Saturday, May 21, 2022

ಕಡಬ: ನಾಪತ್ತೆಯಾಗಿದ್ದ ಬಾಲಕ ಸಂಬಂಧಿಕರ ಮನೆಯಲ್ಲಿ ಪತ್ತೆ

ಕಡಬ : ವಿದ್ಯಾರ್ಥಿ ನಿಲಯದಿಂದ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಕಾಣೆಯಾದ ಬಗ್ಗೆ ನಿನ್ನೆ ವರದಿಯಾಗಿತ್ತು, ಇಂದು ಆತ ಸಂಬಂಧಿಕರ ಮನೆಯಲ್ಲಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.

ನಿನ್ನೆ ಕಡಬದ ಶ್ರೀ ರಾಮಕುಂಜೆಶ್ವರ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿ ಯಲ್ಲಿ ವ್ಯಾ  ಸಂಗ ಮಾಡುತ್ತಿದ್ದ ಅಂಜನ್ ಸಿ.ಎಮ್ ಎಂಬ ಅಪ್ರಾಪ್ತ ಬಾಲಕ ಬೆಳಿಗ್ಗೆ 9 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದು,

ನಂತರ ಮಧ್ಯಾಹ್ನ 12.40 ಕ್ಕೆ ಕಾಲೇಜು ವಿದ್ಯಾರ್ಥಿಗಳು ಊಟಕ್ಕೆಂದು ವಸತಿ ನಿಲಯಕ್ಕೆ ಬಂದಾಗ ಅಂಜನ್ ಕಾಲೇಜಿಗೆ ಹೋಗದೇ ಇರುವ ವಿಚಾರ ವಿದ್ಯಾರ್ಥಿಗಳಿಂದ ವಸತಿ ನಿಲಯದ ಮ್ಯಾನೇಜರ್ ಗೆ ತಿಳಿದು ಬಂದಿದ್ದು,

ನಂತರ ಎಲ್ಲಾ ಕಡೆ ವಿಚಾರಿಸಿದಾಗ ಎಲ್ಲೂ ಇಲ್ಲದನ್ನು ತಿಳಿದ ಬಳಿಕ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಸಂಬಂಧಿಕರ ಮನೆಯಲ್ಲಿ ಆತ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here

Hot Topics

ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ನಾಳೆ ‘ಟೆಡೆಕ್ಸ್‌’ ಭಾಷಣ ಸರಣಿ

ಮಂಗಳೂರು: ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಟೆಡೆಕ್ಸ್‌ನ ಭಾಷಣ ಸರಣಿ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಮೇ 22ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಫಾದರ್ ಡಾ ಪ್ರವೀಣ್‌ ಮಾರ್ಟಿಸ್‌ ಅವರು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ...

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿ

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿಯಾಗಿ ಕಾರು ಹಾಗೂ ಬಸ್ಸು ಜಖಂಗೊಂಡ ಘಟನೆ ಪುತ್ತೂರು–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಇಂದು ಬೆಳಿಗ್ಗೆ 7.30ರ ಸುಮಾರಿಗೆ ಕೋಡಿಂಬಾಡಿಯ ವಿನಾಯಕ ನಗರದ...

ನಾರಾಯಣ ಗುರು ಹೆಸರಿನಲ್ಲಿ ಪದ್ಮರಾಜ್‌ ಟಿಕೆಟ್‌ ಲಾಬಿ: ಹರಿಕೃಷ್ಣ ಬಂಟ್ವಾಳ್‌ ವಾಗ್ದಾಳಿ

ಮಂಗಳೂರು: ಕುದ್ರೋಳಿ ಗೋಕರ್ಣ ಕ್ಷೇತ್ರದಲ್ಲೊ ಒಬ್ಬರು ಇದ್ದಾರೆ. ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಬೇಕು. ಬರ್ಬೇಕಾದ್ರೆ ಕಾಂಗ್ರೆಸ್‌ ಅಂಗಳದಲ್ಲಿ ಒಂದು ಜಾಗ ಬೇಕು ಅಲ್ವಾ. ಅದಕ್ಕಾಗಿ ಇದನ್ನು ಎಬ್ಬಿಸಿ ಜಾಗ ಕೊಡ್ತಾರಾ ಅಂತ ನೋಡ್ತಾರೆ...