Thursday, April 22, 2021

ಮಾಸ್ಕ್ ಸರಿಯಾಗಿ ಧರಿಸಿಲ್ಲದ ಕಾರಣ;  ರಿಕ್ಷಾ ಚಾಲಕನನ್ನು ಹಿಗ್ಗಾ ಮುಗ್ಗ ಥಳಿಸಿ ಕ್ರೌರ್ಯ ಮೆರೆದ ಇಬ್ಬರು ಪೊಲೀಸರು..!

ಭೋಪಾಲ್: ದೇಶದೆಲ್ಲೆಡೆ ಎರಡನೇ ಬಾರಿಗೆ ಕೊರೊನಾ ಮಹಾಮಾರಿ ಅಲೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ.  ಕೊರೊನಾ ಗೈಡ್ ಲೈನ್ಸ್ ಗಳನ್ನು ಪಾಲನೆ ಮಾಡುವಂತೆ ಈಗಾಗಲೇ ಆದೇಶವನ್ನೂ ಹೊರಡಿಸಿದೆ.ಇದನ್ನೇ ಬಂಡವಾಳವಾಗಿಸಿಕೊಂಡ  ಕೆಲ ಅಧಿಕಾರಿಗಳು  ಕೊರೊನಾ ಗೈಡ್ಸ್ ಲೈನ್ಸ್ ಗಳನ್ನು  ದುರುಪಯೋಗಪಡಿಸಿಕೊಳುತ್ತಿರುವುದು  ಕಂಡು ಬರುತ್ತಿದೆ ಸಧ್ಯ  ಇಂಥ ಒಂದು ಪ್ರಕರಣ ಭೋಪಾಲ್ ನಲ್ಲಿ ನಡೆದಿದೆ. ಮಾಸ್ಕ್ ಅನ್ನು ಸರಿಯಾಗಿ ಹಾಕಿರಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಪೊಲೀಸರು ವ್ಯಕ್ತಿಯೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದ  ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತ್ ವೈರಲ್ ಆಗ್ತಾ ಇದೆ. ಪೊಲೀಸರ ದುರ್ವತನೆಗೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.35 ವರ್ಷದ ಆಟೋ ರಿಕ್ಷಾ ಚಾಲಕ ಕೃಷ್ಣ ಅವರು ಆಸ್ಪತ್ರೆಯಲ್ಲಿರುವ ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿಯಾಗಲು ತೆರಳುತ್ತಿದ್ದಾಗ ಅವರ ಮಾಸ್ಕ್ ಮೂಗಿನ ಬಳಿ ಜಾರಿ ಬಂದಿತ್ತು.

ಇದನ್ನು ಗಮನಿಸಿದ ಇಬ್ಬರು ಪೊಲೀಸರು ಆತನನ್ನು ರಸ್ತೆಯಲ್ಲಿ ತಡೆದು ಪೊಲೀಸ್  ಠಾಣೆಗೆ ಬರಬೇಕೆಂದು ಒತ್ತಾಯಿಸಿದರು. ರಿಕ್ಷಾ ಚಾಲಕ ಇದಕ್ಕೆ ನಿರಾಕರಿಸಿದಾಗ ಹೊಡೆಯಲಾರಂಭಿಸಿದರು.

ಮೊಬೈಲ್ ಫೋನ್ ನಲ್ಲಿ  ಸೆರೆಯಾಗಿರುವ ದೃಶ್ಯದಲ್ಲಿ ಪೊಲೀಸರಿಬ್ಬರು ರಿಕ್ಷಾ ಚಾಲಕನನ್ನು ರಸ್ತೆಯಲ್ಲಿ ಮಲಗಿಸಿ ನಿರ್ದಯವಾಗಿ ಒದೆಯುವುದು ಹಾಗೂ ಹೊಡೆಯುವುದು ಕಂಡುಬಂದಿದೆ.

ರಿಕ್ಷಾ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.  ರಿಕ್ಷಾ ಚಾಲಕನೊಂದಿಗಿದ್ದ  ಕಿರಿಯ ಮಗ ಸಹಾಯಕ್ಕಾಗಿ ಕಿರುಚಾಡಿದರೂ ಯಾರೂ ನೆರವಿಗೆ ಬಾರದೆ ನಿಸ್ಸಹಾಯಕರಂತೆ ಹಲ್ಲೆ ನಡೆಯುತ್ತಿರುವುದನ್ನು ನೋಡುತ್ತಿದ್ದುದು ಇನ್ಕೆಲವರು ಫೋಟೋ ವೀಡಿಯೋ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದುದು ನಿಜಕ್ಕೂ ಕರುಳು ಹಿಂಡುವಂತಿತ್ತು.

ನಿರ್ದಯವಾಗಿ ಥಳಿಸಿರುವ ಪೊಲೀಸರಿಬ್ಬರನ್ನು ಕಮಲ್ ಪ್ರಜಾಪತ್ ಹಾಗೂ ಧರ್ಮೇಂದ್ರ ಜಾಟ್ ಎಂದು ಗುರುತಿಸಲಾಗಿದೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ  ಅನ್ನೋದು ತಿಳಿದು ಬಂದಿದೆ.

ಹಲ್ಲೆ ನಡೆಸುತ್ತಿರುವ ವೀಡಿಯೊ ವ್ಯಾಪಕವಾಗಿ ಪ್ರಸಾರವಾದ ನಂತರವೇ ಇಬ್ಬರು ನಿರ್ದಯಿ ಪೊಲೀಸರನ್ನು  ಅಮಾನತುಗೊಳಿಸುವಂತೆ  ಒತ್ತಾಯ ಕೇಳಿ ಬಂದಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...