರ್ 29 ರಂದು ಗೋಚರವಾಗಲಿದೆ ಮತ್ತು ನವೆಂಬರ್ 25 ರಂದು ಆಕಾಶದಿಂದ ಕಣ್ಮರೆಯಾಗಲಿದೆ.

    ಭೂಮಿಯ ಗುರುತ್ವಾಕರ್ಷಣೆಯ ಬಲದಿಂದ ಈ ಕ್ಷುದ್ರಗ್ರಹವು ಭೂಮಿಯ ಸುತ್ತ ಸುತ್ತಲಿದೆ ಎಂದು ನಾಸಾ ಹೇಳಿದೆ. 2013 ರಲ್ಲಿ ಇದೇ ರೀತಿಯ ಕ್ಷುದ್ರಗ್ರಹವು ಭೂಮಿಯ ಸಮೀಪ ಹಾದು ಹೋಗಿತ್ತು. ಈ ವೇಳೆ ಕ್ಷುದ್ರಗ್ರಹ ಸ್ಫೋಟದಿಂದಾಗಿ ರಷ್ಯಾದ ಅನೇಕ ಭಾಗದಲ್ಲಿ ಹಾನಿಯಾಗಿ ಅನೇಕ ಜನರು ಗಾಯಗೊಂಡಿದ್ದಾರೆ. 2024 ರ ಈ ಕ್ಷುದ್ರಗ್ರಹ 2013 ರ ಕ್ಷುದ್ರಗ್ರಹಕ್ಕಿಂತ ದೊಡ್ಡದಾಗಿದೆ. ಆದ್ರೆ, ಇದು ಭೂಮಿಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಎಂದು ಹೇಳಲಾಗಿದೆ.

    2024 PT 5 ಭೂಮಿಯಿಂದ 2.6 ಮಿಲಿಯನ್ ದೂರದಲ್ಲಿ ಇರಲಿದ್ದು, ಇದು ಚಂದ್ರ ಮತ್ತು ಭೂಮಿಯ ಅಂತರದ ಹತ್ತು ಪಟ್ಟು ಹೆಚ್ಚಾಗಿದೆ. ಕುದುರೆಯ ಮುಖದಂತೆ ಇರುವ ಈ ಕ್ಷುದ್ರಗ್ರಹ ಕಕ್ಷೆಯಲ್ಲಿ ಎಷ್ಟು ಕಾಲ ಇರಲಿದೆ ಎಂದು ಇನ್ನೂ ಅಂದಾಜಿಗೆ ಸಿಕ್ಕಿಲ್ಲ.

    ಇದನ್ನೂ ಓದಿ :ಬಾಲಕಿಯ ಮೇಲೆ ಅತ್ಯಾ*ಚಾರ ಯತ್ನಿಸಿ ಕೊ*ಲೆ; ಮುಖ್ಯೋಪಾಧ್ಯಾಯ ಅರೆಸ್ಟ್​

    ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಇಂತಹ ಮಿನಿ ಮೂನ್ ವಿದ್ಯಾಮಾನವು ಕಂಡು ಬರುತ್ತದೆ. 2055 ಮತ್ತು 2084 ರಲ್ಲಿ ಇದು ಭೂಮಿಯ ಅತ್ಯಂತ ಸಮೀಪ ಬಂದು ಚಂದ್ರನಂತೆ ಗೋಚರಿಸಲಿದೆ ಎಂದು ನಾಸದ ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

    LATEST NEWS

    ಸಾಫ್ಟ್‌ವೇರ್ ಇಂಜಿನಿಯರ್‌ಗೆ ಹೃದಯಾಘಾತ ; 29ರ ಹರೆಯದ ಆದಿತ್ಯ ಭಟ್ ವಿಧಿವಶ

    Published

    on

    ಉಜಿರೆ: ಅತ್ತಾಜೆಯ ರಮೇಶ್ ಭಟ್ ಮತ್ತು ಶಾರದಾ ದಂಪತಿ ಪುತ್ರ 29ರ ಹರೆಯದ ಆದಿತ್ಯ ಭಟ್ ಎಂಬವರು ಹೃದಯಾಘಾತದಿಂದ ನಿಧನರಾಗಿದ್ದಾರೆ.


    ಅಕ್ಟೋಬರ್ 11ರಂದು ಮನೆಯಲ್ಲಿ ನಡೆಯ ಆಯುಧ ಪೂಜೆಯ ಸಂಭ್ರಮದಲ್ಲಿ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಆದಿತ್ಯಗೆ ಎದೆನೋವು ಕಾಣಿಸಿಕೊಂಡ ನಂತರ ಹೃದಯಾಘಾತವಾಗಿದೆ.

     

    ಇದನ್ನೂ ಓದಿ : ಸುರತ್ಕಲ್: ರಸ್ತೆ ಕಾಮಗಾರಿಗೆ ಅಗೆದಿದ್ದ ಹೊಂಡಕ್ಕೆ ಬಿದ್ದ ಸವಾರ !!!

     

    ಪ್ರತಿಭಾನ್ವಿತರಾಗಿದ್ದ ಅದಿತ್ಯ ರವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಜರ್ಮನಿಯಲ್ಲಿ ತನ್ನದೇ ಸ್ಪಾರ್ಟ್ ಅಪ್ ಕಂಪೆನಿ ಮುನ್ನಡೆಸುತ್ತಿದ್ದರು. ಇವರು ತಂದೆ ರಮೇಶ್ ಭಟ್, ತಾಯಿ ಶಾರದಾ ಹಾಗೂ ಸಹೋದರಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

     

    Continue Reading

    LATEST NEWS

    ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಎಕ್ಸ್‌ಪ್ರೆಸ್‌ ರೈಲು; ಬೋಗಿಗಳಲ್ಲಿ ಬೆಂಕಿಯಬ್ಬರ !!!!

    Published

    on

    ಮಂಗಳೂರು/ತಮಿಳುನಾಡು: ಮೈಸೂರಿನಿಂದ ದರ್ಭಾಂಗಕ್ಕೆ ಹೋಗುತ್ತಿದ್ದ ಬಾಗ್ಮತಿ ಸೂಪರ್‌ ಫಾಸ್ಟ್ ಎಕ್ಸ್‌ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಘಟನೆ ನಿನ್ನೆ (ಅ.11) ರಾತ್ರಿ 8.30 ರ ಸುಮಾರಿಗೆ ತಮಿಳುನಾಡಿನ ಕವರೈಪೆಟ್ಟೈ ಎಂಬಲ್ಲಿ ನಡೆದಿದೆ.


    ಕವರೈಪೆಟ್ಟೈ ನಿಲ್ಧಾಣಕ್ಕೆ ಎಕ್ಸ್‌ಪ್ರೆಸ್ ರೈಲು ಪ್ರವೇಶಿಸುವಾಗ ಹಳಿ ಬದಲಾವಣೆಯಾಗಿ ಲೂಪ್ ಲೈನನ್‌ಗೆ ಸ್ಥಳಾಂತರಗೊಂಡಿದ್ದ ಪರಿಣಾಮದಿಂದಾಗಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
    ರೈಲಿನ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, 12-13 ಭೋಗಿಗಳು ಹಳಿತಪ್ಪಿದೆ. ಆ ಭಾಗದಲ್ಲಿ ರೈಲು ಸಂಚಾರ ಮುಚ್ಚಲಾಗಿದ್ದು , ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ.
    ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ನಿಗಾ ವಹಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಚೆನ್ನೈನ ಸರ್ಕಾರಿ ಸ್ಟಾನ್ಲಿ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಚಿವ ಅವಧಿ ನೇಸರ್ ಹಾಗೂ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


    ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರಿಗೆ ಪ್ರಯಾಣ ಮುಂದುವರೆಸಲು ಮತ್ತೊಂದು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಇಂದು (ಅ.12) ಮುಂಜಾನೆ ಚೆನ್ನೈ ಸೆಂಟ್ರಲ್ ರೈಲು ನಿಲ್ಧಾಣದಿಂದ ಬೆಳಿಗ್ಗೆ 4.45 ರ ಸುಮಾರಿಗೆ ಹೊರಟಿತು. ಪ್ರಯಾಣಿಕರಿಗೆ ಅಹಾರ ಹಾಗೂ ನೀರಿನ್ನು ಒದಗಿಸಲಾಗಿತ್ತು.
    ಎನ್‌ಡಿಆರ್‌ಎಫ್ ತಂಡ ಹಾಗೂ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Continue Reading

    chikkamagaluru

    ಮುಳ್ಳಯ್ಯನಗಿರಿಯಲ್ಲಿ ಪ್ರಪಾತಕ್ಕೆ ಉರುಳಿದ ಕಾರು..!

    Published

    on

    ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಿರುವಿನಲ್ಲಿ ಪ್ರವಾಸಿಗರ ಕಾರೊಂದು ಪ್ರಪಾತಕ್ಕೆ ಉರುಳಿ ಬಿದ್ದಿದೆ. ಸುಮಾರು 250 ಅಡಿ ಆಳದ ಪ್ರಪಾತಕ್ಕೆ ಕಾರು ಉರುಳಿ ಬಿದ್ದಿದ್ದು, ಪ್ರಯಾಣಿಕರು ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಕಾರಿನಲ್ಲಿ ಹೈದರಾಬಾದ್ ಮೂಲದ ಐವರು ಪ್ರವಾಸಿಗರು ಮುಳ್ಳಯ್ಯನಗಿರಿ ವೀಕ್ಷಣೆಗೆ ಬಂದಿದ್ದರು. ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪ್ರಪಾತಕ್ಕೆ ಉರುಳಿ ಬಿದ್ದಿದೆ. ತಕ್ಷಣ ಘಟನೆ ವೀಕ್ಷಿಸಿದ ಕೆಲವರು ಪ್ರಪಾತಕ್ಕೆ ಬಿದ್ದಿದ್ದ ಪ್ರವಾಸಿಗರನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಗಾಯಾಳುಗಳನ್ನು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    Trending