ಉಡುಪಿ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಬಾವಿಯಲ್ಲಿ ಶವ ಪತ್ತೆ..!
ಉಡುಪಿ: ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ಲು ಹೇರೂರಿನಲ್ಲಿ ಬಾವಿಯಲ್ಲಿ ಶವ ಪತ್ತೆಯಾಗಿದೆ. ಸುಮಾರು 69 ವರ್ಷ ಪ್ರಾಯದ ಜಾನ್ ಡಿಸೋಜ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದರು.
ಬೆಳಿಗ್ಗೆ ನಾಪತ್ತೆಯಾಗಿದ್ದವರನ್ನು ಹುಡುಕಾಡಿದಾಗ ಮನೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಮಲ್ಪೆಯ ಈಜು ತಜ್ಞ ಈಶ್ವರ್ ಬಾವಿಯಲ್ಲಿ ಮುಳುಗಿ ಶವ ಮೇಲೆ ತರಲು ಸಹಕರಿಸಿದರು.
ಶಿರ್ವ ಠಾಣೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮಹಜರಿಗೆ ಕಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರ ತನಿಖೆಯಿಂದ ಘಟನೆಗೆ ಕಾರಣ ಗೊತ್ತಾಗಬೇಕಾಗಿದೆ.