Connect with us

LATEST NEWS

ಮದ್ಯಪಾನ ಮಾಡುವವರು ಮಹಾಪಾಪಿಗಳು: ಬಿಹಾರ ಸಿಎಂ ನಿತೀಶ್‌ ಕುಮಾರ್‌

Published

on

ಪಾಟ್ನಾ: ಮದ್ಯಪಾನ ಮಾಡುವವರು ಮಹಾಪಾಪಿಗಳು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.


ವಿಧಾನಸಭೆಯಲ್ಲಿ ಗುರುವಾರ ಮದ್ಯಪಾನ ನಿಷೇಧದ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿಯವರು ಕೂಡ ಮದ್ಯಪಾನ ವಿರೋಧಿಗಳಾಗಿದ್ದರು.

ಅವರ ಮಾತು ಪಾಲಿಸದವರು ಮತ್ತು ಮದ್ಯಪಾನ ಮಾಡುವವರನ್ನು ಭಾರತೀಯರು ಎಂದು ನಾನು ಪರಿಗಣಿಸುವುದಿಲ್ಲ’ ಎಂದು ಹೇಳಿದ್ದಾರೆ. ಗಾಂಧೀಜಿಯವರು ಮದ್ಯಪಾನದಿಂದಾಗುವ ಹಾನಿಯ ಕುರಿತು ಭಾಷಣ ಮಾಡಿದ್ದರು.

ಮದ್ಯಪಾನ ಮಾಡುವುದು ತಪ್ಪು ಎನ್ನುವುದು ಜನರಿಗೆ ತಿಳಿದಿದ್ದರೂ, ಮತ್ತೆ ಅದನ್ನು ಮುಂದುವರಿಸುವುದು ಸರಿಯಲ್ಲ ಎಂದು ನಿತೀಶ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ

Published

on

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದಲೇ ಆರಂಭಗೊಂಡಿದೆ.

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇದಾಗಿದ್ದು, ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನವಾಗಿದೆ. ಮತದಾರರು ತಮ್ಮ ತಮ್ಮ ಮತ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡುತ್ತಿದ್ದಾರೆ.

ಅದರಂತೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ತುಮಕೂರು, ಕೋಲಾರ, ಹಾಸನ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

Continue Reading

DAKSHINA KANNADA

ನರ್ಸ್‌ಗೆ ಶಾಕ್ ನೀಡಿದ ಅಂಬ್ಯುಲೆನ್ಸ್‌..! ಇದು ಮನಕಲಕುವ ಘಟನೆ..!

Published

on

ನಿರಂಜಿನಿ… ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿರೋ ಆಸ್ಪತ್ರೆಯ ತುರ್ತು ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವತಿ. ಮುಂಜಾನೆ ಆಸ್ಪತ್ರೆಗೆ ಬಂದ್ರೆ ಡ್ಯೂಟಿ ಮುಗಿಸಿ ಮತ್ತೆ ಮನೆಗೆ ವಾಪಾಸಾಗೋದು ಸಂಜೆಯ ವೇಳೆಗೆ. ಆಸ್ಪತ್ರೆಯಲ್ಲಿರೋ ಆಕೆಗೆ ಸಾವು ನೋವು ಎಲ್ಲವನ್ನೂ ನೋಡಿ ಅಭ್ಯಾಸ ಆಗಿದೆ. ಆದ್ರೆ ಇಂದು ಮಾತ್ರ ಅಂಬ್ಯುಲೆನ್ಸ್‌ನಲ್ಲಿ ಬಂದಿರೋ ಮೃತ ದೇಹ ನೋಡಿ ಆಕೆಯ ಆಕ್ರಂದನ ಮುಗಿಲು ಮುಟ್ಟಿದೆ. ಆಕೆಯ ಆಕ್ರಂದನ ನೋಡಿ ಶಾಕ್ ಆದ ಇತರ ಸಿಬ್ಬಂದಿ ವಿಚಾರ ತಿಳಿದ ಬಳಿಕ ತಾವೂ ಕಂಬನಿ ಮಿಡಿದಿದ್ದಾರೆ.

ಇಂದು ನಿರಂಜಿನಿ ಆಸ್ಪತ್ರೆಗೆ ಬಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಡ್ಯೂಟಿಯಲ್ಲಿದ್ದ ವೇಳೆ ಅಂಬ್ಯುಲೆನ್ಸ್ ಒಂದು ವೇಗವಾಗಿ ಬಂದು ಗಂಭೀರವಾಗಿದ್ದ ಇಬ್ಬರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಶಿಫ್ಟ್‌ ಮಾಡಿದೆ. ದೇಹ ಜರ್ಜರಿತವಾಗಿದ್ದ ಒಂದು ದೇಹವನ್ನು ಅಂಬ್ಯುಲೆನ್ಸ್‌ನಿಂದ ಇಳಿಸಿದಾಗ ಅದಾಗಲೇ ಆ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮತ್ತೊಂದು ಮಹಿಳೆಯೂ ಗಂಭೀರವಾಗಿದ್ದು ತಕ್ಷಣ ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈ ವೇಳೆ ಮೃತ ದೇಹವನ್ನು ನೋಡಿದ ನಿರಂಜನಿ ಇದ್ದಕ್ಕಿದ್ದಂತೆ ಜೋರಾಗಿ ಅಳಲು ಆರಂಭಿಸಿದ್ದಾಳೆ. ಆಕೆಯ ಅಳುವಿಗೆ ಕಾರಣವಾಗಿದ್ದು ಅಲ್ಲಿದ್ದ ಮೃತ ದೇಹ ಆಕೆಯ ತಂದೆಯದೇ ಆಗಿದ್ದು.

ಮುಂಜಾನೆ ತಂದೆ ತಾಯಿ ಇಬ್ಬರೂ ಅಜ್ಜಾವರ ಗ್ರಾಮದಲ್ಲಿನ ಕೆಎಫ್‌ಡಿಸಿಗೆ ಕೆಲಸಕ್ಕೆ ಹೋಗಿ ವಾಪಾಸಾಗುವಾಗ ಜೀಪ್ ಒಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.  ಜೀಪ್ ಅಡಿಗೆ ಬಿದ್ದಿದ್ದ ತಂದೆ ವಿನಾಯಕ ಮೂರ್ತಿ ಮೃ*ತ ಪಟ್ಟಿದ್ದರೆ, ತಾಯಿ ಮಂಜುಳ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ ಇದ್ಯಾವುದು ವಿಚಾರ ಗೊತ್ತಿಲ್ಲದ ನಿರಂಜಿನಿ ಎಂದಿನಂತೆ ಇದೂ ಒಂದು ಅಕ್ಸಿಡೆಂಟ್ ಕೇಸ್ ಅಂತ ಅಟೆಂಡ್ ಮಾಡಲು ಹೋಗಿದ್ದಾಳೆ. ಅಂಬ್ಯುಲೆನ್ಸ್‌ನಲ್ಲಿ ತಂದೆಯ ಮೃತ ದೇಹ ಹಾಗೂ ಪ್ರಜ್ಞಾ ಹೀನ ಸ್ಥಿತಿಯಲ್ಲಿ ತಾಯಿಯನ್ನ ನೋಡಿದ್ರೆ ಮಗಳ ಪರಿಸ್ಥಿತಿ ಹೇಗಿರಬಹುದು ಅನ್ನೋದು ಊಹಿಸಲೂ ಅಸಾದ್ಯ. ತಾಯಿ ಮಂಜುಳ ಪರಿಸ್ಥಿತಿ ಕೂಡಾ ಗಂಭೀರವಾಗಿದ್ದು, ಬೆನ್ನು ಮೂಳೆಗೆ ಗಾಯವಾದ ಮಾಹಿತಿ ಇದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

LATEST NEWS

ಹೋಟೆಲ್​ನಲ್ಲಿ ಅ*ಗ್ನಿ ದುರಂತ; 6 ಮಂದಿ ಸಜೀವ ದ*ಹನ

Published

on

ಪಾಟ್ನಾ: ಹೋಟೆಲ್​ವೊಂದರಲ್ಲಿ ಆಕಸ್ಮಿಕವಾಗಿ ಬೆಂ*ಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 6 ಜನರು ಸಜೀವವಾಗಿ ದಹನಗೊಂಡು ಸಾ*ವನ್ನಪ್ಪಿದ್ದು ಹಲವು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ ಪಾಟ್ನಾದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ರೈಲು ನಿಲ್ದಾಣದ ಸಮೀಪದ ಹೋಟೆಲ್​ನಲ್ಲಿ ಬೆಂ*ಕಿ ಹೊತ್ತಿಕೊಂಡ ಪರಿಣಾಮ ಸ್ಥಳದಲ್ಲೇ 6 ಜನರು ಮೃ*ತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಹೋಟೆಲ್‌ ಒಳಗಿದ್ದ ಹಲವರನ್ನು ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಬೆಂ*ಕಿಯಿಂದಾಗಿ ಹೋಟೆಲ್​​ನಲ್ಲಿನ ಎಲ್ಲ ವಸ್ತುಗಳೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.

ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅ*ಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಾಹಿತಿ ಪ್ರಕಾರ ಹೋಟೆಲ್​ನಲ್ಲಿನ ಸುಮಾರು 45 ಜನರನ್ನು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಕಿಯಿಂದಾಗಿ ಸುಟ್ಟಗಾಯಗಳಿಂದ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಹೋಟೆಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬೆಂ*ಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅಲ್ಲದೇ ಹೋಟೆಲ್​ನಲ್ಲಿ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಅನುಸರಿಸದ ಕಾರಣ 6 ಜನರ ಸಾ*ವಿಗೆ ಕಾರಣವಾಗಿದೆ. ಸದ್ಯ ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

LATEST NEWS

Trending