Connect with us

bihar

ಶಾಲೆಯ ಕಚೇರಿಯನ್ನೇ ಮನೆ ಮಾಡಿಕೊಂಡ ಪ್ರಿನ್ಸಿಪಾಲ್…!

Published

on

ಪಾಟ್ನಾ: ಪಕ್ಕದ ಗ್ರಾಮದಲ್ಲಿ ಮನೆ ಕಟ್ಟಿಕೊಳ್ಳುತ್ತಿರುವ ನೆಪ ಒಡ್ಡಿ ಶಾಲೆಯ ಕೊಠಡಿಯೊಂದನ್ನೇ ರೂಮ್‌ ಆಗಿ ಮಾಡಿಕೊಂಡ ಪ್ರಿನ್ಸಿಪಾಲ್ ಒಬ್ಬನ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ಶಾಲಾ ಕೊಠಡಿಯಲ್ಲಿ ಬೆಡ್‌, ಕಪಾಟು , ಫ್ರಿಡ್ಜ್‌ ,ಟಿವಿ , ಇಟ್ಟು ಐಶಾರಾಮಿ ರೂಮ್ ಮಾಡಿಕೊಂಡು ಅಡುಗೆಗೆ ಕಿಚನ್ ಕೂಡಾ ಮಾಡಿಕೊಂಡಿದ್ದಾನೆ.

ಬಿಹಾರ ರಾಜ್ನಯದ ನಕ್ಸಲ್ ಪೀಡಿತ ಜಿಲ್ಲೆಯಾಗಿರೋ  ಜಮೂಯಿ ಜಿಲ್ಲೆಯ ಬರ್ದೂಲ್ ಎಂಬಲ್ಲಿ ಈ ಘಟನೆ ನಡೆದಿದೆ .  ಮೇಲ್ದರ್ಜೆಗೇರಿಸಿದ ಮಾಧ್ಯಮಿಕ ಶಾಲೆಯ ಪ್ರಿನ್ಸಿಪಾಲ್ ಶೀಳಾ ಹೆಂಬ್ರಾಮ್ ಎಂಬಾತ ಶಾಲೆಯ ಕೊಠಡಿಯನ್ನೇ ಮನೆ ಮಾಡಿಕೊಂಡು ಅಲ್ಲೇ ವಾಸ ಮಾಡಿಕೊಂಡಿದ್ದಾನೆ. ಮನೆ ಕಟ್ಟುವ ನೆಪದಲ್ಲಿ ಎಲ್ಲಾ ಗೃಹಪಯೋಗಿ ವಸ್ತುಗಳನ್ನು ಶಾಲೆಗೆ ತಂದು ಅಲ್ಲೇ ಇರೋ ಕೊಠಡಿಯೊಂದನ್ನು ರೂಮಾಗಿ ಪರಿವರ್ತಿಸಿಕೊಂಡಿದ್ದಾನೆ. ಶಾಲೆಯ ಕಚೇರಿಯ ಕೊಠಡಿಯನ್ನು ರೂಮ್‌ ಆಗಿ ಪರಿವರ್ತಿಸಿದ್ದರೆ, ಇತರ ಕೊಠಡಿಯನ್ನ ಮನೆ ನಿರ್ಮಾಣದ ಸಾಮಾಗ್ರಿ ದಾಸ್ತಾನು ಇರಿಸೋ ಗೋಡೌನ್ ತರ ಮಾಡಿಕೊಂಡಿದ್ದಾನೆ. ಸಮಾಜಿಕ ಜಾಲತಾಣದಲ್ಲಿ ಈತನ ವಿಚಾರ ವೈರಲ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತನಿಕೆ ನಡೆಸಿದ್ದಾರೆ. 150 ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ 1 ರಿಂದ 8 ನೇ ತರಗತಿ ವರೆಗಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 150 ಮಕ್ಕಳಿಗೆ ಮೂರು ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದ್ದು, ಉಳಿದ ಕೊಠಡಿಯನ್ನು ಪ್ರಿನ್ಸಿಪಾ್ ಶೀಳಾ ಹೆಂಬ್ರಾಮ್ ಅತಿಕ್ರಮಿಸಿಕೊಂಡಿದ್ದು ತನಿಕೆಯಿಂದ ಬಹಿರಂಗವಾಗಿದೆ. ಇನ್ನು ಮನೆ ಸಾಮಾಗ್ರಿಯನ್ನು ಸಾಗಿಸಲು ಶಾಲೆಯ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳುತ್ತಿದ್ದ ಅನ್ನೋದು ಕೂಡಾ ತಿಳಿದು ಬಂದಿದೆ. ಆದ್ರೆ ಇದ್ರಲ್ಲಿ ನಂದೇನೂ ತಪ್ಪಿಲ್ಲ ನಾನು ಹೋಗಲು ಗ್ರಾಮಸ್ಥರೇ ಬಿಡ್ತಾ ಇಲ್ಲ ಎಂದಿರೋ ಪ್ರಿನ್ಸಿಪಾಲ್‌ ಮನೆ ಪೂರ್ಣಗೊಂಡ ತಕ್ಷಣ ಶಾಲೆಯಿಂದ ಸಾಮಾನು ಖಾಲಿ ಮಾಡೋದಾಗಿ ಹೇಳಿದ್ದಾನೆ. ಆದ್ರೆ ಅಧಿಕಾರಿಗಳು ತಕ್ಷಣ ಶಾಲೆಯಿಂದ ಎಲ್ಲಾ ಸಾಮಾನು ತೆಗೆದುಕೊಂಡು ಬೇರೆಡೆ ರೂಮ್ ಮಾಡುವಂತೆ ಪ್ರಿನ್ಸಿಪಾಲರನ್ನು ಶಾಲೆಯಿಂದ ಹೊರಗಟ್ಟಿದ್ದಾರೆ.

bihar

WATCH VIDEO : ಬಿಹಾರಿ ಯುವಕನ ಮೇಲೆ ಹ*ಲ್ಲೆ ನಡೆಸಿದ ಮನೆ ಮಾಲೀಕ..!! ಸಿಸಿಟಿವಿಯಲ್ಲಿ ಸೆರೆಯಾಯ್ತು ನೀಚ ಕೃ*ತ್ಯ!

Published

on

ಮಂಗಳೂರು: ಹಿಂದೆಲ್ಲಾ ಮನುಷ್ಯತ್ವವನ್ನೇ ಮರೆತು ಹಲ್ಲೆ*ಗಳು ನಡೆಸಿದ ದೃಶ್ಯ ಕಂಡಾಗ ಎಲ್ಲೋ ಬಿಹಾರದಲ್ಲಿ ಇರಬೇಕು ಅಂತ ದಕ್ಷಿಣ ಭಾರತದ ಜನ ಮಾತನಾಡುತ್ತಿದ್ದರು. ಆದ್ರೆ ಅಂತಹ ಮನುಷ್ಯತ್ವ ಮೀರೀದ ವರ್ತನೆಯನ್ನು ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಹ*ಲ್ಲೆ ನಡೆಸಿದವನು ದಕ್ಷಿಣ ಕನ್ನಡದವನಾಗಿದ್ದರೆ ಹಲ್ಲೆಗೊಳಗಾದವರು ಬಿಹಾರದ ಹಿಂದುಳಿದ ಜಾತಿಗೆ ಸೇರಿದ ಯುವಕರು ಅನ್ನೋದೇ ವಿಪರ್ಯಾಸ. ಮನೆಯಲ್ಲಿ ದನದ ಕೆಲಸ ಮಾಡಲು ಬಂದಿದ್ದ ಬಿಹಾರದ ಇಬ್ಬರು ಯುವಕರ ಮೇಲೆ ಈ ಹಲ್ಲೆ ನಡೆಸಲಾಗಿದೆ, ಓರ್ವನ ಮೇಲೆ ಮನೆಯ ಯಜಮಾನ ಬೆಲ್ಟ್ ನಿಂದ ಹೊಡೆಯುತ್ತಿದ್ದರೆ ಮತ್ತೋರ್ವ ಆತನ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಈ ವೇಳೆ ಮನೆಯ ಹೆಂಗಸರೂ ಕೂಡಾ ಮನೆಯ ಯಜಮಾನನಿಗೆ ಹಲ್ಲೆಗೆ ಪ್ರಚೋಧನೆ ನೀಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ರೀತಿಯ ಅಮಾನುಷ ಹಲ್ಲೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲವಾದ್ರೂ ಹಲ್ಲೆ ನಡೆಸುವಾಗ “ಎಲ್ಲಿಟ್ಟಿದ್ದೀಯ ಹೇಳು ” ಎಂದು ಕೇಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ. ಹೀಗಾಗಿ ಇದು ಮನೆಯಲ್ಲಿ ಏನೋ ವಸ್ತು ಕಳುವಾಗಿರುವ ಹಿನ್ನಲೆಯಲ್ಲಿ ನಡೆಸಿದ ವಿಚಾರಣೆ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ …ಅಬ್ಬಾಬ್ಬಾ..! ಇವನು ಕಳ್ಳ ಮಾತ್ರವಲ್ಲ; ತನಿಖೆಯಲ್ಲಿ ಬಯಲಾಯ್ತು ಭಯಾನಕ ಕೃತ್ಯ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದು ಫರಂಗಿಪೇಟೆಯ ಸಮೀಪದ ಅರ್ಕುಳದಲ್ಲಿ ನಡೆದಿರುವ ಘಟನೆ ಅನ್ನೋ ಮಾಹಿತಿ ಕೂಡಾ ಲಭ್ಯವಾಗಿದೆ. ಹಲ್ಲೆಗೊಳಗಾದ ಯುವಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ಮೇಲೆ ಕಠಿಣ ಶಿಕ್ಷೆ ಆಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

 

Continue Reading

bihar

ಛಾತ್ ಪೂಜಾ ಸಂಭ್ರಮದಲ್ಲಿ 13 ಜೀವ ನೀರು ಪಾಲು..!

Published

on

ಪಾಟ್ನಾ: ಬಿಹಾರದಲ್ಲಿ ಛಾತ್ ಹಬ್ಬದ ಆಚರಣೆ ವೇಳೆ ವಿವಿಧ ಜಲ ಮೂಲಗಳಲ್ಲಿ ಮುಳುಗಿ ಒಟ್ಟು 13 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಟ್ನಾ, ಖಗಾರಿಯಾ, ಸಮಸ್ತಿಪುರ್, ಸಹರ್ಸಾ, ದಬರ್ಂಗಾ, ಮುಂಗೇರ್ ಮತ್ತು ಬೆಸುಸರೈಗಳಲ್ಲಿ ಈ ಸಾವುಗಳು ವರದಿಯಾಗಿವೆ. ಪಾಟ್ನಾ ಜಿಲ್ಲೆಯಲ್ಲಿ ಬ್ರಹ್ಮಪುರ ಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಖಗಾರಿಯಾದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಚೌತಮ್ ಮತ್ತು ಪರ್ಬಟಾ ಪ್ರದೇಶಗಳಲ್ಲಿ ಮೂವರು ಮುಳುಗಿದ್ದಾರೆ. ಅಲ್ಲದೆ, ದಬರ್ಂಗಾ ಮತ್ತು ಸಮಸ್ತಿಪುರ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಬೇಗುಸರೈ, ಮುಂಗರ್ ಮತ್ತು ಸಹರ್ಸಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಅವರ ಗುರುತು ಪತ್ತೆಗೆ ಅಧಿಕಾರಿಗಳು ಹಾಗೂ ಪೊಲೀಸರು (Police) ಕ್ರಮ ಕೈಗೊಂಡಿದ್ದಾರೆ. ಕಳೆದ ಬಾರಿ ಛಾತ್ ಹಬ್ಬದ ವೇಳೆ ಬಿಹಾರದಾದ್ಯಂತ ಸುಮಾರು 53 ಜನ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು.

Continue Reading

LATEST NEWS

Trending