Thursday, April 22, 2021

 ಸರಣಿ ಕಳ್ಳತನದ ಜೊತೆ  ವಾಹನಗಳನ್ನೂ ಸುಟ್ಟು ಅಟ್ಟಹಾಸ ಮೆರೆದ ಪಾಪಿ ದರೋಡೆಕೋರರು..!

ಉಡುಪಿ: ಉಡುಪಿಯಲ್ಲಿ  ಮತ್ತೆ ಸರಣಿ ದರೋಡೆ ಯತ್ನ ನಡೆದಿದೆ. ಕಿಡಿಗೇಡಿ ದರೋಡೆಕೋರರು ದರೋಡೆ ಯತ್ನದ‌‌ ಜೊತೆ‌‌‌ ಸಿಕ್ಕ‌ ಸಿಕ್ಕ‌ ವಾಹನ ಸುಟ್ಟು ‌ಹಾಕಿದ್ದಾರೆ. ಉಡುಪಿಯ ಬೈಲೂರು ಹಾಗೂ ಮಾರ್ಪಳ್ಳಿಯಲ್ಲಿ ಇತ್ತೀಚೆಗೆ ತಡರಾತ್ರಿ‌ ಘಟನೆ ನಡೆದಿದೆ. ಬೈಲೂರು ವಾರ್ಡ್ ನ ದುರ್ಗಾ ನಗರದಲ್ಲಿ ಬೈಕ್, ರಿಕ್ಷಾ ಸುಟ್ಟು ದರೋಡೆ ಯತ್ನ ನಡೆಸಲಾಗಿದೆ.ಒಂದು ಮನೆಯ ಗಾಜನ್ನ ಒಡೆದು ಮತ್ತೊಂದು ಮನೆಯಲ್ಲಿ ಇನ್ವರ್ಟರ್ ವೈಯರ್ ಕಟ್ ಮಾಡಿ ದರೋಡೆ ಯತ್ನ ಮಾಡಲಾಗಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ಕಳ್ಳರು ಕೈಚಳಕ ತೋರಿಸಿರುವ ಶಂಕೆಯಿದೆ,

ಬೈಲೂರಿನಿಂದ ಒಂದು ಕಿಲೋಮೀಟರ್ ದೂರದಲ್ಲಿ ಮತ್ತೆ ಸರಣಿ ಕಳವು ನಡೆದಿದೆ. ಬೈಲೂರು ಭಾಗದಲ್ಲಿ ದರೋಡೆ ಯತ್ನ ನಡೆಸಿ ಮಾರ್ಪಳ್ಳಿಯಲ್ಲಿ ಸರಣಿ ಕಳವು ಮಾಡಿದ್ದಾರೆ.ರಿಕ್ಷಾದಲ್ಲಿದ್ದ 2 ಸಾವಿರ ನಗದು, ದೈವಸ್ಥಾನದ ಕಾಣಿಕೆ ಹುಂಡಿ ಕಳವು ಯತ್ನ ನಡೆಸಿದ್ದಲ್ಲದೆ ಮನೆಯೊಳಗೆ ನುಗ್ಗಿ ಚಿನ್ನ ಕಳವು‌ ಮಾಡಿದ್ದಾರೆ. ಕಳ್ಳರ ಕುಕೃತ್ಯದಿಂದ ಬೈಲೂರು ಮಾರ್ಪಳ್ಳಿಯ ಜನತೆ ಆತಂಕಿತರಾಗಿದ್ದಾರೆ.    ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...