Connect with us

    LATEST NEWS

    ಕೊರೊನಾ ವೈರಸ್ ನಿಂದ ಮೃತಪಟ್ಟ ಮಹಾತ್ಮಾಗಾಂಧಿ ಮರಿಮೊಮ್ಮಗ ಸತೀಶ್ ಧುಪಾಲಿಯಾ..! 

    Published

    on

     ಕೊರೊನಾ ವೈರಸ್ ನಿಂದ ಮೃತಪಟ್ಟ ಮಹಾತ್ಮಾಗಾಂಧಿ ಮರಿಮೊಮ್ಮಗ ಸತೀಶ್ ಧುಪಾಲಿಯಾ..!

    ಜೋಹಾನ್ಸ್ ಬರ್ಗ್ :ಭಾರತದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗ ಸತೀಶ್ ಧುಪಾಲಿಯಾ ಅವರು ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಮೂರು ದಿನಗಳ ಹಿಂದಷ್ಟೇ 66ನೇ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದ ಸತೀಶ್ ಧುಪಾಲಿಯಾರಿಗೆ ಕೊವಿಡ್-19 ಸೋಂಕು ತಗುಲಿದ್ದು, ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು.

    ಕೊರೊನಾವೈರಸ್ ಸೋಂಕಿನಿಂದಲೇ ಸತೀಶ್ ಧುಪಾಲಿಯಾ ಮೃತಪಟ್ಟಿರುವ ಬಗ್ಗೆ ಅವರ ಸಹೋದರಿ ಉಮಾ ಧುಪಾಲಿಯಾ ಮೇಸ್ತ್ರಿ ದೃಢಪಡಿಸಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆ ಇದೇ ಸತೀಶ್ ಧುಪಾಲಿಯಾ ಅವರು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ “ಕಳೆದ ಒಂದು ತಿಂಗಳಿನಿಂದಲೂ ನ್ಯುಮೋನಿಯಾದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಸಹೋದರ ಮೃತಪಟ್ಟಿದ್ದಾರೆ.

    ಇತ್ತೀಚಿಗೆ ಅವರಲ್ಲಿ ಕೊವಿಡ್-19 ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಈ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಹೋದರ ಸತೀಶ್ ಧುಪಾಲಿಯಾ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ” ಎಂದು ಉಮಾ ಧುಪಾಲಿಯಾ ಮೇಸ್ತ್ರಿ ಹೇಳಿದ್ದಾರೆ.

    ಮಹಾತ್ಮ ಗಾಂಧೀಜಿ ಮರಿ ಮೊಮ್ಮಕ್ಕಳಾದ ಉಮಾ ಧುಪಾಲಿಯಾ ಮತ್ತು ಸತೀಶ್ ಧುಪಾಲಿಯಾ ಅವರು ತಮ್ಮ ಮತ್ತೊಬ್ಬ ಸಹೋದರಿ ಕೀರ್ತಿ ಧುಪಾಲಿಯಾರನ್ನು ಜೋಹಾನ್ಸ್ ಬರ್ಗ್ ನಲ್ಲಿ ಬಿಟ್ಟಿದ್ದರು.

    ಕೀರ್ತಿ ಧುಪಾಲಿಯಾ ಅವರು ಮಹಾತ್ಮ ಗಾಂಧೀಜಿಯವರ ಗೌರವಾರ್ಥವಾಗಿ ನಡೆದಿರುವ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸತೀಶ್ ಧುಪಾಲಿಯಾ ಅವರು ಮಾಧ್ಯಮ ಲೋಕದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಹಾತ್ಮ ಗಾಂಧೀಜಿ ಅಭಿವೃದ್ಧಿ ಟ್ರಸ್ಟ್ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಅವರು ಉತ್ತಮ ವಿಡಿಯೋ ಗ್ರಾಫರ್ ಎನಿಸಿದ್ದರು. ಸಾಮಾಜಿಕ ಕಲ್ಯಾಣ ಸಂಸ್ಥೆಗಳು ಮತ್ತು ಸಮುದಾಯಗಳ ಅಭಿವೃದ್ಧಿ ಕಾರ್ಯಗಳಲ್ಲಿ ಸತೀಶ್ ಧುಪಾಲಿಯಾ ಅವರು ಕಾರ್ಯ ನಿರ್ವಹಿಸುತ್ತಿದ್ದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಅಂಗಡಿ ಕಳ್ಳರ ಬಂಧನ..! ಕೃತ್ಯ ನಡೆಸಿ ಗಂಟೆಗಳಲ್ಲಿ ಕಾರ್ಯಾಚರಣೆ..!

    Published

    on

    ಮಂಗಳೂರು : ಮಂಗಳೂರಿನ ಉರ್ವದ ಕೋಟೆಕಣಿಯ ದರೋಡೆ ಪ್ರಕರಣವನ್ನು ಐದು ಘಂಟೆಯಲ್ಲಿ ಬೇಧಿಸಿರುವ ಮಂಗಳೂರು ನಗರ ಪೊಲೀಸರು ಮತ್ತೊಂದು ಸಾಧನೆ ಮಾಡಿದ್ದಾರೆ. ಉರ್ವ ಮನೆ ದರೋಡೆ ನಡೆದ ದಿನದಂದೇ ವೆಲೆನ್ಸಿಯಾದಲ್ಲಿ ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣದ ಆರೋಪಿಗಳನ್ನೂ ರಾತ್ರಿಯೊಳಗೆ ಬಂಧಿಸಿದ್ದಾರೆ.

    ಉರ್ವದ ದರೋಡೆ ಪ್ರಕರಣದಿಂದ ಮಂಗಳೂರು ನಗರದ ಜನ ಬೆಚ್ಚಿ ಬಿದ್ದಿರುವಾಗಲೇ ನಗರದ ವೆಲೆನ್ಸಿಯಾದಲ್ಲಿ ಅಂಗಡಿ ಕಳ್ಳತನ ನಡೆದಿತ್ತು. ಅಂಗಡಿಯ ಶಟರ್ ಮುರಿದ ಕಳ್ಳರು ಅಂಗಡಿಯ ಒಳಗಿಟ್ಟಿದ್ದ 10 ಲಕ್ಷ ನಗದು ಕದ್ದೊಯ್ದಿದ್ದರು. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ಬೆನ್ನತ್ತಿದ್ದ ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜ್‌ ಅವರು ಕೇವಲ ನಾಲ್ಕು ಗಂಟೆಯಲ್ಲಿ ಕಳ್ಳರ ಜಾಡು ಪತ್ತೆ ಹಚ್ಚಿ ರಾತ್ರಿಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಗೆ ಇಳಿದ ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜ್‌ ಅಂಗಡಿಯ ಸಿಸಿ ಟಿವಿ ಮೂಲಕ ಇಬ್ಬರು ಕಳ್ಳರ ಕೃತ್ಯ ಅನ್ನೋದನ್ನು ಸ್ಪಷ್ಟ ಪಡಿಸಿಕೊಂಡಿದ್ದಾರೆ. ಬಳಿಕ ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ಅಟೋ ಚಾಲಕನ ಮೂಲಕ ಕಳ್ಳರು ರೈಲ್ವೇ ಸ್ಟೇಷನ್‌ಗೆ ಹೋಗುತ್ತಿರುವ ಹಾಗೂ ಹಿಂದಿ ಮಾತನಾಡುತ್ತಿರುವ ವಿಚಾರ ಸಂಗ್ರಹಿಸಿದ್ದಾರೆ. ಬಳಿಕ ರೈಲ್ವೇ ಸ್ಟೇಷನ್‌ನ ಸಿಸಿ ಟಿವಿ ಪರಿಶೀಲಿಸಿ ಅಂಗಡಿಯ ಸಿಸಿ ಟಿವಿಯಲ್ಲಿ ಕಾಣಿಸಿದ ವ್ಯಕ್ತಿಗಳ ಹೋಲಿಕೆಯ ವ್ಯಕ್ತಿಗಳಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಅದೇ ಸಾಮ್ಯತೆಯ ಇಬ್ಬರು ಎರ್ನಾಕುಲಂ ನಿಂದ ಪೂನಾ ಹೋಗುವ ರೈಲು ಹತ್ತಿರುವುದು ಪತ್ತೆ ಹಚ್ಚಿದ್ದಾರೆ.


    ಈ ಎಲ್ಲಾ ಪ್ರಕ್ರಿಯೆ ಕೇವಲ ನಾಲ್ಕು ಗಂಟೆಯಲ್ಲಿ ಮುಗಿದಿದ್ದು, ಬಳಿಕ ಪೂನಾ ರೈಲ್ವೇ ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ರೈಲು ಕರ್ನಾಟಕದ ಗಡಿ ದಾಟಿ ಸತ್ತಾರ ದಾಟಿದ್ದ ಕಾರಣ ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡಬಾರದು ಎಂದು ತಕ್ಷಣ ಮಂಗಳೂರು ಪೊಲೀಸರು ಕಾರ್ಯಪ್ರವೃತ್ತರಾದ ಕಾರಣ ಈ ಆರೋಪಿಗಳ ಬಂಧನ ಸಾಧ್ಯವಾಗಿದೆ.
    ಇಬ್ಬರೂ ಆರೋಪಿಗಳು ಉತ್ತರ ಪ್ರದೇಶ ಮೂಲದವರಾಗಿದ್ದು, ಮಂಗಳೂರಿನಲ್ಲಿನ ಚಿನ್ನದ ಅಂಗಡಿ ಹಾಗೂ ಪ್ರಾವಿಜನ್ ಸ್ಟೋರ್‌ ಮಾಹಿತಿ ಪಡೆದು ಬಂದಿದ್ದಾರೆ. ಇಲ್ಲೇ ಕೆಲಸ ಹುಡುಕುವಂತೆ ಮಾಡಿ ಅಂಗಡಿಗಳನ್ನು ಗಮನಿಸಿದ್ದು, ಕಪಿತಾನಿಯೋದ ಅಂಗಡಿಯನ್ನು ಕೊಳ್ಳೆ ಹೊಡೆದು ಪರಾರಿಯಾಗಿದ್ದರು.

    Continue Reading

    LATEST NEWS

    ಕೀರ್ತಿ ಚಕ್ರ ಪಡೆದ ಹುತಾ*ತ್ಮನ ಮನೆಯಲ್ಲಿ ಬಿರುಕು..! ಪೋಷಕರು ಅತಂತ್ರ..!

    Published

    on

    ಮಂಗಳೂರು/ನವದೆಹಲಿ : ಕಳೆದ ವರ್ಷ ಸಿಯಾಚಿನ್‌ನಲ್ಲಿ ಹುತಾತ್ಮರಾದ ಅಂಶುಮಾನ್ ಸಿಂಗ್ ಅವರಿಗೆ ಜುಲೈ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರ*ಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಿದ್ದರು. ಹುತಾ*ತ್ಮ ಯೋಧ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಮತ್ತು ಅವರ ತಾಯಿ ಮಂಜು ದೇವಿ ಈ ಗೌರವವನ್ನು ಸ್ವೀಕರಿಸಿದ್ದರು. ಆದ್ರೆ, ಹು*ತಾತ್ಮ ಮಗನ ನೆನಪಿನ ಜೊತೆ ಸೊಸೆ ಎಲ್ಲವನ್ನೂ ನಮ್ಮಿಂದ ಕಿತ್ತುಕೊಂಡಿದ್ದಾಳೆ ಅಂತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.


    “ತಮ್ಮ ಮಗ ಹು*ತಾತ್ಮನಾಗಿದ್ದರೂ ಏನೂ ಸಿಗಲಿಲ್ಲ. ಸೊಸೆ ಗೌರವ ಮತ್ತು ಪರಿಹಾರದ ಮೊತ್ತ ಎರಡನ್ನೂ ತೆಗೆದುಕೊಂಡಿದ್ದಾಳೆ. ಮಗನೂ ಹೊರಟುಹೋದ, ಸೊಸೆಯೂ ಹೊರಟುಹೋದಳು. ಅಷ್ಟೇ ಅಲ್ಲದೆ, ತನ್ನ ವಿಳಾಸ ಕೂಡ ಬದಲಾಯಿಸಿಕೊಂಡಿದ್ದಾಳೆ. ಈಗ ನಮ್ಮ ಮಗನ ನೆನಪಿಗಾಗಿ ಆಕೆ ಏನೂ ಉಳಿಸಿಲ್ಲ” ಎಂದು ಮಾಧ್ಯಮದ ಮುಂದೆ ನೋವು ತೋಡಿಕೊಂಡಿದ್ದಾರೆ.

    ಜುಲೈ 19, 2023 ರಂದು ಮಗ ಹುತಾತ್ಮನಾದ ಬಳಿಕ ಸ್ಮೃತಿಯ ತಂದೆಗೆ ನಾನು ಆಕೆಯನ್ನು ನನ್ನ ಮಗಳಂತೆ ನೋಡಿಕೊಳ್ಳುವ ಭರವಸೆ ನೀಡಿದ್ದೆ. ಅಷ್ಟೇ ಅಲ್ಲದೆ ಆಕೆ ಮರು ಮದುವೆಯ ಮನಸ್ಸು ಮಾಡಿದ್ರೆ ಆಕೆಗೆ ನನ್ನ ಮಗಳಂತೆ ಮದುವೆ ಮಾಡಿಸುವುದಾಗಿಯೂ ಹೇಳಿದ್ದೆ. ಆದರೆ ಮಗನ ಹದಿಮೂರನೇ ದಿನದ ಕಾರ್ಯ ಮುಗಿದ ಬಳಿಕ ತಾಯಿ ಜೊತೆ ಹೋದ ಸ್ಮೃತಿ ಬಳಿಕ ನೊಯ್ಡಾದ ಮನೆಯನ್ನೇ ಖಾಲಿ ಮಾಡಿ ಹೋಗಿದ್ದಳು.

    ಕೀರ್ತಿ ಚಕ್ರ ತೆಗೆದುಕೊಳ್ಳಲು ಹುತಾತ್ಮನ ಯೋಧನ ಪತ್ನಿ ಹಾಗೂ ತಾಯಿ ರಾಷ್ಟ್ರಪತಿಗಳ ಮುಂದೆ ಹೋಗುವುದು ನಿಯಮ. ಹಾಗಾಗಿ ಹೋಗಿದ್ದೇವೆಯೇ ಹೊರತು ಕೀರ್ತಿ ಚಕ್ರವನ್ನು ಸರಿಯಾಗಿ ಕೈಯಲ್ಲಿ ಮುಟ್ಟುವ ಸೌಭಾಗ್ಯ ಕೂಡ ಸಿಕ್ಕಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಸೇನಾಧಿಕಾರಿಗಳು ಫೋಟೋ ಕ್ಲಿಕ್ಕಿಸುವ ಸಮಯದಲ್ಲಷ್ಟೇ ಅದು ನಮ್ಮ ಕೈಗೆ ಬಂದಿತ್ತು ಎಂದಿದ್ದಾರೆ.

    ಇದನ್ನೂ ಓದಿ : ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಕೊ*ಲೆ ಯತ್ನ ಪ್ರಕರಣ ದಾಖಲು

    ದೇಶಕ್ಕಾಗಿ ತಮ್ಮ ಮಕ್ಕಳನ್ನು ಸಮರ್ಪಿಸಿದ ಅನೇಕ ಹೆತ್ತವರು ಇಂತಹ ಪರಿಸ್ಥಿತಿ ಎದುರಿಸುತ್ತಾರೆ. ಹೀಗಾಗಿ ಸೇನಾ ಪರಿಹಾರದ ನಿಯಮದ ವಿಚಾರದಲ್ಲಿ ಬದಲಾವಣೆ ಮಾಡಬೇಕು. ಕೆಡೆಟ್ ಅಥವಾ ಅಧಿಕಾರಿ ಸೈನ್ಯಕ್ಕೆ ಸೇರಿದಾಗ, ಅವನ ಪೋಷಕರ ಹೆಸರುಗಳನ್ನು NOK ನಲ್ಲಿ ದಾಖಲಿಸಲಾಗುತ್ತದೆ. ಆದ್ರೆ ವಿವಾಹವಾದಾಗ, ಸೇನಾ ನಿಯಮಗಳ ಅಡಿಯಲ್ಲಿ ಪೋಷಕರನ್ನು ತೆಗೆದು ಸಂಗಾತಿಯ ಹೆಸರನ್ನು ದಾಖಲಿಸಲಾಗುತ್ತದೆ. ಹೀಗಾಗಿ, ಈ ನಿಯಮಕ್ಕೆ ತಿದ್ದುಪಡಿ ತರಬೇಕು ಎಂದು ರಕ್ಷಣಾ ಸಚಿವರಲ್ಲಿ ಮನವಿ ಮಾಡುವುದಾಗಿ ಅಂಶುಮಾನ್ ಸಿಂಗ್ ಅವರ ತಂದೆ ಹೇಳಿದ್ದಾರೆ.

    Continue Reading

    LATEST NEWS

    ಪವರ್ ಟಿವಿ ಪ್ರಸಾರಕ್ಕೆ ಸುಪ್ರೀಂ ಕೋರ್ಟ್‌ ಗ್ರೀನ್ ಸಿಗ್ನಲ್!

    Published

    on

    ನವದೆಹಲಿ: ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿದ್ದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಸೂಕ್ತ ಪರವಾನಗಿ ಇಲ್ಲದೆ ಕನ್ನಡದ ಸುದ್ದಿ ವಾಹಿನಿಯಾದ ಪವರ್ ಟಿವಿ ಕಾರ್ಯ ನಿರ್ವಹಿಸುತ್ತಿತ್ತು ಎಂಬ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್‌ ಪ್ರಸಾರ ನಿರ್ಬಂಧ ಹೇರಿ ಆದೇಶಿಸಿತ್ತು. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚನೆ ನೀಡಿ ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಸದ್ಯದ ಮಟ್ಟಿಗೆ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ್ದು, ಪವರ್ ಟಿವಿ ಎಂದಿನಂತೆ ಕಾರ್ಯ ನಿರ್ವಹಿಸಬಹುದಾಗಿದೆ.


    ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸಾರಥ್ಯದ ಪೀಠವು, ಈ ವಿಚಾರದ ಕುರಿತಾಗಿ ನಾವು ಇನ್ನೇನೂ ಕೇಳಲು ಬಯಸುವುದಿಲ್ಲ. ಇದು ರಾಜಕೀಯ ದ್ವೇಷದ ಕ್ರಮ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ.

    ಇದನ್ನೂ ಓದಿ : ಅನಂತ್ ಅಂಬಾನಿ ಮದುವೆಗೆ ನಟ ಅಕ್ಷಯ್ ಕುಮಾರ್ ಗೈರು; ಕಾರಣ ಇಲ್ಲಿದೆ

    ಅವರ ದನಿಯನ್ನು ಸಂಪೂರ್ಣವಾಗಿ ಉಡುಗಿಸಬೇಕು ಎಂಬುದು ಉದ್ದೇಶವಾಗಿತ್ತು. ಹೀಗಾಗಿ ವಾಹಿನಿ ಪ್ರಸಾರಕ್ಕೆ ತಡೆ ಹಿಡಿಯಲಾಗಿತ್ತು. ಆದರೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡೋದು ಸರ್ಕಾರಗಳ ಕರ್ತವ್ಯ ಎಂದಿರುವ ನ್ಯಾಯಮೂರ್ತಿಗಳು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸದಿದ್ದರೆ, ನ್ಯಾಯಾಲಯವು ತನ್ನ ಕರ್ತವ್ಯದಲ್ಲಿ ವಿಫಲವಾಗುತ್ತದೆ ಎಂದಿದ್ದಾರೆ.

    Continue Reading

    LATEST NEWS

    Trending