Saturday, February 4, 2023

ಖಾಕಿಯಿಂದ ಖಾಕಿಗೆ ಲವ್ ಸೆಕ್ಸ್ ಧೋಖಾ: ಅರಮನೆ ನಗರಿ  ಮೈಸೂರಿನಲ್ಲಿ ಪೊಲೀಸರ ಲವ್ವಿಡವ್ವಿ ಕೇಸ್..!

 

ಖಾಕಿಯಿಂದ ಖಾಕಿಗೆ ಲವ್ ಸೆಕ್ಸ್ ಧೋಖಾ: ಅರಮನೆ ನಗರಿ  ಮೈಸೂರಿನಲ್ಲಿ ಪೊಲೀಸರ ಲವ್ವಿಡವ್ವಿ ಕೇಸ್..!

ಮೈಸೂರು:  ಮದುವೆಯಾಗುವುದಾಗಿ ಹೇಳಿ ವಂಚಿಸಿದ ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ದೂರು ನೀಡಿರುವ ಘಟನೆ ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐ ಆನಂದ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐ ರಾಧ ಅವರೇ ಆನಂದ್ ವಿರುದ್ಧ ಈ ಬಗ್ಗೆ ದೂರು ನೀಡಿದ್ದಾರೆ.

ಮೈಸೂರಿನ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐಗಳ ಮಧ್ಯೆ ಪರಿಚಯವಾಗಿದ್ದು, ಈ ಪರಿಚಯ ಪ್ರೇಮಕ್ಕೆ ತಿರುಗಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೋಡಿ ಸುತ್ತಾಟ ನಡೆಸಿದೆ.ಅತ್ತ ಆನಂದ್ ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಗರ್ಭಿಣಿಯಾಗಿದ್ದು, ಮುದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ.ಅಲ್ಲದೆ ಈ ಮಧ್ಯೆ ಆನಂದ್ ಬೇರೊಂದು ಮದುವೆ ಆಗಿದ್ದಾನೆ. ಬಳಿಕ ಆತ ನನ್ನನ್ನು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ರಾಧಾ ಗಂಭೀರ ಆರೋಪ ಮಾಡಿದ್ದಾರೆ.

ಸದ್ಯ ನನಗೆ ಆನಂದ್ ನಿಂದ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಪಿಎಸ್‍ಐ ರಾಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ರಾಧಾ ದೂರಿನಂತೆ ಪಿಎಸ್‍ಐ ಆನಂದ್ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಸದ್ಯ ಪೊಲೀಸರ ಲವ್ವಿಡವ್ವಿ ಕೇಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

LEAVE A REPLY

Please enter your comment!
Please enter your name here

Hot Topics

ಮುಲ್ಕಿ : ಇಬ್ಬರ ಸಾವಿಗೆ ಕಾರಣರಾದ ತುಳು ಕಾಮಿಡಿಯನ್ ಅರ್ಪಿತ್ ಅರೆಸ್ಟ್..!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಕಾರುಡಿಕ್ಕಿ ಹೊಡೆದು ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ...

ಮಂಗಳೂರು : ಸುರತ್ಕಲಿನಿಂದ ಕೆಲಸಕ್ಕೆ ತೆರಳಿದ್ದ ಯುವತಿ ಕಾವೇರಿ ಮಿಸ್ಸಿಂಗ್..!

ಮಂಗಳೂರು: ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಯುವತಿ ತಡಂಬೈಲ್‌ ಗ್ರಾಮದ ಜಯಶ್ರೀ ಶೆಟ್ಟಿ ಎಂಬವರ ಮಗಳು ಕಾವೇರಿ(19) ಎಂದು ತಿಳಿದು ಬಂದಿದೆ.ಜ.27ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು...

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಆಟೋ- ಮಹಿಳೆ ಸಾವು..!

ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮುಂಡಾಜೆ ಸಮೀಪ ನಡೆದಿದೆ.ಬೆಳ್ತಂಗಡಿ: ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ...