Connect with us

    NATIONAL

    ವಿಶ್ವದ ಶ್ರೀಮಂತ ಭಿಕ್ಷುಕ ಇವರೇ ನೋಡಿ ! ಭರತ್ ಜೈನ್ ಒಟ್ಟು ಆಸ್ತಿ ಎಷ್ಟು ಗೊತ್ತಾ ???

    Published

    on

    ಮಂಗಳೂರು/ಮುಂಬೈ: ಭಿಕ್ಷಾಟನೆಯು ಬಡತನದ ಸಂಕೇತ ಎಂದು ಪರಿಗಣಿಸಲಾಗಿತ್ತು. ಅದರೆ ಅದು ಈಗ ವ್ಯಾಪರವಾಗಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಿಕ್ಷುಕ ಎಂದೆನಿಸಿಕೊಂಡಿರುವ ಭರತ್ ಜೈನ್ ಬಗ್ಗೆ ನಿಮಗೆಷ್ಟು ಗೊತ್ತು ?
    ಭಿಕ್ಷುಕನಾದವನು ದಿನದ ಹೊತ್ತಿನ ಊಟಕ್ಕೂ ಕಷ್ಟ ಪಡುವವನು. ಬಂದ ನೂರೋ,ಇನ್ನೂರೋ ಅವನ ನಿತ್ಯದ ಖರ್ಚಿಗೂ ಸಾಕಾಗದು. ಭಿಕ್ಷುಕ ಎಂದರೆ ಅವನು ಅವಿದ್ಯಾವಂತ, ಆದುದರಿಂದ ಬಡತನ ಅವನನ್ನು ಆವರಿಸುತ್ತದೆ. ವಿದ್ಯೆಯೂ ಇಲ್ಲದೆ, ಯಾವ ಕೆಲಸವೂ ಇಲ್ಲದೆ, ಏನೂ ದಾರಿ ತೋಚದ ಸಂದರ್ಭದಲ್ಲಿ ಹತಾಶೆಗೊಳಗಾಗಿ ಭಿಕ್ಷಾಟನೆಗೆ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ.


    ಆದರೆ, ಭಿಕ್ಷಾಟನೆಯೂ ಲಾಭದಾಯಕವಾಗಿರುತ್ತದೆ ಎಂದರೆ ಅದು ನಂಬಲಾಗದ ಸತ್ಯ. ಭರತ್ ಜೈನ್ ಎಂಬಾತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕನೆನಿಸಿಕೊಂಡಿದ್ದಾನೆ. ಮುಂಬೈನಲ್ಲಿರುವ ಜೈನ್‌ಗೆ 54 ವರ್ಷ ವಯಸ್ಸಾಗಿದ್ದು, 40 ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದಾನೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣ ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾ, ದಿನಕ್ಕೆ 2 ಸಾವಿರದಿಂದ 2,500 ಸಾವಿರ ರೂ.ವರೆಗೂ ಗಳಿಸುತ್ತಾನೆ ಎಂದು ವರದಿಯಾಗಿದೆ. ಯಾವುದೇ ರೀತಿಯ ರಜೆಯನ್ನೂ ತೆಗೆದುಕೊಳ್ಳದೆ ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಾನೆ

    ಮುಂಬೈನ ಪರೇಲ್​ನಲ್ಲಿ 2 ಬಿಎಚ್​ಕೆ ಫ್ಲ್ಯಾಟ್​ ಹೊಂದಿದ್ದು, ಅದರ ಬೆಲೆ 1.2 ಕೋಟಿ ರೂ. ಭರತ್‌ಗೆ ಪತ್ನಿ, ಇಬ್ಬರು ಮಕ್ಕಳು, ತಂದೆ ಹಾಗೂ ಸಹೋದರನೊಂದಿಗೆ ವಾಸಿಸುತ್ತಿದ್ದಾನೆ. ಕಾನ್ವೆಂಟ್​ ಶಾಲೆಯಲ್ಲೇ ಮಕ್ಕಳು ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಕುಟುಂಬ ಸದಸ್ಯರು 30 ಸಾವಿರ ಬಾಡಿಗೆ ಕೊಡುತ್ತಾ ಸ್ಟೇಷನರಿ ಅಂಗಡಿ ನಡೆಸುತ್ತಿದ್ದಾರೆ.
    ಜೈನ್​ಗೆ ಭಿಕ್ಷಾಟನೆ ಎಂಬುದು ಕುಲ ಕಸುಬಂತಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಬಿಡಲು ಇಷ್ಟವಿಲ್ಲವೆಂಬುವುದಾಗಿ ಅವನೇ ಹೇಳುತ್ತಾನೆ.


    ಜೈನ್ ಮಾತ್ರವಲ್ಲ ಭಾರತದಲ್ಲಿ 1.5 ಕೋಟಿ ರೂ. ಆಸ್ತಿ ಹೊಂದಿರುವ ಸಂಭಾಜಿ ಕಾಳೆ, 1 ಕೋಟಿ ರೂ. ಆಸ್ತಿ ಹೊಂದಿರುವ ಲಕ್ಷ್ಮೀದಾಸ್ ಭಿಕ್ಷಾಟನೆ ಮಾಡಿಯೇ ಗಳಿಕೆಮಾಡಿದವರು ಎಂಬ ವರದಿಯೂ ದಾಖಲಾಗಿದೆ.

     

    Click to comment

    Leave a Reply

    Your email address will not be published. Required fields are marked *

    LATEST NEWS

    ಪೊದೆಯಲ್ಲಿ ಸಿಕ್ಕ ನವಜಾತ ಶಿಶುವನ್ನು ರಕ್ಷಿಸಿದ ಇನ್ಸ್ಪೆಕ್ಟರ್; ಮುಂದೇನಾಯ್ತು ಗೊತ್ತಾ ??

    Published

    on

    ಮಂಗಳೂರು/ಗಾಜಿಯಾಬಾದ್: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ಇನ್ಸ್ಪೆಕ್ಟರ್ ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಬಳಿಕ ಈಗ ಅವರೇ ಆ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ.


    ಪೊದೆಯಲ್ಲಿ ಶಿಶು ಅಳುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ದುಢಿಯಾ ಪೀಪಲ್ ಪುಷ್ಪೇಂದ್ರ ಸಿಂಗ್ ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಹೆತ್ತವರು ಪತ್ತೆಯಾಗದ ಕಾರಣ ಸಿಂಗ್ ತಮ್ಮ ಪತ್ನಿ ಬಳಿ ಚರ್ಚಿಸಿ ತಾವೇ ದತ್ತು ಪಡೆಯಲು ಮುಂದಾಗಿದ್ದಾರೆ.

     

    ಇದನ್ನೂ ಓದಿ: 16ನೇ ವಯಸ್ಸಿನಲ್ಲೇ ದ್ವಿಚಕ್ರ ವಾಹನ ಲೈಸೆನ್ಸ್; ಸರ್ಕಾರದ ಹೊಸ ಕಾನೂನು ಯಾವುದು ಗೊತ್ತಾ ??

     

    ಪುಷ್ಪೇಂದ್ರ ಸಿಂಗ್ ದಂಪತಿಗೆ 2018 ರಲ್ಲಿ ವಿವಾಹವಾಗಿದ್ದು, ಇನ್ನೂ ಮಕ್ಕಳಾಗಿರಲಿಲ್ಲ. ಅದಲ್ಲದೇ, ನವರಾತ್ರಿ ವೇಳೆ ಈ ಮಗು ಸಿಕ್ಕಿದ್ದು, ದೇವಿಯ ಆಶಿರ್ವಾದ ಎಂದಿದ್ದಾರೆ. ದತ್ತು ಪಡೆವ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Continue Reading

    LATEST NEWS

    ಮಾಜಿ ಸಚಿವ ಬಾಬಾ ಸಿದ್ದಿಕ್ ಗೆ ಗುಂಡಿಕ್ಕಿ ಹತ್ಯೆ; ವಿವಿಧ ಕೋನಗಳಲ್ಲಿ ತನಿಖೆ

    Published

    on

    ಮಂಗಳೂರು/ಮುಂಬೈ : ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಮುಂಬೈನಲ್ಲಿ ನಿನ್ನೆ(ಅ.12) ರಾತ್ರಿ ಮೂವರು ದುಷ್ಕರ್ಮಿಗಳ ತಂಡ ಗುಂ*ಡಿಕ್ಕಿ ಹ*ತ್ಯೆ ಮಾಡಿದೆ. ಅವರ ಮೃ*ತದೇಹವನ್ನು ಲೀಲಾವತಿ ಆಸ್ಪತ್ರೆಯಿಂದ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ.

    ಮುಂಬೈನ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿ ಬಾಬಾ ಸಿದ್ಧಿಕ್ ಅವರ ಪುತ್ರ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಭಾಗದಲ್ಲಿ ಮೂವರು ದುಷ್ಕ*ರ್ಮಿಗಳು ಅಟ್ಟಾಡಿಸಿಕೊಂಡು ಬಂದು ಗುಂ*ಡು ಹಾರಿಸಿದ್ದಾರೆ. ರ*ಕ್ತದ ಮಡುವಿನಲ್ಲಿ ಬಿದ್ದ ಸಿದ್ದಿಕಿ ಅವರನ್ನು ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಲೀಲಾವತಿ ಆಸ್ಪತ್ರೆಯ ತುರ್ತು ವೈದ್ಯಕೀಯ ಸೇವೆಗಳಿಗೆ ಸ್ಥಳಾಂತರಿಸಲಾಯಿತು.

    ನಂತರ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು, ಅಲ್ಲಿ ಬದುಕುಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತಾದರೂ ಸಾಧ್ಯವಾಗಲಿಲ್ಲ. ಕೊನೆಗೆ ರಾತ್ರಿ 11:27 ಕ್ಕೆ ನಿಧನರಾದರು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ : ತುಂಡುಡುಗೆ ತೊಟ್ಟು ದುರ್ಗಾ ಪೂಜೆಗೆ ಬಂದ ಯುವತಿಯರು; ಜನರ ಆಕ್ರೋಶ….!!

    ಅವರ ಹ*ತ್ಯೆಯ ಕುರಿತು ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ. ಸುಫಾರಿ ಹತ್ಯೆ, ಉದ್ಯಮ ವೈಷಮ್ಯ ಅಥವಾ ಕೊಳೆಗೇರಿ ಪುನರ್ವಸತಿ ಯೋಜನೆಗೆ ಸಂಬಂಧಿಸಿದಂತೆ ಬೆದರಿಕೆಯೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಬಾಬಾ ಸಿದ್ದಿಕ್ ಬಾಂದ್ರಾ (ಪಶ್ಚಿಮ) ಕ್ಷೇತ್ರವನ್ನು ಮೂರು ಬಾರಿ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರು. ಮುಂಬೈನ ಪ್ರಮುಖ ಮುಸ್ಲಿಂ ನಾಯಕ, ಸಿದ್ದಿಕ್ ಹಲವಾರು ಬಾಲಿವುಡ್ ತಾರೆಗಳಿಗೆ ಹತ್ತಿರವಾಗಿದ್ದರು.

    Continue Reading

    LATEST NEWS

    ತುಂಡುಡುಗೆ ತೊಟ್ಟು ದುರ್ಗಾ ಪೂಜೆಗೆ ಬಂದ ಯುವತಿಯರು; ಜನರ ಆಕ್ರೋಶ….!!

    Published

    on

    ಮಂಗಳೂರು/ಕೊಲ್ಕತ್ತಾ: ಭಾರತೀಯ ಸಂಸ್ಕೃತಿಯಂತೆ ಮೈ ಮುಚ್ಚುವ ಉಡುಗೆಗಳನ್ನು ತೊಟ್ಟು ಪೂಜಾ ಕಾರ್ಯಕ್ರಮ, ದೇವಾಲಯಗಳಿಗೆ ಹೋಗುವುದು ಸಂಸ್ಕಾರ. ಆದರೆ, ಕೊಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಮೂವರು ಮಾಡೆಲ್ ಗಳು ತುಂಡುಡುಗೆ ತೊಟ್ಟು ಭಾಗವಹಿಸಿದ್ದಾರೆ. ಇವರುಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೆಂಥಾ ಸಂಸ್ಕೃತಿ ಎಂದು ಇವರ ಅವತಾರಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.


    ಈ ಫೋಟೋವನ್ನು ಸ್ವತಃ ಮಾಡೆಲ್ ಸನ್ನತಿ ಮತ್ತು ಸಿಲೇನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮೂವರು ಯುವತಿಯರು ಅರೆಬರೆ ಬಟ್ಟೆ ತೊಟ್ಟು, ಚಪ್ಪಲಿ ಧರಿಸಿ ದೇವಿಯ ವಿಗ್ರಹದ ಮುಂದೆ ನಿಂತಿರುವ ದೃಶ್ಯವನ್ನು ಕಾಣಬಹುದು.


    ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ನಾನು ಒಬ್ಬ ಮುಸ್ಲಿಮನಾಗಿ ಹೇಳುತ್ತಿದ್ದೇನೆ ಪವಿತ್ರ ಸ್ಥಳದಲ್ಲಿ ಇಂತಹ ಡ್ರೆಸ್ಸಿಂಗ್‌ ತುಂಬಾನೇ ಅಸಹ್ಯಕರವಾಗಿದೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ದಯವಿಟ್ಟು ದುರ್ಗಾ ಪೂಜೆಯನ್ನು ಹಾಳು ಮಾಡಬೇಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಪವಿತ್ರ ಸ್ಥಳದಲ್ಲಿ ಇದೆಂತಾ ಅಸಹ್ಯ ಎಂಬುವುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    Continue Reading

    LATEST NEWS

    Trending