LATEST NEWS
ಡಾ.ಶಾಂತಾರಾಮ ಶೆಟ್ಟಿ ಫೇಸ್ಬುಕ್ ಖಾತೆ ಹ್ಯಾಕ್: ದೂರು ದಾಖಲು
ಮಂಗಳೂರು: ಹಿರಿಯ ಎಲುಬು ತಜ್ಞ ಡಾ.ಶಾಂತಾರಾಮ ಶೆಟ್ಟಿ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.18ರಂದು ಸಂಜೆ 7 ಗಂಟೆ ಸುಮಾರಿಗೆ ಅವರ ಸ್ನೇಹಿತರು ಕರೆ ಮಾಡಿ ಫೇಸ್ ಬುಕ್ ಹ್ಯಾಕ್ ಆಗಿರುವ ಬಗ್ಗೆ ಶಾಂತರಾಮ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದರು.
ಫೋರೆಕ್ಸ್ ಟ್ರೇಡ್ ಗೆ ಸಂಬಂಧಿಸಿದ ಕೆಲವು ಮೆಸೇಜ್ಗಳು ಬರುತ್ತಿದ್ದು, ಫೇಸ್ಬುಕ್ ಹ್ಯಾಕ್ ಮಾಡಿ ಹ್ಯಾಕರ್ಗಳು ಡಾ.ಶಾಂತಾರಾಮ ಶೆಟ್ಟಿ ಅವರ ಸ್ನೇಹಿತರಿಗೆ ಮೆಸೇಜ್ ಕಳುಹಿಸುತ್ತಿದ್ದರು. ಫೇಸ್ಬುಕ್ ಪ್ರೋಫೈಲ್ ನಲ್ಲಿ ಅವರ ಹಳೆ ಫೋಟೋಗಳನ್ನು ಹಾಕಿರುವುದು ಕಂಡುಬಂದಿದೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಾ.ಶಾಂತಾರಾಮ ಶೆಟ್ಟಿ ಅವರು ಮಂಗಳವಾರ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಅದರನ್ವಯ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
‘ಗೀತಾಂಜಲಿ ಸಿಲ್ಕ್ಸ್’, ‘ಶಾಂತಿ ಸಾಗರ್’ ಹೊಟೇಲ್ ಸಂಸ್ಥಾಪಕ ನೀರೆಬೈಲೂರು ಗೋವಿಂದ ನಾಯಕ್ ನಿ*ಧನ
ಉಡುಪಿ : ಉಡುಪಿಯ ಖ್ಯಾತ ಜವಳಿ ಮಳಿಗೆ ‘ಗೀತಾಂಜಲಿ ಸಿಲ್ಕ್ಸ್’ ಮತ್ತು ‘ಶಾಂತಿ ಸಾಗರ್’ ಹೊಟೇಲ್ ಸಂಸ್ಥಾಪಕ ನೀರೆಬೈಲೂರು ಗೋವಿಂದ ನಾಯಕ್ ಇಂದು ಮುಂಜಾನೆ ಸ್ವಗೃಹದಲ್ಲಿ ವಿಧಿವ*ಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮೃ*ತರು ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇದನ್ನೂ ಓದಿ : KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು
LATEST NEWS
KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು
ಕಾರ್ಕಳ : ಕಲ್ಲು ಲೋಡು ಮಾಡಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃ*ತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಕಲ್ಲು ಕೊರೆಯ ಬಳಿ ನಡೆದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರ ನಿವಾಸಿ ಕರಿಯಪ್ಪ(26) ಮತ್ತು ನರಿಯಪ್ಪ(27) ಮೃ*ತಪಟ್ಟವರು.
ಇದನ್ನೂ ಓದಿ : ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 24ರ ವರೆಗೂ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
ಕಾರ್ಕಳ ನಿಟ್ಟೆ ಭ್ರಾಮರಿ ಕ್ರಾಸ್ ಸಮೀಪ ಲಾರಿಯಲ್ಲಿ ಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಕೋರೆಯ ಪಕ್ಕದ ಇಳಿಜಾರು ರಸ್ತೆಯಲ್ಲಿ ಚಲಿಸುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಕಾರ್ಮಿಕರು ಲಾರಿಯ ಚಕ್ರದ ಅಡಿಯಲ್ಲಿ ಸಿಲುಕಿ ಮೃ*ತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
FILM
ದಾಂಪತ್ಯಕ್ಕೆ ಕಾಲಿಡಲಿದ್ದಾರಾ ‘ಪ್ರಭಾಸ್’..! ಈ ಪೋಸ್ಟ್ ಹಿಂದಿನ ಅಸಲಿಯತ್ತೇನು!?
ಟಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಎಂದೇ ಹೆಸರಾಗಿರುವ ಪ್ರಭಾಸ್ ಸದಾ ತಮ್ಮ ಮದುವೆಯ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಸೂಪರ್ ಸ್ಟಾರ್ ಪ್ರಭಾಸ್ರವರ ಹೆಸರಿನ ಜೊತೆ ಹಲವು ಸ್ಟಾರ್ ನಟಿಯರ ಹೆಸರುಗಳು ತುಣುಕು ಹಾಕುತ್ತಿತ್ತು. ಅದರಲ್ಲೂ ಪುತ್ತೂರಿನ ಬೆಡಗಿ ಅನುಷ್ಕಾ ಶೆಟ್ಟಿ ಯವರ ಹೆಸರು ಆಗಾಗ ಕೇಳಿಬರುತ್ತಿತ್ತು. ಇನ್ನು ಬಾಹುಬಲಿ ಸಿನೆಮಾದ ಬಳಿಕ ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಇನ್ನೇನು ದಾಂಪತ್ಯ ಜೀವನಕ್ಕೂ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ ಪ್ರಭಾಸ್ ಹಾಗೂ ಅನುಷ್ಕಾ ಅದೆಲ್ಲವನ್ನು ಅಲ್ಲಗಳೆದಿದ್ದಾರೆ.
ಇದೀಗ ಪ್ರಭಾಸ್ ಅವರ ಒಂದು ಪೋಸ್ಟ್ ಅಭಿಮಾನಿಗಳಲ್ಲಿ ಖುಷಿ ನೀಡಿದೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ‘ಡಾರ್ಲಿಂಗ್ಸ್!!.. ಕೊನೆಗೂ ನನ್ನ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರಲಿದ್ದಾರೆ.. ಸ್ವಲ್ಪ ಕಾಯಿರಿ” ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿ ಜೊತೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಪೋಸ್ಟ್ ನೋಡಿದ ಬಳಿಕ ಪ್ರಭಾಸ್ ಮದುವೆಗೆ ಸಜ್ಜಾಗಿದ್ದಾರಾ..!? ಎಂಬುದಾಗಿಯೂ ಕುತೂಹಲ ಮೂಡಿದೆ. ಇನ್ನೂ ಕೆಲವರು ಸಿನೆಮಾ ಪ್ರಚಾರಕ್ಕಾಗಿ ಈ ತಂತ್ರವನ್ನು ಬಳಸಿದ್ದಾರಾ ಎನ್ನುವುದು ಅನುಮಾನ ಮೂಡಿದೆ.
ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!
ಸಿನೆಮಾ ಪ್ರಚಾರಕ್ಕಾಗಿ ಪೋಸ್ಟ್ ಹಾಕಿದ್ರಾ ಪ್ರಬಾಸ್..?
ಸಲಾರ್ ಸಿನೆಮಾ ಹಿಟ್ ಬಳಿಕ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ ‘ ಸಿನೆಮಾ ತೆರೆಗೆ ಬರಲು ಸಿದ್ಧವಾಗಿದೆ. ಇನ್ನೂ ಈ ಸಿನೆಮಾದಲ್ಲಿ ಘಟಾನುಘಟಿಗಳು ಬಣ್ಣ ಹಚ್ಚಿದ್ದಾರೆ. ಅಮಿತಾಬಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಮುಂತಾದವರು ನಟಿಸಿದ್ದಾರೆ. ಇದೇ ಸಿನೆಮಾದ ಪ್ರಚಾರಕ್ಕಾಗಿ ಮಾಡಿರುವ ತಂತ್ರ ಎಂದು ಹೇಳಲಾಗಿದೆ. ಇನ್ನು ಈ ಸಿನೆಮಾ ಪ್ರಚಾರಕ್ಕಾಗಿಯೇ ಹೊಸ ವಿನ್ಯಾಸದ ಕಾರೊಂದನ್ನು ತಯಾರು ಮಾಡಲಾಗಿದೆಯಂತೆ. ಹೀಗಾಗಿ ಪ್ರಭಾಸ್ ‘ ನನ್ನ ಜೀವನದಲ್ಲಿ ಹೊಸ ವ್ಯಕ್ತಿ ಆಗಮನ’ ಎಂದು ಬರೆದುಕೊಂಡಿರಬಹುದು ಎಂದು ಊಹಿಸಲಾಗಿದೆ.
ಅದೇನೆ ಇರಲಿ ಪ್ರಭಾಸ್ ಮದುವೆ ಆಗಲು ನಿರ್ಧಿರಿಸಿದ್ದಾರಾ..? ಅಥವಾ ಸಿನೆಮಾ ಪ್ರಚಾರಕ್ಕಾಗಿ ಹೀಗೆ ಬರೆದುಕೊಂಡಿದ್ದಾರಾ..? ಅನ್ನೋದರ ಅಸಲಿಯತ್ತು ಇನ್ನೆರೆಡು ದಿನಗಳಲ್ಲಿ ಕಾದು ನೋಡಬೇಕಿದೆ.