Friday, November 26, 2021

ಉಡುಪಿಯಲ್ಲಿ ಸಿಡಿಲು ಬಡಿದು ಸಾಫ್ಟ್ ವೇರ್ ಇಂಜಿನಿಯರ್ ಭೀಕರ ದುರ್ಮರಣ ..!

ಉಡುಪಿಯಲ್ಲಿ ಸಿಡಿಲು ಬಡಿದು ಸಾಫ್ಟ್ ವೇರ್ ಇಂಜಿನಿಯರ್ ಭೀಕರ ದುರ್ಮರಣ..!

ಉಡುಪಿ: ಸಿಡಿಲು ಬಡಿದು ಯುವಕನೋರ್ವ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ವಂಡಾರಿನ ಬೋರ್ಡಕಲ್ಲಿನಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಸ್ಥಳೀಯ ನಿವಾಸಿ ಸಾಫ್ಟ್ ವೇರ್ ಇಂಜಿನಿಯರ್ 24 ವರ್ಷದ ಚೇತನ್ ಮೃತಪಟ್ಟ ಯುವಕನಾಗಿದ್ದಾರೆ. ಮನೆಯೊಳಗಡೆ ಲ್ಯಾಪ್‍ಟಾಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ, ಸಿಡಿಲಿನ ಹೊಡೆತಕ್ಕೆ ಒಳಗಾಗಿ ಗಂಭೀರವಾಗಿ ಅಸ್ವಸ್ಥತಗೊಂಡಿದ್ದು. ತಕ್ಷಣ ಆತನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆ ಗೆ ಕರೆದೊಯ್ಯಲಾಯಿತು.

ಆದರೆ ಆತನನ್ನು ಪರೀಕ್ಷಿಸಿದ ವೈದ್ಯರು ಚೇತನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈತ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿಯಾಗಿದ್ದು,  ಕೊರೊನಾ ಸಮಸ್ಯೆಯ ನಂತರ ಹಲವು ತಿಂಗಳಿಂದ ಮನೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ.

ಈತನದ್ದು ತೀರಾ ಬಡತನದ ಕುಟುಂಬವಾಗಿದ್ದು ಸಾಕಷ್ಟು ಕಷ್ಟಪಟ್ಟು ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಮಾತ್ರವಲ್ಲ ಮನೆಗೆ ಆಧಾರ ಕೂಡ ಆಗಿದ್ದ ಮೃತ ದುರ್ದೈವಿ ಚೇತನ್ ತಂದೆ,ತಾಯಿ, ಸಹೋದರಿಯನ್ನು ಅಗಲಿದ್ದಾನೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...