Connect with us

LATEST NEWS

ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ

Published

on

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಉಡುಪಿ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದ ಅವರು ಬಳಿಕ ನೂರಾರು ಕಾರ್ಯಕರ್ತರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಚಿವ ಕೆ.ಜೆ ಜಾರ್ಜ್‌, ಮಾಜಿ ಸಚಿವ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರು ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ನಾಯಕಿ ಮೋಟಮ್ಮ, ಜಿಲ್ಲಾಧ್ಯಕ್ಷ ಅಂಜುಮನ್ ಮೊದಲಾವರು ಭಾಗಿಯಾಗಿದ್ದರು.

LATEST NEWS

ಅತ್ತ ಜಾತ್ರೆ…ಇತ್ತ ರಕ್ತದೋಕುಳಿ; ಓದಬೇಕಾದವಳು ಪ್ರೀತಿ ಹಿಂದೆ ಬಿದ್ಲು..ಮಚ್ಚಿನೇಟಿಗೆ ಬ*ಲಿಯಾದ್ಲು!

Published

on

ಚಿಕ್ಕಮಗಳೂರು : ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಸಾಮಾನ್ಯವಾಗಿ ಹೋಗಿದೆ. ಚಿಕ್ಕ ವಯಸ್ಸಿನಲ್ಲಿ ಪ್ರೀತಿಗಾಗಿ ಮನೆ ತೊರೆಯುವವರು, ಪ್ರಾಣ ತ್ಯಾಗ ಮಾಡುವವರು ಅನೇಕ ಮಂದಿ ಇದ್ದಾರೆ. ಬಾಳಿ ಬದುಕಿ ಸಾಧಿಸಬೇಕಾಗಿರುವ ಬದುಕು ಪ್ರೇಮದ ಬಲೆಗೆ ಸಿಲುಕಿ ಒದ್ದಾಡುವುದಿದೆ. ಇಲ್ಲಿ ನಡೆದಿದ್ದು ಅದೇ…! ಆ ಹುಡುಗಿಗೆ ಹದಿನೆಂಟೂ ಆಗಿರಲಿಲ್ಲ. ಪ್ರೀತಿಯ ನಂಟಿಗೆ ಬಿದ್ದು, ಬದುಕು ಕಗ್ಗಂಟಾಗಿ ಕೊನೆಗೆ ಪತಿಯ ಮಚ್ಚಿನೇಟಿಗೆ ಬ*ಲಿಯಾಗಿದ್ದಾಳೆ.

ಪ್ರೀತಿ – ಪ್ರೇಮಕ್ಕೆ ಬ*ಲಿಯಾಯ್ತು ಜೀವ :


ಆಕೆ ಹೆಸರು ಮೇಘಾ. ಇನ್ನೂ ಹದಿನೆಂಟು ವರ್ಷ ತುಂಬಿರಲಿಲ್ಲ. ಅಷ್ಟರಲ್ಲಿ ಆಕೆ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಊರಿನ ಯುವಕನೊಬ್ಬನ ಪ್ರೇಮ ಪಾಶಕ್ಕೆ ಬಿದ್ದು, ಆತನನ್ನೇ ಮದುವೆಯಾಗುವುದಾಗಿ ಹಠಕ್ಕೆ ಬಿದ್ದಿದ್ದಾಳೆ. ತಾಯಿಯಾದರೂ ಏನು ಮಾಡಿಯಾಳು? ಮಗಳ ಹಠಕ್ಕೆ ಮಣಿದು ಮದುವೆ ಮಾಡಿದಳು.

ಆದರೆ, ಆರೇ ತಿಂಗಳಲ್ಲಿ ಗಂಡನ ಮನೆ ತೊರೆದ ಮಗಳು ಆತನಿಂದಲೇ ಇಹಲೋಕ ತ್ಯಜಿಸಿದ್ದಾಳೆ. ಈ ದುರಂ*ತ ಸಂಭವಿಸಿರುವುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಎಂಬ ಗ್ರಾಮದಲ್ಲಿ.

6 ತಿಂಗಳಿಗೇ ತವರು ಸೇರಿದ ಮೇಘಾ :

ಮೇಘಾ 10 ನೇ ತರಗತಿ ಓದುತ್ತಿದ್ದಳು. ಇದೇ ಗ್ರಾಮದ ಚರಣ್ ಎಂಬಾತನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಆದ್ರೆ ಅಪ್ರಾಪ್ತೆಯಾಗಿದ್ದ ಕಾರಣ ಮೇಘಾಳ ತಾಯಿ ಕೋಮಲ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಚರಣ್ ವಿರುದ್ಧ ಅಪಹರಣ ಮತ್ತು ಅತ್ಯಾಚಾರದ ಕೇಸ್ ದಾಖಲಿಸಿದ್ದರು. ಚರಣ್‌ನನ್ನು ಜೈಲು ಸೇರಿದ. ಮಗಳು ಬಿಟ್ಟಾಳ್ಯೇ? ಮೇಘಾ ಮಾತ್ರ ಯಾವುದಕ್ಕೂ ತಲೆಬಾಗದೆ ಚರಣ್ ಗಾಗಿ ಹಠ ಹಿಡಿದಿದ್ದಳು. ಹೀಗಾಗಿ ಮಗಳ ಹಠಕ್ಕೆ ತಾಯಿ ಕೋಮಲ ತಲೆಬಾಗಲೇ ಬೇಕಿತ್ತು.

ಮಗಳಿಗೆ 18 ತುಂಬುತ್ತಿದ್ದಂತೆ ಅದೇ ಚರಣ್ ಜೊತೆ ಮದುವೆ ಮಾಡಿಸಿದ್ದರು. ಆದ್ರೆ ಮದುವೆ ಆದ ಮೇಲೆ ಚರಣ್ ಏನು ಅನ್ನೋದು ಮೇಘಾಳಿಗೆ ಅರ್ಥ ಆಗಿತ್ತು. ಗಾಂಜಾ ಚಟದೊಂದಿಗೆ ಊರಿನಲ್ಲಿ ಕಳ್ಳತನ ಮಾಡುತ್ತಿದ್ದ ಚರಣ್ ಜೊತೆ ಸಂಸಾರ ಮಾಡೋದು ಮೇಘಾಳಿಗೆ ಕಷ್ಟವಾಗಿತ್ತು. ಹೀಗಾಗಿ ಆರೇ ತಿಂಗಳಲ್ಲಿ ತಾಯಿ ಮನೆ ಸೇರಿದ್ದಳು.

ಆತ್ತ ಊರ ಜಾತ್ರೆ ಸಂಭ್ರಮ…ಇತ್ತ ನೆತ್ತರೋಕುಳಿ

ಮೇಘಾ ಏನೋ ಚರಣ್ ಸಹವಾಸವೇ ಬೇಡವೆಂದು ತವರು ಸೇರಿದ್ದಳು. ಆದರೆ, ಚರಣ್ ಬಿಡಲಿಲ್ಲ. ಮನೆಗೆ ಬಂದು ತೊಂದರೆ ಕೊಡಲು ಆರಂಭಿಸಿದ್ದ. ಹೀಗಾಗಿ ತಾಯಿ – ಮಗಳು ಊರೇ ಬಿಟ್ಟರು. ಎಪ್ರಿಲ್ 30 ರಂದು ಊರ ಜಾತ್ರೆಗೆ ಕರಕುಚ್ಚಿ ಗ್ರಾಮಕ್ಕೆ ಬಂದಿದ್ದರು.

ಊರಿಗೆ ಬಂದಿದ್ದ ಮೇಘಾ ಭದ್ರಾ ನದಿಗೆ ಬಟ್ಟೆ ತೊಳೆಯಲು ಹೋಗಿದ್ದಾಳೆ. ಅಲ್ಲಿಗೆ ಬಂದಿದ್ದ ಚರಣ್ ಒಬ್ಬಂಟಿಯಾಗಿದ್ದ ಮೇಘಾಳನ್ನ ಮಚ್ಚಿನಿಂದ ಕೊಚ್ಚಿ ಕೊ*ಲೆ ಮಾಡಿದ್ದಾನೆ. ಆತ್ತ ಊರ ಜಾತ್ರೆ ಸಂಭ್ರಮ…ಇತ್ತ ನೆತ್ತರೋಕುಳಿ ಹರಿಯಿತು.

ಬೆಚ್ಚಿ ಬಿದ್ದ ಜನ : 

ಮೇಘಾ ಹ*ತ್ಯೆಯಿಂದ ಊರ ಜಾತ್ರೆಯ ಸಂಭ್ರಮದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಇದು ಚರಣ್ ಕೃತ್ಯ ಅನ್ನೋದು ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಘಾಳ ಹ*ತ್ಯೆ ನಡೆಸಿ ಬೆಂಗಳೂರಿಗೆ ಪರಾರಿಯಾಗುವ ಸಿದ್ಧತೆಯಲ್ಲಿದ್ದ ಚರಣ್ ಕಂಬಿ ಎಣಿಸುತ್ತಿದ್ದಾನೆ.

ಇದನ್ನೂ ಓದಿ : ಅತ್ತೆ – ಅಳಿಯ ಲವ್; ಹೆಂಡತಿಯನ್ನೇ ತ್ಯಾಗ ಮಾಡಿದ ಪತಿ! ಏನಿದು ಕಥೆ?

ಮನೆಗೆ ವಾಪಾಸು ಬರುವಂತೆ ಎಷ್ಟೇ ಹೇಳಿದ್ರೂ ಬರಲಿಲ್ಲ ಅನ್ನೋ ಕಾರಣಕ್ಕೆ ಮೇಘಾಳ ಹ*ತ್ಯೆ ಮಾಡಿರುವುದಾಗಿ ಆರೋಪಿ ಚರಣ್ ಹೇಳಿದ್ದಾನೆ. ಮೇಘಾಳ ಹತ್ಯೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಆರೋಪಿಯನ್ನು ಸ್ಥಳಕ್ಕೆ ಕರೆತರುವಂತೆ ಪಟ್ಟು ಹಿಡಿದಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರ ಮನ ಒಲಿಸಿ ಮೃ*ತದೇಹವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದಾರೆ.

ಇನ್ನೂ ಓದಿ, ವಿದ್ಯಾವಂತಳಾಗಬೇಕಾಗಿದ್ದ ಹುಡುಗಿ ಪ್ರೀತಿ ಎಂಬ ಹುಚ್ಚು ಕುದುರೆಯ ಹಿಂದೆ ಓಡಿ ಜೀವವನ್ನೇ ಕಳೆದುಕೊಂಡಿರುವುದನ್ನು ಕಂಡು ಗ್ರಾಮವೇ ಮರುಗಿದೆ. ಇನ್ನು ಮುಂದೆ ತಪ್ಪು ದಾರಿ ಹಿಡಿಯುವವರಿಗೆ ಇದು ಪಾಠವೇ ಸರಿ.

 

Continue Reading

LATEST NEWS

ಮೇ 3 ರಂದು Incture ಸಂಸ್ಥೆ ಮಂಗಳೂರಿನಲ್ಲಿ ಶುಭಾರಂಭ

Published

on

ಡಿಜಿಟಲ್ ಹಾಗೂ ಎಐ ಸೊಲ್ಯೂಷನ್‌ ಮತ್ತು ಉತ್ಪನ್ನಗಳ  ಪ್ರಮುಖ ಪೂರೈಕೆದಾರ ಸಂಸ್ಥೆಯಾಗಿರುವ ಇಂಕ್ಚರ್‌ ಮಂಗಳೂರಿಗೆ ಪಾದಾರ್ಪಣೆ ಮಾಡಿದೆ. ಮೇ 3 ರಂದು ಮಂಗಳೂರಿನ ದೇರೆಬೈಲಿನ ಬ್ಲೂಬೆರಿ ಹಿಲ್‌ನಲ್ಲಿರುವ ಎಸ್‌ಟಿಪಿಐ ಇನ್‌ಕ್ಯುಬೇಷನ್ ಸೆಂಟರ್‌ ನಲ್ಲಿ ನೂತನ ಸೆಂಟರ್ ಆರಂಭವಾಗಲಿದೆ ಎಂದು ಇಂಕ್ಚರ್ ಸಂಸ್ಥೆಯ ರವಿಕಿರಣ್ ಮಾಹಿತಿ ನೀಡಿದ್ದಾರೆ.

ಇಂಕ್ಚರ್ ಸಂಸ್ಥೆ ದೇಶ ವಿದೇಶದ ಹಲವು ಕಡೆಗಳಲ್ಲಿ ತಮ್ಮ ಬ್ರಾಂಚ್ ಹೊಂದಿದ್ದು, ಮಂಗಳೂರಿಗೂ ವಿಸ್ತರಣೆ ಮಾಡಿದೆ. ಮಂಗಳೂರಿನಲ್ಲಿ ಉದ್ಯೋಗಾವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದ್ದು, ಈಗಾಗಲೆ 25 ಜನರಿಗೆ ಉದ್ಯೋಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕ ಯುವತಿಯರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂತ್ರಜ್ಞಾನದ ಬಳಕೆ ಕೂಡಾ ಸಾಕಷ್ಟು ಹೆಚ್ಚಿದೆ. ಹೀಗಾಗಿ ಇಂಕ್ಚರ್‌ ಸಂಸ್ಥೆಯಿಂದ ಡಿಜಿಟಲ್ ಕ್ಷೇತ್ರದಲ್ಲಿ ಉತ್ತಮವಾದ ಅಪ್ಲಿಕೇಷನ್‌ಗಳು ಮತ್ತು SAP ಗ್ರಾಹಕರಿಗೆ ಉತ್ತಮ ಉತ್ಪನ್ನಗಳ ಪ್ಯಾಕೇಜ್‌ಗಳನ್ನು ಸಂಸ್ಥೆ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಮೇ 3 ರಂದು ಸಂಜೆ 4 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಯಿಲನ್ ಅವರು ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಂಕ್ಚರ್ ಸಂಸ್ಥೆ ಸದಾ ಮಂಗಳೂರು ಜನರ ಜೊತೆಗೆ ಇರಲಿದೆ ಎಂದು ಅವರು ಜನರ ಸಹಾಕಾರ ಕೋರಿದ್ದಾರೆ.

 

Continue Reading

DAKSHINA KANNADA

ಅಡ್ಯಾರ್ ಬೊಂಡ ಪ್ಯಾಕ್ಟರಿ ಎಳನೀರು ಪ್ರಕರಣ- ಆರೋಗ್ಯ ಇಲಾಖೆಯ ಕೈ ಸೇರಿದ ಪ್ರಯೋಗಾಲಯ ಪರೀಕ್ಷಾ ವರದಿ ಬಹಿರಂಗ..!

Published

on

ಮಂಗಳೂರು : ಇತ್ತೀಚೆಗೆ ಅಡ್ಯಾರ್ ನಲ್ಲಿರುವ ಬೊಂಡಾ ಪ್ಯಾಕ್ಟರಿಯಲ್ಲಿ ಎಳ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯೋಗಾಲಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಸಹಜವಾಗಿತ್ತು ಎಳನೀರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಗರದ ಹೊರವಲಯದ ಅಡ್ಯಾರಿನ ಬೊಂಡ ಫ್ಯಾಕ್ಟರಿಯಲ್ಲಿ ಎಪ್ರಿಲ್ 9ರಂದು ಖರೀದಿಸಿದ ಎಳನೀರು ಕುಡಿದವರಲ್ಲಿ 138 ಜನರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹಾಗೂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಫ್ಯಾಕ್ಟರಿಯನ್ನು ಬಂದ್ ಮಾಡಿಸಿ ಎಳನೀರು ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.ಘಟನೆ ನಡೆದ ಎರಡು ದಿನಗಳ ನಂತರ ಇದು ಗಮನಕ್ಕೆ ಬಂದಿದ್ದು, ಆ ದಿನ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿದ್ದ ಎಳನೀರನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ಪರೀಕ್ಷೆಯ ವರದಿ ಎಪ್ರಿಲ್ 22ರಂದು ಆರೋಗ್ಯ ಇಲಾಖೆಯ ಕೈ ಸೇರಿದೆ.

ಅಸ್ವಸ್ಥಗೊಂಡವರ ಮಲ ಮತ್ತು ರಕ್ತದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಪ್ರಕಾರ ಕೆಲವರ ದೇಹದಲ್ಲಿ ಇಕೊಲೈ ಬ್ಯಾಕ್ಟಿರಿಯಾ ಇರುವುದು ಪತ್ತೆಯಾಗಿದೆ. ಮನುಷ್ಯನ ಕರುಳಿನಲ್ಲಿ ಈ ಬ್ಯಾಕ್ಟಿರಿಯಾ ಇರುತ್ತದೆ. ಆದರೆ ಅವುಗಳ ಪ್ರಮಾಣ ಹೆಚ್ಚಾದರೆ, ಕೆಲವೊಮ್ಮೆ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.ಅಡ್ಯಾರಿನಲ್ಲಿರುವ ಎಳನೀರು ಗಂಜಿಯಿಂದ ಐಸ್‌ಕ್ರೀಮ್ ತಯಾರಿಸುವ ಘಟಕ, ಕಾರ್‌ಸ್ಪೀಟ್ ಮತ್ತು ಕದ್ರಿಯಲ್ಲಿರುವ ಎಳನೀರು ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ. ಈಗಲೂ ಅವು ಬಂದ್ ಆಗಿಯೇ ಇವೆ.

ಫ್ಯಾಕ್ಟರಿಯವರು ಸ್ವಯಂ ಪ್ರೇರಿತರಾಗಿ ಎಳನೀರು ನೀಡುವುದನ್ನು ನಿಲ್ಲಿಸಿದ್ದಾರೆ. ಅಡ್ಯಾರ್‌ನಲ್ಲಿ ಪಲ್ಟಿಂಗ್‌ ಘಟಕಗಳು ಮಾತ್ರ ಕಾರ್ಯಾಚರಿಸುತ್ತಿವೆ. ಗ್ರಾಹಕರಿಗೆ ಆಹಾರ ನೀಡುವಾಗ ನಿಯಮ ಪಾಲನೆ, ಶುಚಿತ್ವಕ್ಕೆ ಸಂಬಂಧಿಸಿ ಕೆಲವು ಅಂಶಗಳ ಕಟ್ಟುನಿಟ್ಟು ಪಾಲನೆಗೆ ಆಹಾರ ಸುರಕ್ಷಾ ಅಫಿದಾವಿತನ್ನು ಫ್ಯಾಕ್ಟರಿಯಿಂದ ಪಡೆಯಲು ಆಹಾರಸುರಕ್ಷಾ ಅಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

Continue Reading

LATEST NEWS

Trending