ಕಾಸರಗೋಡು: ತುಂಬು ಗರ್ಭಿಣಿಯಾಗಿದ್ದ ಆಡನ್ನು ಸಾಮೂಹಿಕ ಅತ್ಯಾಚಾರಗೈದು ನಂತರ ಅದನ್ನು ಕೊಂದು ಹಾಕಿದ ಅಮಾನವೀಯ ಘಟನೆ ಕೇರಳದ ಕಾಞಂಗಾಡು ಪೇಟೆಯಲ್ಲಿ ನಡೆದಿದೆ.
ಕೊಟ್ಟಚೇರಿಯ ಎಲೈಟ್ ಹೋಟೆಲ್‌ಗೆ ಸೇರಿದ ಮೇಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಇನ್ನೊಂದು ತಿಂಗಳಲ್ಲಿ ಜನ್ಮ ನೀಡುವುದರಲ್ಲಿತ್ತು.
ನಿನ್ನೆ ಬೆಳಗಿನ ಜಾವ 1.30ರ ಸುಮಾರಿಗೆ ಹೊಟೇಲ್‌ನ ನೌಕರರು ಹಿತ್ತಲಲ್ಲಿ ಗಲಾಟೆ ಕೇಳಿದ್ದು, ಎರಡು ಮೇಕೆ, ಬೆಕ್ಕು ಇತ್ತು. ಅವರು ಧಾವಿಸಿ ನೋಡಿದಾಗ, ಮೂವರು ಪುರುಷರು ಗೋಡೆ ಹಾರಿ ಪರಾರಿಯಾಗುವುದನ್ನು ನೋಡಿದರು.
ಈ ಸಂಬಂಧ ಹೊಟೇಲ್‌ನ ಉದ್ಯೋಗಿ ಸೆಂಥಿಲ್ ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಇತರ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಡು ಸತ್ತಿರುವುದು ಕಂಡುಬಂದಿದ್ದು ಅದರ ಮೇಲೆ ಲೈಂಗಿಕ ದೌರ್ಜನ್ಯದ ಲಕ್ಷಣ ಕಂಡುಬಂದಿದೆ.
ಹೊಸದುರ್ಗ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡು ಮೂಲದ ಸೆಂಥಿಲ್ ಮೂರೂವರೆ ತಿಂಗಳ ಹಿಂದೆ ಕೆಲಸ ಅರಸಿ ಬಂದಿದ್ದ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377 ರ ಅಡಿಯಲ್ಲಿ ಅಸ್ವಾಭಾವಿಕ ಅಪರಾಧಗಳ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಸಾಬೀತಾದರೆ, ಅವರು ಜೀವಾವಧಿ ಅಥವಾ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ.
ಮೂವರು ಪುರುಷರು ತುಂಬು ಗರ್ಭಿಣಿ ಮೇಕೆಯನ್ನು ಲೈಂಗಿಕ ದೌರ್ಜನ್ಯ ನಡೆಸಿ ಕೊಂದು ಹಾಕಿದ್ದಾರೆ ಎಂದು ಹೊಸದುರ್ಗ ಪೊಲೀಸರು ತಿಳಿಸಿದ್ದಾರೆ.