ನವದೆಹಲಿ: ಇನ್ನು ಮುಂದೆ ಸ್ಪಾ, ಮಸಾಜ್ ಸೆಂಟರ್‌ಗಳಲ್ಲಿ ಪುರುಷರು ಮಹಿಳೆಯರ ಬಳಿ, ಮಹಿಳೆಯರು ಪುರುಷರ ಬಳಿ ಮಸಾಜ್ ಮಾಡಿಸಿಕೊಳ್ಳುವಂತಿಲ್ಲ ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿದ್ದಾರೆ.
ಸ್ಪಾ ಸೆಂಟರ್‌ಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂಥದ್ದೊಂದು ಮಾರ್ಗಸೂಚಿ ಜಾರಿಗೆ ತರಲಾಗಿದೆ.
ಕೆಲವು ತಿಂಗಳುಗಳಿಂದ ಸ್ಪಾ ಸೆಂಟರ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆಯೂ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಇದರ ಅನ್ವಯ ಸ್ಪಾ ಕೇಂದ್ರಗಳಲ್ಲಿ ಪುರುಷನಿಂದ ಪುರುಷರಿಗೆ ಹಾಗೂ ಮಹಿಳೆಯಿಂದ ಮಹಿಳೆಗೆ ಮಾತ್ರ ಮಸಾಜ್ ಮಾಡಲು ಅವಕಾಶ ನೀಡಲಾಗಿದೆ.
ಪೂರ್ವ ದೆಹಲಿಯಲ್ಲಿ ಪ್ರಸ್ತುತ 70ಕ್ಕೂ ಹೆಚ್ಚಿನ ಸ್ಪಾ ಕೇಂದ್ರಗಳಿದ್ದು, ಅದರಲ್ಲಿ 41 ಕೇಂದ್ರಗಳು ಮಾತ್ರ ಪರವಾನಿಗೆಯೊಂದಿಗೆ ನಡೆಯುತ್ತಿವೆ.
ಇದರ ಜತೆಗೆ, ಸ್ಪಾ ಕೇಂದ್ರದಲ್ಲಿರುವ ಗ್ರಾಹಕರು ಮತ್ತು ಸಿಬ್ಬಂದಿ ಕರೊನಾ ನಿಮಯ ಪಾಲನೆ ಮಾಡಬೇಕು.
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಸಾಜ್ ಸಂದರ್ಭಗಳಲ್ಲಿ ಪಿಪಿಇ ಕಿಟ್ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.