LATEST NEWS
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ಕೆ.ಜಯಪ್ರಕಾಶ್ ಹೆಗ್ಡೆ ನೇಮಕ
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ಕೆ.ಜಯಪ್ರಕಾಶ್ ಹೆಗ್ಡೆ ನೇಮಕ
ಬೆಂಗಳೂರು: ಹಿರಿಯ ಸಜ್ಜನ ರಾಜಕರಣಿ ಹಾಗೂ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಜವಾಬ್ದಾರಿಯುತ ಹುದ್ದೆಯನ್ನು ರಾಜ್ಯ ಸರ್ಕಾ ನೀಡಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ಕೆ.ಜಯಪ್ರಕಾಶ್ ಹೆಗ್ಡೆ ಯನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೆಗ್ಡೆ ಅವರು ಜೆ.ಎಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಸಂಸದರಾಗಿಯೂ ಆನೇಕ ಜನಾಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗೂ ಮೊದಲು ಇವರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದರು.
ಇದೀಗ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರ ಹೊಸ ಜವಾಬ್ದಾರಿ ಹೊರಲಿದ್ದು ಅನೇಕ ನಿರೀಕ್ಷೆಗಳನ್ನು ಹೊಂದಲಾಗಿದೆ.
ಅಪ್ ಡೇಟ್ಸ್
ಈ ಕುರಿತಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ನೇಮಕ ಮಾಡಿದ್ದಾರೆ.
ಇದೊಂದು ರಾಜಕೀಯೇತರ ಹುದ್ದೆಯಾಗಿದ್ದು ಸಮಿತಿಯ ಸದಸ್ಯರ ನೇಮಕಾತಿ ಮುಂದೆ ಆಗಲಿದೆ
ಈ ಹಿಂದಿನ ಎಲ್ಲಾ ವರದಿಗಳನ್ನು ಅಧ್ಯಯನ ಮಾಡುತ್ತೇನೆ
ರಾಜ್ಯಾದ್ಯಂತ ಓಡಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಅಧಿಕಾರ ಇಲ್ಲದಿದ್ದಾಗಲೂ ನಾನು ಜನರ ಜೊತೆ ಇದ್ದೆ ಹುದ್ದೆಯಲ್ಲಿ ಇಲ್ಲದಿದ್ದರೂ ಕೆಲಸಮಾಡುವ ಶಕ್ತಿಯನ್ನು ಬೆಳೆಸಿಕೊಂಡಿದ್ದೇನೆ
ಜನರ ಕೆಲಸ ಮಾಡಲು ಹುದ್ದೆಯೇ ಬೇಕಾಗಿಲ್ಲ
ಒಂದು ಪಕ್ಷದ ಪ್ರತಿನಿಧಿಯಾಗಿ ನಾನು ನೇಮಕವಾಗಿಲ್ಲ ಪಕ್ಷ ರಹಿತವಾಗಿ ಹಿಂದುಳಿದ ವರ್ಗಗಳ ದನಿಯಾಗಿ ಕೆಲಸ ಮಾಡುತ್ತೇನೆ
ರಾಜಕೀಯ ಕೆಲಸಗಳನ್ನು ಶಾಸಕನಾಗಿ ಮಂತ್ರಿಯಾಗಿ ಸಂಸದನಾಗಿ ಮಾಡಿದ್ದೆ
ಈಗ ರಾಜಕೀಯೇತರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ
ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇನೆ ಎಂದು ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹಗ್ಡೆ ಅಭಿಪ್ರಾಯಪಟ್ಟಿದ್ದಾರೆ..
FILM
ಕೊನೆಗೂ ಉರ್ಫಿ ಜಾವೇದ್ ಇನ್ಸ್ಟಾಗ್ರಾಮ್ ಅಕೌಂಟ್ ಡಿಲೀಟ್…
Urfi javed: ಸೋಷಿಯಲ್ ಮೀಡಿಯಾದಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಉರ್ಫಿ ಜಾವೇದ್ ಆಕೆಯ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಆಗಿರುವುದು ಇದೀಗ ಆಕೆಗೆ ಸಂಕಷ್ಟ ಎದುರಾಗಿದೆ.
ಉರ್ಫಿ ಜಾವೇದ್ ಎಂದರೆ ಅವಳ ಡ್ರೇಸ್ ನೋಡಿ.. ಅದೇನು ಡ್ರೇಸ್ ಹಾಕಿದ್ದಾಳೆ ಅಂತಾರೆ ಜನ. ಅಂತೂ ಸಾಮಾಜಿಕ ಜಾಲತಾಣದಲ್ಲಿ ಆಕೆಯು ವಿಚಿತ್ರ ವಿಚಿತ್ರ ಪೋಟೋಗಳನ್ನು ಅಪ್ಲೋಡ್ ಮಾಡ್ತಾ ಇರುತ್ತಾಳೆ.
ಆಕೆ ಫಾಲೋವರ್ಸ್ ಹೆಚ್ಚಾಗಳು ಇಂತಹ ಡ್ರೇಸ್ ಹಾಕ್ತ ಇದ್ದಾಳ…ಎಸ್, ಈಕೆ ಅಂತಹ ವಿಚಿತ್ರವಾದ ಡ್ರೇಸ್ ಗಳನ್ನು ಹಾಕಿ ಫೋಟೊ ಶೂಟ್ ಮಾಡಿದ ಬಳಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾಳೆ. ಹಾಗೇ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಸುಮಾರು 4 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಳು.
ಅರೆಬರೆ ಡ್ರೇಸ್ ಹಾಕುತ್ತಾ ದಿನದಿಂದ ದಿನಕ್ಕೆ ಹೊಸ ಟ್ರೆಂಡ್ ಗಳನ್ನು ಸೃಷ್ಟಿಸುತ್ತಿದ್ದಳು. ಆದರೆ ಇದೀಗ ಆಕೆಯ ಖಾತೆಯನ್ನು ಇನ್ಸ್ಟಾಗ್ರಾಂ ಅಮಾನತು ಮಾಡಿದೆ. ಡಿಲೀಟ್ ಆಗಿರುವ ಕುರಿತು ಆಕೆ ಮಾಡೆಲ್ ಸ್ಕ್ರೀನ್ ಶಾಟ್ ತೆಗೆಯುವ ಮೂಲಕ ಹಂಚಿಕೊಂಡಿದ್ದಾಳೆ.
ಇನ್ನು ಇನ್ಸ್ಟಾ ಆಕೆಯ ಖಾತೆಯನ್ನು ಅಮಾನತುಗೊಳಿಸಿದ್ದಲ್ಲದೆ, ಈ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 180 ದಿನಗಳ ಕಾಲಾವಕಾಶ ನೀಡಿದೆ. ಆದರೆ ಉರ್ಫಿ ಇವೆಲ್ಲದಕ್ಕೆ ಉತ್ತರ ನೀಡಿ ತನ್ನ ಖಾತೆಯನ್ನು ಮರಳಿ ಪಡೆಯುತ್ತಾಳಾ ಎಂಬ ಪ್ರಶ್ನೆ ಫ್ಯಾನ್ಸ್ಗೆ ಕಾಡಿದೆ. ಇನ್ಸ್ಟಾಗ್ರಾಮ್ ಖಾತೆ ಮರಳಿ ಬಂದರೆ ಆಕೆ ಇನ್ನಾದರೂ ಸರಿಯಾದ ಡ್ರೇಸ್ ಹಾಕುತ್ತಾಳ ಎಂದು ಕಾದು ನೋಡಬೇಕಷ್ಟೇ.
ಆಕೆಯ ಅರೆಬರೆ ಡ್ರೇಸ್ ನೋಡಿ ಕೆಳವರು ಆಕೆಯ ಖಾತೆ ಡಿಲೀಟ್ ಆಗಿದ್ದು, ಒಳ್ಳೆಯದೇ ಎಂದು ಹೆಳುತ್ತಿದ್ದಾರೆ. ಆದರೆ ಆಕೆ ಮಾತ್ರ ನೊಂದುಕೊಂಡಿದ್ದಾಳೆ.
FILM
ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ
ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರವಾಹಿಯ ನಟ ಧಾರವಾಹಿಗೆ ಆಯ್ಕೆಯಾದ ತಮ್ಮ ಅಭಿಪ್ರಾಯವನ್ನು ಕೊನೆಗೂ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ವರುಣ್ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಜನಪ್ರಿಯತೆ ಪಡೆದುಕೊಂಡವರು. ಅಲ್ಲದೇ ಇತ್ತೀಚೆಗೆ ಗರ್ಲ್ ಫ್ರೆಡ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.
ಇದೀಗ ಸೀರಿಯಲ್ ಗೆ ಆಯ್ಕೆಯಾದ ಬಗ್ಗೆ ಮಾತನಾಡಿರುವ ನಟ ವರುಣ್ ಆರಾಧ್ಯ “ದೀಪಾವಳಿ ಹಬ್ಬದ ಊಟ ಮುಗಿಸಿಕೊಂಡು ಮಲಗಿಕೊಂಡಿದ್ದೆ. ರಾತ್ರಿ 12.30ಗೆ ಕರೆ ಮಾಡಿ ಸೀರಿಯಲ್‌ನಲ್ಲಿ ನಟಿಸುವ ಇಂಟ್ರೆಸ್ಟ್ ಇದ್ಯಾ. ಅವಕಾಶ ಇದೆ ಎಂದು ಫೋನ್ ಮಾಡಿದರು. ರಾತ್ರಿ ಆ ಸಮಯದಲ್ಲಿ ಮಾಡಿದಕ್ಕೆ ನಾನು ಗಾಬರಿ ಆಗಿದೆ ಆ ಸಮಯದಲ್ಲಿ ಆಡಿಷನ್‌ಗೆ ಬರೆಲು ಹೇಳಿದರು. ನನ್ನ ಸ್ನೇಹಿತರನ್ನು ಕರೆದುಕೊಂಡು ನಾಗರಭಾವಿಯಲ್ಲಿ ನಿರ್ದೇಶಕರಾದ ರಾಮ್‌ಜೀ ಹೇಳಿದ ಸ್ಥಳಕ್ಕೆ ಹೋದೆ. ಕೈಗೆ ಒಂದು ಸ್ಕ್ರಿಪ್ಟ್ ಕೊಟ್ಟರು ಆಡಿಷನ್ ಮಾಡಿದೆ.
ಮಧ್ಯರಾತ್ರಿ 2.30ಕ್ಕೆ ಸೆಲೆಕ್ಟ್ ಆಗಿರುವೆ ಎಂದು ಹೇಳಿದರು. ನಾನು ಫುಲ್ ಶಾಕ್ ಆಗಿಬಿಟ್ಟಿ..ಅಲ್ಲದೆ ಬೆಳಗ್ಗೆನಿಂದ ಶೂಟಿಂಗ್ ಎಂದು ಹೇಳಿದರು. ಅಷ್ಟೊತ್ತರಲ್ಲಿ ಮನೆಗೆ ಬಂದು ಅಕ್ಕ ಮತ್ತು ಅಮ್ಮ ಮಲಗಿದ್ದರು, ಅವರನ್ನು ಎಬ್ಬಿಸಿ ಸೆಲೆಕ್ಟ್ ಅನ್ನೋ ವಿಚಾರ ಹೇಳಿದೆ. ಬೆಳಗ್ಗೆ ಶೂಟಿಂಗ್ ಇತ್ತು…ಹೇರ್ ಕಟ್ ಮಾಡಿಸಬೇಕು ಮತ್ತು ಗಡ್ಡ ಟ್ರಿಮ್ ಮಾಡಬೇಕು ಎಂದು ಹೇಳಿದರು ಅದೂ ಮಾಡಿಸಿಕೊಂಡು ಬೆಳಗ್ಗೆ ಶೂಟಿಂಗ್ ಸ್ಥಳಕ್ಕೆ ಹೋದೆ ಮರು ದಿನವೇ ಪ್ರಸಾರ ಮಾಡಲು ಶುರು ಮಾಡಿದ್ದರು. ಮೊದಲ ದೃಶ್ಯವೇ ಮದುವೆ ಮನೆ ಸೀನ್ ಅಗಿತ್ತು ಎಂದಿದ್ದಾರೆ.
bengaluru
ಹೈಕೋರ್ಟ್ ಕಲಾಪವನ್ನೂ ಬಿಡದ ಸೈಬರ್ ಹ್ಯಾಕರ್ಸ್-ವಿಡಿಯೋ ಕಾನ್ಫರೆನ್ಸ್ ಆ್ಯಪ್ನಲ್ಲಿ ಅಶ್ಲೀಲ ದೃಶ್ಯ ಅಪ್ಲೋಡ್
ಬೆಂಗಳೂರು: ಸೈಬರ್ ಖದೀಮರ ಉಪಟಳ ಎಲ್ಲಿಯವರೆಗೆ ತಲುಪಿದೆ ಎಂದರೆ ಅದು ಇದೀಗ ಕರ್ನಾಟಕ ಹೈಕೋರ್ಟ್ ಕಲಾಪಕ್ಕೂ ತಟ್ಟಿದೆ.
ಮಂಗಳವಾರ ಸಂಜೆ ಹೈಕೋರ್ಟಿನ ಹಾಲ್ ನಂಬರ್ 6, 12, 18, 23, 24, 26 ಮತ್ತು ಇತರ ಹಾಲ್ ಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾಗಲೇ ಲಿಂಕ್ ಮೂಲಕ ಭಾಗವಹಿಸಿದ್ದ ಅಪರಿಚಿತ ಆರೋಪಿಗಳು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಬಗ್ಗೆ ಹೈಕೋರ್ಟಿನ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಅವರು ಸೆಂಟ್ರಲ್ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ವೀಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಬುಧವಾರ ಸಂಜೆ ಹೈಕೋರ್ಟ್ ಕಲಾಪದ ವೇಳೆ ವೀಡಿಯೋ ಕಾನ್ಫರೆನ್ಸ್ ಆ್ಯಪ್ ಅನ್ನು ಹ್ಯಾಕ್ ಮಾಡಿ ಆಶ್ಲೀಲ ದೃಶ್ಯಾವಳಿಯನ್ನು ಅಪ್ ಲೋಡ್ ಮಾಡಲಾಗಿತ್ತು. ಅಶ್ಲೀಲ ವೀಡಿಯೋ ಪ್ರಸಾರವಾಗುತ್ತಿದ್ದಂತೆ ಅದನ್ನು ನಿರ್ವಹಣೆ ಮಾಡುತ್ತಿದ್ದ ಸಿಬಂದಿಯನ್ನು ಕರೆದು ವಿಚಾರಿಸಿದಾಗ ಸೈಬರ್ ಹ್ಯಾಕ್ ಆಗಿರುವ ವಿಷಯ ಗೊತ್ತಾಗಿದೆ. ಕೂಡಲೇ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.
- Ancient Mangaluru6 days ago
ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ
- DAKSHINA KANNADA6 days ago
ಉಡುಪಿ : ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಜೀವಾಂತ್ಯ
- bangalore5 days ago
ಇವ್ರು ಯಾರಂತ ಗೊತ್ತಾಯ್ತ ಫ್ರೆಂಡ್ಸ್? ನ್ಯೂ ಕಪಲ್ಸ್ ಫಾರಿನ್ ಟ್ರಿಪ್ ಅಂತೆ..!
- bangalore4 days ago
ದೈವಕೋಲ ವೀಕ್ಷಣೆಗೆ ಟೂರ್ ಪ್ಯಾಕೇಜ್ – ತುಳುವರ ಧಾರ್ಮಿಕ ಭಾವನೆಗೆ ಪೆಟ್ಟು..!