Connect with us

DAKSHINA KANNADA

ಮಂಗಳೂರು: ಖ್ಯಾತ ಗಾಯಕಿ ಸುರೇಖಾ ಪೈ ನಿಧನ

Published

on

ಮಂಗಳೂರು: ಸದಾ ನಗುಮುಖದಿಂದ ಎಲ್ಲವನ್ನು ಸ್ವೀಕರಿಸಿ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದ ಮಹಿಳೆ ಎಂದು ಹೊಗಳಿಕೆಯನ್ನು ಸಂಪಾದಿಸಿದ್ದ ಅದ್ಭುತ ಗಾಯಕಿ ಮಂಗಳೂರಿನ ಕದ್ರಿ ನಿವಾಸಿ ಸುರೇಖಾ ಪೈ ಅಸೌಖ್ಯದಿಂದ ನಿನ್ನೆ ಮುಂಜಾನೆ ನಿಧನರಾದರು.


ಜಾಂಡೀಸ್ ಖಾಯಿಲೆಯಿಂದ ಕೂಡ ಬಳಲುತ್ತಿದ್ದ ಇವರು ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರಾಗಿದ್ದರು. ಮೂಲತಃ ಮುಂಬೈಯವರಾದ ಇವರು  ಉತ್ತಮ ಗಾಯಕಿಯಾಗಿದ್ದು ಸೋನುನಿಗಮ್ ಸೇರಿದಂತೆ ಪ್ರಸಿದ್ಧ ಗಾಯಕರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು.

ಅವರ ಸ್ವಗೃಹದಲ್ಲೇ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರ ಸಾವಿಗೆ ಕುಟುಂಸ್ಥರು, ಸ್ನೇಹಿತರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

DAKSHINA KANNADA

ಒಂದು ರೇಷ್ಮೆ ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳು ಬೇಕು ಗೊತ್ತೇ..?

Published

on

ಮಂಗಳೂರು: ಹೆಣ್ಮಕ್ಕಳಿಗೆ ರೇಷ್ಮೆ ಸೀರೆ ಅಂದರೆ ಭಾರೀ ಇಷ್ಟ. ಯಾವೂದೇ ಒಂದು ಶುಭ ಕಾರ್ಯಕ್ರಮಕ್ಕೆ ಹೋಗಬೇಕಾದರೆ ಹೆಣ್ಮಕ್ಕಳಿಗೆ ರೇಷ್ಮೆ ಸಾರಿ ಬೇಕೇ ಬೇಕು. ಅಮ್ಮನ ರೇಷ್ಮೆ ಸೀರೆಯನ್ನು ಕಂಡರಂತೂ ಎಲ್ಲಿಲ್ಲದ ಪ್ರೀತಿ. ರೇಷ್ಮೆ ಸೀರೆಯ ಬೆಲೆ ಜಾಸ್ತಿ ಆದರೂ ಹಣ ಹೊಂದಿಸಿಕೊಂಡು ಹೋಗಿ ಅದನ್ನು ಖರೀದಿ ಮಾಡುತ್ತಾರೆ. ಹಬ್ಬ, ಹರಿದಿನ, ಪೂಜೆ, ದೇವಸ್ಥಾನ, ಮದುವೆ ಹೀಗೆ ಯಾವೂದೇ ಸಮಾರಂಭಕ್ಕೆ ರೇಷ್ಮೆ ಸೀರೆ ಬೇಕೇ ಬೇಕು.

ಸಾಮಾನ್ಯವಾಗಿ ಮಹಿಳೆಯರ ರೇಷ್ಮೆ ಸೀರೆ ತುಂಬಾನೇ ದುಬಾರಿ ಇರುತ್ತೆ. ಯಾಕೆಂದರೆ ಇದನ್ನು ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಯವಾದ, ಮೃದುವಾದ ಸೀರೆಯನ್ನು ತಯಾರಿಸಬೇಕೆಂದರೆ ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಈ ರೇಷ್ಮೆ ಸೀರೆಯನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ತಿಳಿಯೋಣ.

ರೇಷ್ಮೆ ಸೀರೆ ತಯಾರಿಸುವುದು ಹೇಗೆ ?

ರೇಷ್ಮೆ ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬ ಹೆಂಗಳೆಯರ ಬಳಿ ಒಂದಾದರೂ ರೇಷ್ಮೆ ಸೀರೆ ಇದ್ದೇ ಇರುತ್ತದೆ. ಒಂದು ವೇಳೆ ಇಲ್ಲದಿದ್ದರೆ ಖರೀದಿಸಲೇ ಬೇಕು ಎನ್ನುವ ಆಸೆ ಇದ್ದೇ ಇರುತ್ತದೆ.

ರೇಷ್ಮೆ ಸೀರೆಯನ್ನು ತಯಾರಿಸುವುದು ರೇಷ್ಮೆ ನೂಲಿನಿಂದ. ಒಂದು ಹೆಣ್ಣು ಹುಳು ಒಮ್ಮೆಗೆ 300-500 ಮೊಟ್ಟೆಗಳನ್ನು ಇಡುತ್ತದೆ. ಈ ಎಲ್ಲಾ ಮೊಟ್ಟೆಗಳನ್ನು ಒಂದೇ ಸ್ಥಳದಲ್ಲಿ ಇರಿಸಬೇಕಾಗುತ್ತದೆ. ಇದರಿಂದ ಲಾರ್ವಾಗಳು ಹೊರಹೊಮ್ಮುತ್ತವೆ. ಅದರ ಸಹಾಯದಿಂದ ರೇಷ್ಮೆ ನೂಲು ತಯಾರಿಸಿ ಸೀರೆ ಮಾಡಲಾಗುತ್ತದೆ.

ಮೊದಲಿಗೆ ರೇಷ್ಮೆ ಹುಳುವಿನ ಕೃಷಿ ಮಾಡಬೇಕು. ಈ ಕೃಷಿಗೆ ತುಂಬಾ ಕಷ್ಟಪಡಬೇಕಾಗುತ್ತದೆ. ಪರಿಶ್ರಮ ಹಾಕಿದರೆ ಇದು ಬಂಗಾರದ ಕೃಷಿ. ಇನ್ನು ಪ್ರತಿಯೊಂದು ರೇಷ್ಮೆ ಹುಳುವನ್ನು ಕೈಯಿಂದಲೇ ತೆಗೆದು ಅವುಗಳನ್ನು ಸಣ್ಣ ವಿಭಾಗಗಳಲ್ಲಿ ಚಂದ್ರಿಕೆಯಲ್ಲಿ ಇರಿಸಲಾಗುತ್ತದೆ. ಬಳಿಕ ಅವುಗಳ ಮೇಲೆ ಮಲ್ಬೆರಿ ಎಲೆಗಳನ್ನು ಹೊಂದಿಸಲಾಗುತ್ತೆ. ರೇಷ್ಮೆ ಹುಳುಗಳು ಈ ಎಲೆಗಳನ್ನು ತಿನ್ನುತ್ತವೆ. ಆಹಾರ ಸೇವನೆ ನಿಂತಾಗ, ಅವು ನೂಲನ್ನು ಬಿಡಲು ಆರಂಭಿಸುತ್ತದೆ.

ಈ ಸಂಪೂರ್ಣ ಪ್ರಕ್ರಿಯೆಯು 3ರಿಂದ 8 ದಿನಗಳನ್ನು ತೆಗೆದುಕೊಳ್ಳುತ್ತದೆ. ರೇಷ್ಮೆ ಹುಳು 100 ಮೀಟರ್ ಉದ್ದದ ರೇಷ್ಮೆಯ ಒಂದೇ ದಾರವನ್ನು ಮಾಡುತ್ತದೆ. ಈ ದಾರವು ಅವುಗಳ ಪಕ್ಕದಲ್ಲಿರುವ ನೈಸರ್ಗಿಕ ಅಂಟಿಗೆ ಅಂಟಿಕೊಂಡಿರುತ್ತದೆ. ಅರ್ಧ ಕಿಲೋ ರೇಷ್ಮೆ ಮಾಡಲು 2600 ರಿಂದ 3000 ರೇಷ್ಮೆ ಹುಳುಗಳ ಪರಿಶ್ರಮ ಇರುತ್ತದೆ. ಒಂದು ಸುಂದರವಾದ ಸೀರೆ ತಯಾರಾಗಲು ಸುಮಾರು 1700-2500 ರೇಷ್ಮೆ ಹುಳುಗಳು ಸಾಯುತ್ತವೆ.

ರೇಷ್ಮೆಗೆ ಬಣ್ಣ ಹಾಕೋದು ಹೇಗೆ?

ದಾರವನ್ನು ಬ್ಲೀಚಿಂಗ್ ಮಾಡಿದ ನಂತರ ಒಣಗಿಸಿ ನಂತರ ರೇಷ್ಮೆಗೆ ಬಣ್ಣ ಹಾಕಲಾಗುತ್ತೆ. ರೇಷ್ಮೆ ಗುಣಮಟ್ಟದ ಮೇಲೆ ಪರಿಣಾಮ ಬೀರದಂತೆ ಬಣ್ಣವನ್ನು ಸಹ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಲವಾರು ದಿನಗಳವರೆಗೆ ಪದೇ ಪದೇ ಬಣ್ಣ ಹಾಕಿ ಒಣಗಿಸಲಾಗುತ್ತೆ.

ಸೀರೆ ಹೇಗೆ ತಯಾರಿಸಲಾಗುತ್ತದೆ?

ಕೊನೆಗೆ ದಾರ ಸಿದ್ದವಾದ ಬಳಿಕ ಆ ಎಳೆಗಳು ಮಗ್ಗಕ್ಕೆ ಹೋಗುತ್ತವೆ. ಪವರ್ ಲೂಮ್ ಮತ್ತು ಹ್ಯಾಂಡ್ ಲೂಮ್‌ನಲ್ಲಿ ರೇಷ್ಮೆ ಸೀರೆಗಳನ್ನು ತಯಾರಿಸಬಹುದು. ಈ ಎಳೆಗಳನ್ನು ಸ್ಥಿರ ಮಾದರಿಯಲ್ಲಿ ನೇಯಲಾಗುತ್ತದೆ. ಈ ಪ್ರಕ್ರಿಯೆಯಿಂದ ಬಟ್ಟೆಯನ್ನು ತಯಾರಿಸಲಾಗುತ್ತದೆ. ಒಂದು ಸೀರೆಯನ್ನು ತಯಾರಿಸಲು 4-5 ದಿನಗಳಿಂದ 2-3 ತಿಂಗಳವರೆಗೆ ತೆಗೆದುಕೊಳ್ಳುತ್ತದೆ.

 

ಸಿಲ್ಕ್ ಮಾರ್ಕ್ ನೋಡಿ ರೇಷ್ಮೆ ಸೀರೆ ಖರೀದಿಸಿ

ನಾವು ಚಿನ್ನ ಖರೀದಿಸುವಾಗ ಹಾಲ್‌ಮಾರ್ಕ್ ನೋಡಿ ಖರೀದಿಸುತ್ತೇವೆ. ಅದೇ ರೀತಿ ರೇಷ್ಮೆ ಸೀರೆ ಖರೀದಿಸುವಾಗ ಸಿಲ್ಕ್ ಮಾರ್ಕ್ ನೋಡುವುದು ಕೂಡ ಮುಖ್ಯ. ಈ ಬಗ್ಗೆ ಹಲವಾರು ವರ್ಷಗಳಿಂದ ಸಿಲ್ಕ್ ಮಾರ್ಕ್ ಆರ್ಗನೈಜೇಷನ್ ಆಫ್ ಇಂಡಿಯಾ ಜಾಗೃತಿ ಮೂಡಿಸುತ್ತಾ ಬಂದಿದೆ.

Continue Reading

DAKSHINA KANNADA

ಊಟದ ಬಳಿಕ ಟೀ ಕುಡಿಯೋರೇ ಎಚ್ಚರ! ಈ ಸ್ಟೋರಿ ಓದಿ

Published

on

ಮಂಗಳೂರು: ಕಾಫಿ ಹಾಗೂ ಟೀ ಎಂದರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಎದ್ದು, ಹಾಲು, ಕಾಫಿ, ಟೀ ಇಲ್ಲದೇ ಇದ್ದರೆ ಲೈಫ್ ಬೋರು ಅಂತಾರೇ ಜನರು. ಅದರಲ್ಲೂ ಕೆಲವರಂತೂ ಟೀ ಹಾಗೂ ಕಾಫಿಯಿಂದಲೇ ದಿನವನ್ನು ಶುರು ಮಾಡುತ್ತಾರೆ. ಬೆಳಗ್ಗೆ ಎದ್ದಾಗ ಒಂದು ಟೀ, ಟಿಫನ್​ ಬಳಿಕ ಒಂದು ಟೀ, ಮಧ್ಯಾಹ್ನ ಊಟದ ಬಳಿಕ ಒಂದು ಟೀ, ಸಂಜೆಯ ಹೊತ್ತಲ್ಲಿ ಹೀಗೆ ದಿನದಲ್ಲಿ ಐದಾರು ಭಾರೀ ಟೀ ಅಥವಾ ಕಾಫಿ ಕುಡಿಯೋ ಜನರು ಇದ್ದಾರೆ. ಆದರೆ ಈ ಟೀ ಮತ್ತು ಕಾಫಿಯನ್ನು ಪದೇ ಪದೇ ಕುಡಿಯೋ ಲವರ್ಸ್‌ ಈ ಸ್ಟೋರಿ ಓದಲೇಬೇಕು.

ಊಟದ ಬಳಿಕ ಟೀ ಕುಡಿಯೋ ಅಭ್ಯಾಸ ಬಿಟ್ಟುಬಿಡಿ

ನೀವೇನಾದರೂ ಊಟವಾದ ಬಳಿಕ ಅಥವಾ ಮೊದಲು ಟೀ, ಕಾಫಿ ಸೇವಿಸುತ್ತಿದ್ದರೆ ಈ ಕೂಡಲೇ ಆ ಅಭ್ಯಾಸವನ್ನು ಬಿಟ್ಟುಬಿಡಿ. ಹೀಗೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಆಘಾತಕಾರಿ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ.  ಏಕೆಂದರೆ ಈ ಪಾನೀಯಗಳು ಆಹಾರದಲ್ಲಿನ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ರಕ್ತ ಉತ್ಪಾದನೆಗೆ ಕಬ್ಬಿಣಾಂಶ ಅತ್ಯಗತ್ಯ. ದೇಹದ ಶೇ.70ರಷ್ಟು ಕಬ್ಬಿಣಾಂಶವು ಹೀಮೊಗ್ಲೋಬಿನ್ ಕೆಂಪು ರಕ್ತಕಣಗಳಲ್ಲಿ ಇರುತ್ತದೆ. ಹೀಗಾಗಿ ಟೀ ಅಥವಾ ಕಾಫಿ ಕುಡಿಯುವುದರಿಂದ ಕಬ್ಬಿಣಾಂಶ ಕೊರತೆಯಾಗಿ ರಕ್ತಹೀನತೆಗೆ ಕಾರಣವಾಗುತ್ತದೆ ಎಂದು ಐಸಿಎಂಆರ್ ತಿಳಿಸಿದೆ.

ಟೀ ಮತ್ತು ಕಾಫಿಗಳಲ್ಲಿ ಕೆಫೀನ್ ಇರುತ್ತದೆ. ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಶಾರೀರಿಕ ಅವಲಂಬನೆಯನ್ನು ಪ್ರೇರೇಪಿಸುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇತ್ತೀಚೆಗೆ ಭಾರತೀಯರಿಗೆ 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಆ ಮಾರ್ಗಸೂಚಿಯಲ್ಲಿ ರಾಷ್ಟ್ರೀಯ ಪೋಷಣೆಯ ಸಂಸ್ಥೆ ಅದರ ಸಂಶೋಧನಾ ವಿಭಾಗದೊಂದಿಗೆ ವೈದ್ಯಕೀಯ ಸಮಿತಿಯು ಚಹಾ ಮತ್ತು ಕಾಫಿಯ ಸೇವನೆಯನ್ನು ಮಿತವಾಗಿ ಸೇವನೆ ಮಾಡಬೇಕು ಅಂತ ವಿವರಿಸಿದೆ.

ಚಹಾ ಅಥವಾ ಕಾಫಿಯನ್ನು ಸಂಪೂರ್ಣವಾಗಿ ತ್ಯಜಿಸಿ ಎಂದರೆ ಯಾರು ಕೇಳುವುದಿಲ್ಲ. ಹೀಗಾಗಿ ಇದನ್ನು ಮಿತವಾಗಿ ಸೇವನೆ ಮಾಡಿ. ಏಕೆಂದರೆ ಪಾನೀಯಗಳಲ್ಲಿನ ಕೆಫೀನ್ ಅಂಶದ ಬಗ್ಗೆ ಎಚ್ಚರದಿಂದಿರಿ ಎಂದು ಅವರು ಭಾರತೀಯರಿಗೆ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಊಟಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಅಥವಾ ನಂತರ ಕಾಫಿ ಮತ್ತು ಚಹಾವನ್ನು ಸೇವಿಸಬೇಕು. ಊಟವಾದ ಕೂಡಲೇ ಕಾಫಿ ಮತ್ತು ಚಹಾ ಸೇವಿಸಿದರೆ ಟ್ಯಾನಿನ್‌ಗಳು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸಬಹುದು.

ಹಾಲು ಇಲ್ಲದೆ ಚಹಾ ದೇಹಕ್ಕೆ ಒಳ್ಳೆಯದು

ಆಗಾಗ ದಣಿವು ಅಥವಾ ಶಕ್ತಿಯ ಕೊರತೆ ಉಂಟಾಗುತ್ತದೆ. ಉಸಿರಾಟದ ತೊಂದರೆ, ತಲೆನೋವು, ತ್ವರಿತ ಹೃದಯ ಬಡಿತ, ಉಗುರುಗಳು ಸೀಳುವುದು ಅಥವಾ ಕೂದಲು ಉದುರುವಿಕೆ. ಇದಲ್ಲದೆ  ಸಂಶೋಧಕರು ಹಾಲು ಇಲ್ಲದೆ ಚಹಾವನ್ನು ಸೇವಿಸುವುದರಿಂದ ರಕ್ತ ಪರಿಚಲನೆಯನ್ನು ಉತ್ತೇಜಿಸಬಹುದು. ಜೊತೆಗೆ ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

Continue Reading

DAKSHINA KANNADA

ಮೇ 20ರವರೆಗೆ ದ.ಕ. ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ

Published

on

ಮಂಗಳೂರು : ಕರಾವಳಿಗೆ ಮೇ 20ರ ವರೆಗೆ ಜಿಲ್ಲೆಯಲ್ಲಿ ಮಳೆಯ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ದ.ಕ.ದ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸೋಮವಾರ ಬೆಳಗ್ಗಿನ ಜಾವ ಗುಡುಗು ಸಹಿತ ಸಾಧಾರಣ ಮಳೆ ಯಾಗಿತ್ತು. ಸುಳ್ಯ, ಅರಂತೋಡು, ಹಾಲೆಟ್ಟಿ, ಬಡ್ಡಟ್ಕ, ಸಂಪಾಜೆ ಪರಿಸರದಲ್ಲಿ ಮಂಗಳವಾರ ಬೆಳಗ್ಗೆ ಮಳೆ ಸುರಿದಿದೆ.

ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ಅಲೆಗಳ ಅಬ್ಬರ ಕಂಡುಬಂದಿದೆ. ದ.ಕ ಜಿಲ್ಲೆಯಲ್ಲಿ ಮಂಗಳವಾರ ಸರಾಸರಿ 31.7 ಡಿಗ್ರಿ ಗರಿಷ್ಠ, 24.2 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಗುಡುಗು ಮಿಂಚಿನೊಂದಿಗೆ ಉತ್ತಮ ಮಳೆ ಸಾಧ್ಯತೆ

ದ.ಕ, ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 20ರ ವರೆಗೆ ಗಾಳಿ, ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 1ವಾರ ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಾಗಿ ಬೀಚ್ ವ್ಯಾಪ್ತಿಯಲ್ಲೂ ಕಡಲಬ್ಬರ ಹೆಚ್ಚಳಗೊಳ್ಳಲಿದೆ. ರಾತ್ರಿ ವೇಳೆ ಚಳಿಯ ತೀವ್ರತೆ ಸಾಧಾರಣಕ್ಕಿಂತ ತುಸು ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಜೊತೆಗೆ ಆಲಿಕಲ್ಲು ಮಳೆ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಧಿಕೃತ ಮೂಲಗಳು ತಿಳಿಸಿವೆ.

Continue Reading

LATEST NEWS

Trending