Connect with us

DAKSHINA KANNADA

ಕದ್ರಿ ಜೋಗಿ ಮಠ ವಿವಾದ ಮತ್ತೆ ಬಹಿರಂಗ – ಜೋಗಿ ಮಠಾಧೀಶರ ವಿರುದ್ಧ ಆರೋಪಗಳ ಸುರಿಮಳೆಗೈದ ಹರಿನಾಥ..!

Published

on

ಪುರಾಣ ಪ್ರಸಿದ್ದ ಮಂಗಳೂರನ ಕದ್ರಿ ಜೋಗಿ ಮಠ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು ಮಠದ ಸ್ವಾಮೀಜಿ ವಿರುದ್ದ ಜೋಗಿ ಸಮುದಾಯದ ಮುಖಂಡ ಹರಿನಾಥ ಜೋಗಿ ವಾಗ್ದಾಳಿ ನಡೆಸಿದ್ದಾರೆ. 

ಮಂಗಳೂರು : ಪುರಾಣ ಪ್ರಸಿದ್ದ ಮಂಗಳೂರನ ಕದ್ರಿ ಜೋಗಿ ಮಠ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು ಮಠದ ಸ್ವಾಮೀಜಿ ವಿರುದ್ದ ಜೋಗಿ ಸಮುದಾಯದ ಮುಖಂಡ ಹರಿನಾಥ ಜೋಗಿ ವಾಗ್ದಾಳಿ ನಡಿಸಿದ್ದಾರೆ.

ನಗರದ ಜೋಗಿ ಸಮುದಾಯದ ಜನತೆ ಸೇರಿದಂತೆ ಸಮಸ್ತ ಸಮುದಾಯದ ಬಾಂಧವರೆಲ್ಲರೂ ಸೇರಿ ಕಾಲಭೈರವ ದೇವರ ಪುನರ್‌ ಪ್ರತಿಷ್ಠೆ ಮಾಡುವ ನಿರ್ಧಾರ ಕೈಗೊಂಡು 2023ರ ಫೆಬ್ರವರಿ 6ರಂದು ಕದ್ರಿ ಮಠಾಧೀಶರಾದ ಶ್ರೀ ನಿರ್ಮಲ ನಾಥಜೀಯವರು ಕಾಲಭೈರವ ದೇವರ ವಿಗ್ರಹದ ಪುನರ್‌ ಪ್ರತಿಷ್ಠೆಯನ್ನು ಮಾಡಿಸಿದ್ದಾರೆ.

ರಾಜಸ್ಥಾನದಿಂದ ಮಾರ್ವಾಡಿಗಳು ತಂದಿರುವ ಕಾಲ ಭೈರವ ದೇವರ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಇದು ಅಕ್ಷಮ್ಯ ಅಪರಾಧವಾಗಿದ್ದು, ಮಠದಲ್ಲಿರುವ ಪುರಾತನ ವಿಗ್ರಹಗಳಾದ ಜ್ವಾಲಾ ಮಹಮ್ಮಾಯಿ, ಮಹಾಕಾಳಿ ಹಾಗೂ ಇತರ ಮೂರ್ತಿಗಳನ್ನು ಬಿಸಾಡಿ ಮರು ಪ್ರತಿಷ್ಠಾಪಿಸಿದೇ ಘೋರ ತಪ್ಪನ್ನು ಮಾಡಿದ್ದಾರೆ.

ಪುನರ್ ಪ್ರತಿಷ್ಠೆ ಆಗಬೇಕಾಗಿದ್ದ ಕಾಲಭೈರವ ದೇವರ ವಿಗ್ರಹ ಸುಮಾರು 2000 ವರ್ಷಗಳಷ್ಟು ಹಿಂದಿನದ್ದಾಗಿದೆ ಎಂದು ಜೋಗಿ ಸಮುದಾಯದ ಹರಿನಾಥ ಜೋಗಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೊಸ ಗರ್ಭಗುಡಿ ಮತ್ತು ಸುತ್ತುಪೌಳಿಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಈ ಹಿಂದೆ 2014ನೇ ಇಸವಿಯಂದು ಜೋಗಿಮಠದ ಸಮಿತಿಯವರು ಹೊಸದಾಗಿ ನಿರ್ಮಿಸಿದ ಸುತ್ತುಪೌಳಿ ಹಾಗೂ ಆವರಣ ಗೋಡೆಯನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲಾಗಿದೆ.

ಈ ಹಿಂದೆ ಮಾಡಿದ ಕಾಮಗಾರಿಗಳನ್ನು ನೆಲಸಮ ಮಾಡಲಾಗಿದೆ. ಆದರೆ ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಬೆಲೆ ಕೊಡದೇ ಅವಾಚ್ಯವಾಗಿ ನಿಂದಿಸಿದ್ದಾರೆ.

ಕಾಲಭೈರವ ಮೂರ್ತಿಯನ್ನು 70 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲು ಈಗಿನ ಸ್ವಾಮೀಜಿ ಹುನ್ನಾರ ನಡೆಸಿದ್ದರು.

ಆದರೆ ನಾವು ಅದನ್ನು ವಿಫಲಗೊಳಿಸಿದೆವು. ಮಠದ ವಿಚಾರದಲ್ಲಿ ನಡೆಯುತ್ತಿರುವ ಅಕ್ರಮ ಕೆಲಸಗಳಿಗೆ ಕೋರ್ಟಿನಿಂದ ತಡೆಯಾಜ್ಞೆ ತರಲು ಯತ್ನಿಸಿದ ಸಂದರ್ಭ ಅದು ಈಡೇರಲಿಲ್ಲ ಎಂದರು.

ಕದ್ರಿ ಜೋಗಿ ಮಠದ ಬಗ್ಗೆ ಮಂಗಳೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ದಾಖಲೆಗಳನ್ನು ನೀಡಿದ್ದೇವೆ. ಎಂಟು ವರ್ಷಗಳಾದರೂ ನ್ಯಾಯಾಲಯ ಏನಾದರೊಂದು ನ್ಯಾಯಬದ್ಧ ತೀರ್ಪು ನೀಡಿದ್ದರೆ ನಮಗೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ.

ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತಿರಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ನೀಡಿ ಮನವರಿಕೆ ಮಾಡಿದ್ದೇವೆ. ಪೊಲೀಸ್ ಠಾಣೆಗೂ ದೂರು ನೀಡಿದ್ದೇವೆ.

15 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಇದು ಜೋಗಿ ಮಠ ಎಂದು ಹೇಳಿದ್ದಾರೆ. ಈಗ ಕಾಲಭೈರವ ದೇವರ ವಿಗ್ರಹ ಪುನಃಪ್ರತಿಷ್ಠೆ ಮಾಡಬೇಕೆಂದು ನಾವು ಜಿಲ್ಲಾಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡಿದ್ದೇವೆ ಎಂದರು.

ಇಲ್ಲಿರುವ ವಿವಾದದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರು ವಿಶೇಷ ಕಾಳಜಿ ವಹಿಸಿ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ಕದ್ರಿ ಜೋಗಿ ಮಠದ ಜೀರ್ಣೋದ್ದಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷರೂ ಆಗಿರುವ ಹರಿನಾಥ್‌ ಹೇಳಿದ್ದಾರೆ.

DAKSHINA KANNADA

ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀ*ರ

Published

on

ಮಂಗಳೂರು: ಬೈಕಂಪಾಡಿ ಹೋಟೆಲ್ ಶ್ರೀ ದ್ವಾರದ ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭಿರ ಗಾಯಗೊಂಡ ಘಟನೆ ನಡೆದಿದೆ. ಒಂದು ಲಾರಿಯೊಂದು ಗ್ರಾನೈಟ್ ಅಂಗಡಿಯೊಳಗೆ ನುಗ್ಗಿದ್ದು, ಅಪಾರ ಮೌಲ್ಯದ ಗ್ರಾನೈಟ್‌ ಹಾನಿಗೊಂಡಿದೆ.

ಮುಂದೆ ಓದಿ..; ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!

accident

ಲಾರಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತದಿಂದ ನಜ್ಜುಗುಜ್ಜಾಗಿದೆ. ಇನ್ನು ಇದೇ ಭಾಗದಲ್ಲಿ ನಿತ್ಯವೂ ಮಹಿಳೆಯರು ಮೀನ ಮಾರಾಟ ಮಾಡುತ್ತಿದ್ದರು. ಅದೃಷ್ಟವಶಾತ್ ಇದೀಗ ಭಾರೀ ಅನಾಹುತ ತಪ್ಪಿದೆ.

 

Continue Reading

DAKSHINA KANNADA

ದೊಡ್ಡವರ ಜಗಳದಲ್ಲಿ ಇಹಲೋಕ ತಜ್ಯಿಸಿದ 3 ರ ಕಂದಮ್ಮ…

Published

on

ಮಂಗಳೂರು (ಬೆಳಗಾವಿ): ಅದು ಎರಡು ಕುಟುಂಬಗಳ ನಡುವೆ ನಡೆದಿರೋ ಜಗಳ . ಆದ್ರೆ ಆ ಜಗಳಕ್ಕೆ ಏನೂ ಅರಿಯದ ಮೂರು ವರ್ಷದ ಪುಟ್ಟ ಮಗು ಬಲಿಯಾಗಿದೆ. ಪಾಪಿಯೊಬ್ಬ ಮಗುವಿನ ಎದೆಗೆ ಕಾಲಿಟ್ಟು ಮಗುವಿನ ಉಸಿರು ನಿಲ್ಲಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಎಂಬ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ದೊಡ್ಡವರ ಜಗಳದಲ್ಲಿ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಎಂಬ ಮೂರು ವರ್ಷದ ಮಗು ಹತವಾಗಿದೆ. ಜೋತಿಭಾ ತುಕಾರಾಮ ಬಾಬಬರ ಎಂಬಾತ ಮಗುವಿನ ಜೀವಕ್ಕೆ ಕುತ್ತು ತಂದ ಆರೋಪಿಯಾಗಿದ್ದಾನೆ.
ಹಣಕಾಸಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ತಾರಕ್ಕೇರಿದಾಗ ಸಿಟ್ಟಿನಲ್ಲಿ ಜೋತಿಬಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ನಿಂತಿದ್ದಾನೆ. ಈ ವೇಳೆ ಮಗುವನ್ನು ಆತನ ಕಾಲಿನ ಅಡಿಯಿಂದ ತೆಗೆಯಲು ಮಗುವಿನ ತಾಯಿ ಯತ್ನಿಸಿದ್ದಾಳೆ . ಆ ವೇಳಗೆ ಇನ್ನಷ್ಟು ಗಟ್ಟಿಯಾಗಿ ಕಾಲಿನಿಂದ ಮಗುವಿನ ಎದೆಗೆ ಕಾಲಿನಿಂದ ಒತ್ತಿದ ಕಾರಣ ಮಗು ಉಸಿರು ನಿಲ್ಲಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Continue Reading

DAKSHINA KANNADA

ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

Published

on

ನ್ಯೂಯಾರ್ಕ್‌ : ಅಮೇರಿಕಾದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಹಿಳೆಯರು ಇಹಲೋಕ ತ್ಯಜಿಸಿದ್ದಾರೆ. ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ವೇಗವಾಗಿ ಕಾರು ಚಲಾಯಿಸಿದ ಕಾರಣ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಕಾರು ಪ್ರಯಾಣಿಸುತ್ತಿದ್ದು, ಎಲ್ಲಾ ಲೇನ್‌ಗಳನ್ನು ದಾಟಿ, ಹಂಪ್‌ ಮೇಲೆ ವೇಗವಾಗಿ ಏರಿತ್ತು. ಈ ಕಾರಣದಿಂದ ಕನಿಷ್ಟ 20 ಅಡಿಗಳಷ್ಟು ಮೇಲಕ್ಕೆ ಹಾರಿ ಸೇತುವೆಯ ಮುಂದೆ ಇದ್ದ ಮರಗಳಿಗೆ ಕಾರು ಅಪ್ಪಳಿಸಿದೆ. ಗುಜಾರಾತ್ ಮೂಲದ ಮೂವರು ಮಹಿಳೆಯರು ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಗುಜರಾತ್‌ನ ಆನಂದ್ ಜಿಲ್ಲೆಯ ರೇಖಾಬೆನ್‌ ಪಟೇಲ್ , ಸಂಗೀತಾಬೆನ್ ಪಟೇಲ್ ಹಾಗೂ ಮನೀಶಾಬೆನ್ ಪಟೇಲ್‌ ಅವರು ಇಹಲೋಕ ತ್ಯಜಿಸಿದವರಾಗಿದ್ದಾರೆ.

 

ಕಾರು ನಿಗದಿಪಡಿಸಿದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿತ್ತು ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಪ್ರಮಾಣ ಎಷ್ಟಿತ್ತು ಮತ್ತು ಕಾರು ಎಷ್ಟು ಎತ್ತರಕ್ಕೆ ಹಾರಿತ್ತು ಅನ್ನೋದಿಕ್ಕೆ ಮರದ ಮೇಲಿರುವ ಕಾರಿನ ಅವಶೇಷಗಳು ಸಾಕ್ಷಿ ಎಂದು ಅವರು ಹೇಳಿದ್ದಾರೆ. ಮರದ ಮೇಲೆ ಬಿದ್ದ ಕಾರು ಛಿದ್ರಗೊಂಡು ಕಾರಿನ ಅವಶೇಷಗಳು ಚೆಲ್ಲಾಪಿಲ್ಲಿಯಾಗಿತ್ತು.


ದಕ್ಷಿಣ ಕೆರೊಲಿನಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡಗಳು, ಪೊಲೀಸರು ಆಗಮಿಸಿದ್ದಾರೆ. ಅಪಘಾತದಲ್ಲಿ ಓರ್ವ ಬದುಕಿ ಉಳಿದಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು ಈಗಲೇ ಏನೂ ಹೇಳಲು ಆಗದ ಪರಿಸ್ಥಿತಿಯಲ್ಲಿದ್ದಾನೆ. ವಾಹನ ಅಪಘಾತವಾದ ತಕ್ಷಣ ಅದರಲ್ಲಿದ್ದ ತಾಂತ್ರಿಕ ವ್ಯವಸ್ಥೆಯ ಕಾರಣ ತಕ್ಷಣ ಕುಟುಂಬ ಸದಸ್ಯರಿಗೆ ಅಲರ್ಟ್‌ ಮೆಸೆಜ್ ರವಾನೆಯಾಗಿತ್ತು. ಹೀಗಾಗಿ ತಕ್ಷಣ ಕುಟುಂಬಸ್ಥರು ಕೂಡಾ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.

Continue Reading

LATEST NEWS

Trending