Monday, May 17, 2021

ಮೇಲಾಧಿಕಾರಿ ಕಿರುಕುಳ ಆರೋಪ : ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ ಬಂಟ್ವಾಳ ಪುರಸಭಾ ಹೆಲ್ತ್ ಅಫೀಸರ್…! 

ಮೇಲಾಧಿಕಾರಿ ಕಿರುಕುಳ ಆರೋಪ : ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ ಬಂಟ್ವಾಳ ಪುರಸಭಾ ಹೆಲ್ತ್ ಅಫೀಸರ್…! 

ಬಂಟ್ವಾಳ :  ಸರಕಾರಿ ಉದ್ಯೋಗಿಯೋರ್ವರು ಪತ್ರ ಬರೆದು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಇಂದು ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಪುರಸಭೆಯ ಹೆಲ್ತ್ ಅಫೀಸರ್ ವಿಟ್ಲ ಪುಣಚ ನಿವಾಸಿ ರವಿ ಕೃಷ್ಣ ಅವರು ಆತ್ಮಹತ್ಯೆ ಗೆ ಪ್ರಯತ್ನ ಮಾಡಿದ ವ್ಯಕ್ತಿಯಾಗಿದ್ದಾರೆ.

ಮೇಲಾಧಿಕಾರಿಗಳ ಮಾನಸಿಕ ಹಿಂಸೆಯಿಂದ ಬೇಸರಗೊಂಡು ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಸುಳ್ಯ ಪುರಸಭೆಯಿಂದ ಕಳೆದ ಐದು ತಿಂಗಳ ಹಿಂದೆಯಷ್ಟೆ ಬಂಟ್ವಾಳ ಪುರಸಭೆಗೆ ಆಗಮಿಸಿದ್ದರು.

ಮೇಲಾದಿಕಾರಿಗಳ ಮಾನಸಿಕ ಹಿಂಸೆಯನ್ನು ತಾಳಲಾರದೆ ರವಿಕೃಷ್ಣ ಅವರು ಇಂದು ಬೆಳಿಗ್ಗೆ ಪತ್ರ ಬರೆದಿಟ್ಟು ಮೆಲ್ಕಾರ್ ನಲ್ಕಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದ ವೇಳೆ ಅವರನ್ನು ರಕ್ಷಣೆ ಮಾಡಿ ಪುತ್ತೂರು ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.
ಇನ್ನು ಪತ್ರದ ಸಾರಾಂಶ ಪ್ರಕಾರ ಮಾನ್ಯ ಅಧ್ಯಕ್ಷರೇ ನನ್ನನ್ನು ದಯಮಾಡಿ ಕ್ಷಮಿಸಿ.ನಮ್ಮ ಕಚೇರಿಯ ಮುಖ್ಯಾಧಿಕಾರಿ ಶ್ರೀಮತಿ‌ ಲೀನಾಬ್ರಿಟ್ಟೋ ಇವರು ನನಗೆ ದಿನನಿತ್ಯ ಅನಗತ್ಯವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.

ಹಾಗೂ ಕಚೇರಿಯ ಇಕ್ಬಾಲ್ ನನ್ನ ಬಗ್ಗೆ ಅನಗತ್ಯ ಸುಳ್ಳು ಸುದ್ದಿ ಹಬ್ಬುತ್ತಿದ್ದಾನೆ.ನಾನು ಬಂಟ್ವಾಳ ಪುರಸಭೆಗೆ ಸುಮಾರು 5 ತಿಂಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದು 2 ತಿಂಗಳ ಕಾಲ ಯಾವುದೇ ಸಮಸ್ಯೆ ಇರಲಿಲ್ಲ.

ತದನಂತರ ಇದುವರೆಗೆ ದಿನನಿತ್ಯ ಅನಗತ್ಯ ಬೈಗುಳ ಮಾನಸಿಕ ಹಿಂಸೆಯ ನ್ನು ಮಾನ್ಯ ಮುಖ್ಯಾಧಿಕಾರಿ ಗಳು ನೀಡುತ್ತಿದ್ದಾರೆ. ಇದುವರಗೆ ನಾನು ಮಾನ್ಯ ಮುಖ್ಯಧಿಕಾರಿಗಳಿಗೆ ಯಾವುದೇ ರೀತಿಯ ಎದುರುತ್ತರ ನೀಡಿರುವುದಿಲ್ಲ ಅವರಿಗೆ ನನ್ನ ಅಮ್ಮನ‌ ಸ್ಥಾನ ನೀಡಿರುತ್ತೇನೆ.

ನಾನು ಯಾವುದೇ ರೀತಿಯ ಲ್ಲಿ ಕಚೇರಿಯ ಸಿಬ್ಬಂದಿ ಗಳೊಂದಿಗೆ ಅನುಚಿತವಾಗಿ ಅಥವಾ ಅಸಭ್ಯವಾಗಿ ವರ್ತಿಸಿಲ್ಲ, ಈ ಬಗ್ಗೆ ತಾವುಗಳು ಕಚೇರಿಯ ಸಿಬ್ಬಂದಿ ಯವರಲ್ಲಿ ಕೇಳಿ ತಿಳಿದುಕೊಳ್ಳಬಹುದು.ನಾನು ಬೇರಿ ಕಚೇರಿ ಗೆ ಇಲ್ಲಿಂದ ವರ್ಗಾವಣೆ ಮಾಡಿ ಹೋಗುವುದಕ್ಕೂ ಮುಖ್ಯಾಧಿಕಾರಿ ಗಳು ತೊಂದರೆಯನ್ನು ನೀಡುತ್ತಿದ್ದಾರೆ.

ನಾನು ಬಹಳ ತಾಳ್ಮೆಯಿಂದ ಅವರಲ್ಲಿ ಹೇಳಿದರು ಅವರು ನನಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ. ಅದುದರಿಂದ ನಾನು ಕೊನೆಗೂ ತಾಳ್ಮೆ ಸಹಿಸಲಾರದೆ ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಅನೇಕ ವಿಚಾರಗಳನ್ನು ಬರೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.

 

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...