Connect with us

    BIG BOSS

    Bigg Boss Kannada 11: ದೊಡ್ಮನೆಯಲ್ಲಿ ಸ್ವರ್ಗ, ನರಕ ಎನ್ನುವ ಎರಡು ಥೀಮ್

    Published

    on

    ‘ಬಿಗ್ ಬಾಸ್ ಕನ್ನಡ 11’ಕ್ಕೆ ಕೌಂಟ್ ಡೌನ್ ಶುರುವಾಗಿದೆ. ದೊಡ್ಮನೆ 2ನೇ ಪ್ರೋಮೋ ರಿಲೀಸ್ ಆಗಿ ಮೆಚ್ಚುಗೆ ಗಳಿಸಿತ್ತು. ಈ ಬಾರಿ ಬಿಗ್ ಬಾಸ್‌ನಲ್ಲಿ ಸ್ವರ್ಗ ಮತ್ತು ನರಕ ಎಂದು ಥೀಮ್ ಇರಲಿದೆ ಎಂದು ಸುದೀಪ್‌ ಇಂಟರೆಸ್ಟಿಂಗ್ ಮಾಹಿತಿ  ತಿಳಿಸಿದ್ದಾರೆ.

    ನಾವು ಮಾಡಿ ಕಳುಹಿಸಲಿಲ್ಲ ಅಂದರೆ ಒಳಗೆ ಹೋಗಿರುವ ಸ್ಪರ್ಧಿಗಳೇ ಟೀಮ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವಾಗಲೇ 2 ತಂಡ ಮಾಡುವುದೇ ಈ ಸೀಸನ್‌ನ ಸ್ಪೆಷಾಲಿಟಿ ಎಂದು ಸುದೀಪ್ ತಿಳಿಸಿದರು.

    ಕಳೆದ ಬಾರಿ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾದ ವೇಳೆ, ಸ್ಪರ್ಧಿಗಳಿಗೆ ಸಮರ್ಥರು ಮತ್ತು ಅಸಮರ್ಥರು ಎಂದು ಪರಿಗಣಿಸಿ ತಂಡಗಳಾಗಿ ವಿಂಗಡಿಸಿದ್ದರು. ಅದರಂತೆಯೇ ಈ ಬಾರಿಯು ಕೂಡ ಹೊಸ ರೀತಿಯಲ್ಲಿ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಸ್ಪರ್ಧಿಗಳನ್ನು ಕಳುಹಿಸಲಾಗುತ್ತದೆ.

    ಸುದೀಪ್ ನಿರೂಪಣೆಯಲ್ಲಿ ಇದೇ ಸೆ.29ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದೆ. ಪ್ರತಿದಿನ ರಾತ್ರಿ 9:30ಕ್ಕೆ ಶೋ ಪ್ರಸಾರವಾಗಲಿದೆ.

    BIG BOSS

    ಇತಿಹಾಸದಲ್ಲೇ ಮೊದಲು.. ಬಿಗ್​ಬಾಸ್ ಕಂಟೆಸ್ಟಂಟ್ ಆಗಿ​ ಮನೆಗೆ ಎಂಟ್ರಿ ಕೊಟ್ಟ ಕತ್ತೆ; ಏನಿದರ ಗುಟ್ಟು?

    Published

    on

    ಈಗಂತೂ ಎಲ್ಲಾ ಭಾಷೆಯಗಳಲ್ಲಿ ಬಿಗ್​ಬಾಸ್​ನ​ದ್ದೇ ಹವಾ ಸೃಷ್ಟಿಯಾಗಿದೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕೆಲವೊಂದು ಭಾಷೆಯಲ್ಲಿ ಈಗಾಗಲೇ ಬಿಗ್​ಬಾಸ್​ ಸೀಸನ್​ ಮುಕ್ತಾಯಗೊಂಡಿದೆ. ಹೀಗೆ ಬಿಗ್​ಬಾಸ್​ ಕಾರ್ಯಕ್ರಮ ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿಕೊಂಡು ಮುನ್ನುಗ್ಗುತ್ತಿದೆ.

    ಈಗಾಗಲೇ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ ಒಂದು ವಾರ ಕಳೆದಿದೆ. ಇದರ ನಡುವೆ ನಿನ್ನೆ ಅಂದ್ರೆ ಭಾನುವಾರ ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಹೌದು, ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಆದರೆ ಬಿಗ್​ಬಾಸ್​ ಇತಿಹಾಸದ ಮೊಟ್ಟ ಮೊದಲ ಬಾರಿಗೆ ಸಾಕು ಪ್ರಾಣಿಯೊಂದನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು 19 ಕಂಟೆಸ್ಟೆಂಟ್​ಗಳ ಜೊತೆಗೆ ಒಂದು ಕತ್ತೆ ಕೂಡ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದೆ.

    ಸಲ್ಮಾನ್ ಖಾನ್ ನಡೆಸಿಕೊಡುತ್ತಿರೋ ಬಿಗ್​ಬಾಸ್​ ಸೀಸನ್​ 18 ಕಾರ್ಯಕ್ರಮದಲ್ಲಿ ಈ ಕತ್ತೆ ಎಂಟ್ರಿ ಕೊಟ್ಟಿದೆ. ವೇದಿಕೆಗೆ 19ನೇ ಸ್ಪರ್ಧಿಯಾಗಿ ಬಂದ ಕತ್ತೆಯನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಬಿಗ್​ಬಾಸ್​ ಮನೆಗೆ ಬಂದ ‘ಗಧರಾಜ್’ ಕತ್ತೆಯನ್ನು ಕಂಡು ಮನೆ ಮಂದಿ ಫುಲ್​ ಶಾಕ್​ ಆಗಿದ್ದಾರೆ. ಸದ್ಯ ಹೊಸ ಪ್ರೋಮೋಗಳನ್ನು ನೋಡಿದ ವೀಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

    Continue Reading

    BIG BOSS

    BBK 11: ಜಗದೀಶ್​ ಅಲ್ವಂತೆ! ಬಿಗ್​ ಬಾಸ್​ ಮನೆಯಲ್ಲಿ ಈ ವ್ಯಕ್ತಿ ತುಂಬಾ ಡೇಂಜರಸ್ ಎಂದ ನಟಿ ಯಮುನಾ!

    Published

    on

    ಬಿಗ್​ ಬಾಸ್​ ಕನ್ನಡ ಸೀಸನ್ 11 ಮೊದಲ ವಾರ ಪೂರ್ತಿಗೊಂಡು ಮುನ್ನುಗ್ಗುತ್ತಿದೆ. ಮೊದಲ ವಾರ ನಟಿ ಯಮುನಾ ಮನೆಯಿಂದ ಹೊರಬಂದಿದ್ದಾರೆ. ಹೊರ ಬಂದ ಬಳಿಕ ಬಿಗ್‌ಬಾಸ್ ಕುರಿತು ಮಾತನಾಡಿದ್ದಾರೆ. ಹಲವು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

    ಬಿಗ್​ ಬಾಸ್​ ಮನೆಯಲ್ಲಿ ತುಂಬಾ ಡೇಂಜರಸ್​ ವ್ಯಕ್ತಿಯ ಬಗ್ಗೆಯೂ ನಟಿ ಯಮುನಾ ಹೇಳಿದ್ದಾರೆ. ಲಾಯರ್​ ಜಗದೀಶ್​ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್​ ಎಂದು ಹೇಳಿದ್ದಾರೆ. ಸಿಕ್ಕಪಟ್ಟೆ ಮ್ಯಾನಿಪುಲೇಟ್​, ಎಲ್ಲರನ್ನು ತಮ್ಮತ್ತ ಸೆಳೆಯುವವರು. ಏನು ಹೇಳದೆ ಏನು ಮಾಡದೆ ಟ್ರಿಕ್​ ಮಾಡುವವರು ಎಂದು ಹೇಳಿದ್ದಾರೆ.

    ಸದ್ಯ ಮೊದಲ ವಾರವೇ ನಟಿ ಹೊರಬಂದಿದ್ದು, ಬಿಗ್​ ಮನೆಯ ಆಟಗಾರರ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ. ಅದರಲ್ಲೂ ಆಟವನ್ನು ಇನ್ನೂ ಪ್ರಾರಂಭಿಸದವರು ಮತ್ತು ಪ್ರಾರಂಭಿಸಿದವರ ಬಗ್ಗೆಯೂ ಹೇಳಿದ್ದಾರೆ. ಲಾಯರ್​ ಜಗದೀಶ್​​ ಮೊದಲ ದಿನದಿಂದಲೇ ಆಟ ಶುರು ಮಾಡಿದ್ದಾರೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಿಚ್ಚ ನಿರೂಪಣೆಗೆ ಬಿಗ್​ ಬಾಸ್​ ಮನೆಯಲ್ಲಿ ಒಂದು ವಾರ ಕಳೆದ ಅನುಭವವನ್ನು ನಟಿ ಯಮುನಾ ಬಿಚ್ಚಿಟ್ಟಿದ್ದಾರೆ.

    Continue Reading

    BIG BOSS

    ಇದೇ ಕಾರಣಕ್ಕೆ ಮೊದಲ ವಾರವೇ ಯಮುನಾ ಶ್ರೀ ನಿಧಿ ಬಿಗ್‌ಬಾಸ್ ಮನೆಯಿಂದ ಔಟ್ ಆದದ್ದು..!

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಆಗಿ ಓಪನಿಂಗ್​ ಪಡೆದುಕೊಂಡು ಒಂದು ವಾರ ಕಳೆದಿದೆ. ಪ್ರತಿ ಸೀಸನ್​ನಂತೆ ಈ ಬಾರಿಯೂ ಕೂಡ ಬಿಗ್​ಬಾಸ್​ ಮನೆಯಿಂದ ಓರ್ವ ಸ್ಪರ್ಧಿ ಆಚೆ ಬಂದಿದ್ದಾರೆ. ಕನ್ನಡದ ಬಿಗ್​ಬಾಸ್​ ಸೀಸನ್​ 11 ಶುರುವಾಗಿ ಒಂದೇ ವಾರಕ್ಕೆ ಕನ್ನಡದ ನಟಿ ಯಮುನಾ ಶ್ರೀನಿಧಿ ಆಚೆ ಬಂದಿದ್ದಾರೆ.

    ಈ ವಾರದಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 9 ಮಂದಿ ನಾಮಿನೇಟ್​ ಆಗಿದ್ದರು. ಲಾಯರ್​ ಜಗದೀಶ್​, ಗೌತಮಿ ಜಾಧವ್​, ಹಂಸ, ಭವ್ಯಾ ಗೌಡ, ಯಮುನಾ, ಶಿಶಿರ್​, ಮಾನಸಾ, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ನಾಮಿನೇಟ್​ ಆಗಿದ್ದಾರೆ. ಇವರ ಪೈಕಿ ಶನಿವಾರದ ಎಪಿಸೋಡ್​ನಲ್ಲಿ ಭವ್ಯಾ ಗೌಡ, ಗೌತಮಿ ಜಾಧವ್​ ಹಾಗೂ ಮಾನಸ ಅವರನ್ನು ಸೇಫ್​ ಮಾಡಲಾಗಿತ್ತು. ಇನ್ನೂ ಉಳಿದಂತೆ ಉಗ್ರಂ ಮಂಜು, ಐಶ್ವರ್ಯ, ಧರ್ಮ ಕೀರ್ತಿರಾಜ್​, ಧನರಾಜ್​, ಅನುಷಾ ರೈ, ರಂಜಿತ್​, ಗೋಲ್ಡ್​ ಸುರೇಶ್​, ತ್ರೀವಿಕ್ರಂ ಸೇಫ್​ ಆಗಿದ್ದರು.

    ಇವರ ಪೈಕಿ ಮೊದಲ ವಾರವೇ ಬಿಗ್​ಬಾಸ್​ ಮನೆಯಿಂದ ಯಮುನ ಶ್ರೀ ನಿಧಿ ಔಟ್ ಆಗಿದ್ದಾರೆ. ಇವರು ಸರಿಯಾಗಿ ಟಾಸ್ಕ್‌ ಗಳನ್ನು ಆಡದ ಕಾರಣ ಹಾಗೂ ಇವರ ಅಭಿಮಾನಿಗಳು ಸರಿಯಾಗಿ ಓಟ್ ಹಾಕದ ಕಾರಣ ಬಿಗ್‌ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎನ್ನುವ ಸಂಶಯ ಅಭಿಮಾನಿಗಳಲ್ಲಿ ಮೂಡಿದೆ. ಒಟ್ಟು 17 ಸ್ಪರ್ಧಿಗಳಿದ್ದ ದೊಡ್ಮನೆಯಲ್ಲಿ ಈಗ ಓರ್ವ ಸ್ಪರ್ಧಿಯನ್ನು ಆಚೆ ಕಳುಹಿಸಲಾಗಿದೆ. ಹೀಗೆ ಪ್ರತಿ ವಾರವು ಬಿಗ್​ಬಾಸ್​ ಮನೆಯಿಂದ ಒಬ್ಬರಾದ ಮೇಲೆ ಒಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಮನೆಯಿಂದ ಆಚೆ ಬರಲಿದ್ದಾರೆ.​

    Continue Reading

    LATEST NEWS

    Trending