ಬೆಳ್ತಂಗಡಿಯಲ್ಲಿ ಮನೆಗೆ ಬೆಂಕಿ: ಲಕ್ಷಾಂತರ ಮೌಲ್ಯದ ರಬ್ಬರ್, ಮೆಣಸು ಬೆಂಕಿಗಾಹುತಿ..!
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಮನೆಯೊಂದು ಅಕಸ್ಮಿಕವಾಗಿ ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟವಾಗಿದೆ.
ಬೆಳ್ತಂಗಡಿ ತಾಲೂಕಿನ ಪಿಜಿನಡಕದಲ್ಲಿ ಇಂದು ಸಂಜೆ ಈ ಘಟನೆ ಸಂಭವಿಸಿದ್ದು ಬೆಂಕಿಗೆ ಕಾರಣಗಳು ತಿಳಿದು ಬಂದಿಲ್ಲ.
3 ಕ್ವಿಂಟಾಲ್ ರಬ್ಬರ್ ಸೀಟ್, ಮನೆಯಲ್ಲಿದ್ದ ಮಹತ್ವ್ ದಾಖಲೆ ಪತ್ರಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿದೆ.
ಒಟ್ಟು 2 ಲಕ್ಷ ಮೌಲ್ಯದ ರಬ್ಬರ್ ಮೆಣಸು ಬೆಂಕಿಯ ಕೆನ್ನಾಲೆಗೆ ಸುಟ್ಟು ಬೂದಿಯಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಿಯರು ಬೆಂಕಿ ಆರಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ಸಂಪೂರ್ಣ ಸೊತ್ತುಗಳು ನಾಶವಾಗಿದ್ದು ಬಡ ಕುಟುಂಬ ಅಕ್ಷರಶ ಬೀದಿಗೆ ಬಂದಿದೆ.