Baindooru
ಬಿಗ್ ಬಾಸ್ ಗೆ ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹಿಂದೂ ಫೈರ್ ಬ್ರಾಂಡ್ ಚೈತ್ರಾ
ಮಂಗಳೂರು : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರೋ ಈ ಶೋಗೆ ಸ್ಪರ್ಧಿಗಳು ಯಾರಾಗ್ತಾರೆ ಅನ್ನೋದು ಕುತೂಹಲವೇ ಹೆಚ್ಚು. ಈ ಬಾರಿ ಅಂದ್ರೆ ಸೀಸನ್ 11 ರ ಸ್ಪರ್ಧಿಗಳು ಯಾರು ಅನ್ನೋ ‘ರಾಜ ರಾಣಿ’ ರಿಯಾಲಿಟಿ ಶೋ ನ ಗ್ರ್ಯಾಂಡ್ ಫಿನಾಲೇಲಿ ರಿವೀಲ್ ಆಗುತ್ತಿದೆ.
ಎಂಟ್ರಿ ಕೊಟ್ಟ ಚೈತ್ರಾ!
ಮೊದಲ ಸ್ಪರ್ಧಿಯಾಗಿ ‘ಸತ್ಯ’ ಧಾರಾವಾಹಿ ನಟಿ ಗೌತಮಿ ಜಾಧವ್, 2ನೇ ಸ್ಪರ್ಧಿಯಾಗಿ ಲಾಯರ್ ಜಗದೀಶ್ ಬಿಗ್ ಬಾಸ್ ಮನೆ ಸೇರುತ್ತಿದ್ದು, ಇನ್ನೂ 3ನೇ ಸ್ಪರ್ಧಿಯಾಗಿ ‘ಬಿಗ್ ಬಾಸ್’ ಮನೆಯೊಳಗೆ ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಚೈತ್ರಾ ಎಂಟ್ರಿ ಕೊಟ್ಟಿದ್ದಾರೆ.
ಖಡಕ್ ಮಾತುಗಳಿಂದಲೇ, ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡಿ, ತಮ್ಮದೇ ಆದ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಚೈತ್ರಾ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಅಲ್ಲದೇ, ಖಾಸಗಿ ವಾಹಿನಿ, ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವೂ ಇದೆ.
ಇದನ್ನು ಓದಿ: ನಟಿ ಸುಕೃತಾ ನಾಗ್ ಸಿಲ್ಕ್ ಸೀರೆಯಲ್ಲಿ ಮಿಂಚಿಂಗ್… ಬಿಗ್ ಬಾಸ್ ಗೆ ಸ್ವಾಗತ ಅಂತಿದ್ದಾರೆ ಜನ!
ವಂಚನೆ ಪ್ರಕರಣ:
ಪ್ರಖರ ಭಾಷಣಗಳ ಮೂಲಕ ಗಮನ ಸೆಳೆದಿದ್ದ ಚೈತ್ರಾ ಕಾಂಟ್ರವರ್ಸಿಗಳ ಮೂಲಕವೂ ಸದ್ದು ಮಾಡಿದ್ದಾರೆ. ಅಲ್ಲದೇ, ಬಿಜೆಪಿ ಟಿಕೆಟ್ ಕೊಡುವ ವಿಚಾರದಲ್ಲಿ ಬೈಂದೂರಿನ ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪದಡಿ ಜೈಲು ಪಾಲಾಗಿದ್ದರು.
ಸದ್ಯ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿರುವ ಚೈತ್ರಾ ಅಲ್ಲಿ ಹೇಗಿರ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.
Baindooru
ಪತಿ ಪತ್ನಿ ನಡುವೆ ವಿರಸ..! ರಸ್ತೆಯಲ್ಲಿ ಇಬ್ಬರ ಕಿತ್ತಾಟ..! ಮಧ್ಯೆ ಬಂದ ಯುವಕನ ಮೇಲೆ ಬಿತ್ತು ಕೇಸ್
ಬೈಂದೂರು: ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ಪತಿಯ ಮೇಲೆ ಅನ್ಯಕೋಮಿನ ಯುವಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಆರೋಪಿಸಿ ಬೈಂದೂರು ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ದೂರು ನೀಡಿರುವ ಪತ್ನಿ ಹಾಗೂ ಪತ್ನಿಯ ತಾಯಿ ಪತಿ ಹಾಗೂ ಆತನ ಬಾವ ಹಲ್ಲೆ ನಡೆಸುವಾಗ ಯವಕ ನಮಗೆ ರಕ್ಷಣೆ ನೀಡಿದ್ದಾನೆ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿಯಾಗಿರುವ ಸುರೇಶ್ ಭಟ್ ಎಂಬವರು ತನ್ನ ಪತ್ನಿಯನ್ನು ದಾರಿ ಮಧ್ಯೆ ನಿಲ್ಲಿಸಿ ಮಾತನಾಡುವಾಗ ಪತ್ನಿಯ ಸ್ನೇಹಿತ ಸಿರಾಜುದ್ದೀನ್ ಎಂಬ ಅನ್ಯಕೋಮಿನ ಯುವಕ ತನಗೆ ಹಲ್ಲೆ ನಡೆಸಿರುವುದಾಗಿ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾನೋ ಕಾರಿನಲ್ಲಿ ಅನ್ಯ ಕೋಮಿನ ಯುವಕನ ಜೊತೆ ಬರುತ್ತಿರುವುದು ನೋಡಿ ತಾನು ಕಾರು ನಿಲ್ಲಿಸಿ ವಿಚಾರಿಸಿದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಸುರೇಶ್ ಭಟ್ ಅವರ ದೂರನ್ನು ಅಲ್ಲಗಳೆದಿರುವ ಪತ್ನಿ ಪ್ರತಿಮಾ ಹಾಗೂ ಅತ್ತೆ ಶಿವಕುಮಾರಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ದೂರು ನೀಡಿರುವ ಶಿವಕುಮಾರಿ ತನ್ನ ಮಗಳು ಪ್ರತಿಮಾ ಹಾಗೂ ಪತಿ ಸುರೇಶ್ ಭಟ್ ಅವರಿಗೆ ಹಲವು ತಿಂಗಳಿನಿಂದ ಭಿನ್ನಾಬಿಪ್ರಾಯ ಇದ್ದು ಹೀಗಾಗಿ ಮಾನ ಹರಾಜು ಹಾಕಲು ಈ ರೀತಿ ಸುಳ್ಳು ದೂರು ದಾಖಲಿಸಿದ್ದಾರೆ. ಸಿರಾಜುದ್ದೀನ್ ಅಂಬ್ಯುಲೆನ್ಸ್‌ನಲ್ಲಿ ಡ್ರೈವರ್ ಆಗಿದ್ದು, ಕೆಲವೊಮ್ಮೆ ತಮ್ಮ ಕಾರಿಗೂ ಡ್ರೈವರ್ ಆಗಿ ಬರುತ್ತಾನೆ. ನನ್ನ ಮಗ ಹಾಗೂ ಮಗಳನ್ನು ಕರೆದುಕೊಂಡು ಹೋಗಲು ತಾನೇ ಸಿರಾಜುದ್ದಿನ್ ಗೆ ಕರೆ ಮಾಡಿದ್ದೆ. ಹೀಗೇ ನನ್ನ ಮಗ ಮತ್ತು ಮಗಳು ಕಾರಿನಲ್ಲಿ ಹೋಗುವಾಗ ಅವರ ಮೇಲೆ ಸುರೇಶ್ ಭಟ್ ಹಾಗೂ ಆತನ ಭಾವ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅವರಿಗೆ ಸಿರಾಜುದ್ದೀನ್ ರಕ್ಷಣೆ ನೀಡಿದ್ದಾರೆ. ಆದರೆ ಇದಕ್ಕೆ ಬೇರೆ ಕಥೆ ಕಟ್ಟಿ ಈ ರೀತಿ ಸುಳ್ಳು ದೂರು ನೀಡಲಾಗಿದೆ ಎಂದು ಶಿವಕುಮಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಹಲ್ಲೆಗೆ ಒಳಗಾದ ಸುರೇಶ್ ಭಟ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಸುಳ್ಳು ದೂರು ಎಂದು ಸುರೇಶ್ ಭಟ್ ಅವರ ಅತ್ತೆ ಪ್ರತಿ ದೂರನ್ನು ಅದೇ ಠಾಣೆಗೆ ನೀಡಿದ್ದಾರೆ . ಇದೀಗ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Baindooru
ಗೂಂಡಾಗಿರಿಯೊಂದಿಗೆ ಪಕ್ಷಕ್ಕೆ ಎಂಟ್ರಿಕೊಟ್ಟ ಪುತ್ತಿಲ ಪರಿವಾರ…!
ಹಲವು ಗೊಂದಲ ಮತ್ತು ಪುತ್ತೂರು ಬಿಜೆಪಿ ನಾಯಕರ ವಿರೋಧದ ನಡುವೆ ಕೊನೆಗೂ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆ ಪ್ರಹಸನ ಅಂತ್ಯವಾಗಿದೆ. ಪುತ್ತಿಲ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ವಿಜೇಯಂದ್ರ ಅವರಿಂದ ಹೂಗುಚ್ಛ ಸ್ವೀಕರಿಸಿ ಪಕ್ಷ ಸೇರ್ಪಡೆಯಾಗಿದ್ದರು. ಆದ್ರೆ ಜಿಲ್ಲೆಯಲ್ಲಿ ಪುತ್ತಿಲ ಸೇರ್ಪಡೆ ವಿಚಾರದಲ್ಲಿ ಗೊಂದಲ ಮುಂದುವರೆದಿತ್ತು.ಸದ್ಯ ಗೊಂದಲ ಮುಗಿದು ಪುತ್ತಿಲ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಪುತ್ತಿಲ ಚುನಾವಣೆಯಿಂದ ಹಿಂದೆ ಸರಿದು ಪಕ್ಷ ಸೇರುತ್ತಿರುವುದೇ ಪಕ್ಷದೊಳಗಿನ ಗೊಂದಲಕ್ಕೆ ಕಾರಣ ಅನ್ನೋದು ಸ್ಪಷ್ಟ.ನಳಿನ್ ಕುಮಾರ್ ಕಟೀಲ್ ಬೆಂಬಲಿಗರಿಗೆ ಪುತ್ತಿಲ ಪರಿವಾರ ಪಕ್ಷ ಸೇರೋದು ಒಂದಿಷ್ಟೂ ಇಷ್ಟ ಇಲ್ಲ.ಹೀಗಾಗಿ ಪುತ್ತೂರಿನ ಬಿಜೆಪಿ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರ ಎದುರೇ ನಾಯಕರು ಗಲಾಟೆ ಮಾಡಿದ್ದು ಈಗ ಗೌಪ್ಯವಾಗಿ ಉಳಿದಿಲ್ಲ. ಅಂತೂ ಇಂತೂ ಮಂಗಳೂರು ಬಿಜೆಪಿ ಕಛೇರಿಯಲ್ಲಿ ಪುತ್ತಿಲರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.
ಪಕ್ಷ ಸೇರುತ್ತಿದ್ದಂತೆ ಪುತ್ತಿಲಾ ಬೆಂಬಲಿಗನ ಗೂಂಡಾಗಿರಿ
ಬಿಜೆಪಿ ಕಚೇರಿಗೆ ಕಾಲಿರಿಸಿದ್ದೆ ತಡ ಪುತ್ತಿಲ ಬೆಂಬಲಿಗ ಪಕ್ಷದ ಕಚೇರಿಯಲ್ಲಿ ಗುಂಡಾಗಿರಿ ನಡೆಸಿದ್ದಾನೆ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಸಮ್ಮುಖದಲ್ಲಿ ಈ ಗೂಂಡಾಗಿರಿ ನಡೆದಿದೆ. ಪಕ್ಷ ಸೇರ್ಪಡೆ ಆಗಿ ನಾವು ಒಂದಾಗಿದ್ದೇವೆ ನಿಮ್ಮ ಅಗತ್ಯ ಇಲ್ಲ ಎಂದು ಮಾಧ್ಯಮದವರ ಮೇಲೆ ಎಗರಾಡಿದ್ದಾನೆ. ಅಷ್ಟೇ ಅಲ್ಲದೆ ಮಾಧ್ಯಮದವರನ್ನು ಹೊರಗೆ ತಳ್ಳುವ ಯತ್ನ ಮಾಡಿದ್ದಾನೆ .ಇದೆಲ್ಲಾ ಕಂಡ ಪುತ್ತಿಲ ಹಾಗೂ ಸತೀಶ್ ಕುಂಪಲ ಧಂಗಾಗಿ ಹೋಗಿದ್ದಾರೆ. ಪುತ್ತಿಲ ಬೆಂಬಲಿಗನ ಉದ್ಧಟತನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾದ್ಯಮದವರು ಬಿಜೆಪಿ ಕಛೇರಿಯಂದಲೇ ಹೊರನಡೆದಿದ್ದಾರೆ. ಪಕ್ಷ ಸೇರ್ಪಡೆಯ ವೇಳೆಯೆ ಇಂತಹ ಗೂಂಡಾಗಿರಿ ನಡೆಸಿದವರು ಮುಂದೆ ಪುತ್ತೂರು ಬಿಜೆಪಿ ಕಛೇರಿ ಪ್ರವೇಶಿಸಿದ್ರೆ ಏನಾಗಬಹುದು ಅನ್ನೋ ಗುಸುಗುಸು ಜಿಲ್ಲಾ ಬಿಜೆಪಿ ಕಛೇರಿಯಲ್ಲೇ ಕೇಳಿಸಿದೆ.
ಪಕ್ಷದ ಕಛೇರಿಯಲ್ಲಿ ನಡೆದ ಈ ಘಟನೆ ಬಿಜೆಪಿ ನಾಯಕರಿಗೇ ಮುಜುಗರ ಉಂಟು ಮಾಡಿದೆ. ಘಟನೆಯ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಹಲವರು ವಿಷಾದ ವ್ಯಕ್ತಪಡಿಸಿದ್ದಾರೆ.
Baindooru
Udupi: ನಮಾಝ್ ಗೆ ಕುಳಿತಿದ್ದಲ್ಲಿಯೇ ಹೃದಯಾಘಾತ- ವ್ಯಕ್ತಿ ಸಾವು..!
ಉಡುಪಿ: ಜುಮಾ ನಮಾಝ್ ವೇಳೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.9ರ ಶುಕ್ರವಾರದಂದು ಉಡುಪಿ ಜಿಲ್ಲೆಯ ಅಂಜುಮಾನ್ ಮಸೀದಿಯಲ್ಲಿ ನಡೆದಿದೆ.
ಮೃತ ವ್ಯಕ್ತಿ ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಸ್ತಾಕ್ (55) ಎಂದು ಗುರುತಿಸಲಾಗಿದೆ. ಶುಕ್ರವಾರದ ನಮಾಜ್‌ಗೆ ಬಂದಿದ್ದ ಮುಸ್ತಾಕ ನಮಾಶ್ ಮುಗಿಸಿ ಖುತ್ಭಾ ಕೇಳಲು ಕುಳಿತುಕೊಂಡಿದ್ದರು. ಈ ವೇಳೆ ಅವರಿಗೆ ದೇಹದಲ್ಲಿ ಏನೋ ಆಗುತ್ತಿದೆ ಎಂಬ ಅನುಭವ ಆಗಿದೆಯಾದರೂ ಅಕ್ಕಪಕ್ಕದವರಲ್ಲಿ ಈ ವಿಚಾರ ತಿಳಿಸಿಲ್ಲ. ಕುಳಿತಿದ್ದ ವ್ಯಕ್ತಿ ಏಕಾ ಏಕಿ ನೆಲಕ್ಕೆ ಒರಗಿದಾಗ ಅನುಮಾನಗೊಂಡು ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಫಿಡ್ಸ್ ಕಾಯಿಲೆ ಇರಬಹುದು ಎಂದು ಕೆಲವರು ಕೀಲಿ ಕೈ ಅವರ ಕೈಗಿಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಆ ವೇಳೆಗಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮುಸ್ತಾಕ್ ಅವರು ಮಸೀದಿ ಒಳಗೆ ಹೃದಯಾಘಾತಕ್ಕೆ ಒಳಗಾದ ದೃಶ್ಯ ಮಸೀದಿಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
- FILM5 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- LATEST NEWS5 days ago
ನ.8 ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ನಿವೃತ್ತಿ..! 15 ದಿನದಲ್ಲಿ 8 ಪ್ರಮುಖ ತೀರ್ಪು ಸಾಧ್ಯತೆ..!
- DAKSHINA KANNADA6 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು
- BIG BOSS6 days ago
ಇದೇ ಕಾರಣಕ್ಕೆ ಮೊದಲ ವಾರವೇ ಯಮುನಾ ಶ್ರೀ ನಿಧಿ ಬಿಗ್ಬಾಸ್ ಮನೆಯಿಂದ ಔಟ್ ಆದದ್ದು..!