DAKSHINA KANNADA
ಪುತ್ತೂರು ಕಾಂಗ್ರೆಸ್ ಮುಖಂಡನ ಅಶ್ಲೀ*ಲ ವೀಡಿಯೋ ವೈರಲ್..!
ಪುತ್ತೂರು : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡನೊಬ್ಬನ ಅಶ್ಲೀ*ಲ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಪುಕ್ಕಟೆ ಸಲಹೆ ನೀಡುತ್ತಿದ್ದ ಅದ್ದು ಪಡೀಲ್ ಎಂಬ ಈ ಕಾಂಗ್ರೆಸ್ ನಾಯಕ ಈಗ ಅಶ್ಲೀ*ಲ ವೀಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ಧಿಯಾಗಿದ್ದಾರೆ.
ಸಾರ್ವಜನಿಕರ ಆಕ್ರೋಶ; ನಾನಲ್ಲ ಎಂದ ಅದ್ದು :
ಹಣ ಪಾವತಿಸಿದರೆ ಸಿಗುವ ಆನ್‌ಲೈನ್ ಸೆ*ಕ್ಸ್ ಫ್ಲಾಟ್‌ಫಾರಂನಲ್ಲಿ ಅದ್ದು ಪಡೀಲ್ ವೀಡಿಯೋ ಚಾಟಿಂಗ್ ಮಾಡಿದ್ದಾರೆ. ಧಾರ್ಮಿಕ ಕೇಂದ್ರವೊಂದರಲ್ಲಿ ಈ ವೀಡಿಯೋ ಚಾಟಿಂಗ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಊರಿಗೆ ಬುದ್ದಿ ಹೇಳುವ ವ್ಯಕ್ತಿಯ ಈ ರೀತಿಯ ವರ್ತನೆ ಎಷ್ಟು ಸರಿ ಎಂಬ ಬಗ್ಗೆ ಜನರೇ ಅದ್ದು ಪಡೀಲ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಆದ್ರೆ, ಈ ವಿಡಿಯೋ ಬಗ್ಗೆ ಮಾತನಾಡಿರುವ ಅದ್ದು ಪಡೀಲ್ ಈ ವೀಡಿಯೋಗು ನನಗೂ ಯಾವುದೇ ಸಂಬಂಧವಿಲ್ಲ. ಇದು ಟೆಕ್ನಾಲಜಿ ಬಳಸಿ ಮಾರ್ಫಿಂಗ್ ಮಾಡಿ ನನ್ನಂತೆ ತೋರಿಸಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ.
ಇದನ್ನೂ ಓದಿ : ವಿಮಾನದಲ್ಲಿ ನೀಡಿದ ಆಮ್ಲೆಟ್‌ನಲ್ಲಿ ಜಿರಳೆ..! ಪೋಸ್ಟ್ ವೈರಲ್ ..!
ಆದ್ರೆ, ಅದ್ದು ಪಡೀಲ್ ಅವರ ಈ ಉತ್ತರ ಪುತ್ತೂರಿನ ಜನ ನಂಬಿಲ್ಲ. ಈ ಬಗ್ಗೆ ತನಿಖೆ ನಡೆಸಲು ಅದ್ದು ಪಡೀಲ್ ಅವರೇ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಸಿಗುವ ಇಂತಹ ಸೈಟ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಇಲಾಖೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು
DAKSHINA KANNADA
ಕಟೀಲು, ಕುದ್ರೋಳಿ ಕ್ಷೇತ್ರಕ್ಕೆ ನಟ ಸಂಜಯ್ ದತ್ ಭೇಟಿ
ಮಂಗಳೂರು : ಮಂಗಳೂರು ದಸರಾ ಬಲು ಸುಂದರ. ಪ್ರತೀ ವರ್ಷ ಅಬ್ಬರದಿಂದ ನಡೆವ ಮಂಗಳೂರು ದಸರಾಗೆ ಮನಸೋಲದವರಿಲ್ಲ. ವೈಭವದ ಸಂಭ್ರಮಕ್ಕೆ ಪ್ರತಿ ವರ್ಷ ಸಿನಿತಾರೆಯರು ಮೆರುಗು ನೀಡುತ್ತಾರೆ. ಈ ಬಾರಿ ಬಾಲಿವುಡ್ ನಟ ಸಂಜಯ್ ದತ್ ಬಂದಿದ್ದರು. ಮೊದಲು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿಯ ದರ್ಶನ ಪಡೆದ ಅವರು, ಬಳಿಕ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದರ್ಬಾರ್ ಹಾಲ್ ಗೆ ತೆರಳಿ ದೇವಿಯರ ವಿಗ್ರಹ ಕಣ್ತುಂಬಿಕೊಂಡರು. ಶಾರದೆ ಮಾತೆಗೆ ನಮಿಸಿದರು.
ಎರಡೂ ದೇವಸ್ಥಾನದಲ್ಲಿ ಸಂಜಯ್ ದತ್ ರಿಗೆ ದೇವರ ಶೇಷ ವಸ್ತ್ರ ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು.
ಬಳಿಕ ಅವರು ಹುಲಿ ಕುಣಿತದ ಊದು ಪೂಜೆಯಲ್ಲಿ ಭಾಗಿಯಾದರು. ಪಿಲಿ ನಲಿಕೆ ನೋಡಿ ಆನಂದಿಸಿದರು. ಬಳ್ಳಾಲಭಾಗ್ ನಲ್ಲಿ ನಡೆದಿದ್ದ ಈ ಊದು ಪೂಜೆ ಕಾರ್ಯಕ್ರಮಕ್ಕೆ ನಟ ಸಂಜಯತ್ ದತ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡರು. ತಮ್ಮ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದರು.
DAKSHINA KANNADA
‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ….!!
‘ಮಂಗಳೂರು; ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಚರಿಸಲಾಗುತ್ತಿರುವ ‘ಮಂಗಳೂರು ದಸರಾ’ ಸಂಭ್ರಮದ ಬೃಹತ್ ಶೋಭಾಯಾತ್ರೆ ಇಂದು (ಅ.13) ಸಂಜೆ 4 ಗಂಟೆಗೆ ಆರಂಭವಾಗಿ ನಾಳೆ (ಅ.14) ಮುಂಜಾನೆ ಶಾರದೆಯ ಜಲಸ್ತಂಭನದ ಮೂಲಕ ಸಮಾಪನಗೊಳ್ಳಲಿದೆ.
ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ಧನ ಪೂಜಾರಿ ನೇತೃತ್ವದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಶ್ರೀ ಮಹಾಗಣಪತಿ, ನವದುರ್ಗೆಯರ ಹಾಗೂ ಶಾರದಾ ಮಾತೆಯ ವರ್ಣರಂಜಿತ ಬೃಹತ್ ದಸರಾ ಶೋಭಾಯಾತ್ರೆ, ಅತ್ಯಾಕರ್ಷಕ ವಿದ್ಯುತ್ ದೀಪದ ಅಲಂಕೃತ ಮಂಟಪದೊಂದಿಗೆ ಹೊರಡಲಿದೆ.
ಶೋಭಾಯಾತ್ರೆಗೆ ಹಲವು ಸ್ತಬ್ಧಚಿತ್ರಗಳು, ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಕಲಾತಂಡಗಳು ಹುಲಿ ವೇಷ ಸಹಿತ ಇತರ ವೇಷಗಳು, ಚೆಂಡೆ ತಂಡಗಳು ಮೆರುಗು ನೀಡಲಿದೆ.
ಊದು ಪೂಜೆ ಸಹಿತ ಭಾರೀ ವೈಭವದಿಂದ ಜರುಗುವ ಶಾಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಉರು ಮಾತ್ರವಲ್ಲದೆ ಪರವೂರಿನಿಂದಲೂ ಲಕ್ಷಾಂತರ ಮಂದಿ ಆಗಮಿಸಲಿದ್ದಾರೆ. ಗಣ್ಯಾತಿಗಣ್ಯರು ಹಾಜರಾಗಲಿದ್ದು, ಸಂಭ್ರಮ ದುಪ್ಪಟ್ಟಾಗುವ ನಿರೀಕ್ಷೆಯಿದ್ದು, ಇನ್ನೇನು ಕೆಲವೇ ಕ್ಷಣಗಳಷ್ಟೇ ಉಳಿದಿದೆ.
BELTHANGADY
ಗುರುವಾಯನಕೆರೆ – ಹೊಂಡ ತಪ್ಪಿಸಲು ಹೋಗಿ ಕಾರುಗಳು ಜ*ಖಂ
ಗುರುವಾಯನಕೆರೆ: ಇಂದು (ಅ.12) ಮುಂಜಾನೆ ಎರಡು ಕಾರುಗಳ ನಡೆವೆ ಭೀಕರ ಅ*ಪಘಾತವು ಗುರುವಾಯನಕೆರೆ ಶಕ್ತಿನಗರದಲ್ಲಿ ಸಂಭವಿಸಿದೆ.
ಗುರುವಾಯನಕೆರೆಯಿಂದ ಹೆಬ್ರಿ ಕಡೆಗೆ ಹೋಗುವ ಸ್ಕೋಡಾ ಕಾರು ಮತ್ತು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಐ20 ಕಾರಿನ ನಡೆವೆ ಅ*ಪಘಾತ ಸಂಭವಿಸಿದೆ.
ಐ 20 ಕಾರು ಚಾಲಕ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ ಎಂಬುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಪ್ಪಿನಂಗಡಿ| ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್: ಚಾಲಕ ಮೃ*ತ್ಯು
ಎರಡೂ ಕಾರು ಉಲ್ಟಾ ಬಿದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿಲ್ಲ ಎಂಬುವುದು ತಿಳಿದು ಬಂದಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- FILM5 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- LATEST NEWS5 days ago
ನ.8 ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ನಿವೃತ್ತಿ..! 15 ದಿನದಲ್ಲಿ 8 ಪ್ರಮುಖ ತೀರ್ಪು ಸಾಧ್ಯತೆ..!
- DAKSHINA KANNADA6 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು
- BIG BOSS6 days ago
ಇದೇ ಕಾರಣಕ್ಕೆ ಮೊದಲ ವಾರವೇ ಯಮುನಾ ಶ್ರೀ ನಿಧಿ ಬಿಗ್ಬಾಸ್ ಮನೆಯಿಂದ ಔಟ್ ಆದದ್ದು..!