Connect with us

LATEST NEWS

Karkala: 11 ವರ್ಷಗಳ ಹಿಂದೆ ನಡೆದ ಚಿನ್ನ ಕಳವು ಪ್ರಕರಣ- ಇಬ್ಬರು ಆರೋಪಿಗಳಿಗೆ ಶಿಕ್ಷೆ

Published

on

ಕಾರ್ಕಳದ ಕುಕ್ಕುಂದೂರು ಗ್ರಾಮದ ಜಯಂತಿನಗರದ ಮನೆಯೊದರಲ್ಲಿ 11ವರ್ಷಗಳ ಹಿಂದೆ ನಡೆದ ಚಿನ್ನಾಭರಣ ಮತ್ತು ನಗದು ಕಳವು ಪ್ರಕರಣವು ಕಾರ್ಕಳ ಪ್ರಧಾನ ಸಿವಿಲ್‌ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಲಯದಲ್ಲಿ ಸಾಬೀತಾಗಿದ್ದು, ಪ್ರಕರಣದ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಕಾರ್ಕಳ: ಕಾರ್ಕಳದ ಕುಕ್ಕುಂದೂರು ಗ್ರಾಮದ ಜಯಂತಿನಗರದ ಮನೆಯೊದರಲ್ಲಿ 11ವರ್ಷಗಳ ಹಿಂದೆ ನಡೆದ ಚಿನ್ನಾಭರಣ ಮತ್ತು ನಗದು ಕಳವು ಪ್ರಕರಣವು ಕಾರ್ಕಳ ಪ್ರಧಾನ ಸಿವಿಲ್‌ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಲಯದಲ್ಲಿ ಸಾಬೀತಾಗಿದ್ದು, ಪ್ರಕರಣದ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಆನಂದ ಹಾಗೂ ರತ್ನಾ ಅವರು ಶಿಕ್ಷೆಗೊಳಗಾದ ಆರೋಪಿಗಳು

2012 ಏಪ್ರಿಲ್ 27ರ ಮಧ್ಯರಾತ್ರಿ ಕಾರ್ಕಳದ ಕುಕ್ಕುಂದೂರು ಗ್ರಾಮದ ಜಯಂತಿನಗರ 2ನೇ ಕ್ರಾಸ್‌ ನಿವಾಸಿ ರಮಾ ಆಚಾರ್ಯ ಎಂಬವರ ಮನೆಯಿಂದ ಒಟ್ಟು ರೂ.90,000. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಆಗಿತ್ತು.

ಕಾರ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಾದ ಆನಂದ ಹಾಗೂ ರತ್ನಾ ಅವರನ್ನು ಬಂಧಿಸಿದ್ದರು.

ಪೋಲೀಸ್‌ ಉಪನಿರೀಕ್ಷಕರಾಗಿದ್ದ ಜಿ.ಎಂ. ನಾಯ್ಕರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ಕಾರ್ಕಳ ಪ್ರಧಾನ ಸಿವಿಲ್‌ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಧೀಶರಾದ ಚೇತನಾ ಎಸ್‌.ಎಫ್‌. ಇವರು ಆರೋಪಿಗಳ ವಿರುದ್ಧದ ಆರೋಪವು ಸಾಬೀತು ಆಗಿದೆ ಎಂದು ಅಭಿಪ್ರಾಯಪಟ್ಟು, ಆರೋಪಿ ಆನಂದನಿಗೆ ಐಪಿಸಿ ಕಲಂ.457ರ ಅನ್ವಯ 3 ವರ್ಷ 6 ತಿಂಗಳ ಸಜೆ ಮತ್ತು ರೂ.2,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆ, ಐಪಿಸಿ ಕಲಂ 380ರ ಅನ್ವಯ 2 ವರ್ಷಗಳ ಸಾದಾ ಸಜೆ ಮತ್ತು ರೂ.2,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆ ಹಾಗೂ ಆರೋಪಿ ರತ್ನಾಳಿಗೆ ಐಪಿಸಿ ಕಲಂ.414 ಅನ್ವಯ 6 ತಿಂಗಳ ಸಾಮಾನ್ಯ ಸಜೆ ಮತ್ತು ರೂ.5,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.

ಸಿಆರ್ ಪಿಸಿ 367ರ ಅನ್ವಯ ಸಂತ್ರಸ್ತ ಮಹಿಳೆ ರಮಾ ಆಚಾರ್ಯ ಅವರಿಗೆ 4,000ವನ್ನು ಪರಿಹಾರದ ರೂಪದಲ್ಲಿ ಹಣವನ್ನು ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ.

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ರಾಜಶೇಖರ ಪಿ ಶಾಮರಾವ್‌ ಅವರು ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

Moodabidri: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅರೆಸ್ಟ್..!

Published

on

ಮೂಡುಬಿದಿರೆ: ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡವು ಬುಧವಾರ ವಶಕ್ಕೆ ಪಡೆದಿದೆ.

ಬೆಳುವಾಯಿ ನಿವಾಸಿಗಳಾದ ಮಹಮ್ಮದ್ ಅಯಾನ್ (22), ಫರ್ಹಾನ್ ಖಾನ್ (18) ಹಾಗೂ ಶೇಖ್ ಮುಹಮ್ಮದ್ ಜುಬೈರ್ (19) ಬಂಧಿತ ಆರೋಪಿಗಳು.

ಮೂವರು ಆರೋಪಿಗಳು ಬೆಳುವಾಯಿ ಕಾಂತಾವಾರ ದ್ವಾರದ ಬಳಿ ಸ್ಕೂಟರ್ ನಲ್ಲಿ ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂದ ಖಚಿತ ಮಾಹಿತಿಯನ್ನು ಮೇರೆಗೆ ಸ್ಥಳಕ್ಕೆ ಧಾವಿಸಿದ್ದಾರೆ.

ಬಳಿಕ ಮೂವರು ವ್ಯಕ್ತಿಗಳ ಸಹಿತ 800 ಗ್ರಾಂ ಗಾಂಜಾ ಮತ್ತು ಸ್ಕೂಟರನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 62,000 ಆಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

Continue Reading

DAKSHINA KANNADA

Mangaluru: ಸೋಮೇಶ್ವರ ಉಚ್ಚಿಲದಲ್ಲಿ ಬಲೆಗೆ ಬಿದ್ದ ದೈತ್ಯ ಪಿಲಿ ತೊರಕೆ..!

Published

on

ಮಂಗಳೂರು: ಮಂಗಳೂರಿನ ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ನಾಡದೋಣಿ ಮೀನುಗಾರರಿಗೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಲಭಿಸಿದೆ.

ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ನಿನ್ನೆ ಸಂಜೆ ಸಮುದ್ರ ತೀರದಲ್ಲಿ ಮೀನಿಗಾಗಿ ಬಲೆ ಹಾಕಿದ್ದು, ಸುಮಾರು 75 ಕೆ.ಜಿ. ತೂಕದ ಮೀನು ಅವರ ಬಲೆಗೆ ಬಿದ್ದಿದೆ.

ಈ ವರ್ಷದ ತಮ್ಮ ಮೀನುಗಾರಿಕೆ ಅವಧಿಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿವರ್ಷದಂತೆ ಈ ಬಾರಿಯೂ ಸಮುದ್ರದಲ್ಲಿ ಕೆಸರಿನಂತೆ ಅಲೆಗಳು ಬರುತ್ತವೆ.

ಈ ನೀರಿಗೆ ಮೀನುಗಾರಿಕೆಯಲ್ಲಿ ಅತ್ಯಂತ ಪಾವಿತ್ರ್ಯತೆಯೂ ಇದೆ.

ಅದರಲ್ಲಿ ಹಲವು ಬಗೆಯ ಮೀನುಗಳು ಬರುವ ಐತಿಹ್ಯವಿದೆ.
ಈ ಬಾರಿ ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ.

ಮಾರಾಟ ಮಾಡುವುದಾದರೆ ಈ ಮೀನಿಗೆ ಕೆ.ಜಿ.ಗೆ 200 ರೂಪಾಯಿ ಬೆಲೆ ಇದೆ.

ಆದರೆ ಸಿಕ್ಕ ಮೀನನ್ನು ವ್ಯಾಪಾರ ಮಾಡದೆ ಈದ್ ಹಬ್ಬ ಇರುವುದರಿಂದ ತಮ್ಮೊಳಗೆ ಹಂಚಿಕೊಂಡಿದ್ದಾರೆ.

Continue Reading

DAKSHINA KANNADA

ದ.ಕ.ಜಿಲ್ಲೆಯ 9 ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ

Published

on

ಮಂಗಳೂರು: ದ.ಕ.ಜಿಲ್ಲೆಯ 9 ತಾಲೂಕಿನ 9 ಗ್ರಾಮಗಳು 2022-23ನೆ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಯಾಗಿದೆ.

ಅಕ್ಟೋಬರ್ 2ರ ಗಾಂಧಿಜಯಂತಿ ದಿನದಂದು ರಾಜ್ಯ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಉಳ್ಳಾಲ ತಾಲೂಕಿನ ಬೆಳ್ಮ, ಮುಲ್ಕಿ ತಾಲೂಕಿನ ಕೆಮ್ರಾಲ್, ಮೂಡುಬಿದಿರೆ ತಾಲೂಕಿನ ಪುತ್ತಿಗೆ, ಬಂಟ್ವಾಳ ತಾಲೂಕಿನ ಅಮ್ಮುಂಜೆ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಬೆಳ್ತಂಗಡಿ ತಾಲೂಕಿನ ಬಳಂಜ, ಸುಳ್ಯ ತಾಲೂಕಿನ ಮರ್ಕಂಜ ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

Continue Reading

LATEST NEWS

Trending